ಇಟ್ಟ ವಸ್ತುಗಳು ಅವುಗಳ ಜಾಗದಲ್ಲಿಲ್ಲವೇ? ಮೆಚ್ಚಿನ ತಿಂಡಿಯ ರುಚಿ ಕೆಟ್ಟಿದೆಯೇ? ಯಾರೂ ಇಲ್ಲದಿದ್ದರೂ ಯಾರೋ ಪಕ್ಕದಲ್ಲಿ ಹಾದು ಹೋದಂತಾಗುತ್ತೆದೆಯೇ? ಹಾಗಿದ್ದರೆ ನಿಮ್ಮನ್ನು ಆತ್ಮಗಳು ಕಾಡುತ್ತಿವೆ. ಪರಿಹಾರವೇನು?
ಕೆಲವು ಜನ್ಮರಾಶಿಯವರು ಹುಟ್ಟಿನಿಂದಲೇ ತುಂಬಾ ಧೈರ್ಯವಂತರಾಗಿರುತ್ತಾರೆ; ಇವರ ಜನ್ಮಕುಂಡಲಿಯಲ್ಲಿ ಸೂಕ್ತ ತಾಣಗಳಲ್ಲಿ ಇರುವ ಗ್ರಹಗಳು, ಇವರಿಗೆ ಭೂತಪ್ರೇತಾದಿಗಳಿಂದ ಯಾವುದೇ ಬಾಧೆ ಬಾರದಂತೆ ರಕ್ಷಿಸುತ್ತಾರೆ. ಆದರೆ ಇನ್ನು ಕೆಲವರಿಗೆ ಜೀವನದುದ್ದಕ್ಕೂ ಭೂತ- ಪ್ರೇತಾದಿಗಳ ಕಾಟ ತಪ್ಪಿದ್ದಲ್ಲ. ಅದಕ್ಕೆ ಕಾರಣ ಅವರ ಗ್ರಹಗಳು ಅನುಕೂಲ ಸ್ಥಿತಿಯಲ್ಲಿ ಇಲ್ಲದಿರುವುದೇ. ಬನ್ನಿ, ಯಾವ ರಾಶಿಯವರಿಗೆ ಹೆಚ್ಚು ಭೂತಕಾಟ, ನೋಡೋಣ. ಹಾಗೇ ಅದಕ್ಕೆ ಪರಿಹಾರವೇನು ಎಂಬುದನ್ನೂ ನೋಡೋಣ.
ಮೇಷ ರಾಶಿ
ಇವರಿಗೆ ತಮ್ಮ ಕುಟುಂಬದಲ್ಲಿ ಅಗಲಿದ ಹಿರಿಯರ ಪ್ರೇತಗಳು ಸದಾ ಕಾಟ ಕೊಡುತ್ತಿರಬಹುದು. ಇವುಗಳಿಂದಾಗಿ ಹೋದಲ್ಲಿ ಬಂದಲ್ಲಿ, ಕುಟುಂಬದಲ್ಲಿ, ಕಚೇರಿಯಲ್ಲಿ ಕಿರಿಕಿರಿಗಳು ಉಂಟಾಗಬಹುದು. ಕೆಲವೊಮ್ಮೆ ಇಟ್ಟ ವಸ್ತುಗಳು ಅಲ್ಲಿಂದ ನಾಪತ್ತೆಯಾಗಿ ಕೈಗೆ ಸಿಗದಂತಾಗಿ, ಇನ್ನೆಲ್ಲೋ ಪ್ರತ್ಯಕ್ಷವಾಗಬಹುದು.
ದಿನವಿಡೀ ಅದನ್ನು ಹುಡುಕುತ್ತ ಸಮಯ ಹಾಳು ಮಾಡುವಂತೆ ಆಗಬಹುದು. ಇದರಿಂದ ಎಷ್ಟೋ ಉಖ್ಯ ಕೆಲಸಗಳು ಕೈ ತಪ್ಪಬಹುದು. ಹಿರಿಯರ ಆತ್ಮಗಳಿಗೆ ಆಗಮೋಕ್ತ ಶ್ರಾದ್ಧ ಮಾಡಿಸಿ, ತೀರ್ಥಕ್ಷೇತ್ರದಲ್ಲಿ ಪಿಂಡ ಬಿಡಿ. ಹನುಮಾನ್ ಚಾಲೀಸಾ ಪಠಿಸಿ. ಅತೃಪ್ತ ಆತ್ಮಗಳಿಂದ ಮುಕ್ತಿ ಪಡೆಯುತ್ತೀರಿ.
