Holi 2022: ಹಿರಣ್ಯಕಶಿಪು ಹಾಗೂ ಪ್ರಹ್ಲಾದನ ಕತೆಗೂ ಹೋಳಿಗೂ ಸಂಬಂಧವುಂಟು!

By Suvarna News  |  First Published Mar 13, 2022, 10:56 AM IST

ಹೋಳಿ ಹಬ್ಬದಂದು ಹೋಲಿಕಾ ದಹನ ನಡೆಸುವುದು ಗೊತ್ತೇ ಇದೆ. ಈ ಸಂಪ್ರದಾಯಕ್ಕೂ ಹಿರಣ್ಯಕಶಿಪು ಹಾಗೂ ಪ್ರಹ್ಲಾದನ ಕತೆಗೂ ಸಂಬಂಧವುಂಟು. ಅದೇನು ಗೊತ್ತಾ? 


ಮಾರ್ಚ್ 18ರಂದು ಹೋಳಿ ಹಬ್ಬ. ಪ್ರತಿ ವರ್ಷ ಹೋಳಿ ಹಬ್ಬ ಆಚರಿಸುವುದಕ್ಕೂ ಮೊದಲು ಕೆಟ್ಟದ್ದರ ವಿರುದ್ಧ ಒಳಿತಿನ ಜಯದ ಸೂಚಕವಾಗಿ ಹೋಲಿಕಾ ದಹನ ನಡೆಸಲಾಗುತ್ತದೆ. ಅಷ್ಟಕ್ಕೂ ಈ ಹೋಲಿಕಾ ದಹನ ಎಂದರೇನು? ಹೋಳಿ ಹಬ್ಬದಂದು ಅದನ್ನೇಕೆ ಮಾಡಬೇಕು? ಈ ಕತೆಗೂ ಹಿರಣ್ಯಕಶಿಪು(Hiranyakashipu) ಮತ್ತು ಪ್ರಹ್ಲಾದ(Prahlada)ನ ಕತೆಗೂ ಏನು ಸಂಬಂಧ? ಎಲ್ಲ ವಿವರಗಳನ್ನು ನೀವು ತಿಳಿಯಬೇಕು. ಏಕೆಂದರೆ ಹೋಲಿಕಾ ದಹನ ನಡೆಸುವುದರಿಂದ ವಾಸ್ತು ದೋಷಗಳು ನಿವಾರಣೆಯಾಗುವ ಜೊತೆಗೆ, ಮನಸ್ಸಿನ ನಕಾರಾತ್ಮಕ ಯೋಚನೆಗಲೂ ಭಸ್ಮವಾಗುತ್ತವೆ ಎಂಬ ನಂಬಿಕೆ ಇದೆ. 

