ನಕ್ಷತ್ರ ಗುಣಗಳು ವ್ಯಕ್ತಿಯ ಸ್ವಭಾವ ಗುಣಗಳಲ್ಲಿ ಪ್ರಭಾವ ಬೀರುತ್ತದೆ. ಜ್ಯೋತಿಷ್ಯ ಶಾಸ್ತ್ರದ 27 ನಕ್ಷತ್ರಗಳ ಪಟ್ಟಿಯಲ್ಲಿ ಹತ್ತೊಂಭತ್ತನೇ ನಕ್ಷತ್ರವು ಮೂಲಾ ನಕ್ಷತ್ರವಾಗಿದೆ. ಮೂಲಾ ನಕ್ಷತ್ರ ಒಂದು ಅಶುಭ ನಕ್ಷತ್ರವೆಂದು ಹೇಳಲಾಗುತ್ತದೆ. ಹಾಗೆಯೇ ಮೂಲಾ ನಕ್ಷತ್ರದಲ್ಲಿ ಜನಿಸಿದವರು ಜಗತ್ತಿನಲ್ಲೇ ಉತ್ತಮ ಖ್ಯಾತಿಯನ್ನು ಪೆಯುತ್ತಾರೆ. ಹಾಗಾದರೆ ಮೂಲ ನಕ್ಷತ್ರದಲ್ಲಿ ಜನಿಸಿದವರ ಸ್ವಭಾವಗಳ ಬಗ್ಗೆ ತಿಳಿಯೋಣ..
ವ್ಯಕ್ತಿಯ ವ್ಯಕ್ತಿತ್ವ ರೂಪುಗೊಳ್ಳುವಲ್ಲಿ ಗ್ರಹ, ನಕ್ಷತ್ರ, ರಾಶಿ ಹೀಗೆ ಎಲ್ಲ ಅಂಶಗಳು ಒಳಗೊಂಡಿರುತ್ತವೆ. ಆಯಾ ನಕ್ಷತ್ರ ಮತ್ತು ರಾಶಿಗಳಿಗೆ ಅವುಗಳದ್ದೇ ಆದ ವಿಶೇಷತೆಯ ಜೊತೆಗೆ ವಿಶಿಷ್ಟ ಗುಣವನ್ನು ಹೊಂದಿರುತ್ತವೆ. ಅದೇ ಕೆಲವು ಸಂದರ್ಭಗಳಲ್ಲಿ ಪರಸ್ಪರ ರಾಶಿ –ನಕ್ಷತ್ರಗಳ ಸಂಗಮವಾದಾಗ ಅದು ವ್ಯಕ್ತಿಯ ವ್ಯಕ್ತಿತ್ವದ ಸ್ವರೂಪವನ್ನೇ ಬದಲಾಯಿಸಿ ಬಿಡುತ್ತದೆ. ಅಂಥ ಸಂದರ್ಭದಲ್ಲಿ ಉತ್ತಮವಾದ ಯೋಗಗಳು ಏರ್ಪಡುತ್ತವೆ. ಇದರಿಂದ ವ್ಯಕ್ತಿಯ ಯಶಸ್ಸು ಜಗತ್ತು ಗುರುತಿಸುವ ಮಾದರಿ ವ್ಯಕ್ತಿತ್ವವಾಗುತ್ತದೆ.