ಗಂಡ- ಹೆಂಡತಿ ನಡುವೆ ರೊಮ್ಯಾನ್ಸ್ ಹೆಚ್ಚಾಗೋಕೆ ಈ ರತ್ನ ಧರಿಸಿ! ...
ಮಿಥುನ ರಾಶಿ
ನಿಮಗಂತೂ ಹೋದ ಅಪರಿಚಿತ ಜಾಗಗಳಲ್ಲಿ ಅತೃಪ್ತ ಆತ್ಮಗಳು ತಡಕಿಕೊಳ್ಳಬಹುದು. ರಾಹು ಹಾಗೂ ಕೇತುಗಳು ನಿಮಗೆ ಅನುಕಾಲ ತಾಣಗಳಲ್ಲಿ ಇಲ್ಲದೆ ಹೋದಾಗ, ಈ ಗ್ರಹಗಳಿಂದ ಪೋಷಿತವಾದ ಕೆಲವು ಪ್ರೇತಗಳು ನಿಮ್ಮಂಥ ದುರ್ಬಲರನ್ನು ಕಾಟ ಕೊಡಲು ಹುಡುಕಿಕೊಳ್ಳುತ್ತವೆ.
ಇದರಿಂದ ನಿಮಗೆ ದಾರಿ ತಪ್ಪಬಹುದು; ಹೋದ ತಾಣಗಳನ್ನು ನೋಡಲು ಆಗಲಿಕ್ಕಿಲ್ಲ; ಹೋದ ಕೆಲಸ ಆಗಲಿಕ್ಕಿಲ್ಲ; ಒಳ್ಳೆಯವರ ಬದಲು ಕೆಟ್ಟವರು ಎದುರಾಗಬಹುದು; ಆದಿತ್ಯ ಹೃದಯವನ್ನು ದಿನಂಪ್ರತಿ ಪಠಿಸುವುದು ನಿಮಗೆ ಒಳ್ಳೆಯದು. ಶನಿದೇವರ ದೇವಸ್ಥಾನಕ್ಕೆ ಆಗಾಗ ಭೇಟಿ ಕೊಡಿ.
ಸಿಂಹ ರಾಶಿ
ಕುಜನ ಪ್ರತಿಕೂಲನಾಗಿರುವುದರಿಂದ ನೀವು ಆಗಾಗ ಅತೃಪ್ತ ಪಿಶಾಚಿಗಳ ಬಾಧೆಯನ್ನು ಅನುಭವಿಸಬೇಕಾಗಬಹುದು. ಇವುಗಳು ನಿಮ್ಮ ಉದರಶಾಂತಿಯನ್ನು ಹಾಳು ಮಾಡುತ್ತವೆ. ಅಂದರೆ ನೀವು ಹೋದಲ್ಲಿ ಬಂದಲ್ಲಿ ನಿಮ್ಮ ಆಹಾರದಲ್ಲಿ ಕೆಡುಕನ್ನು ಉಂಟುಮಾಡುವ ಪದಾರ್ಥಗಳನ್ನು ತಂದುಹಾಕಬಹುದು.
ಆದ್ದರಿಂದ ನೀವು ಹೊರಗಡೆ ಸೇವಿಸುವ ಆಹಾರದ ಬಗ್ಗೆ ಜಾಗರೂಕರಾಗಿರಿ. ತಂಪು ಪಾನೀಯ ಸೇವಿಸುವಾಗ ಎಚ್ಚರ. ಆಸಿಡಿಟಿ ಆಗಾಗ ಉಂಟಾದೀತು. ಸಂಧಿವಾತ ಕಾಣಿಸಿಕೊಂಡೀತು. ಮೃತ್ಯುಂಜಯ ಜಪವನ್ನು ಸದಾ ಪಠಿಸುತ್ತಿರಿ. ನೀವು ಊಟ ಮಾಡುವ ಮೊದಲು ಒಂದು ತುತ್ತನ್ನು ಸರ್ವಭೂತಗಳಿಗೆ ಅರ್ಪಿಸಿ ನೆಲದಲ್ಲಿ ತೆಗೆದಿಡಿ.
