ಈ ವರ್ಷದ ಮೊದಲ ಸೂರ್ಯಗ್ರಹಣ ಇದೇ ತಿಂಗಳ ಕೊನೆಯಲ್ಲಿ ನಡೆಯಲಿದೆ. ಇದರಿಂದ 5 ರಾಶಿಗಳಿಗೆ ಅಪಾರ ಲಾಭವಾಗಲಿದೆ.
ಹಿಂದೂ ಧರ್ಮದಲ್ಲಿ ಸೂರ್ಯಗ್ರಹಣ(Solar eclipse) ಮತ್ತು ಚಂದ್ರಗ್ರಹಣ(lunar eclipse)ವನ್ನು ಅಶುಭವೆಂದು ಪರಿಗಣಿಸಲಾಗುತ್ತದೆ. ಗ್ರಹಣದ ಸಮಯದಲ್ಲಿ ಮಂಗಳ ಕಾರ್ಯಗಳನ್ನು ನಿಷೇಧಿಸಲಾಗಿದೆ. ಗ್ರಹಣ ಕಾಲದಲ್ಲಿ ದೇವಾಲಯಗಳ ಬಾಗಿಲು ಮುಚ್ಚಲಾಗುತ್ತದೆ. ಗ್ರಹಣದ ಸಮಯದಲ್ಲಿ ಅನುಸರಿಸಬೇಕಾದ ಹಲವಾರು ನಿಯಮಗಳಿವೆ. 2022ರ ಮೊದಲ ಸೂರ್ಯಗ್ರಹಣವು ಏಪ್ರಿಲ್ 30 ರ ಮಧ್ಯರಾತ್ರಿಯಿಂದ ಸಂಭವಿಸುತ್ತದೆ. ಇದು ಭಾಗಶಃ ಸೂರ್ಯಗ್ರಹಣವಾಗಿರುತ್ತದೆ. ಈ ಗ್ರಹಣವು ಮಧ್ಯರಾತ್ರಿ 12:15 ರಿಂದ ಪ್ರಾರಂಭವಾಗುತ್ತದೆ, ಇದು ಬೆಳಿಗ್ಗೆ 4:08ವರೆಗೆ ಇರುತ್ತದೆ.
ಈ ವರ್ಷದ ಮೊದಲ ಸೂರ್ಯಗ್ರಹಣವು ಮೇಷ ರಾಶಿಯಲ್ಲಿ ನಡೆಯುತ್ತದೆ. ಮೇಷ ರಾಶಿಯ ಅಧಿಪತಿ ಮಂಗಳ ಗ್ರಹ. ಜ್ಯೋತಿಷಿಗಳ ಪ್ರಕಾರ, ಭಾರತದಲ್ಲಿ ಈ ಗ್ರಹಣ ಇಲ್ಲದಿರುವುದರಿಂದ, ದೇಶದಲ್ಲಿ ಸೂತಕ ಅವಧಿಯು ಮಾನ್ಯವಾಗಿರುವುದಿಲ್ಲ. ವರ್ಷದ ಮೊದಲ ಸೂರ್ಯಗ್ರಹಣವು ದಕ್ಷಿಣ ಅಮೆರಿಕಾದ ನೈಋತ್ಯ ಭಾಗ, ಪೆಸಿಫಿಕ್ ಮಹಾಸಾಗರ, ಅಟ್ಲಾಂಟಿಕ್ ಮತ್ತು ದಕ್ಷಿಣ ಧ್ರುವದಲ್ಲಿ ಗೋಚರಿಸುತ್ತದೆ.
ಈ ಸೂರ್ಯಗ್ರಹಣದ ಪರಿಣಾಮ ಈ ಐದು ರಾಶಿಗಳಿಗೆ ಅತ್ಯುತ್ತಮ ಫಲಗಳು ದೊರೆಯುತ್ತವೆ.