ರಾಶಿಗಳಲ್ಲಿ ಕೆಲವು ರಾಶಿಯವರು ಹೀಗೆ ಮತ್ತು ನಕ್ಷತ್ರಗಳಲ್ಲಿ ಕೆಲವು ನಕ್ಷತ್ರಗಳು ಕೆಟ್ಟದ್ದು ಅಶುಭವನ್ನು ಉಂಟು ಮಾಡುತ್ತವೆ ಎಂದು ಹೇಳಲಾಗುತ್ತದೆ. ಕೆಲವು ನಕ್ಷತ್ರಗಳಿಗೆ ಅಶುಭವೆಂದು ಇದ್ದರೂ ಅದಕ್ಕೆ ಪರಿಹಾರವೂ ಇರುತ್ತದೆ. ಹಾಗಂತ ಆ ನಕ್ಷತ್ರದಲ್ಲಿ ಜನಿಸಿದವರಿಗೆ ಕಷ್ಟಗಳೇ ಎದುರಾಗುತ್ತವೆ, ಸುಖವೇ ಇರುವುದಿಲ್ಲ ಎಂದೇನೂ ಇರುವುದಿಲ್ಲ. ವ್ಯಕ್ತಿಯ ಜನನದ ಘಳಿಗೆ ಸೇರಿದಂತೆ ಉಳಿದೆಲ್ಲ ಅಂಶಗಳು ವ್ಯಕ್ತಿಯ ಭವಿಷ್ಯವನ್ನು ನಿರ್ಧರಿಸುವಲ್ಲಿ ಮುಖ್ಯವಾಗುತ್ತವೆ. ಅಂತಹ ಪಟ್ಟಿಯಲ್ಲಿರುವ, ಅಶುಭ ನಕ್ಷತ್ರವೆಂದು ಹೇಳಲಾಗುವ ಮೂಲಾ ನಕ್ಷತ್ರ ಹಾಗೂ ವೃಶ್ಚಿಕ ರಾಶಿಯವರ ಸ್ವಭಾವ ಗುಣಗಳ ಬಗ್ಗೆ ಇಲ್ಲಿ ತಿಳಿಯೋಣ...
ತಂದೆಗೆ ಕೆಡುಕೆನ್ನುತ್ತಾರೆ..!
ಇದನ್ನು ಓದಿ: ಗುರು ಕೃಪೆಗಾಗಿ ಗುರು ಪೂರ್ಣಿಮೆಯಂದು ಹೀಗೆ ಮಾಡಿ!
ಸಾಮಾನ್ಯವಾಗಿ ಮೂಲಾ ನಕ್ಷತ್ರವೆಂದರೆ ಮೂಗು ಮುರಿಯುವವರೇ ಹೆಚ್ಚು. ಈ ನಕ್ಷತ್ರವನ್ನು ಅಶುಭವೆಂದು ಹೇಳಲಾಗುತ್ತದೆ. ಶಾಸ್ತ್ರದಲ್ಲಿ ಹೇಳುವ ಪ್ರಕಾರ ಮೂಲಾ ನಕ್ಷತ್ರದಲ್ಲಿ ಜನಿಸಿದರೆ, ಆ ಮಗುವಿನ ತಂದೆಗೆ ಕೆಡುಕು. ಇದಕ್ಕೆ ನಕ್ಷತ್ರ ದೋಷವೆಂದು ಕರೆಯಲಾಗುತ್ತದೆ. ಪರಿಹಾರಾರ್ಥವಾಗಿ ಶಾಂತಿಯನ್ನು ಮಾಡಿಸಲಾಗುತ್ತದೆ. ಮುಖ್ಯವಾಗಿ ಈ ದೋಷವು ಮಗುವಿಗೆ ಎಂಟು ವರ್ಷ ಆಗುವವರೆಗೆ ಮಾತ್ರ ಇರುತ್ತದೆ. ನಂತರ ಈ ದೋಷ ನಗಣ್ಯವಾಗುತ್ತದೆ ಎಂದು ಶಾಸ್ತ್ರದಲ್ಲಿ ಉಲ್ಲೇಖಿಸಲಾಗಿದೆ. ಈ ನಕ್ಷತ್ರದಲ್ಲಿ ಜನಿಸಿದವರಿಗೆ ವಿಶೇಷವಾದ ಅತ್ಯುತ್ತಮ ಗುಣಗಳಿರುತ್ತವೆ.