ಹಿರಣ್ಯಕಶಿಪು ಮತ್ತು ಪ್ರಹ್ಲಾದನ ಕತೆ(story of Hiranyakashyap and Prahlada)
ರಾಕ್ಷಸರಾಜ ಎಂದೇ ಹೆಸರಾಗಿದ್ದ ರಾಜ ಹಿರಣ್ಯಕಶಿಪುವಿಗೆ ಭಗವಾನ್ ವಿಷ್ಣುವನ್ನು ಕಂಡರೆ ಎಲ್ಲಿಲ್ಲದ ಕೋಪ. ವಿಷ್ಣು(Lord Vishnu)ವನ್ನು ಮಹಾಶತ್ರುವಾಗಿ ನೋಡುತ್ತಿದ್ದವನು ಆತ. ರಾಜ್ಯದಲ್ಲಿ ಎಲ್ಲರೂ ತನ್ನನ್ನೇ ದೇವರೆಂದು ಆರಾಧಿಸಬೇಕಾಗಿ ಅಪ್ಪಣೆ ಹೊರಡಿಸಿದ ಅವನು, ಇತರ ದೇವರ ಪೂಜೆಯನ್ನು ನಿಷೇಧಿಸಿದನು. ಯಾರಾದರೂ ತನ್ನ ಬಿಟ್ಟು ಬೇರೆ ದೇವರನ್ನು ಪೂಜಿಸಿದರೆ ಶಿಕ್ಷೆ ಕೊಡುವುದಾಗಿ ಎಚ್ಚರಿಕೆ ನೀಡಿದನು. ಅದಕ್ಕೆ ವ್ಯತಿರಿಕ್ತವಾಗಿ ಆತನ ಪತ್ನಿ ಹಾಗೂ ಮಗನೇ ಮಹಾವಿಷ್ಣುವಿನ ಮಹಾ ಭಕ್ತರು. ಹಿರಣ್ಯಕಶಿಪುವಿನ ಪುತ್ರ ಪ್ರಹ್ಲಾದ ಮಾತೆತ್ತಿದ್ದರೆ ಶ್ರೀ ಹರಿ ಎನ್ನುವುದನ್ನು ಕಂಡ ಹಿರಣ್ಯಕಶಿಪು ಮಗನಿಂದ ಆ ಅಭ್ಯಾಸ ಬಿಡಿಸಲು ಸಾಕಷ್ಟು ಪ್ರಯತ್ನ ಮಾಡಿದ. ಆದರೆ, ಕಡೆಗೂ ಅವನಿಂದ ಅದು ಸಾಧ್ಯವಾಗದೆ ಹೋದಾಗ ಮಗನನ್ನೇ ಕೊಲ್ಲಲು ಸಂಚು ಮಾಡಿದ. ಈ ಸಂಚಿನಲ್ಲಿ ಜೊತೆ ವಹಿಸಿದ್ದು ಹಿರಣ್ಯಕಶಿಪುವಿನ ಸಹೋದರಿ ಹೋಲಿಕಾ ಎಂಬ ರಾಕ್ಷಸಿ. 

Tap to resize

Latest Videos

Weekly Horoscope: ಕಟಕಕ್ಕಿದೆ ಪ್ರೇಮ ಜೀವನಕ್ಕೆ ಜಿಗಿವ ಅವಕಾಶ, ಮೀನಕ್ಕೆ ವೃತ್ತಿ ಯಶ

ಹೋಲಿಕಾ ಬ್ರಹ್ಮ(Lord Brahma)ನಿಂದ ವರ ಪಡೆದು ಬೆಂಕಿಯಿಂದ ರಕ್ಷಿಸಿಕೊಳ್ಳಬಲ್ಲ ಶಾಲನ್ನು ಪಡೆದಿದ್ದಳು. ಇದೇ ವರದ ಲಾಭ ಪಡೆದು ಪ್ರಹ್ಲಾದನನ್ನು ಸಾಯಿಸಲು ಸಂಚು ನಡೆಸಿದಳು. ಹೇಗೋ ಪ್ರಹ್ಲಾದನ ಮನ ಒಲಿಸಿ ಆತನನ್ನು ತನ್ನೊಂದಿಗೆ ಬೆಂಕಿಯಲ್ಲಿ ಕುಳಿತುಕೊಳ್ಳಲು ಒಪ್ಪಿಸಿದಳು. ಬೆಂಕಿ ಹೊತ್ತಿಕೊಂಡ ತಕ್ಷಣ ಪ್ರಹ್ಲಾದನಿಗೆ ಸಂಚಿನ ಅರಿವಾಗಿ ತನ್ನನ್ನು ರಕ್ಷಿಸುವಂತೆ ವಿಷ್ಣುವಿನಲ್ಲಿ ಪ್ರಾರ್ಥಿಸಿದನು. 

ಆಗ ವಿಷ್ಣುವು ಭಕ್ತ ಪ್ರಹ್ಲಾದನನ್ನು ರಕ್ಷಿಸುವ ಸಲುವಾಗಿ ಹೋಲಿಕಾಳ ಶಾಲನ್ನು ಊದುವಂತೆ ವಾಯುವಿಗೆ ಹೇಳಿದನು. ವಾಯುವು ಆ ಶಾಲು ಹೋಲಿಕಾಳಿಂದ ಹಾರಿ ಹೋಗಿ ಪ್ರಹ್ಲಾದನನ್ನು ಸುತ್ತಿಕೊಳ್ಳುವಂತೆ ಮಾಡಿದನು. ಆಗ ಹೋಲಿಕಾ ಬೆಂಕಿಯಲ್ಲಿ ಸುಟ್ಟು ಹೋದಳು. ಪ್ರಹ್ಲಾದ ಏನೂ ಆಗದೆ ಹೊರ ಬಂದನು. ಈ ಮೂಲಕ ಸಮಾಜದಲ್ಲಿ ಒಳ್ಳೆಯದು ಗೆದ್ದು ಕೆಟ್ಟದ್ದು ನಾಶವಾಯಿತು ಎನ್ನಲಾಗುತ್ತದೆ.