ಮೇಷ ರಾಶಿ(Aries)
ವರ್ಷದ ಮೊದಲ ಸೂರ್ಯಗ್ರಹಣವು ಮೇಷ ರಾಶಿಯಲ್ಲಿ ನಡೆಯಲಿದ್ದು, ಈ ರಾಶಿಯವರಿಗೆ ಇದು ಶುಭಕರವಾಗಿರುತ್ತದೆ. ಈ ಸಮಯದಲ್ಲಿ, ಮೇಷ ರಾಶಿಯ ಆರ್ಥಿಕ ಸ್ಥಿತಿ(Financial state) ಸುಧಾರಿಸುತ್ತದೆ. ಅಲ್ಲದೆ, ನಿಮ್ಮ ಕೆಲಸವನ್ನು ಹೆಚ್ಚು ಪ್ರಶಂಸಿಸಲಾಗುತ್ತದೆ. ಸಂಪತ್ತಿನ ಅನೇಕ ಮಾರ್ಗಗಳು ತೆರೆದುಕೊಳ್ಳುತ್ತವೆ. ಅದೇ ಸಮಯದಲ್ಲಿ, ಉದ್ಯೋಗ ಮಾಡುವ ಜನರು ಅನೇಕ ಹೊಸ ಅವಕಾಶಗಳನ್ನು ಪಡೆಯಬಹುದು. ಯಾವುದೇ ಪ್ರಯಾಣದಿಂದ ಧನಲಾಭ ಸಾಧ್ಯವಿದೆ. ಹೊಸ ವ್ಯವಹಾರ ಲಾಭದಾಯಕವಾಗಲಿದೆ.
ವೃಷಭ ರಾಶಿ(Taurus)
ವರ್ಷದ ಮೊದಲ ಸೂರ್ಯಗ್ರಹಣವು ಈ ರಾಶಿಚಕ್ರದ ಜನರಿಗೆ ಪ್ರಯೋಜನಕಾರಿಯಾಗಲಿದೆ. ಸೂರ್ಯ ಗ್ರಹಣದ ಪರಿಣಾಮ, ನಿಮ್ಮ ಆರ್ಥಿಕ ಸ್ಥಿತಿ ಬಲವಾಗುತ್ತದೆ. ಬಹುಕಾಲದಿಂದ ಬಾಕಿ ಉಳಿದಿರುವ ಕೆಲಸಗಳು ಪೂರ್ಣಗೊಳ್ಳಲಿವೆ. ವ್ಯಾಪಾರಿಗಳಿಗೆ ಬಹಳಷ್ಟು ಲಾಭವಾಗಲಿದೆ. ವ್ಯಾಪಾರದಲ್ಲಿ ಹೂಡಿಕೆ(Investment) ಮಾಡುವುದರಿಂದ ಶುಭವಾಗಲಿದೆ. ಮಕ್ಕಳ ಕಡೆಯಿಂದ ಒಳ್ಳೆಯ ಸುದ್ದಿ ಸಿಗಬಹುದು.
ಕಾಲ್ ಮೇಲೆ ಕಾಲು ಹಾಕಿ ಕುಳಿತ್ರೆ ಉದ್ಯೋಗ ನಷ್ಟವಾಗತ್ತೆ, ಎಚ್ಚರ!
