ಈ ಮೂರು ಪಾದಾಂಕದವರು ಬುದ್ಧಿವಂತರು, ಹಣವಂತರು..!

By Suvarna NewsFirst Published Jul 31, 2021, 3:14 PM IST
Highlights

ಸಂಖ್ಯಾಶಾಸ್ತ್ರವು ನಿಮ್ಮ ಗುಣ-ಸ್ವಭಾವದ ಜೊತೆಗೆ ಸ್ಥಿತಿವಂತಿಕೆ ಮೇಲೂ ಪರಿಣಾಮವನ್ನು ಬೀರುತ್ತದೆ. ಅಂದರೆ, ಜ್ಯೋತಿಷ್ಯದ ಪ್ರಕಾರ ನೀವು ಹುಟ್ಟಿದ ದಿನಾಂಕದಿಂದ ಬರುವ ಪಾದಾಂಕದ ಮೇಲೆ ನಿಮ್ಮ ಅದೃಷ್ಟದ ಸಂಖ್ಯೆ ನಿರ್ಧರಿತವಾಗಲಿದ್ದು, ಅದರನ್ವಯ ನಿಮ್ಮ ಪ್ರತಿ ಹೆಜ್ಜೆ ಇದ್ದರೆ ಉತ್ತಮ ಎಂದು ಹೇಳಲಾಗುತ್ತದೆ. ಹಾಗಾಗಿ ನಿಮ್ಮ ಪಾದಾಂಕವು 1, 2, 5 ಇದ್ದರೆ ಏನು..? ಎತ್ತ ಎಂಬ ಬಗ್ಗೆ ಗಮನಿಸೋಣ…

ಅದೃಷ್ಟ ಹೇಗೆ ಬರುತ್ತದೆ? ಯಾವುದರಿಂದ ಬರುತ್ತದೆ ಎಂಬುದು ಕೆಲವು ಸಾರಿ ತಿಳಿದಿರುವುದಿಲ್ಲ. ಆದರೆ, ದೇವರನ್ನು, ಜ್ಯೋತಿಷ್ಯ ನಂಬುವ ಕೆಲವರು ಇದಕ್ಕೆ ಉತ್ತರವನ್ನು ಕಂಡುಕೊಂಡಿರುತ್ತಾರೆ. ಹುಟ್ಟಿದ ದಿನ, ಘಳಿಗೆ, ರಾಶಿ, ನಕ್ಷತ್ರಗಳ ಮೇಲೆ ಅದೃಷ್ಟಗಳು ಅವಲಂಬನೆಯಾಗುತ್ತದೆ. ಇದರಂತೆ ಸಂಖ್ಯೆಗಳ ಮೂಲಕವೂ ಶುಭ-ಅಶುಭಗಳು ಇರುತ್ತವೆ ಎಂಬುದು ನಿಮಗೆ ಗೊತ್ತಿರಲಿ. 

ಜ್ಯೋತಿಷ್ಯ ಶಾಸ್ತ್ರದಲ್ಲಿ ಸಂಖ್ಯಾಶಾಸ್ತ್ರಕ್ಕೆ ಬಹಳ ಮಹತ್ವವಿದೆ. ಇದರ ಮುಖಾಂತರ ಅದೃಷ್ಟವನ್ನು ತಿಳಿಯಬಹುದಾಗಿದೆ. ಅದೃಷ್ಟ ಸಂಖ್ಯೆ ಯಾವುದು ಎಂದು ಕೆಲವರಿಗೆ ಗೊತ್ತಿರುವುದಿಲ್ಲ. ಒಬ್ಬೊಬ್ಬರಿಗೆ ಒಂದೊಂದು ಸಂಖ್ಯೆ ಲಕ್ಕಿಯಾಗಿರುತ್ತದೆ. ಹೀಗಾಗಿ ಅವರು ಖರೀದಿ ಸಮಯದಲ್ಲೂ ಲೆಕ್ಕಾಚಾರ ಹಾಕುತ್ತಾರೆ. ದಿನಾಂಕದಿಂದ ಹಿಡಿದು, ವಾಹನಗಳ ಸಂಖ್ಯೆಯಲ್ಲೂ ಅವರಿಗೆ ಬೇಕಿರುವ ಅಂಕೆ ಇರಲೇಬೇಕು. ಇಲ್ಲಿ ಹುಟ್ಟಿದ ದಿನಾಂಕಕ್ಕಿಂತ ಆ ದಿನಾಂಕಗಳಿಂದ ಬರುವ ಪಾದಾಂಕದ ಮೇಲೆ ಅದೃಷ್ಟದ ಲೆಕ್ಕಾಚಾರ ಹಾಕಲಾಗುತ್ತದೆ. ಸಂಖ್ಯಾಶಾಸ್ತ್ರದ ಪ್ರಕಾರ, 1, 2 ಮತ್ತು 5 ಪಾದಾಂಕ ಇದ್ದವರು ಏನಾಗುತ್ತಾರೆ ಎಂಬ ಬಗ್ಗೆ ತಿಳಿಯೋಣ. 

