Party Lovers: ಈ ಆರು ರಾಶಿಯವರನ್ನು ಪಾರ್ಟಿಗೆ ಕರೆದರೆ ಅದು ಫ್ಲಾಪ್ ಆಗೋ ಚಾನ್ಸೇ ಇಲ್ಲ!

By Suvarna News  |  First Published Jan 12, 2022, 2:16 PM IST

ಪಾರ್ಟಿ ಗೀರ್ಟಿ ಎಲ್ಲ ಎಲ್ಲರಿಗೂ ಆಗಿಬರೋಲ್ಲ. ಆದ್ರೆ ಕೆಲವ್ರು ಮಾತ್ರ ಎಂಥಾ ಪಾರ್ಟಿನೂ ತಾವೂ ಎಂಜಾಯ್ ಮಾಡೋದಲ್ದೆ, ತಮ್ಮ ಪ್ರೆಸೆನ್ಸ್‌ನಿಂದ ಇತರರನ್ನೂ ಇಂಪ್ರೆಸ್ ಮಾಡ್ತಾರೆ. ಹಾಗಾದ್ರೆ ಯಾವೆಲ್ಲ ರಾಶಿಯವರು ಪಾರ್ಟಿ ಮಾಡೋದ್ರಲ್ಲಿ ನಿಸ್ಸೀಮರು ಗೊತ್ತಾ?


ಎಲ್ಲರಿಗೂ ಪಾರ್ಟಿ(party) ಮಾಡೋದು ಸುಲಭವಲ್ಲ. ಎಲ್ಲರೂ ಅಷ್ಟೊಂದು ಆ್ಯಕ್ಟಿವ್ ಆಗೂ ಇರೋಲ್ಲ. ಆದ್ರೆ ಕೆಲವ್ರು ಮಾತ್ರ ಹಾಡ್ ಹಾಕಿದ್ರೆ ಸಾಕು ಕುಣಿದು ಕುಪ್ಪಳಿಸಿ, ಸುತ್ತಲಿದ್ದವರನ್ನೂ ಕುಣಿಸಿ ಇದ್ದಲ್ಲೇ ಒಂದು ಪಾರ್ಟಿ ಮೂಡ್ ಕ್ರಿಯೇಟ್ ಮಾಡಿಬಿಡ್ತಾರೆ. ಸಾಮಾನ್ಯ ಜಾಗನ್ನೇ ಹೀಗ್ ಬದಲಿಸೋರು ಇನ್ನು ನಿಜವಾದ ಪಾರ್ಟಿಗೇ ಹೋದಾಗ ಅಲ್ಲಿಗೆಷ್ಟು ಕಳೆ ತರಬಹುದು? ನೀವೇನಾದರೂ ಪಾರ್ಟಿ ಮಾಡ್ತೀದಿರಾದ್ರೆ, ಅದು ಹಿಟ್ ಆಗೋಕೆ ಆ ರಾಶಿಯ ಸ್ನೇಹಿತರನ್ನು ಕರೆಯಲು ಮರೆಯದಿರಿ. 

ಮೇಷ(Aries)
ಈ ರಾಶಿಯವರಿಗೆ ಆತ್ಮವಿಶ್ವಾಸ ಹೆಚ್ಚು. ಯಾರಿಗೂ ಹೆದರುವವರೂ ಅಲ್ಲ, ಸಿಕ್ಕಾಪಟ್ಟೆ ಔಟ್‌ಗೋಯಿಂಗ್ ಬೇರೆ. ಮತ್ತಿನ್ನೇನ್ ಬೇಕು, ಪಾರ್ಟಿ ಅಂದ್ರೆ ಸಾಕು ಎದ್ ಕುಣ್ದಾಡ್‌ಬಿಡ್ತಾರಿವರು. ಸಖತ್ ಎಂಜಾಯ್ ಮಾಡೋದು ಹೇಗಂಥ ಇವರಿಗೆ ಚೆನ್ನಾಗ್ ಗೊತ್ತು. ಪಾರ್ಟಿಗೆ ಇವರನ್ನು ಕರೆದು ನೋಡಿ, ಹೇಗೆ ತಮ್ಮ ಧನಾತ್ಮಕತೆ(positivity)ಯ ಎನರ್ಜಿಯನ್ನು ಸುತ್ತಲೂ ಹರಡುತ್ತಾರಂತ.  ಪಾರ್ಟಿ ವೈಲ್ಡ್ ಆಗಿದ್ದಷ್ಟೂ ಥ್ರಿಲ್ ಹೆಚ್ಚು ಎಂದು ನಂಬಿ ಮೆರೆವವರು ಇವರು.