ಸಿಂಹ ರಾಶಿ(Leo)
ಗ್ರಹಣವು ಸಿಂಹ ರಾಶಿಯ ಜನರ ಮೇಲೂ ಶುಭ ಪರಿಣಾಮವನ್ನು ಬೀರುತ್ತದೆ. ಅದೇ ಸಮಯದಲ್ಲಿ, ಉದ್ಯೋಗದಲ್ಲಿ ಲಾಭವೂ ಆಗಬಹುದು. ನೀವು ಕೆಲವು ಹೊಸ ಕೆಲಸವನ್ನು ಪ್ರಾರಂಭಿಸಬಹುದು. ಅದೇ ಸಮಯದಲ್ಲಿ, ಇನ್ನೊಬ್ಬ ವ್ಯಕ್ತಿಯೊಂದಿಗೆ ಸಹಭಾಗಿತ್ವದಲ್ಲಿ ಕೆಲಸ ಮಾಡುವುದು ಸಹ ಪ್ರಯೋಜನಕಾರಿಯಾಗಿದೆ. ಉದ್ಯೋಗದಲ್ಲಿ ಬಡ್ತಿ ದೊರೆಯಬಹುದು. ಅಥವಾ ಈ ಸಮಯದಲ್ಲಿ ಅನೇಕ ಉದ್ಯೋಗ ಕೊಡುಗೆಗಳನ್ನು ಕಾಣಬಹುದು. ಒಟ್ಟಾರೆಯಾಗಿ, ಈ ಸಮಯವು ಸಿಂಹ ರಾಶಿಯವರಿಗೆ ಅನುಕೂಲಕರವಾಗಿರುತ್ತದೆ
ಕರ್ಕಾಟಕ ರಾಶಿ(Cancer)
ಈ ಗ್ರಹಣವು ಕರ್ಕಾಟಕ ರಾಶಿಯವರಿಗೆ ಅದೃಷ್ಟವನ್ನು ನೀಡುತ್ತದೆ. ಕೆಲಸದ ಸ್ಥಳದಲ್ಲಿ ಮತ್ತು ಸಮಾಜದಲ್ಲಿ ನಿಮ್ಮ ಹೆಸರು, ಗೌರವ ಸುಧಾರಿಸುತ್ತದೆ. ಅದೃಷ್ಟದ ಸಂಪೂರ್ಣ ಬೆಂಬಲ ಎಲ್ಲ ಕಾರ್ಯಗಳಲ್ಲೂ ಸಿಗಲಿದೆ. ಕೆಲಸದ ಸ್ಥಳದಲ್ಲಿ ನಿಮ್ಮ ಕೆಲಸದ ಶೈಲಿಯು ಸುಧಾರಿಸುತ್ತದೆ. ನೀವು ಕಚೇರಿಯಲ್ಲಿ ಎಲ್ಲರರ ಮೆಚ್ಚುಗೆಗೆ ಪಾತ್ರವಾಗಲಿರುವಿರಿ. ಕೆಲಸದ ಸ್ಥಳದಲ್ಲಿ ಸಹೋದ್ಯೋಗಿಗಳಿಂದ ಬೆಂಬಲ ಸಿಗುತ್ತದೆ.
ವಾಸ್ತು ಪ್ರಕಾರ Attached Bathroom ಒಳ್ಳೇದೋ ಅಲ್ವೋ?
ಧನು ರಾಶಿ(Sagittarius)
ಸೂರ್ಯಗ್ರಹಣದ ಪ್ರಭಾವದಿಂದ ನೀವು ವ್ಯಾಪಾರ ಲಾಭವನ್ನು ಪಡೆಯುತ್ತೀರಿ. ಆದಾಯದಲ್ಲಿ ಹೆಚ್ಚಳವಾಗುವ ಸಂಭವವಿದೆ. ಉದ್ಯೋಗಾಕಾಂಕ್ಷಿಗಳು ಹೊಸ ಉದ್ಯೋಗ ಪ್ರಸ್ತಾಪವನ್ನು ಪಡೆಯಬಹುದು. ನಿಮ್ಮ ಸಂಗಾತಿಯೊಂದಿಗಿನ ಸಂಬಂಧಗಳು ಸಿಹಿಯಾಗಿರುತ್ತದೆ ಮತ್ತು ನೀವು ಬೆಂಬಲವನ್ನು ಪಡೆಯುತ್ತೀರಿ. ಈ ಸಮಯದಲ್ಲಿ ನಿಮ್ಮ ಶಕ್ತಿಯು ಹೆಚ್ಚಾಗುತ್ತದೆ. ರಹಸ್ಯ ಶತ್ರುಗಳು ನಾಶವಾಗುತ್ತಾರೆ. ಯಾವುದೇ ರೀತಿಯ ಪ್ರಯಾಣಕ್ಕೆ ಅನುಕೂಲಕರ ವಾತಾವರಣ ಇರಲಿದೆ. ಹೂಡಿಕೆಯ ದೃಷ್ಟಿಯಿಂದಲೂ ಈ ಸಮಯ ತುಂಬಾ ಅನುಕೂಲಕರವಾಗಿದೆ. ಹೊಸ ಯೋಜನೆಗಳ ಪರಿಣಾಮ ಬಹಳಷ್ಟು ಲಾಭ ಪಡೆಯಲಿದ್ದೀರಿ.