ಯಾವುದೇ ಸಂದರ್ಭದಲ್ಲಿ ನಂಬಿಕೆ ತುಂಬಾ ಮುಖ್ಯ. ಇದನ್ನು ಕಾಪಾಡಿಕೊಳ್ಳುವುದು ಸುಲಭದ ಮಾತಲ್ಲ. ಕೆಲವರು ತಾವು ನಂಬಿದವರಿಗಾಗಿ ಜೀವವನ್ನು ಕೊಡಲು ಕೂಡ ಹಿಂಜರಿಯುವುದಿಲ್ಲ. ಅವರು ಯಾವ ರಾಶಿಯವರು ಎಂಬ ಮಾಹಿತಿ ಇಲ್ಲಿದೆ.
ಯಾವುದೇ ಸಂದರ್ಭದಲ್ಲಿ ನಂಬಿಕೆ ತುಂಬಾ ಮುಖ್ಯ. ಇದನ್ನು ಕಾಪಾಡಿಕೊಳ್ಳುವುದು ಸುಲಭದ ಮಾತಲ್ಲ. ಕೆಲವರು ತಾವು ನಂಬಿದವರಿಗಾಗಿ ಜೀವವನ್ನು ಕೊಡಲು ಕೂಡ ಹಿಂಜರಿಯುವುದಿಲ್ಲ. ಅವರು ಯಾವ ರಾಶಿಯವರು ಎಂಬ ಮಾಹಿತಿ ಇಲ್ಲಿದೆ.
ಪ್ರೀತಿ, ಸ್ನೇಹ ಹಾಗೂ ದಾಂಪತ್ಯ ಸೇರಿದಂತೆ ಯಾವುದೇ ಸಂಬಂಧಗಳಲ್ಲಿ ನಂಬಿಕೆಯು ಪ್ರಮುಖ ಪಾತ್ರ ವಹಿಸುತ್ತದೆ.
ನೀವು ಕಲರ್ಸ್ ಕನ್ನಡ ವಾಹಿನಿಯ ಭಾಗ್ಯಲಕ್ಷ್ಮಿ ಧಾರಾವಾಹಿಯಲ್ಲಿ ತಾಂಡವ್ ಪಾತ್ರವನ್ನು ನೋಡಿರಬೇಕು. ತನ್ನ ಹೆಂಡತಿಗೆ ಮೋಸ ಮಾಡಿ ಶ್ರೇಷ್ಠ ಎಂಬ ಯುವತಿಗೆ ಜೊತೆ ಪ್ರೀತಿಯಲ್ಲಿ ಬೀಳುತ್ತಾನೆ. ಈ ರೀತಿ ಅನೇಕರು ತಮ್ಮ ಸಂಗಾತಿಗೆ ಮೋಸ ಮಾಡ್ತಾರೆ. ಆದರೆ ಇನ್ನು ಕೆಲವರು ನಂಬಿಕೆ ಉಳಿಸಿಕೊಳ್ಳಲು ಪ್ರಾಣವನ್ನೇ ಕೊಡಲು ಸಿದ್ಧವಿರುತ್ತಾರೆ. ಇವರು ಯಾರಿಗೂ ಮೋಸ ಮಾಡಲ್ಲ. ಇದಕ್ಕೆ ಕಾರಣ ರಾಶಿ ಭವಿಷ್ಯ. ಯಾವೆಲ್ಲಾ ರಾಶಿಗಳು ತಮ್ಮ ಸಂಗಾತಿಗಷ್ಟೇ ಅಲ್ಲ, ಯಾವುದೇ ರೀತಿಯ ಸಂಬಂಧದಲ್ಲೂ ಮೋಸ ಮಾಡುವವರಲ್ಲ. ಈ ಕುರಿತು ಇಲ್ಲಿದೆ ಡೀಟೇಲ್ಸ್.
ವೃಷಭ ರಾಶಿ (Taurus)
ಇವರು ಅತೀ ಪ್ರಾಮಾಣಿಕರು. ಇವರಿಗೆ ಗುಟ್ಟು ಮಾಡುವುದು ಇಷ್ಟವಾಗುವುದಿಲ್ಲ. ಹಿಂದಿನಿಂದ ಮಾತಾನಾಡುವುದು ಹಾಗೂ ಬೆನ್ನಿಗೆ ಚೂರಿ ಇರಿಯುವುದು ಇವರ ಸ್ವಭಾವದಲ್ಲೇ ಇಲ್ಲ. ಯಾರು ಬೇಕಿದ್ದರೂ ವೃಷಭ ರಾಶಿಯವರನ್ನು ಆರಾಮಾಗಿ ನಂಬಬಹುದು. ಏಕೆಂದರೆ, ತಮಗೇನು ಬೇಕು, ತಾವೇನು ಮಾಡಬೇಕು ಎಂಬ ಬಗ್ಗೆ ತುಂಬಾ ಪ್ರಾಮಾಣಿಕರಾಗಿರುತ್ತಾರೆ. ಸಂಗಾತಿಯ ವಿಷಯದಲ್ಲಿ ಹೆಚ್ಚೇ ಪ್ರಾಮಾಣಿಕರಾಗಿರುತ್ತಾರೆ. ಏಕೆಂದರೆ ಸಂಬಂಧ ಹೇಗೆ ಬೆಳೆಸಿಕೊಳ್ಳಬೇಕೆಂಬುದು ಇವರಿಗೆ ಚೆನ್ನಾಗಿ ಗೊತ್ತು.
ಚಂದ್ರ-ಬುಧ ಸಂಯೋಗ: ಜುಲೈನಲ್ಲಿ ಈ ಮೂರು ರಾಶಿಯವರಿಗೆ ಸಂಕಷ್ಟ..!