ಮೂಲಾ ನಕ್ಷತ್ರದ ವಿಶೇಷ ಗುಣಗಳು
ಈ ನಕ್ಷತ್ರದಲ್ಲಿ ಜನಿಸಿದ ವ್ಯಕ್ತಿಗಳ ವಿಚಾರದಲ್ಲಿ ದೃಢತೆ ಇರುತ್ತದೆ. ಅಷ್ಟೇ ಅಲ್ಲದೆ ನಿರ್ಣಯಗಳನ್ನು ತೆಗೆದುಕೊಳ್ಳುವ ಕ್ಷಮತೆ ಇವರಲ್ಲಿರುತ್ತದೆ. ಶೈಕ್ಷಣಿಕ ಕ್ಷೇತ್ರದಲ್ಲಿ ಪ್ರಗತಿಯನ್ನು ಸಾಧಿಸುತ್ತಾರೆ. ಭವಿಷ್ಯದಲ್ಲಿ ಉನ್ನತ ಪದವಿಯನ್ನು ಪಡೆಯುವ ಗುರಿಯನ್ನು ಇಟ್ಟುಕೊಂಡಿರುತ್ತಾರೆ.
ಇದನ್ನು ಓದಿ: ಈ ಮೂರು ರಾಶಿಯವರ ಯಶಸ್ಸಿಗೆ ಕಾರಣ ಶುಕ್ರ ಗ್ರಹ...!!
ತರ್ಕಬದ್ಧ ಆಲೋಚನೆ
ಎಲ್ಲ ವಿಚಾರಗಳಿಗೂ ತರ್ಕ ಬದ್ಧವಾಗಿ ಯೋಜನೆಗಳನ್ನು ರೂಪಿಸುವ ಚಾಕಚಕ್ಯತೆ ಇವರಲ್ಲಿರುತ್ತದೆ. ಯಾವುದೇ ವಿಚಾರವಾಗಲಿ ಯೋಚಿಸದೆ ಮುಂದಡಿ ಇಡುವ ಜಾಯಮಾನ ಇವರದ್ದಲ್ಲ. ದಯಾ ಗುಣ ಇವರಲ್ಲಿರುತ್ತದೆ. ಸಹಾಯ ಮಾಡುವ ವಿಷಯದಲ್ಲಿ ಎಲ್ಲರಿಗಿಂತ ಮುಂದಿರುತ್ತಾರೆ. ಈ ನಕ್ಷತ್ರದ ವ್ಯಕ್ತಿಗಳದ್ದು ಪತ್ತೆದಾರಿ ಸ್ವಭಾವವಾಗಿರುತ್ತದೆ. ಪ್ರತಿ ವಿಷಯದ ಬಗ್ಗೆಯೂ ಹೆಚ್ಚಿನ ಜ್ಞಾನವನ್ನು ಪಡೆಯಲು ಉತ್ಸುಕರಾಗಿರುತ್ತಾರೆ. ಮೂಲಾ ನಕ್ಷತ್ರದವರ ಆರ್ಥಿಕ ಸ್ಥಿತಿ ಉತ್ತಮವಾಗಿರುತ್ತದೆ.
ಕಾರ್ಯ ಕ್ಷೇತ್ರದಲ್ಲಿ ಇವರದ್ದೇ ಛಾಪು
ಕಾರ್ಯಕ್ಷೇತ್ರದಲ್ಲಿ ಸದಾ ಮುಂದಿರುವ ಈ ವ್ಯಕ್ತಿಗಳು ಸಮಯಕ್ಕೆ ಮೊದಲೇ ಕೆಲಸವನ್ನು ಪೂರ್ಣಗೊಳಿಸುತ್ತಾರೆ. ಈ ವ್ಯಕ್ತಿಗಳು ಉದ್ಯೋಗ ಮಾಡುವುದಕ್ಕಿಂತ ಹೆಚ್ಚು ತಮ್ಮದೇ ಆದ ವ್ಯಾಪಾರ – ವಹಿವಾಟನ್ನು ಮಾಡಲು ಇಷ್ಟ ಪಡುತ್ತಾರೆ. ಹೆಚ್ಚು ಸ್ನೇಹಿತರನ್ನು ಇವರು ಹೊಂದಿರುವುದಿಲ್ಲ. ತಂದೆ-ತಾಯಿಯ ಆಜ್ಞೆಯನ್ನು ಎಂದೂ ಮೀರುವುದಿಲ್ಲ. ಮೃದು ಸ್ವಭಾವದವರು ಮತ್ತು ಶಾಂತಿ ಪ್ರಿಯರು ಇವರಾಗಿರುತ್ತಾರೆ. ಜೀವನದಲ್ಲಿ ಕೀರ್ತಿಯನ್ನು ಸಂಪಾದಿಸುತ್ತಾರೆ.
