ಶಿವಯೋಗ ಸಾಧನೆಗೆ ಸ್ಥಳವಲ್ಲ, ಮನಸು ಮುಖ್ಯ: ನಿಜಗುಣಪ್ರಭು ಸ್ವಾಮೀಜಿ

Published : Jul 14, 2023, 12:37 PM IST
ಶಿವಯೋಗ ಸಾಧನೆಗೆ ಸ್ಥಳವಲ್ಲ, ಮನಸು ಮುಖ್ಯ: ನಿಜಗುಣಪ್ರಭು ಸ್ವಾಮೀಜಿ

ಸಾರಾಂಶ

ಎಲ್ಲ ಕಡೆಯೂ ಪರಮಾತ್ಮ ಇರುವುದರಿಂದ ಎಲ್ಲಿಯಾದರೂ ಶಿವಯೋಗ ಮಾಡಬಹುದು. ದೇವರು ಇಲ್ಲದ ಜಾಗವೇ ಇಲ್ಲ. ದೇವರಿಗೆ ಮನೆ ಇಲ್ಲ, ದೇವರಿಗೆ ಗುಡಿ ಇಲ್ಲ. ಶಿವಯೋಗ ಸಾಧನೆಗೆ ಸ್ಥಳ ಮುಖ್ಯವಲ್ಲ, ಮನಸ್ಸು ಬಹಳ ಮುಖ್ಯ ಎಂದು ನಿಜಗುಣಪ್ರಭು ತೋಂಟದಾರ್ಯ ಸ್ವಾಮೀಜಿ ಹೇಳಿದರು.

ಮುಂಡರಗಿ (ಜು.14) : ಎಲ್ಲ ಕಡೆಯೂ ಪರಮಾತ್ಮ ಇರುವುದರಿಂದ ಎಲ್ಲಿಯಾದರೂ ಶಿವಯೋಗ ಮಾಡಬಹುದು. ದೇವರು ಇಲ್ಲದ ಜಾಗವೇ ಇಲ್ಲ. ದೇವರಿಗೆ ಮನೆ ಇಲ್ಲ, ದೇವರಿಗೆ ಗುಡಿ ಇಲ್ಲ. ಶಿವಯೋಗ ಸಾಧನೆಗೆ ಸ್ಥಳ ಮುಖ್ಯವಲ್ಲ, ಮನಸ್ಸು ಬಹಳ ಮುಖ್ಯ ಎಂದು ನಿಜಗುಣಪ್ರಭು ತೋಂಟದಾರ್ಯ ಸ್ವಾಮೀಜಿ ಹೇಳಿದರು.

ಪಟ್ಟಣದ ತೋಂಟದಾರ್ಯ ಮಠದಲ್ಲಿ ಬುಧವಾರ ಸಂಜೆ ಆಷಾಢ ಮಾಸದ ಅಂಗವಾಗಿ ಜರುಗುತ್ತಿರುವ ವಿಶ್ವಧರ್ಮ ಪ್ರವಚನದಲ್ಲಿ ಮಾತನಾಡಿ, ಯಾವ

ಸಾಧನೆಗಾದರೂ ಮುಖ್ಯವಾಗಿ ಸೂತ್ರವಿರಬೇಕು. ಮಂತ್ರ ಎನ್ನುವಂತದ್ದು ಮನುಷ್ಯನ ಶರೀರವನ್ನು ಸಂಪೂರ್ಣವಾಗಿ ಪ್ರಸಾದಮಯವಾಗಿ ಮಾಡುವ ಶಕ್ತಿ ಇರುವಂತಹ ವಸ್ತು. ಹಾಗಾಗಿ ನಾವು ಪ್ರತಿದಿನ ಲಿಂಗ ಸಾಧನೆ, ಯೋಗ ಸಾಧನೆ ಮಾಡುವಾಗ ಮಂತ್ರ ಅತ್ಯಗತ್ಯ. ಮಂತ್ರವೇ ಬಹಳ ಮುಖ್ಯವಾದಂತಹ ವಸ್ತು ಎಂದ​ರು.

ಮಂತ್ರಸಿದ್ಧಿಯ ನಾಲಿಗೆಯೇ ಬೇರೆ-ನಿಜಗುಣಪ್ರಭು ಸ್ವಾಮೀಜಿ

ಬಸವಣ್ಣನವರು ‘ಎನಗಿದೆ ಮಂತ್ರ, ಎನಗಿದೆ ತಂತ್ರ’ ಎನ್ನುವ ಅದ್ಭುತ ಸಾಲುಗಳನ್ನು ಮಂತ್ರದ ಕುರಿತಾಗಿಯೇ ಹೇಳಿದ್ದಾರೆ. ಮಂತ್ರ ಸಿದ್ಧಿಯಿಂದ ಶರೀರ ಸಂಪೂರ್ಣವಾಗಿ ಲಿಂಗಮಯವಾಗುತ್ತದೆ ಎನ್ನುವಂತದ್ದು ಶಿವಯೋಗದ ಅತಿ ಗೌಪ್ಯ ವಿಚಾರಧಾರೆ. ಹಾಗಾಗಿ ಶಿವಯೋಗ ಸಾಧನೆ ಮಾಡುವವರು ಮನೆಯೊಳಗೆ ಸಾಧನೆ ಮಾಡುವ ಕೋಣೆಯಲ್ಲಿ ಬಸವಣ್ಣನವರು ಸೇರಿದಂತೆ ಯಾವುದೇ ಶರಣರ ಭಾವಚಿತ್ರಗಳನ್ನು ಹಾಕಿಕೊಳ್ಳಬಾರದು. ಅಲ್ಲಿ ನೀನು, ಒಂದು ವಿಭೂತಿ, ಒಂದು ದೀಪ ಮತ್ತು ನೀರು ಈ ಮೂರನ್ನು ಬಿಟ್ಟರೆ ಶಿವಯೋಗ ಸಾಧನೆಗೆ ಹೆಚ್ಚಿಲ್ಲ. ಸಾಧನೆ ಮಾಡುವ ಸಂದರ್ಭದಲ್ಲಿ ಪತ್ರಿ, ಊದಿನಕಡ್ಡಿ, ದೂಪ, ಕರ್ಪೂರ ಹಚ್ಚುವುದರಿಂದ ಉಸಿರಾಟಕ್ಕೆ ತೊಂದರೆಯಾಗುತ್ತದೆ. ಶಿವಯೋಗದ ಸಾಧನೆ ಮಾಡುವವರು ನಿತ್ಯ ಭಕ್ತರು, ನಿತ್ಯ ಸುಖಿಗಳು, ನಿಜ ನಿವಾಸಿಗಳು. ಶರಣರ ಮುಖದರ್ಪಣದಲ್ಲಿ ಲಿಂಗವನ್ನು ಕಾಣಬೇಕು ಎಂದರು.

ನಿಜಗುಣಪ್ರಭು ಸ್ವಾಮೀಜಿಗೆ ಕೊಲೆ ಬೆದರಿಕೆ: ಶ್ರೀಗಳಿಗೆ ಗನ್‌ಮ್ಯಾನ್‌ ಭದ್ರತೆ

PREV
Read more Articles on
click me!

Recommended Stories

ಜೆನ್‌ ಜೀ ಮನಗೆದ್ದ ಭಗವದ್ಗೀತೆ: ಏನಿದರ ಗುಟ್ಟು?
ನಾಳೆ ಡಿಸೆಂಬರ್ 8 ರವಿ ಪುಷ್ಯ ಯೋಗ, 5 ರಾಶಿಗೆ ಅದೃಷ್ಟ ಮತ್ತು ಪ್ರಗತಿ