HoLi 2022: ನವವಿವಾಹಿತೆ ಕಾಮದಹನ ನೋಡ್ಲೇಬಾರ್ದು, ಅತ್ತೆ ಸೊಸೆ ಜೊತೆಯಾಗಿ ನೋಡಿದ್ರಂತೂ ಕಷ್ಟ ಕಷ್ಟ

By Suvarna News  |  First Published Mar 12, 2022, 1:40 PM IST

ಇನ್ನೇನು ಹೋಳಿ ಹುಣ್ಣಿಮೆಗೆ ವಾರವೂ ಇಲ್ಲ. ಸಂಭ್ರಮದ, ವರ್ಣಮಯ ಹಬ್ಬದ ದಿನ ನೀವೇನು ಮಾಡಬೇಕು ಹಾಗೂ ಏನು ಮಾಡಬಾರದು ಎಂದು ತಿಳಿದಿದ್ದರೆ ಒಳಿತು.


ಹೋಳಿ(Holi) ಹಬ್ಬ ಹತ್ತಿರ ಬಂತು. ಇದರಷ್ಟು ವರ್ಣರಂಜಿತ ಹಬ್ಬ ಜಗತ್ತಲ್ಲೇ ಇನ್ನೊಂದಿರಲಿಕ್ಕಿಲ್ಲ. ಎಲ್ಲರೂ ತಮ್ಮ ಆಪ್ತರಿಗೆ, ಸ್ನೇಹಿತರಿಗೆ ಬಣ್ಣ(colour)ಗಳನ್ನು ಎರಚಿ ಸಂಭ್ರಮದಿಂದ ದಿನ ಕಳೆಯುತ್ತಾರೆ. ಹೋಳಿ ಆಚರಣೆಯು ಕೆಟ್ಟದ್ದರ ವಿರುದ್ಧ ಒಳಿತಿನ ಗೆಲುವನ್ನು ಸಂಭ್ರಮಿಸುವುದಾಗಿದೆ. ಕೋವಿಡ್ ಹಿನ್ನೆಲೆಯಲ್ಲಿ ಕಳೆದೆರಡು ವರ್ಷ ಡಲ್ ಆಗಿದ್ದ ಹೋಳಿ ಆಚರಣೆ ಈ ವರ್ಷ ಮತ್ತೆ ಪೂರ್ಣ ಪ್ರಮಾಣದ ಸಂಭ್ರಮದೊಂದಿಗೆ ಮರಳುತ್ತಿದೆ. ಈ ವರ್ಷ ಮಾರ್ಚ್ 18ರಂದು ಹೋಳಿ ಹಬ್ಬವಿದ್ದು, ಮಾರ್ಚ್ 17ರಂದು ಕಾಮದಹನ ನಡೆಯಲಿದೆ. ಹೋಲಾಷ್ಟಕ್ ಮಾರ್ಚ್ 10ರಿಂದಲೇ ಆರಂಭವಾಗಿದೆ. ಈ ಹೋಲಾಸ್ಟಕ್ ಸಮಯದಲ್ಲಿ ಅಂದರೆ ಮಾರ್ಚ್ 10-18ರವರೆಗೆ ಯಾವುದೇ ಶುಭ ಕೆಲಸಗಳನ್ನು ಮಾಡಬಾರದು. 

ಹೋಳಿಯ ದಿನ ನಾವು ಯಾವೆಲ್ಲ ಕೆಲಸ ಮಾಡಬೇಕು ಹಾಗೂ ಯಾವೆಲ್ಲ ಕೆಲಸ ಮಾಡಲೇಬಾರದು ಎಂಬ ಬಗ್ಗೆ ಇಲ್ಲಿ ಬೆಳಕು ಚೆಲ್ಲಲಾಗಿದೆ. 

