ಹನುಮಾನ್ ಚಾಲೀಸ್ ಪಠಿಸುತ್ತಲೇ ಕೈಚಳಕ: 5 ಸಾವಿರ ಕದ್ದು ಭಜರಂಗಿಗೆ 10 ರೂ ಬಿಟ್ಟು ಹೋದ 'ಕಳ್‌ ಭಕ್ತ'

By Kannadaprabha NewsFirst Published Jul 14, 2023, 12:14 PM IST
Highlights

ಕಳ್ಳನೋರ್ವ ದೇಗುಲವೊಂದರಲ್ಲಿ ಹುಂಡಿ ಕಳ್ಳತನ ಮಾಡಿ ಅದರಲ್ಲಿದ್ದ 5 ಸಾವಿರ ರೂಪಾಯಿಯಲ್ಲಿ 10 ರೂಪಾಯಿಯನ್ನು ಇಟ್ಟು ಉಳಿದಿದ್ದನ್ನು ದೋಚಿಕೊಂಡು ಹೋಗಿದ್ದಾನೆ. 

ಹರ್ಯಾಣ: ಕಳ್ಳನೋರ್ವ ದೇಗುಲವೊಂದರಲ್ಲಿ ಹುಂಡಿ ಕಳ್ಳತನ ಮಾಡಿ ಅದರಲ್ಲಿದ್ದ 5 ಸಾವಿರ ರೂಪಾಯಿಯಲ್ಲಿ 10 ರೂಪಾಯಿಯನ್ನು ಇಟ್ಟು ಉಳಿದಿದ್ದನ್ನು ದೋಚಿಕೊಂಡು ಹೋಗಿದ್ದಾನೆ.  ಬರೀ ಇಷ್ಟೇ ಅಲ್ಲ, ಆತ ದೇಗುಲದಲ್ಲಿ ಹನುಮಾನ್ ಚಾಲೀಸವನ್ನು ಪಠಣ ಮಾಡಿದ್ದಲ್ಲದೇ ದೇವರಿಗೆ ಕಳ್ಳತನ ಮಾಡಿರುವುದಕ್ಕೆ ಕ್ಷಮೆ ಕೇಳಿ ಹುಂಡಿಯಲ್ಲಿದ್ದ ಹಣ ದೋಚಿಕೊಂಡು ಹೋಗಿದ್ದಾನೆ.   ಈ ಎಲ್ಲಾ ದೃಶ್ಯಾವಳಿಗಳು ದೇಗುಲದ ಸಿಸಿ ಕ್ಯಾಮರಾದಲ್ಲಿ ಸೆರೆ ಆಗಿದೆ. 

ಘಟನೆ ಬಗ್ಗೆ ಪ್ರಕರಣ ದಾಖಲಾಗಿದ್ದು,  ಸಿಸಿಟಿವಿ ದೃಶ್ಯಾವಳಿಯನ್ನು (cctv Footage) ಪರಿಶೀಲಿಸಿದ ಬಳಿಕ ಪೊಲೀಸರು ಕಳ್ಳನಿಗಾಗಿ ಬಲೆ ಬೀಸಿದ್ದಾರೆ, ವಿಚಿತ್ರ ಘಟನೆಯಲ್ಲಿ ಮೊದಲಿಗೆ ಕಳ್ಳ ದೇವರಿಗೆ ಪ್ರಾರ್ಥನೆ ಮಾಡಿದ್ದಾನೆ.  ನಂತರ ಕಳ್ಳತನದ ಕೃತ್ಯಕ್ಕೆ ಇಳಿದಿದ್ದಾನೆ. ರೇವಾರಿಯಲ್ಲಿರುವ ಆಂಜನೇಯ ದೇಗುಲದಲ್ಲಿ ಈ ಘಟನೆ ನಡೆದಿದೆ.  ಹನಮಂತನ ಮೂರ್ತಿಯ ಮುಂದೆ ಕುಳಿತ ಭಕ್ತ  ಇತರ ಭಕ್ತರು ಇರುವ ಸಮಯದಲ್ಲೇ  ಅಲ್ಲಿ ನೆಲದ ಮೇಲೆ ಕುಳಿತು ಹನುಮಾನ್ ಚಾಲೀಸವನ್ನು ಪಠಿಸಿ ನಂತರ ಮೆಲ್ಲನೆ ಹುಂಡಿಯ ಬಾಗಿಲು ತೆಗೆದು ಅದರಲ್ಲಿದ್ದ ಹಣವನ್ನು ಕೈಯಲ್ಲಿ ಬಾಚಿ ತನ್ನ ಶರ್ಟಿನೊಳಗೆ ತುಂಬಿಸಿಕೊಳ್ಳುತ್ತಿರುವುದು ಸಿಸಿ ಕ್ಯಾಮರಾದಲ್ಲಿ ಸೆರೆ ಆಗಿದೆ. ಹುಂಡಿಯಲ್ಲಿ 5 ಸಾವಿರ ಹಣವಿದ್ದು, ಈ ಕಳ್ಳ ಅದರಲ್ಲಿ 10 ರೂಪಾಯಿಯನ್ನು ದೇವರಿಗೆ ಬಿಟ್ಟು ಹೋಗಿದ್ದಾನೆ. 

