
ಸಂಕ್ರಾಂತಿಗೆ ಸನಾತನ ಧರ್ಮ(Sanatan Dharma)ದಲ್ಲಿ ವಿಶೇಷ ಪ್ರಾಮುಖ್ಯತೆ ಇದೆ. ಸೂರ್ಯನು ಒಂದು ರಾಶಿಯಿಂದ ಮತ್ತೊಂದು ರಾಶಿಗೆ ಚಲಿಸುವುದೇ ಸಂಕ್ರಾಂತಿಯಾಗಿದೆ. ಈ ಬಾರಿ ಅಂದರೆ ಮಾರ್ಚ್ 14ರಂದು ಬೆಳಗ್ಗೆ ಮೀನ ಸಂಕ್ರಮಣ ಸಂಭವಿಸಲಿದೆ. ಅಂದರೆ ಸೂರ್ಯನು ಮೀನ(Pisces) ರಾಶಿಗೆ ಪ್ರವೇಶಿಸಲಿದ್ದಾನೆ. ಸೂರ್ಯನ ಈ ಪಥ ಬದಲಾವಣೆಯು ಸಕಲ ಚರಾಚರ ಜೀವಿಗಳ ಬದುಕಲ್ಲೂ ಬದಲಾವಣೆ ತರಲಿದೆ. ಎಲ್ಲ ಸಂಕ್ರಾಂತಿಗಳಂತೆ ಮೀನ ಸಂಕ್ರಾಂತಿಗೂ ಅದರದೇ ಆದ ವೈಶಿಷ್ಠ್ಯವಿದೆ. ಏಕೆಂದರೆ ಸೂರ್ಯನು ಮೇಷ ರಾಶಿಯಲ್ಲಿ ಚಲನೆ ಆರಂಭಿಸಿ ಎಲ್ಲ ರಾಶಿಯನ್ನೂ ಪೂರೈಸಿ ಕಡೆಗೆ ಮೀನ ರಾಶಿಗೆ ಬರುತ್ತಾನೆ. ಅಂದರೆ, ಇದು ಹಿಂದೂ ಪಂಚಾಂಗದ ಪ್ರಕಾರ, ಈ ವರ್ಷದ ಕಡೆಯ ಸಂಕ್ರಮಣವಾಗಿದೆ.
ಸೂರ್ಯನ ಮೀವನ ಸಂಕ್ರಮಣವು 14ರ ಬೆಳಗ್ಗೆ 8.16ಕ್ಕೆ ಸಂಭವಿಸಲಿದೆ. ಈ ಸಮಯದಲ್ಲಿ ಪವಿತ್ರ ನದಿಗಳ(holy rivers)ಲ್ಲಿ ಭಕ್ತರು ಮುಳುಗು ಹಾಕುವುದರಿಂದ ಸಾಕಷ್ಟು ಲಾಭಗಳಿವೆ, ಪಾಪಗಳೆಲ್ಲ ಪರಿಹಾರವಾಗುತ್ತವೆ ಎಂದು ನಂಬಲಾಗಿದೆ. ಇದಲ್ಲದೆ ಈ ದಿನ ಮಾಡುವ ದಾನ(donation) ಕಾರ್ಯಾದಿಗಳಿಗೂ ಸಾಕಷ್ಟು ಪ್ರಾಮುಖ್ಯತೆ ಇದೆ. ಮೀನ ಸಂಕ್ರಾಂತಿಯ ದಿನ ಸೂರ್ಯನನ್ನು ಹೇಗೆ ಆರಾಧಿಸಬೇಕೆಂಬ ಬಗ್ಗೆ ವಿವರಗಳನ್ನು ಇಲ್ಲಿ ನೀಡಲಾಗಿದೆ.
