ಸೂರ್ಯ ಕಟಕ ರಾಶಿಗೆ ಪ್ರವೇಶ: ನಿಮ್ಮ ಅದೃಷ್ಟ ಹೇಗಿದೆ?

By Suvarna News  |  First Published Jul 16, 2020, 3:22 PM IST

ಇಂದು ಸೂರ್ಯ ಕಟಕ ರಾಶಿಗೆ ಪ್ರವೇಶಿಸುತ್ತಿದ್ದಾನೆ. ಈ ರಾಶಿಯಲ್ಲಿ ಮುಂದಿನ ಒಂದು ತಿಂಗಳು ಸಂಚರಿಸಲಿದ್ದಾನೆ. ಇಂದಿನಿಂದ ದಕ್ಷಿಣಾಯನ ಆರಂಭವಾಗಲಿದೆ. ಇದರಿಂದ ಯಾವ ರಾಶಿಗೆ ಶುಭ, ಯಾರಿಗೆ ಕಷ್ಟ?


ಮೇಷ ರಾಶಿ
ನಿಮಗೆ ಈ ತಿಂಗಳು ಸ್ವಲ್ಪ ಕಷ್ಟವಾಗಬಹುದು. ಕಚೇರಿ ಕೆಲಸದಲ್ಲಿ ಎಲ್ವೂ ಸಲೀಸಾಗಿ ಸಾಗಲಿಕ್ಕಿಲ್ಲ. ಹತಾಶೆ ಉಂಟಾಗಬಹುದು. ಅಸುರಕ್ಷಿತ ಭಾವನೆ ಮೂಡಬಹುದು. ನಿಮ್ಮ ಸಂಬಂಧಗಳಲ್ಲಿ ಸ್ವಲ್ಪ ವಿರಸ ಉಂಟಾಗಬಹುದು. ಆದರೆ ಇದೆಲ್ಲವೂ ತಾತ್ಕಾಲಿಕ ಎಂಬುದು ನಿಮ್ಮ ಗಮನದಲ್ಲಿರಲಿ. ಕುಟುಂಬದ ವಾತಾವರಣ ಹದಗೆಡದೆ ಇರಲಿ.

ವೃಷಭ ರಾಶಿ
ವೃಷಭ ರಾಶಿಯಿಂದ ಎರಡನೇ ಮನೆಗೆ ಸೂರ್ಯ ಬರುವುದರಿಂದ ನಿಮಗೆ ಯಾವುದೇ ಕೆಲಸ ಮಾಡಲು ಧೈರ್ಯದ ಕೊರತೆಯಾಗುವುದಿಲ್ಲ. ವೃತ್ತಿ ಜೀವನದಲ್ಲಿ ಒಳ್ಳೆಯ ಸುದ್ದಿ ಒಡೆಯುವ ಸಾಧ್ಯತೆ ಇದೆ. ಬಾಸ್‌ ಅಥವಾ ಮ್ಯಾನೇಜ್‌ಮೆಂಟ್‌ನಿಂದ ಹೆಚ್ಚಿನ ಬೆನ್ನು ತಟ್ಟುವಿಕೆ ಸಿಗಬಹುದು. ಸಂಪತ್ತು ಹಾಗೂ ಆರೋಗ್ಯದಲ್ಲಿ ಹೆಚ್ಚಿನ ಏರುಪೇರು ಆಗುವುದಿಲ್ಲ. 