Latest Videos

ದೇಗುಲದಲ್ಲಿ ಕಳ್ಳತನ: ತಾನೇ ಕೊರೆದ ಕನ್ನದೊಳಗೆ ಸಿಲುಕಿಕೊಂಡ ಕಳ್ಳ

ಆದರೆ ಇದ್ಯಾವುದರ ಅರಿವಿಲ್ಲದೇ ದೇಗುಲದ ಅರ್ಚಕರು (Temple priest) ದೇಗುಲಕ್ಕೆ ಬಾಗಿಲು ಹಾಕಿ ಹೊರಟು ಹೋಗಿದ್ದಾರೆ. ಆದರೆ ಇವರು ಮರಳಿ ಬಂದು ನೋಡಿದಾಗ ದೇಗುಲದ ಹುಂಡಿ ಒಡೆದಿರುವುದು ಗಮನಕ್ಕೆ ಬಂದಿದೆ. ಈ ಹಿನ್ನೆಲೆಯಲ್ಲಿ ಅರ್ಚಕರು ಪೊಲೀಸರಿಗೆ ದೂರು ನೀಡಿದ್ದಾರೆ. ಈ ವೇಳೆ ಪೊಲೀಸರು ಬಂದು ಸಿಸಿಟಿವಿ ಪರಿಶೀಲಿಸಿದಾಗ ಅರ್ಚಕರಿಗೆ ಶಾಕ್ ಕಾದಿತ್ತು. ಏಕೆಂದರೆ ಕಳ್ಳ ಕಳ್ಳತನಕ್ಕೆ ಮೊದಲು ಹುಂಡಿಯ ಬಳಿಯೇ ಕುಳಿತು ಹನುಮಾನ್ ಚಾಲೀಸ (Hanuman chalisa) ಪಠಿಸುತ್ತಿದ್ದ ಜೊತೆಗೆ ಅಲ್ಲದೇ ದೇವರ ಪಾದದ ಬಳಿ ಆತ ಹಣವನ್ನು ಇಡುತ್ತಲೇ ಇದ್ದ.  ಭಾನುವಾರ ರಾತ್ರಿ ಈ ಘಟನೆ ನಡೆದಿದ್ದು,  ಘಟನೆಗೆ ಸಂಬಂಧಿಸಿದಂತೆ ಪೊಲೀಸರು ಪ್ರಕರಣ ದಾಖಲಿಸಿದ್ದಾರೆ. 

ದೇಗುಲದಲ್ಲಿ ಕಳ್ಳತನ ಮಾಡುವಾಗಲೇ ಸಿಕ್ಕಿಬಿದ್ದ ಚೋರರು

click me!