ಮೀನ ಸಂಕ್ರಾಂತಿ(Pisces Sankranti)
ಮಾರ್ಚ್ 14ರಂದು ಸೂರ್ಯನು ಕುಂ ರಾಶಿಯನ್ನು 12.16ರ ಬೆಳಗಿನ ಜಾವದಲ್ಲಿ ತೊರೆಯುತ್ತಾನೆ. ನಂತರ ಬೆಳಗ್ಗೆ 8.43ಕ್ಕೆ ಮೀನಕ್ಕೆ ಪ್ರವೇಶಿಸಲಿದ್ದಾನೆ. ಮೀನ ಸಂಕ್ರಾಂತಿಯ ಮಹಾಪುಣ್ಯ ಕಾಲವು ಬೆಳಗ್ಗೆ 6.31ರಿಂದ ಮಾರ್ಚ್ 15ರ ಬೆಳಗ್ಗೆ 8.31ರವರೆಗೂ ಇರಲಿದೆ.
Sun transits in Pisces 2022: ಸೂರ್ಯ ಗೋಚಾರದಿಂದ ವೃಷಭ, ಮಿಥುನ ರಾಶಿಗೆ ಲಾಟ್ರಿ, ಉಳಿದ ರಾಶಿಗಳ ಕತೆಯೇನು?
ಸೂರ್ಯನ ಆರಾಧನೆ
ಸೌರಮಂಡಲದ ಶೇ.99ರಷ್ಟು ದ್ರವ್ಯ ರಾಶಿಯನ್ನು ಸೂರ್ಯನೊಬ್ಬನೇ ಹೊಂದಿದ್ದಾನೆ. ಭೂಮಿ ಸೇರಿದಂತೆ ಸಕಲ ಗ್ರಹಗಳೂ ಸೂರ್ಯನ ಸುತ್ತ ಸುತ್ತುತ್ತವೆ. ಅಂದರೆ, ಎಲ್ಲ ಗ್ರಹಗಳ ಅಧಿಪತಿ ಸೂರ್ಯನಾಗಿದ್ದಾನೆ. ಭೂಮಿಯಿಂದ ಸೂರ್ಯನು 15 ಕೋಟಿ ಕಿಲೋಮೀಟರ್‌ಗಳಷ್ಟು ದೂರವಿದ್ದರೂ ಇಲ್ಲಿನ ಹವಾಮಾನ, ಜೀವರಾಶಿ ಸೇರಿದಂತೆ ಎಲ್ಲವನ್ನೂ ಆತನೇ ನಿಯಂತ್ರಿಸುತ್ತಾನೆ. ಹೀಗಾಗಿ, ಸೂರ್ಯನನ್ನು ಕಣ್ಣಿಗೆ ಕಾಣುವ ಏಕೈಕ ದೇವರು ಎನ್ನಲಾಗುತ್ತದೆ. ಅದೇ ಕಾರಣಕ್ಕೆ ಅವನ ವಿಶೇಷ ಆರಾಧನೆಯಲ್ಲಿ ಎಲ್ಲರೂ ತೊಡಗಬೇಕು.
Personality Traits: ಈ ರಾಶಿಯವರಿಗೆ ಬೇಜವಾಬ್ದಾರಿ ಹೆಚ್ಚು.. ನೀವಿದ್ದೀರಾ?
ದಿನ ಭವಿಷ್ಯ, ವಾರ ಭವಿಷ್ಯ, ನಿಮ್ಮ ರಾಶಿ ವಿಶೇಷ, ದಿನ ವಿಶೇಷ, ಹಬ್ಬ ಹರಿದಿನಗಳು, ಸಂಪ್ರದಾಯ ಆಚರಣೆಗಳ ಕುರಿತು ಹೆಚ್ಚಿನ ಮಾಹಿತಿ ಪಡೆಯಲು ಸುವರ್ಣನ್ಯೂಸ್ ಜ್ಯೋತಿಷ್ಯ ವಿಭಾಗವನ್ನು ತಪ್ಪದೇ ನೋಡುತ್ತಿರಿ.