ಈ ರಾಶಿಯವರ ಕೈಯಲ್ಲಿ ಹಣ ನಿಲ್ಲುವುದಿಲ್ಲ, ಕಾಸು ಉಳಿಸಲು ಏನು ಮಾಡಬೇಕು? ...
ತುಲಾ ರಾಶಿ
ನಿಮಗೆ ಬ್ರಹ್ಮರಾಕ್ಷಸರು ಕಾಟ ಕೊಡಬಹುದು. ಅದಕ್ಕೆ ಕಾರಣ ನೀವು ಹಿಂದಿನ ಜನ್ಮದಲ್ಲಿ ಯಾರಾದರೂ ಜ್ಞಾನಿಗೆ ತೊಂದರೆ ಕೊಟ್ಟುದು ಆಗಿರಬಹುದು. ಇದರಿಂದ ನಿಮ್ಮ ಕಲಿಕೆಯಲ್ಲಿ ತೊಂದರೆಯುಂಟಾಗಬಹುದು; ಕಲಿತದ್ದೆಲ್ಲ ಮರೆತು ಹೋದೀತು. ಮರೆವಿನ ಸಮಸ್ಯೆ ಬಾಧಿಸಬಹುದು.
ಕೆಲವೊಮ್ಮೆ ದೃಷ್ಟಿದೋಷ ಕಾಣಿಸಿಕೊಂಡೀತು. ಶಿವಪಂಚಾಕ್ಷರಿಯನ್ನು ಸದಾ ಪಠಿಸಿ, ಗಾಯತ್ರಿ ಮಂತ್ರಪಠನ ಒಳ್ಳೆಯದು. ಒಂದು ಸಲ ಸಂತರ್ಪಣೆ ಮಾಡಿಸಿ. ಶಿವದೇವಾಲಯಗಳಿಗೆ ಭೇಟಿ ಕೊಡಿ. ಮನೆಯ ಪೂಜಾ ಕೊಠಡಿಯಲ್ಲಿ ಶಿವದೇವರ ಫೋಟೋ ಅಥವಾ ಮೂರ್ತಿಯಿಡಲು ಮರೆಯಬೇಡಿ. ಅವನು ಭೂತನಾಥ.
ಕುಂಭ ರಾಶಿ
ನಿಮಗೆ ಆಗಾಗ ಅತೃಪ್ತ ದೆವ್ವದ ಕಾಟ ಕಾಣಿಸಿಕೊಳ್ಳಬಹುದು. ಕನ್ನಡಿಯಲ್ಲಿ ನಿಮ್ಮ ಮುಖ ಸರಿಯಾಗಿ ಕಾಣಿಸಿಕೊಳ್ಳಲಾರದು; ಅಥವಾ ಕನ್ನಡಿಯಲ್ಲಿ ಇನ್ಯಾರೋ ಕಾಣಿಸಿದಂತಾಗಬಹುದು. ಸಂಜೆ ಓಡಾಡುವಾಗ ನಿಮ್ಮ ಪಕ್ಕದಲ್ಲಿ ಯಾರೋ ಹೋದಂತೆ ಆಗಬಹುದು. ನಡೆಯುವಾಗ ಹೇಸಿಗೆ ತುಳಿಯಬಹುದು.
ಮಹಾಭಾರತದಲ್ಲಿ ಮಹಾಜಾಣನ್ಯಾರು? ಇಲ್ಲಿದ್ದಾರೆ ನೋಡಿ ಅವರು! ...
ನಿಮ್ಮಿಷ್ಟದ ತಿಂಡಿ ಕೆಲವೊಮ್ಮೆ ವಾಕರಿಕೆ ತರಿಸಬಹುದು. ರಾತ್ರಿ ಹೊರಗಡೆ ಓಡಾಡುವಾಗ ಹುಷಾರು. ಭಗವದ್ಗೀತೆಯನ್ನು ಓದಿ, ಹನುಮಾನ್ ಚಾಲೀಸಾ ಪಠಿಸುವುದರಿಂದ ಕಾಟ ಕಡಿಮೆಯಾಗುವುದು. ಶ್ರೀ ರಾಘವೇಂದ್ರರ ಜಪ ಆರಾಧನೆಯಿಂದ ಮನಶ್ಶಾಂತಿ.