ತುಲಾ ರಾಶಿ (Libra)
ಇವರಿಗೆ ಸಂಬಂಧಗಳು ಆಟದ ವಿಷಯವಲ್ಲ ಎಂಬುದು ಚೆನ್ನಾಗಿ ಗೊತ್ತು. ಸಂಬಂಧಗಳನ್ನು ಉಳಿಸಿಕೊಳ್ಳಲು ಇವರು ಶಕ್ತಿಮೀರಿ ಪ್ರಯತ್ನ ಪಡುತ್ತಾರೆ. ಇವರಲ್ಲಿ ಮೋಸ, ವಂಚನೆಯ ಯೋಚನೆಗಳು ಯಾವುದೇ ಕಾರಣಕ್ಕೂ ಸುಳಿಯುವುದಿಲ್ಲ. ಸಣ್ಣ ಪುಟ್ಟ ಕಾರಣಗಳಿಗೆ ದೂರ ಹೋದವರನ್ನೂ ಮತ್ತೆ ವಾಪಸ್ ತಂದು ನಂಬಿಕೆ ಗಳಿಸಬಲ್ಲ ಸಾಮರ್ಥ್ಯ ಇವರದು. ವಿವಾಹ ಜೀವನದಲ್ಲಿ ಸಂಗಾತಿಯನ್ನು ಅತಿಯಾಗಿ ಪ್ರೀತಿಸುವ ಇವರು ಅವರ ನಂಬಿಕೆಯಷ್ಟೇ ಅಲ್ಲ, ಅವರಿಗೆ ಸಂಬಂಧಿಸಿದವರೆಲ್ಲರ ನಂಬಿಕೆ ಗಳಿಸಿ ಪ್ರೀತಿ ಗೆಲ್ಲುತ್ತಾರೆ.
ವೃಶ್ಚಿಕ ರಾಶಿ (Scorpio)
ಇವರು ಪ್ರೀತಿಸಿದರೆ ಸಿಕ್ಕಾಪಟ್ಟೆ ಹಚ್ಚಿಕೊಂಡು ಪ್ರೀತಿಸುತ್ತಾರೆ. ತಮಗೂ ಹಾಗೂ ತಾವು ಪ್ರೀತಿಸುವವರಿಗೂ ಸತ್ಯವಾಗಿ ಬಾಳುತ್ತಾರೆ. ಇನ್ನೊಬ್ಬರ ಮನಸ್ಸಿಗೆ ನೋವಾಗುವಂಥದ್ದು, ಅವರನ್ನು ಕೆರಳಿಸುವಂಥದ್ದನ್ನು ಇವರು ಮಾಡಲಾರರು. ಯಾವುದಕ್ಕಾದರೂ ಕಮಿಟ್ ಆದರೆ, ಮಾತು ಉಳಿಸಿಕೊಳ್ಳದೆ ಇವರಿಗೆ ಸಮಾಧಾನ ಇರದು. ತಾವು ನಂಬಿದ್ದೇ ಸರಿ ಎಂದುಕೊಂಡ ಮೇಲೆ ಅದಕ್ಕೆ ಸಂಪೂರ್ಣ ಬದ್ಧವಾಗಿರುತ್ತಾರೆ. ಹೀಗಾಗಿ, ಅತಿ ನಂಬಿಕಸ್ಥರಲ್ಲಿ ಈ ರಾಶಿ ಸ್ಥಾನ ಗಳಿಸಿದೆ.
ಇಸ್ಕಾನ್‌ನಿಂದ ಅಮೋಘ್ ಲೀಲಾ ದಾಸ್ ನಿಷೇಧ? ಯಾರು ಈ 'ಹರೇ ಕೃಷ್ಣ ಬ್ರಹ್ಮಚಾರಿ'?
ಮಕರ ರಾಶಿ (Capricorn)
ನಂಬಿದವರಿಗೆ ಬದ್ಧರಾಗಿರುವುದು, ನಂಬಿಕೆಗಳನ್ನು ಉಳಿಸಿಕೊಳ್ಳುವುದು ಮಕರ ರಾಶಿಯವರಿಗೆ ಜೀವನದ ಗುರಿಯೇ ಇದ್ದಂತೆ. ಆದರ್ಶಗಳು ಹೆಚ್ಚಿರುವ ಇವರು ತಾವು ನಂಬಿರುವ ಆದರ್ಶದಂತೆಯೇ ಬದುಕುವವರು. ಮತ್ತೊಬ್ಬರಿಗೆ ನೋವು, ತೊಂದರೆ ಕೊಡುವವರಲ್ಲ. ಇನ್ನೊಬ್ಬರು ಸರಿಯಾದ ನಿರ್ಧಾರ ತೆಗೆದುಕೊಳ್ಳಲು ಸಹಾಯ ಮಾಡುವ ಇವರು ಯಾವಾಗಲೂ ಸರಿಯಾದುದನ್ನೇ ಮಾಡಬೇಕೆಂದು ಇತರರನ್ನು ಪ್ರೇರೇಪಿಸಬಲ್ಲರು. ಹಣದ ವಿಷಯದಲ್ಲೂ ಅಷ್ಟೇ, ತೆಗೆದುಕೊಂಡರೆ ಮಾತಿನ ದಿನ ಕೊಟ್ಟು ಬಿಡುವವರು. ಸಂಗಾತಿಯ ವಿಷಯದಲ್ಲೂ ಆಡದೆ ಮಾಡಿ ತೋರಿಸಿ ಪ್ರೀತಿ ಗಳಿಸುವವರು. ಅವರನ್ನು ಮತ್ತಷ್ಟು ಬೆಳೆಯಲು ಪ್ರೇರೇಪಿಸುವ ಸ್ವಭಾವ ಇವರದು.