Tap to resize

Latest Videos

undefined

ಮಿಥುನ ರಾಶಿ
ನಿಮ್ಮ ಮನೆಯಿಂದಾಚೆಗೆ ಎರಡನೇ ಮನೆಯಲ್ಲಿ ಸೂರ್ಯನಿದ್ದಾನೆ. ಹೀಗಾಗಿ ನಿಮ್ಮ ವೃತ್ತಿ, ಪ್ರವೃತ್ತಿ, ಮಾಥು, ಸ್ವಭಾವಗಳಲ್ಲಿ ಸ್ವಲ್ಪ ಗಡಸುತನ ಕಾಣಿಸಿಕೊಳ್ಳಬಹುದು. ಸಾಲ ಪಡೆದವರು ಅಥವಾ ಸಾಲ ಕೊಡುವವರು ನೀವಾಗಿದ್ದರೆ ಸ್ವಲ್ಪ ಎಚ್ಚರಿಕೆಯಿಂದ ವ್ಯವಹರಿಸಬೇಕು. ಇಲ್ಲವಾದರೆ ಹಣ ಕೈಬಿಟ್ಟುಹೋದೀತು. ಹೊಸ ಹೂಡಿಕೆ ಬೇಡ.

ಕಟಕ ರಾಶಿ
ಸೂರ್ಯನು ನಿಮ್ಮ ಮನೆಯಲ್ಲಿ ಈಗ ಇರುವುದರಿಂದ ನಿಮಗೆ ಹಲವು ಲಾಭಗಳುಂಟು. ಮುಖ್ಯವಾಗಿ ನಿಮ್ಮ ನಾಯಕತ್ವದಲ್ಲಿ ಜನ ನಂಬಿಕೆಯನ್ನು ಇಡಬಹುದು ಹಾಗೂ ನಿಮ್ಮ ಕೊಡುಗೆಗಾಗಿ ಎದುರು ನೋಡಬಹುದು. ಆರೋಗ್ಯದ ಬಗ್ಗೆ ನಿರ್ಲಕ್ಷ್ಯ ಮಾಡಬಾರದು. ಸಂಗಾತಿಯ ಜೊತೆ ಕಲಹ ಸೃಷ್ಟಿಸಿಕೊಳ್ಳಬೇಡಿ. 

ಸಿಂಹ ರಾಶಿ
ಸೂರ್ಯನು ನಿಮ್ಮಿಂದ ಹನ್ನೆರಡು ಮನೆಗಳಷ್ಟು ದೂರದಲ್ಲಿರುವುದರಿಂದ ನೀವು ಸ್ವಲ್ಪ ಆರೋಗ್ಯದ ಕಡೆಗೆ ಹೆಚ್ಚಿನ ಗಮನ ಕೊಡಬೇಕಾದೀತು. ಧ್ಯಾನ ,ಯೋಗ, ಜಪ ಮುಂತಾದವುಗಳನ್ನು ತಪ್ಪದೆ ಮಾಡಿ. ಯಾಕೆಂದರೆ ಇವು ನಿಮ್ಮ ಆರೋಗ್ಯವನ್ನು ಕೇಂದ್ರೀಕರಿಸಲು ನೆರವಾಗುತ್ತದೆ. ಯಾವುದೇ ಆತುರದ ನಿರ್ಧಾರ ಬೇಡ.

ಕನ್ಯಾ ರಾಶಿ
ನಿಮ್ಮ ಆರ್ಥಿಕ ಪರಿಸ್ಥಿತಿ ಸುಧಾರಿಸಬಹುದು. ಇದಕ್ಕೆ ಹಲವು ಕಾರಣಗಳಿರುತ್ತವೆ. ಸೂರ್ಯನು ಹನ್ನೊಂದನೇ ಮನೆಯಲ್ಲಿದ್ದರೂ ಅನುಗ್ರಹಕಾರಕನಾಗಿರುತ್ತಾನೆ. ನಿಮ್ಮ ಕೆಲಸಕ್ಕೆ ತಕ್ಕ ಮಾನ್ಯತೆಯನ್ನು ಪಡೆಯುತ್ತೀರಿ. ನಿಮ್ಮ ಪ್ರಣಯ ಜೀವನವು ಹೆಚ್ಚಿನ ಸಂತೋಷವನ್ನು  ಕೊಡಲಿದೆ. ದೀರ್ಘಕಾಲದ ಅನಾರೋಗ್ಯಗಳಿಂದ ಚೇತರಿಸಿಕೊಳ್ಳಬಹುದು.