ಇದನ್ನು ಓದಿ: ಮನೆ ವಾಸ್ತು ಮೇಲೆ ನವಗ್ರಹಗಳ ಪ್ರಭಾವ, ಹೀಗೆ ಇದ್ರೆ ಶುಭ – ಅಶುಭ..!

ಪಾದಾಂಕ 1
ಪಾದಾಂಕ 1 ಅನ್ನು ಹೊಂದಿದವರಿಗೆ ಸೂರ್ಯ ಗ್ರಹದ ಪ್ರಭಾವ ಇರುತ್ತದೆ. 1, 10, 19 ಮತ್ತು 28ರ ದಿನಾಂಕಗಳಲ್ಲಿ ಜನಿಸಿದವರ ಪಾದಾಂಕ 1 ಆಗಿದ್ದು, ಯಾವುದೇ ತಿಂಗಳಲ್ಲಿ ಜನಿಸಿದ್ದರೂ ಈ ದಿನಾಂಕದಲ್ಲಿ ಜನಿಸಿದವರ ಪಾದಾಂಕ ಬದಲಾಗದು. ಈ ಪಾದಾಂಕದವರಿಗೆ ಅತ್ಯುತ್ತಮ ನಾಯಕತ್ವ ಗುಣ ಇರುತ್ತದೆ. ಅಲ್ಲದೆ, ಇವರು ಬಹಳ ಮಹತ್ವಾಕಾಂಕ್ಷಿಗಳು. ಹಾಗಂತ ಪರಿಶ್ರಮಿಗಳೂ ಹೌದು. ಸರಿಯಾದ ಸಮಯದಲ್ಲಿ ಸರಿಯಾದ ನಿರ್ಧಾರ ಇವರದ್ದಾಗಿರುತ್ತದೆ. ತಮ್ಮ ಬುದ್ಧಿವಂತಿಕೆಯಿಂದ ಜೀವನದಲ್ಲಿ ಹೆಚ್ಚಿನ ಹಣ ಗಳಿಸುತ್ತಾರೆ. ಹಣವನ್ನು ಸಂಪಾದಿಸುವುದಷ್ಟೇ ಅಲ್ಲದೆ, ಅದನ್ನು ಉಳಿಸುವ ಮನೋಭಾವವೂ ಇವರದ್ದಾಗಿರುತ್ತದೆ. ಹಾಗಾಗಿ ಲಕ್ಷ್ಮಿ ಇವರ ಬಳಿ ನೆಲೆಸಲು ಸದಾ ಇಷ್ಟಪಡುತ್ತಾಳೆ. ಎಂಥ ಕಷ್ಟದ ಪರಿಸ್ಥಿತಿ ಬಂದರೂ ಸಹ ಇವರಿಗೆ ಯಾವುದೇ ಮೂಲದಿಂದಾದರೂ ಸಹ ಹಣ ಸಹಾಯ ಸಿಕ್ಕೇ ಸಿಗುತ್ತದೆ. ಯಾವುದೇ ಕಾರಣಕ್ಕೂ ಹಣದ ಕೊರತೆ ಇವರಿಗೆ ಕಾಡುವುದಿಲ್ಲ. 
 


ಇವರು ವಾಗ್ಮಿಗಳಾಗಿದ್ದು, ಪ್ರಾಮಾಣಿಕರಾಗಿರುತ್ತಾರೆ. ಜೊತೆಗೆ ಕೆಲಸ – ಕಾರ್ಯಗಳಿಗೆ ಹೆಚ್ಚಿನ ಪ್ರಾಧಾನ್ಯತೆ ನೀಡುತ್ತಾರೆ. ಯಾವುದೇ ಕೆಲಸವನ್ನು ನಿಷ್ಠೆಯಿಂದ ಮಾಡುತ್ತಾರೆ. ಇದರೊಂದಿಗೆ ಕ್ರಿಯಾಶೀಲ ವ್ಯಕ್ತಿತ್ವವನ್ನೂ ಹೊಂದಿರುತ್ತಾರೆ. 

