ಪ್ರೀತಿ ಮತ್ತು ಸ್ನೇಹದಲ್ಲಿ ಈ 4 ರಾಶಿಯವರಿಗೆ ಹೆಚ್ಚು ಮೋಸವಂತೆ...!

By Suvarna NewsFirst Published Jun 12, 2021, 1:54 PM IST
Highlights

ಜ್ಯೋತಿಷ್ಯ ಶಾಸ್ತ್ರದಲ್ಲಿ ಪ್ರತಿ ರಾಶಿಗೂ ಅದರದ್ದೇ ಆದ ಗುಣ ಸ್ವಭಾವಗಳಿರುತ್ತವೆ. ಕೆಲವು ರಾಶಿಯವರು ಮೃದು ಮತ್ತು ಸರಳ ವ್ಯಕ್ತಿತ್ವವನ್ನು  ಹೊಂದಿರುತ್ತಾರೆ. ಇನ್ನು ಕೆಲವು ರಾಶಿಗಳ ಗುಣವೇ ಇತರರ ಪ್ರಾಮಾಣಿಕತೆ, ಸರಳತೆ ಮತ್ತು ವಿಶ್ವಾಸವನ್ನು ಸ್ವಾರ್ಥಕ್ಕೆ ಬಳಸಿಕೊಂಡು ಮೋಸ ಮಾಡುವುದು. ಹಾಗಾಗಿ ಪ್ರೀತಿಯಲ್ಲಿ, ಗೆಳೆತನದಲ್ಲಿ ಮೋಸ ಹೋಗುವ ರಾಶಿಯವರ ಬಗ್ಗೆ ತಿಳಿಯೋಣ..

ವ್ಯಕ್ತಿಯ ಸ್ವಭಾವ ಮತ್ತು ಗುಣಗಳು ರಾಶಿ ಚಕ್ರದ ಪ್ರಭಾವವನ್ನು ಹೊಂದಿರುತ್ತವೆ. ಮೋಸ ಹೋಗುವವರು ಇರುವವರೆಗೂ ಮೋಸ ಮಾಡುವವರು ಇದ್ದೇ ಇರುತ್ತಾರೆ ಎಂಬ ಮಾತಿನಂತೆ, ಕೆಲವು ರಾಶಿಯವರು ಮೃದು ಮತ್ತು ಸರಳ ವ್ಯಕ್ತಿತ್ವವನ್ನು ಹೊಂದಿರುತ್ತಾರೆ. ಇನ್ನು ಕೆಲವು ರಾಶಿಗಳ ಗುಣವೇ ಇತರರ ಪ್ರಾಮಾಣಿಕತೆ, ಸರಳತೆ ಮತ್ತು ವಿಶ್ವಾಸವನ್ನು ಸ್ವಾರ್ಥಕ್ಕೆ ಬಳಸಿಕೊಂಡು ಮೋಸ ಮಾಡುವುದು. ಹಾಗಾಗಿ ಪ್ರೀತಿಯಲ್ಲಿ, ಗೆಳೆತನದಲ್ಲಿ ಮೋಸ ಹೋಗುವ ರಾಶಿಯವರ ಬಗ್ಗೆ ತಿಳಿಯುವುದು ಬಹು ಮುಖ್ಯ.

ಜ್ಯೋತಿಷ್ಯ ಶಾಸ್ತ್ರದಲ್ಲಿ ಹೇಳುವಂತೆ ಪ್ರತಿ ರಾಶಿಯು ಒಂದಲ್ಲ ಒಂದು ವಿಶೇಷತೆಯನ್ನು ಹೊಂದಿರುತ್ತದೆ. ಒಬ್ಬೊಬ್ಬರ ಗುಣ ಸ್ವಭಾವಗಳು ಒಂದೊಂದು ರೀತಿ ಇರುತ್ತದೆ. ಹಾಗಂತ ಸಾಮ್ಯತೆ ಇರುವುದೇ ಇಲ್ಲವೆಂದಲ್ಲ, ಹಲವಾರು ವಿಷಯಗಳಲ್ಲಿ ರಾಶಿಗಳ ಗುಣ ಸ್ವಭಾವಗಳಲ್ಲಿ ಸಾಮ್ಯತೆಯನ್ನು ಕಾಣಬಹುದು. 
        
ಇದನ್ನು ಓದಿ: ವಟ ಸಾವಿತ್ರಿ ವ್ರತ ಆಚರಿಸಿ, ಶುಭ ಫಲ ನಿಮ್ಮದಾಗಿಸಿಕೊಳ್ಳಿ... 

