ಪ್ರತಿ ನಿತ್ಯ ಒಂದಲ್ಲ ಒಂದು ಕನಸು ಬೀಳುತ್ತಲೇ ಇರುತ್ತದೆ. ಹಾಗಂತ ಎಲ್ಲವಕ್ಕೂ ಅರ್ಥ ಹುಡುಕುತ್ತಾ ಕೂರುವುದು ಸಾಧ್ಯವಿಲ್ಲದ ಮಾತು. ಆದರೆ, ಕೆಲವು ಕನಸುಗಳು ಗೊಂದಲವನ್ನು ಉಂಟುಮಾಡುತ್ತವೆ. ಆ ಕನಸಿನ ಅರ್ಥವನ್ನು ತಿಳಿದುಕೊಳ್ಳಲೇ ಬೇಕೆಂದು ಮನಸ್ಸಿಗೆ ಅನ್ನಿಸುತ್ತದೆ. ಅಂತಹ ಸಂದರ್ಭದಲ್ಲಿ ಕನಸಿನ ಅರ್ಥವನ್ನು ತಿಳಿಯಬೇಕೆಂದರೆ ಸ್ವಪ್ನ ಶಾಸ್ತ್ರವನ್ನು ತಡಕಾಡಿ ನೋಡಬೇಕಾಗುತ್ತದೆ. ಹಾಗಾದರೆ ಸ್ವಪ್ನ ಶಾಸ್ತ್ರದ ಪ್ರಕಾರ ಯಾವ ರೀತಿಯ ಕನಸು ಬಿದ್ದರೆ ಅದು ಧನಲಾಭವನ್ನು ಸೂಚಿಸುತ್ತದೆ ಎಂಬುದನ್ನು ತಿಳಿಯೋಣ..
ಕನಸು ಬೀಳುವುದು ಸಹಜ ಪ್ರಕ್ರಿಯೆ. ಅದಕ್ಕೊಂದು ಅರ್ಥವಿರುತ್ತದೆ ಎನ್ನುತ್ತದೆ ಸ್ವಪ್ನ ಶಾಸ್ತ್ರ. ಹಲವಾರು ರೀತಿಯ ಕನಸುಗಳು ಬೀಳುತ್ತದೆ. ಅದರಲ್ಲಿ ಕೆಲವು ನೆನಪಿನಲ್ಲಿ ಉಳಿದರೆ ಮತ್ತೆ ಕೆಲವು ಅಸ್ಪಷ್ಟವಾಗಿ ಕಾಡುತ್ತವೆ. ಬಿದ್ದಿರುವ ಕನಸಿಗೆ ಅರ್ಥವೇನಿರಬಹುದೆಂಬ ಕುತೂಹಲ ಇದ್ದೇ ಇರುತ್ತದೆ.
ಹೌದು. ಸ್ವಪ್ನ ಶಾಸ್ತ್ರದಲ್ಲಿ ಕನಸುಗಳ ಬಗೆಗಳು ಮತ್ತು ಅವುಗಳಿಗೆ ಶಾಸ್ತ್ರವು ತಿಳಿಸುವ ಅರ್ಥವನ್ನು ಉಲ್ಲೇಖಿಸಲಾಗಿರುತ್ತದೆ. ಕೆಲವು ಕನಸು ಬಿದ್ದರೆ ಧನಲಾಭವಾಗುತ್ತದೆ ಎಂದು ಹೇಳಲಾಗುತ್ತದೆ. ಹಾಗಾಗಿ ಯಾವ ರೀತಿಯ ಕನಸು ಬಿದ್ದರೆ ಹಣ ಸಿಗುತ್ತದೆ ಅಥವಾ ಲಕ್ಷ್ಮೀದೇವಿಯ ಕೃಪೆ ಲಭಿಸುತ್ತದೆ ಎಂಬುದನ್ನು ತಿಳಿದುಕೊಳ್ಳೋಣ...
ಇದನ್ನು ಓದಿ: ಈ ತಾರೀಖಿನಲ್ಲಿ ಜನಿಸಿದವರಿಗೆ ಶುಕ್ರ ದೆಸೆ, ಐಷಾರಾಮಿ ಜೀವನ ನಡೆಸ್ತಾರೆ!