Latest Videos

undefined

ಹೋಳಿಯಂದು ಮಾಡಬೇಕಾದ ಕೆಲಸಗಳು(Things to do)

  • ಹೋಳಿಯಲ್ಲಿ, ನಿಮ್ಮ ಮನೆಯನ್ನು ಚೆನ್ನಾಗಿ ಸ್ವಚ್ಛಗೊಳಿಸಿ ಮತ್ತು ಭಗವಾನ್ ವಿಷ್ಣು(Lord Vishnu)ವನ್ನು ಪೂಜಿಸಿ.
  • ಮನೆಯಲ್ಲಿ ಏನೇ ಊಟ ತಯಾರಿಸಿದರೂ ಅದನ್ನು ಮೊದಲು ದೇವರಿಗೆ ಅರ್ಪಿಸಬೇಕು.
  • ಈ ದಿನ ಹಳದಿ ಸಾಸಿವೆ(yellow mustard), ಉದ್ದಿನಬೇಳೆ, ಜಾಯಿಕಾಯಿ ಮತ್ತು ಕಪ್ಪು ಎಳ್ಳನ್ನು ಕಪ್ಪು ಬಟ್ಟೆಯಲ್ಲಿ ಗಂಟು ಹಾಕಿ ನಿಮ್ಮ ಜೇಬಿನಲ್ಲಿ ಇಟ್ಟುಕೊಳ್ಳಿ.
  • ಅದರ ನಂತರ, ಕಾಮದಹನ ಸಮಯದಲ್ಲಿ, ಈ ಗಂಟನ್ನು ಹೋಳಿಗೆ ಹಾಕಿ.
  • ಹಬ್ಬದ ದಿನದಂದು ಸಂತೋಷದ ಹೃದಯದಿಂದ ಹೋಳಿ ಹಬ್ಬದ ತಯಾರಿ ನಡೆಸಿ. ಯಾರನ್ನೂ ಅವಮಾನಿಸಬೇಡಿ.
  • ಕಾಮದಹನದ ಚಿತಾಭಸ್ಮವನ್ನು ಮನೆಗೆ ತಂದು ಮನೆಯ ನಾಲ್ಕು ಮೂಲೆಗಳಲ್ಲಿ ಹಾಕಬೇಕು. ಇದರಿಂದ ಮನೆಯ ವಾಸ್ತು ದೋಷ(Vastu defects)ಗಳು ನಿವಾರಣೆಯಾಗುತ್ತವೆ.
  • ಹೋಳಿ ಹಬ್ಬದಂದು ನಿಮ್ಮ ಮನೆಯ ಹಿರಿಯರ ಕಾಲಿಗೆ ಬಣ್ಣವನ್ನು ಹಚ್ಚಿ ಅವರ ಆಶೀರ್ವಾದವನ್ನು ಕೇಳಿ. ಇದರಿಂದ ದೇವರು ಸಂತುಷ್ಟನಾಗುತ್ತಾನೆ.
  • ಕಾಮದಹನದ ಚಿತಾ ಭಸ್ಮವನ್ನು ಮನೆಗೆ ತಂದು ತಿಜೋರಿಯಲ್ಲಿ ಇಟ್ಟರೆ ಜೀವನದಲ್ಲಿ ಎಂದೂ ಹಣದ ಕೊರತೆ ಬರುವುದಿಲ್ಲ.

    ಈ ನಾಲ್ಕು ರಾಶಿಯ ಹುಡುಗರ ಕಡೆ ಹುಡುಗಿಯರಿಗೆ ಆಕರ್ಷಣೆ ಹೆಚ್ಚು, ಯಾಕೆ ಗೊತ್ತಾ?