ರಾಶಿ, ನಕ್ಷತ್ರಗಳು ಒಂದೇ ಆಗಿದ್ದಾಗ ಕೆಲವು ಗುಣಗಳು ಒಂದೇ ರೀತಿಯಾಗಿರುವುದನ್ನು ನೋಡಬಹುದು. ಆದರೆ, ಗುಣ ವಿಶೇಷತೆ ವ್ಯಕ್ತಿಯಿಂದ ವ್ಯಕ್ತಿಗೆ ಭಿನ್ನವಾಗಿರುವುದು ಅಷ್ಟೇ ನಿಜ. ಸರಳ ಮತ್ತು ಪ್ರಾಮಾಣಿಕ ಸ್ವಭಾವವನ್ನು ಹೊಂದಿರುವ ಈ ರಾಶಿಯವರು ಸಾಮಾನ್ಯವಾಗಿ ಮೋಸ ಹೋಗಿರುತ್ತಾರೆ ಅಥವಾ ಮೋಸ ಹೋಗುತ್ತಲೇ ಇರುತ್ತಾರೆ. ಕೆಲವರು ಪ್ರೀತಿಯಲ್ಲಿ ಮೋಸ ಹೋಗಿದ್ದರೆ ಮತ್ತೆ ಕೆಲವರು ಗೆಳೆತನದಲ್ಲಿ ಮೋಹ ಹೊಂದಿರುತ್ತಾರೆ. ಹಾಗಾದರೆ ಯಾವ್ಯಾವ ರಾಶಿಯವರು ಈ ಸಾಲಿನಲ್ಲಿದ್ದಾರೆ ತಿಳಿಯೋಣ...

ಮೇಷ ರಾಶಿ
ಈ ರಾಶಿಯ ಅಧಿಪತಿ ಮಂಗಳ ಗ್ರಹ. ಹಾಗಾಗಿ ಮೇಷ ರಾಶಿಯವರಿಗೆ ಮಂಗಳ ಗ್ರಹದ ವಿಶೇಷ ಕೃಪೆ ಪ್ರಾಪ್ತವಾಗಿರುತ್ತದೆ. ಈ ರಾಶಿಯವರು ನಿರ್ಮಲ ಹೃದಯದವರು ಮತ್ತು ಪ್ರಾಮಾಣಿಕರಾಗಿರುತ್ತಾರೆ. ಇವರು ಆಶಾವಾದಿಗಳು, ಮುಗ್ದರು ಮತ್ತು ವಿಶ್ವಾಸಕ್ಕೆ ಅರ್ಹರಾಗಿರುತ್ತಾರೆ. ಈ ರಾಶಿಯವರು ಯಾವುದಾದರೂ ವಿಷಯಕ್ಕೆ ಮೋಸ ಹೋದಾಗ, ಬೇಸರಗೊಳ್ಳುವುದು ಎಷ್ಟು ನಿಜವೋ ಅಷ್ಟೇ ಬೇಗ ಎಲ್ಲವನ್ನು ಮರೆತು ಜನರ ಮೇಲೆ ವಿಶ್ವಾಸವಿಡಲು ಆರಂಭಿಸುತ್ತಾರೆ. ಹಾಗಾಗಿ ಇವರ ಈ ಗುಣವನ್ನು ಹಲವರು ದುರುಪಯೋಗ ಪಡಿಸಿಕೊಳ್ಳುತ್ತಾರೆ. ಇದೇ ಕಾರಣಕ್ಕೆ ಈ ರಾಶಿಯವರು ಹಲವು ಬಾರಿ ಪ್ರೀತಿಯಲ್ಲಿ ಅಥವಾ ಸ್ನೇಹದ ವಿಚಾರದಲ್ಲಿ ಇತರರನ್ನು ನಂಬಿ ಮೋಸಕ್ಕೆ ಗುರಿಯಾಗುತ್ತಾರೆ.

ಇದನ್ನು ಓದಿ: ಶನಿ ಜಯಂತಿಯಂದು ಹೀಗೆ ಮಾಡಿ ಶನಿ ದೋಷದಿಂದ ಮುಕ್ತಿ ಹೊಂದಿ... 