ಈ ನಾಲ್ಕು ರಾಶಿಯ ಹುಡುಗರ ಕಡೆ ಹುಡುಗಿಯರಿಗೆ ಆಕರ್ಷಣೆ ಹೆಚ್ಚು, ಯಾಕೆ ಗೊತ್ತಾ?

ಇಷ್ಟಾದ್ರೂ ಹೋಲಿಕಾಳನ್ನು ಪೂಜಿಸುವುದೇಕೆ?
ಹಿಂದೂ ಪುರಾಣಗಳ ಪ್ರಕಾರ, ಹೋಲಿಕಾ ಪೂಜೆಯು ಪ್ರತಿಯೊಬ್ಬರ ಮನೆಗೆ ಸಮೃದ್ಧಿ ಮತ್ತು ಸಂಪತ್ತಿ(wealth)ನ ಶಕ್ತಿಯನ್ನು ತರುತ್ತದೆ. ಹೋಳಿ ದಿನದಂದು ಹೋಲಿಕಾ ಪೂಜೆಯನ್ನು ಮಾಡುವುದರಿಂದ ಜನರು ಎಲ್ಲ ರೀತಿಯ ಭಯವನ್ನು ಜಯಿಸಬಹುದು ಎಂದು ನಂಬಲಾಗಿದೆ. ಹಾಗಾಗಿ, ಹೋಲಿಕಾ ದಹನ(Holika Dahan) ನಡೆಸುವ ಮೊದಲು ಪ್ರಹ್ಲಾದನ ಜೊತೆಗೆ ಹೋಲಿಕಾಳನ್ನೂ ಪೂಜಿಸಲಾಗುತ್ತದೆ. 

ಹೋಲಿಕಾ ದಹನವನ್ನೇ ನಾವು ದಕ್ಷಿಣ ಭಾರತದಲ್ಲಿ ಕಾಮದಹನ ಎನ್ನುವುದು. ಹೀಗೆ ಕಾಮ ದಹನ ಮಾಡುವುದರಿಂದ ನಮ್ಮ ಮನಸ್ಸಿನ ದುಷ್ಟ ಬುದ್ಧಿಗಳು, ಯೋಚನೆಗಳೆಲ್ಲ ಬೆಂಕಿಯಲ್ಲಿ ಸುಟ್ಟು ಹೋಗುತ್ತವೆ ಎಂದು ನಂಬಲಾಗಿದೆ. ಕಾಮ ದಹನಕ್ಕೂ ಮುನ್ನ ಈ ಹೋಲಿಕಾಳ ಕತೆ ಕೇಳುವುದರಿಂದ ಹೆಚ್ಚಿನ ಫಲ ಸಿದ್ದಿಸಲಿದೆ. 

ದಿನ ಭವಿಷ್ಯ, ವಾರ ಭವಿಷ್ಯ, ನಿಮ್ಮ ರಾಶಿ ವಿಶೇಷ, ದಿನ ವಿಶೇಷ, ಹಬ್ಬ ಹರಿದಿನಗಳು, ಸಂಪ್ರದಾಯ ಆಚರಣೆಗಳ ಕುರಿತು ಹೆಚ್ಚಿನ ಮಾಹಿತಿ ಪಡೆಯಲು ಸುವರ್ಣನ್ಯೂಸ್ ಜ್ಯೋತಿಷ್ಯ ವಿಭಾಗವನ್ನು ತಪ್ಪದೇ ನೋಡುತ್ತಿರಿ.

click me!