ಹೋಳಿಯಂದು ಮಾಡಬಾರದ ಕೆಲಸಗಳು(Things To Avoid On Holi)

  • ಹೋಳಿ ಹಬ್ಬದಂದು, ಬಿಳಿ(white) ವಸ್ತುಗಳಿಂದ ದೂರವಿರಿ ಮತ್ತು ತಪ್ಪಾಗಿ ಯಾವುದೇ ದೋಷಪೂರಿತ ಚಟುವಟಿಕೆಯನ್ನು ಮಾಡಬೇಡಿ. ಈ ದಿನ, ಸಾಧ್ಯವಾದರೆ, ನಿಮ್ಮ ತಲೆಯನ್ನು ಮುಚ್ಚಿಕೊಳ್ಳಿ.
  • ಮುಸ್ಸಂಜೆ ನಂತರ ಹೋಳಿ ಆಡಬಾರದು. ಹೀಗೆ ಮಾಡುವುದು ಅಶುಭವಾಗಿದೆ.
  • ಈ ದಿನ, ಮದ್ಯ(alcohol) ಸೇವನೆ ಮಾಡಬಾರದು.
  • ಹೊಸದಾಗಿ ಮದುವೆಯಾದ ಯಾವ ಮಹಿಳೆಯೂ ಕಾಮದಹನವಾಗುವುದನ್ನು ನೋಡಬಾರದು. ಇದರ ಹೊರತಾಗಿ ಅತ್ತೆ ಮತ್ತು ಸೊಸೆ ಕೂಡಾ ಒಟ್ಟಾಗಿ ಕಾಮದಹನ ನೋಡಬಾರದು. ಒಂದು ವೇಳೆ ನೋಡಿದರೆ ಜೀವನದಲ್ಲಿ ಸಮಸ್ಯೆ ಉಂಟಾಗುತ್ತದೆ.
  • ಹೋಳಿ ಹಬ್ಬದಂದು ಯಾರಿಗೂ ಹಣ ಕೊಡಬೇಡಿ, ಯಾರಿಂದಲೂ ಹಣ ತೆಗೆದುಕೊಳ್ಳಬೇಡಿ. 

    Holi Festival : ಓಕುಳಿ ನಂತ್ರ ಮನೆಯ ಸ್ವಚ್ಛತೆ ಹೀಗಿರಲಿ

    ಹೋಳಿ ಹಬ್ಬದ ದಿನ ಆಂಜನೇಯ(Lord Hanuman) ಪೂಜೆ
    ಹೋಳಿ ಹಬ್ಬದ ದಿನ ಆಂಜನೇಯ ಪೂಜೆ ಮಾಡುವುದರಿಂದ ಬಹಳಷ್ಟು ಒಲಿತಾಗಲಿದೆ. ಈ ದಿನ ಭಜರಂಗಬಲಿಯನ್ನು ಮನಃಪೂರ್ವಕವಾಗಿ ಪೂಜಿಸುವುದರಿಂದ ಕಷ್ಟಗಳೆಲ್ಲ ನಿವಾರಣೆಯಾಗುತ್ತದೆ. 
    ಕಾಮದಹನ ನಡೆಸುವ ರಾತ್ರಿ ಆಂಜನೇಯನ ಪೂಜೆ ಮಾಡಬೇಕು. ಮೊದಲು ಸ್ನಾನ ಮಾಡಿ ನಂತರ ಪೂಜೆಗೆ ಕುಳಿತು ಆಂಜನೇಯನಿಗೆ ಕುಂಕುಮ, ಮಲ್ಲಿಗೆ ಎಣ್ಣೆ, ಹೂವಿನ ಹಾರ, ಪ್ರಸಾದ, ಕೆಂಪು ಬಟ್ಟೆ ಹಾಕಿ ಅಲಂಕರಿಸಬೇಕು. ನಂತರ ಆಂಜನೇಯನ ಮೂರ್ತಿ ಎದುರು ತುಪ್ಪದ ದೀಪ ಹಚ್ಚಬೇಕು. ಬಳಿಕ ಹನುಮಾನ್ ಚಾಲೀಸಾ ಹಾದೂ ಭಜರಂಗ್ ಬಾಣ್ ಹೇಳಬೇಕು. 
click me!