Tap to resize

Latest Videos

undefined

ಮಿಥುನ(Gemini)
ಮಿಥುನ ರಾಶಿಯವರ ಮಾತು ಚೆಂದ. ನಯವಾಗಿ ಮಾತಾಡುತ್ತಲೇ ಯಾರನ್ನು ಬೇಕಾದರೂ ಗೆಳೆಯರನ್ನಾಗಿಸಿಕೊಳ್ಳುವ ಗುಣ ಇವರದು. ಹೊಸಬರನ್ನು ಮಾತಾಡಿಸಲು, ಅವರೊಂದಿಗೆ ಬೆರೆಯಲು ಭಯವೇ ಇಲ್ಲದವರು. ಹಾಗಾಗಿ ಎಲ್ಲೇ ಜನ ಸೇರುವಲ್ಲಿ ಹೋಗುವುದೆಂದರೆ ಇವರಿಗಿಷ್ಟ. ಒಳ್ಳೆ ಸಮಯವನ್ನು ಎಂಜಾಯ್ ಮಾಡುವುದು ಹೇಗೆಂದು ಗೊತ್ತಿರುವ ಇವರು ತಾವೂ ಕುಣಿದು, ಜೊತೆಯವರನ್ನೂ ಕುಣಿಸಬಲ್ಲರು. ಅಷ್ಟೇ ಅಲ್ಲ, ಗೇಮ್ ಆಡಿಸಿ ಎಲ್ಲರ ಮೈ ಚಳಿ ಬಿಡಿಸುವ ತಾಕತ್ತೂ ಇವರಿಗಿದೆ. 

Astro Tips : ಕಂಕಣ ಭಾಗ್ಯ ಕೂಡಿ ಬರಲು ಕಾಡಿಗೆಯ ಈ ಉಪಾಯ ಅನುಸರಿಸಿ

ಸಿಂಹ(Leo)
ಇವರು ಸಂಪೂರ್ಣ ಬಹಿರ್ಮುಖಿಗಳು ಹಾಗೂ ಎಲ್ಲರನ್ನೂ ಚೆನ್ನಾಗಿ ಕಾಣುವ ಸ್ನೇಹ ಜೀವಿಗಳು. ಇದರೊಂದಿಗೆ ಎಲ್ಲರ ಗಮನ ತಮ್ಮೆಡೆ ಬರುತ್ತದೆಂದರೆ ಅದನ್ನು ಚೆನ್ನಾಗಿ ಎಂಜಾಯ್ ಮಾಡಬಲ್ಲರು. ಸ್ಪಾಟ್‌ಲೈಟಲ್ಲಿ ನಿಂತು ಪಾರ್ಟಿಯಲ್ಲಿರುವವರೆಲ್ಲರಿಗೂ ಮಜಾ ಕೊಡೋ ತಾಕತ್ತು ಇವರದು. ಉತ್ತಮ ನಾಯಕತ್ವ ಹೊಂದಿರುವ ಇವರಿಗೆ ಪಾರ್ಟಿ ಎಂದರೆ ಮನೆಯಲ್ಲಿರುವಷ್ಟೇ ಕಂಫರ್ಟ್.

Past Life: ಹಿಂದಿನ ಜನ್ಮದಲ್ಲಿ ನೀವೇನಾಗಿದ್ದಿರಿ ಅಂತ ತಿಳ್ಕೋಬೇಕಾ?