ಸಾಮಾಜಿಕ ಕಾರ್ಯಗಳಲ್ಲಿ ಹೆಚ್ಚಿನ ಉತ್ಸಾಹದಿಂದ ಪಾಲ್ಗೊಳ್ಳುತ್ತಾರೆ. ಜೀವನದಲ್ಲಿ ಎದುರಾಗುವ ಕಷ್ಟಗಳನ್ನು ಧೈರ್ಯದಿಂದ ಎದುರಿಸುವುದಲ್ಲದೆ, ಅದಕ್ಕೆ ಸರಿಯಾದ ಪರಿಹಾರವನ್ನು ಕಂಡುಕೊಳ್ಳುವಲ್ಲಿ ಸಫಲರಾಗುತ್ತಾರೆ. ಮಾಡಲೇಬೇಕು ಎಂದುಕೊಂಡ ಕೆಲಸವನ್ನು ಪೂರ್ಣ ದಕ್ಷತೆಯಿಂದ ಮಾಡುವ ಸ್ವಭಾವ ಇವರದ್ದಾಗಿರುತ್ತದೆ. ಈ ನಕ್ಷತ್ರದವರು ದೇವರಲ್ಲಿ ಹೆಚ್ಚಿನ ಭಕ್ತಿ ಮತ್ತು ಶ್ರದ್ಧೆಯನ್ನು ಹೊಂದಿರುತ್ತಾರೆ.
ಇದನ್ನು ಓದಿ: ಆರೋಗ್ಯಕರ ಜೀವನ, ನೆಮ್ಮದಿಯ ನಿದ್ರೆಗೆ ವಾಸ್ತು ಮುದ್ರೆ.. !
ಮುಕೇಶ್ ಅಂಬಾನಿ ರಾಶಿ- ನಕ್ಷತ್ರ
ಮೂಲಾ ನಕ್ಷತ್ರ, ವೃಶ್ಚಿಕ ರಾಶಿ ಸಂಯೋಗ ಬಹಳ ಉತ್ತಮ ಎನ್ನಲಾಗಿದ್ದು, ಮೂಲಾ ನಕ್ಷತ್ರದಲ್ಲಿ ವೃಶ್ಚಿಕ ರಾಶಿಯಲ್ಲಿ ಜನಿಸಿದರೆ ಅಂಥವರಿಗೆ ಅದೃಷ್ಟವೂ ಒಲಿಯಲಿದೆ ಎಂದು ಜ್ಯೋತಿಷ್ಯ ಶಾಸ್ತ್ರ ಹೇಳುತ್ತದೆ. ಆದರೆ, ಹುಟ್ಟಿದ ಘಳಿಗೆ ಸೇರಿದಂತೆ ಇತ್ಯಾದಿ ಅಂಶಗಳು ಪರಿಗಣನೆಗೆ ಬರುತ್ತದೆ.
ಜಗತ್ತಿನ ಅತ್ಯಂತ ಶ್ರೀಮಂತರ ಪಟ್ಟಿಯಲ್ಲಿರುವ ಮುಕೇಶ್ ಅಂಬಾನಿಯವರದ್ದು ಮೂಲಾ ನಕ್ಷತ್ರ ವೃಶ್ಚಿಕ ರಾಶಿ ಆಗಿದೆ. ಹಾಗಾಗಿ ಮೂಲಾ ನಕ್ಷತ್ರ ಗುಣವನ್ನು ಹೊಂದಿರುವ ಇವರು ಜಗತ್ತಿನಲ್ಲಿ ಖ್ಯಾತಿಯನ್ನು ಪಡೆದಿರುವ ವ್ಯಕ್ತಿ ಇವರಾಗಿದ್ದಾರೆ.