ಸ್ವಪ್ನ ಶಾಸ್ತ್ರದ ಪ್ರಕಾರ ಈ ಕನಸುಗಳು ಧನ ಲಾಭವಾಗುವ ಸಂಕೇತಗಳು
ಮನೆಯಲ್ಲಿ ಕಸವಿದ್ದಂತೆ ಕನಸು ಬಂದರೆ
ಮನೆಯಲ್ಲಿ ಕಸ ಬಿದ್ದಿರುವ ದೃಶ್ಯವನ್ನು ಕನಸಿನಲ್ಲಿ ನೋಡಿದರೆ ಅದು ಧನಲಾಭವಾಗುವ ಸಂಕೇತವೆಂದು ಹೇಳಲಾಗುತ್ತದೆ. ಅಷ್ಟೇ ಅಲ್ಲದೆ ಯಾರಾದರೂ ಹೊರಗಿನಿಂದ ಮನೆಗೆ ಕಸವನ್ನು ತರುತ್ತಿರುವಂತೆ ಕಂಡರೆ ಅದು ಸಹ ಹಣ ಸಿಗುವ ಸಂಕೇತವನ್ನು ಸೂಚಿಸುತ್ತದೆ. ಈ ರೀತಿಯ ಕನಸುಗಳು ಬಿದ್ದರೆ ಅವು ಧನ ಲಾಭವಾಗುವ ಸೂಚನೆ ಎಂದು ಹೇಳಲಾಗುತ್ತದೆ.
ಹಾಲು- ಮೊಸರು ಕಂಡರೆ
ಕನಸಿನಲ್ಲಿ ಹಾಲು ಅಥವಾ ಮೊಸರನ್ನು ಇಟ್ಟಂತೆ ಕಂಡರೆ ಅದು ಧನಲಾಭವನ್ನು ಸೂಚಿಸುತ್ತದೆ. ಇಲ್ಲವೇ ಹಾಲು ಅಥವಾ ಮೊಸರನ್ನು ತಿನ್ನುತ್ತಿರುವಂತೆ ಕನಸು ಬಿದ್ದರೆ ಅದರ ಅರ್ಥವು ಸಹ ಧನ-ಧಾನ್ಯಗಳಿಂದ ಮನೆಯು ಸಮೃದ್ಧವಾಗುತ್ತದೆ ಎಂಬುದೇ ಆಗಿರುತ್ತದೆ ಎಂದು ಹೇಳಲಾಗುತ್ತದೆ.
ಇದನ್ನು ಓದಿ: ಶನಿ ಜಯಂತಿಯಂದು ಹೀಗೆ ಮಾಡಿ ಶನಿ ದೋಷದಿಂದ ಮುಕ್ತಿ ಹೊಂದಿ...
ಕನಸಿನಲ್ಲಿ ನೀರು ಕಂಡರೆ
ಕನಸಿನಲ್ಲಿ ನೀರು ನೋಡಿದರೆ ಶುಭವೆಂದು ಹೇಳಲಾಗುತ್ತದೆ. ದೊಡ್ಡ ನದಿ, ಸರೋವರ ಅಥವಾ ಕೊಳದ ನೀರನ್ನು ಕನಸಿನಲ್ಲಿ ಕಂಡರೆ ಅದು ಧನಲಾಭದ ಸಂಕೇತವೆಂದು ಹೇಳಲಾಗುತ್ತದೆ. ಕೆಲವು ದಿನಗಳಲ್ಲಿ ಹಣವನ್ನು ಗಳಿಸುವ ಸಂಕೇತವೆಂದು ಹೇಳಲಾಗುತ್ತದೆ. ಈ ರೀತಿಯ ಕನಸು ಸಕಾರಾತ್ಮಕ ಸಂಕೇತವಾಗಿರುತ್ತದೆ.
ಗೋ ಮಾತೆ ಕನಸಿನಲ್ಲಿ ಕಂಡರೆ
ಗೋವಿನಲ್ಲಿ ಮೂವತ್ಮೂರು ಕೋಟಿ ದೇವಾನುದೇವತೆಗಳು ವಾಸವಾಗಿರುತ್ತಾರೆಂದು ಹೇಳಲಾಗುತ್ತದೆ. ಗೋ ಮಾತೆಯ ಸೇವೆಯಿಂದ ಇಷ್ಟಾರ್ಥ ಸಿದ್ಧಿಸುವುದಲ್ಲದೆ, ಮಾಡಿದ ಪಾಪ ಕಳೆಯುತ್ತದೆ ಎಂದು ಹೇಳಲಾಗುತ್ತದೆ. ಕನಸಿನಲ್ಲಿ ಗೋಮಾತೆಯ ದರ್ಶನವಾದರೆ ಅದು ಧನಲಾಭವನ್ನು ಸೂಚಿಸುತ್ತದೆ ಎಂದು ಹೇಳಲಾಗುತ್ತದೆ.