ತುಲಾ(Libra)
ಎಲ್ಲೇ ಹೋದ್ರೂ ಸುಲಭವಾಗಿ ಸ್ನೇಹ ಸಾಧಿಸುವುದು ಇವರ ಹುಟ್ಟು ಗುಣ. ಜನರನ್ನು ಅಯಸ್ಕಾಂತದ ಹಾಗೆ ಆಕರ್ಷಿಸುವ ಇವರು, ಇವರ ಮಾತು, ಹಾವಭಾವ ಎಲ್ಲವೂ ಎಲ್ಲ ರೀತಿಯ ಜನರಿಗೂ ಇಷ್ಟವಾಗುತ್ತದೆ. ಇವರನ್ನು ಪಾರ್ಟಿಗೆ ಕರೆದರೆ ಅದರಲ್ಲಿ ಎಲ್ಲರನ್ನೂ ತೊಡಗಿಸಿ ಬ್ಯಾಲೆನ್ಸ್ ಮಾಡುವುದು ಹೇಗೆಂದು ಇವರಿಗೆ ಚೆನ್ನಾಗಿ ಗೊತ್ತು. 

ಧನು(Sagittarius)
ಇವರು ಡಿಜೆಯಾಗೋಕೂ ಸೈ, ಆ್ಯಂಕರಿಂಗೂ ಸೈ, ಗೇಮ್ಸ್ ಆಡಿಸಲೂ ಸೈ.. ಪಾರ್ಟಿ ಪರ್ಫೆಕ್ಟ್ ಪರ್ಸೆನ್ ಧನು ರಾಶಿಯವರು. ಬೇಕಿದ್ದರೆ ಬಂದವರನ್ನೆಲ್ಲ ಸ್ವಿಮ್ಮಿಂಗ್ ಪೂಲಿಗೆ ಇಳಿಸಿ ಅವರ ಮೈ ಚಳಿ ಬಿಡಿಸಲೂ ಇವರಿಗೆ ಗೊತ್ತು. ಕ್ರೇಜಿ ಪಾರ್ಟಿ ಐಡಿಯಾಗಳು ಇವರ ಬಳಿ ಧಾರಾಳವಾಗಿ ಇರುತ್ತವೆ. ಹಾಗಾಗಿ, ಧನಸ್ಸು ರಾಶಿಯವರನ್ನು ಪಾರ್ಟಿಗೆ ಮಿಸ್ ಮಾಡದೇ ಕರೆಯಿರಿ.

ಕುಂಭ(Aquarius)
ತುಂಬಾ ಪರಿಚಿತರಾದರೆ, ಆಪ್ತರಾದರೆ ಅಂಥವರ ನಡುವೆ ಕುಂಭ ರಾಶಿಯವರು ಫುಲ್ ಬಿಂದಾಸ್ ಆಗಿ ಇರಬಲ್ಲರು. ನಿಮ್ಮ ಕ್ಲೋಸ್ ಸರ್ಕಲ್‌ನಲ್ಲಿ ಕುಂಭ ರಾಶಿಯವರಿದ್ದರೆ ಅವರನ್ನು ಪಾರ್ಟಿಗೆ ಕರೆಯಲು ಮರೆಯದಿರಿ. ಏಕೆಂದರೆ, ಮತ್ತು ನೆತ್ತಿಗೇರಿದರೆ ಇವರು ಜಗತ್ತೇ ಮರೆತು ಮಜವಾಗಿರಬಲ್ಲರು. ಪಾರ್ಟಿಯಲ್ಲಿ ಫೋಟೋ, ವಿಡಿಯೋ ಮಾಡುವುದು, ಅದರಲ್ಲಿ ಎಲ್ಲರ ಪೋಸ್ ನೋಡಿ ಮಜಾ ತೆಗೆಯುವುದರಲ್ಲಿ ಇವರು ಎತ್ತಿದ ಕೈ. 

click me!