ಮಿಥುನ ರಾಶಿ
ಈ ರಾಶಿಯವರು ಎರಡು ರೀತಿಯ ಸ್ವಭಾವವನ್ನು ಹೊಂದಿರುತ್ತಾರೆ. ಮಿಥುನ ರಾಶಿಯವರು ಪ್ರೀತಿಪರರು ಮತ್ತು ಬಹುಮುಖ ಪ್ರತಿಭೆಯುಳ್ಳವರಾಗಿರುತ್ತಾರೆ. ಇವರಿಗೆ ಇವರೇ ಜೊತೆಗಾರರು, ಒಬ್ಬರೇ ಖುಷಿಯಾಗಿರುವ ಗುಣ ಇವರದ್ದು, ಇತರರ  ಮಾತುಗಳಿಗೆ ಮತ್ತು ಕಪಟಗಳಿಗೆ ಅಷ್ಟೊಂದು ತಲೆ ಕೆಡಿಸಿಕೊಳ್ಳದಿರುವುದು ಈ ರಾಶಿಯವರ ವ್ಯಕ್ತಿತ್ವವಾಗಿರುತ್ತದೆ. ಯಾವುದೇ ವಿಷಯವನ್ನು ಹೆಚ್ಚು ಆಳವಾಗಿ ಯೋಚಿಸುತ್ತಾ ಕೂರುವುದು ಇವರಿಗೆ ಆಗದ ವಿಷಯ. ಹಾಗಾಗಿ ಯಾವ ವಿಷಯಕ್ಕೂ ಹೆಚ್ಚು ಯೋಚಿಸದಿರುವ ಕಾರಣ ಇವರು ಹಲವು ಬಾರಿ ಮೋಸ ಹೋಗಿಬಿಡುತ್ತಾರೆ. ಅದು ಪ್ರೀತಿಯಲ್ಲಿ ಆಗಿರಲಿ ಅಥವಾ ಗೆಳೆತನದಲ್ಲೇ ಆಗಿರಲಿ, ಮೋಸ ಹೋದ ಮೇಲೆ ಇವರಿಗೆ ಅರಿವಿಗೆ ಬರುತ್ತದೆ. 
 



ಸಿಂಹ ರಾಶಿ
ಸಿಂಹ ರಾಶಿಯ ವ್ಯಕ್ತಿಗಳ ಮೇಲೆ ಸೂರ್ಯ ಗ್ರಹದ ಪ್ರಭಾವವಿರುತ್ತದೆ. ಈ ರಾಶಿಯವರು ಹೆಚ್ಚು ಪರಿಶ್ರಮಿಗಳು ಮತ್ತು ಪ್ರಾಮಾಣಿಕರಾಗಿರುತ್ತಾರೆ. ಈ ರಾಶಿಯವರು ಉತ್ತಮ ಸಂಗಾತಿ ಆಗಬಲ್ಲರು. ಇತರರ ಖುಷಿಯನ್ನು ನೋಡಿ ಖುಷಿ ಪಡುವ ಸ್ವಭಾವ ಇವರದ್ದು. ಈ ರಾಶಿಯವರಿಗೆ ಇತರರ ಮೇಲೆ ಮಾತ್ಸರ್ಯ ಭಾವನೆ ಇರುವುದಿಲ್ಲ. ಸಿಂಹ ರಾಶಿಯವರು ಆಶಾವಾದಿಗಳು, ಪರೋಪಕಾರಿಗಳು ಮತ್ತು ದಯಾ ಗುಣವನ್ನು ಹೊಂದಿರುತ್ತಾರೆ. ನೇರವಾಗಿ ಮಾತನಾಡುವ ಗುಣ ಈ ರಾಶಿಯವರದ್ದು. ಹೀಗಾಗಿ ಈ ರಾಶಿಯವರ ನೇರ ಮಾತಿನಿಂದ ಅವಮಾನಗೊಂಡವರು ಸೇಡು ತೀರಿಸಿಕೊಳ್ಳಲು ನಯವಾಗಿ ವರ್ತಿಸುವ ಮೂಲಕ ಮೋಸ ಮಾಡುತ್ತಾರೆ. 

ಇದನ್ನು ಓದಿ: ಮನೆಯ ಸದಸ್ಯರೊಂದಿಗೆ ಭಿನ್ನಾಭಿಪ್ರಾಯವೇ? ಹಾಗಿದ್ದರೆ ಈ ಮೂರು ಅಭ್ಯಾಸಗಳ ಬಿಡಿ... 

ಕನ್ಯಾ ರಾಶಿ
ಈ ರಾಶಿಯ ವ್ಯಕ್ತಿಗಳು ಗೆಳೆತನ ಮತ್ತು ಪ್ರೀತಿಗೆ ಹೆಚ್ಚಿನ ಪ್ರಾಶಸ್ತ್ಯವನ್ನು ನೀಡುವವರು. ತಮ್ಮನ್ನು ಪೀತಿಸುವವರಿಗಾಗಿ ಏನು ಬೇಕಾದರೂ ಮಾಡಲು ತಯಾರಿರುತ್ತಾರೆ. ಸಂಬಂಧಗಳ ವಿಷಯದಲ್ಲಿ ಹೆಚ್ಚು ಪ್ರಾಮಾಣಿಕರಾಗಿರುತ್ತಾರೆ. ಹಾಗಾಗಿ ತೀರಾ ಹತ್ತಿರದವರೇ ಮೋಸ ಮಾಡಲು ಪ್ರಯತ್ನಿಸಿದರೂ ಇವರಿಗೆ ತಿಳಿಯುವುದಿಲ್ಲ. ಹಾಗಾಗಿ ಮೋಸ ಹೋಗುತ್ತಾರೆ.

click me!