ಲಾಟರಿ ಗೆದ್ದ ಕನಸು
ಕನಸಿನಲ್ಲಿ ದೊಡ್ಡ ಮೊತ್ತದ ಲಾಟರಿ ಗೆದ್ದಂತೆ ಕಂಡರೆ ಅದು ಸಕಾರಾತ್ಮಕ ಸಂಕೇತವೆಂದು ಹೇಳಲಾಗುತ್ತದೆ. ಈ ಬಗೆಯ ಕನಸಿನಿಂದ ಹಣ ಲಾಭವಾಗುವ ಸಾಧ್ಯತೆ ಹೆಚ್ಚಿರುತ್ತದೆ ಎಂದು ಹೇಳಲಾಗುತ್ತದೆ.
ಕನಸಿನಲ್ಲಿ ಮಗು ಕಂಡರೆ
ಕನಸಿನಲ್ಲಿ ಪುಟ್ಟ ಮಗು ಆಟವಾಡುತ್ತಿರುವಂತೆ ಅಥವಾ ಚೇಷ್ಟೆ ಮಾಡುತ್ತಿರುವಂತೆ ಕಂಡರೆ ಅದು ಧನಲಾಭದ ಸಂಕೇತವೆಂದು ಹೇಳಲಾಗುತ್ತದೆ. ಅಂದರೆ ಯಾವುದಾದರೂ ಮೂಲದಿಂದ ಹಣ ದೊರಕುತ್ತದೆ ಎಂದು ಹೇಳಲಾಗುತ್ತದೆ.
ಪ್ರಸಾದ ತಿನ್ನುತ್ತಿರುವಂತೆ ಕಂಡರೆ
ದೇವಸ್ಥಾನದಲ್ಲಿ ಅಥವಾ ಗುರು ಮಠಗಳಲ್ಲಿ ಪ್ರಸಾದವನ್ನು ತಿನ್ನುತ್ತಿರುವಂತೆ ಕನಸು ಬಿದ್ದರೆ ಅದು ಧನ ಲಾಭದ ಸಂಕೇತವಾಗಿರುತ್ತದೆ. ಹಿಡಿದ ಕೆಲಸದಲ್ಲಿ ಲಾಭವಾಗುವ ಸಾಧ್ಯತೆ ಹೆಚ್ಚಿರುತ್ತದೆ. ಈ ರೀತಿಯ ಕನಸು ಬಿದ್ದರೆ ಅದು ಶುಭವನ್ನು ಸೂಚಿಸುತ್ತದೆ ಎಂದು ಹೇಳಲಾಗುತ್ತದೆ.
ಇದನ್ನು ಓದಿ: ಮನೆಯ ಸದಸ್ಯರೊಂದಿಗೆ ಭಿನ್ನಾಭಿಪ್ರಾಯವೇ? ಹಾಗಿದ್ದರೆ ಈ ಮೂರು ಅಭ್ಯಾಸಗಳ ಬಿಡಿ...
ಕನಸಿನಲ್ಲಿ ಸಂದರ್ಶನಕ್ಕೆ ಹೋಗುತ್ತಿರುವಂತೆ ಕಂಡರೆ
ನೀವು ಅಥವಾ ಯಾರಾದರೂ ಸಂದರ್ಶನಕ್ಕೆ ಹೋಗುತ್ತಿರುವಂತೆ ಕಂಡರೆ ಇದರ ಅರ್ಥ ಸದ್ಯದಲ್ಲಿಯೇ ಧನಲಾಭವಾಗುವ ಸಂಭವವಿದೆ ಎಂದು ಹೇಳಲಾಗುತ್ತದೆ. ಅಷ್ಟೇ ಅಲ್ಲದೇ ಈ ರೀತಿಯ ಕನಸಿನಿಂದ ಉದ್ಯೋಗದಲ್ಲಿ ಪ್ರಮೋಶನ್ ಸಿಗುವ ಸಾಧ್ಯತೆ ಸಹ ಇರುತ್ತದೆ.
undefined
ಸ್ನಾನ ಮಾಡುತ್ತಿರುವ ಕನಸು ಕಂಡರೆ
ಕನಸಿನಲ್ಲಿ ಸ್ನಾನ ಮಾಡುತ್ತಿರುವ ಬಗ್ಗೆ ಕನಸು ಕಂಡರೆ ಹಣ ಸಿಗುವ ಸಂಭವವಿದೆ ಎಂಬುದನ್ನು ಸೂಚಿಸುತ್ತದೆ. ಪವಿತ್ರ ನದಿಗಳಲ್ಲಿ ಸ್ನಾನ ಮಾಡುವ ಕನಸು ಕಂಡರೆ ಅದು ಸಹ ಶುಭವನ್ನು ಸೂಚಿಸುತ್ತದೆ.