ಇದನ್ನು ಓದಿ: ಸೂರ್ಯನಿಗೆ ಅರ್ಘ್ಯ ಅರ್ಪಿಸಿ, ಪಾಸಿಟಿವ್ ಎನರ್ಜಿ ಪಡೆಯಿರಿ..!

ಪಾದಾಂಕ 2
2, 11 ಮತ್ತು 20ನೇ ತಾರೀಖಿನಲ್ಲಿ ಜನಿಸಿದವರ ಪಾದಾಂಕವು 2 ಆಗಿರುತ್ತದೆ. ಪಾದಾಂಕ 2 ಹೊಂದಿರುವವರ ಅಧಿಪತಿ ಗ್ರಹ ಚಂದ್ರನಾಗಿದ್ದಾನೆ. ಸಂಖ್ಯಾಶಾಸ್ತ್ರದ ಪ್ರಕಾರ ಈ ಪಾದಾಂಕದವರು ಉತ್ತಮ ವ್ಯಾಪಾರಸ್ಥರಾಗಬಹುದು. ಅನಾವಶ್ಯಕ ಖರ್ಚುಗಳನ್ನು ಮಾಡದ ಇವರು, ಹಣವನ್ನು ಉಳಿಸುವ ಹಾಗೂ ಗಳಿಸುವ ಹೊಸ ಮಾರ್ಗಗಳ ಬಗ್ಗೆಯೇ ಇವರು ಯೋಚಿಸುತ್ತಾರೆ. ಇವರ ಆರ್ಥಿಕ ಸ್ಥಿತಿ ಉತ್ತಮವಾಗಿಯೇ ಇರುತ್ತದೆ. ಇನ್ನು ಯಾವುದಾದರೂ ಸಂದರ್ಭದಲ್ಲಿ ಸಹಾಯ ಬೇಕೆಂದಿದ್ದರೂ ಸಹ ಅಷ್ಟೇ ಸುಲಭವಾಗಿ ಹಣದ ವ್ಯವಸ್ಥೆ ಇವರಿಗೆ ಆಗುತ್ತದೆ. 

ಇದನ್ನು ಓದಿ: ನಿಮ್ಮದು ದೇವ ಸ್ನಾನವೋ, ರಾಕ್ಷಸ ಸ್ನಾನವೋ ನೋಡಿಕೊಳ್ಳಿ..!

ಪಾದಾಂಕ 5 
ಪಾದಾಂಕ 5 ಹೊಂದಿದವರ ಅಧಿಪತಿ ಗ್ರಹ ಬುಧವಾಗಿದೆ. ಯಾವುದೇ ತಿಂಗಳ 5, 14 ಮತ್ತು 24ನೇ ತಾರೀಖಿನಂದು ಜನಿಸಿದವರ ಪಾದಾಂಕ 5 ಆಗಿರುತ್ತದೆ. ಈ ವ್ಯಕ್ತಿಗಳು ತುಂಬಾ ಜ್ಞಾನಿಗಳು, ಸಾಹಸ ಪ್ರವೃತ್ತಿಯುಳ್ಳವರೂ ಆಗಿರುವುದಲ್ಲದೆ, ಬುದ್ಧಿವಂತಿಕೆಯನ್ನೂ ಹೊಂದಿರುತ್ತಾರೆ. ಜೀವನದಲ್ಲಿ ಬರುವ ಸವಾಲುಗಳನ್ನು ಧೈರ್ಯದಿಂದ ಎದುರಿಸಲು ಸಿದ್ಧವಾಗಿರುತ್ತಾರೆ. ಇನ್ನು ಇವರ ವೃತ್ತಿ-ಪ್ರವೃತ್ತಿಯನ್ನು ಗಮನಿಸುವುದಾದರೆ, ಉತ್ತಮ ವ್ಯಾಪಾರಿಗಳಾಗುವುದಲ್ಲದೆ, ತಮ್ಮ ಬುದ್ಧಿವಂತಿಕೆಯ ಸಹಾಯದಿಂದಲೇ ಹಣವನ್ನು ಗಳಿಸುತ್ತಾರೆ. ಭವಿಷ್ಯದಲ್ಲಿ ಏನು ನಡೆಯಬಹುದು ಎಂಬ ಬಗ್ಗೆ ಇವರು ಮುಂಚೆಯೇ ಊಹಿಸಿ ಒಂದು ನಿರ್ಧಾರವನ್ನು ತೆಗೆದುಕೊಳ್ಳುವಷ್ಟರ ಮಟ್ಟಿಗೆ ಸಮಯಪ್ರಜ್ಞೆ ಇವರಲ್ಲಿರುತ್ತದೆ. 

click me!