ತುಲಾ ರಾಶಿ
ಸೂರ್ಯನೇ ಹತ್ತನೇ ಮನೆಯಲ್ಲಿದ್ದು ನಿಮಗೆ ಶುಭವನ್ನೇ ಉಂಟುಮಾಡುತ್ತಾನೆ. ನಿಮಗೆ ವೃತ್ತಿಯಲ್ಲಿ ಉನ್ನತವಾದ ಸ್ಥಾನವೇ ಸಿಗಬಹುದು. ಸರ್ಕಾರಿ ಉದ್ಯೋಗ ಬಯಸುವವರಿಗೂ ಅದು ಸಿಗಬಹುದು. ಸಾಮಾಜಿಕ ಸ್ಥಾನಮಾನಗಳು ನಿಮ್ಮ ಪಾಲಾಗಬಹುದು. ಕಾರ್ಯಗಳನ್ನು ದಕ್ಷತೆಯಿಂದ ಮಾಡುವಲ್ಲಿ ನಿಮಗೆ ಶುಭವಿದೆ. 

ವೃಶ್ಚಿಕ ರಾಶಿ
ವೃತ್ತಿಯಲ್ಲಿ ನಿಮಗೆ ತೊಂದರೆ ಎದರಾಗುವ ಸೂಚನೆಗಳು ಕಾಣುತ್ತಿವೆ. ಬಾಸ್‌ಗಳನ್ನು, ಹಿರಿಯ ಸಹೋದ್ಯೋಗಿಗಳನ್ನು ಹಾಗೂ ಮನೆಯ ಹಿರಿಯರನ್ನು ಎದುರು ಹಾಕಿಕೊಳ್ಳಬೇಡಿ. ಸುಖಕರವಾದ ದಾಂಪತ್ಯ ಹಾಗೂ ಕುಟುಂಬ ಜೀವನಕ್ಕೆ ಇತರರ ಮಾತನ್ನು ಕೇಳುವುದೂ ಅನೇಕ ಸಲ ಒಳ್ಳೆಯದು. ಸಂಗಾತಿಗಳ ಜೊತೆಗೆ ಜಗಳ ಬೇಡ.

ನಿತ್ಯ ಪಂಚಾಂಗ: ಕರ್ಕಾಟಕ ರಾಶಿಗೆ ಸೂರ್ಯನ ಪ್ರವೇಶ: ಇಲ್ಲಿದೆ ದಕ್ಷಿಣಾಯನದ ಮಹತ್ವ 

ಧನು ರಾಶಿ
ಹಣಕಾಸು ಈ ಸಮಯದಲ್ಲಿ ನಿಮ್ಮ ಕೈಯಲ್ಲಿ ನಿಲ್ಲಲಾರದು. ಆದ್ದರಿಂದ ಹಣಕಾಸು ನಿರ್ವಹಣೆಯನ್ನು ಸಂಗಾತಿಗಳಿಗೆ ಬಿಡುವುದು ಉತ್ತಮ. ವೃತ್ತಿಜೀವನ ಆರಕ್ಕೆ ಏರದೆ ಮೂರಕ್ಕೆ ಇಳಿಯದೆ ನಡೆಯುತ್ತಿರುತ್ತದೆ. ಕೆಲವು ನಿರ್ಧಾರಗಳನ್ನು ತೆಗೆದುಕೊಳ್ಳಬೇಕಾದೀತು. ಸೂರ್ಯನ ಚಲನೆಯು ನಿಮ್ಮ ಮನಶ್ಶಾಂತಿಗೆ ಕೆಲವೊಮ್ಮೆ ಬಾಧಕವಾಗುವಂತೆ ಇರಬಹುದು.

ಅಪರಾಧಿಯಾಗಲು ಜಾತಕದ ಈ ಗ್ರಹಗಳೇ ಕಾರಣ! 

ಮಕರ ರಾಶಿ
ಪ್ರಯಾಣದಲ್ಲಿ ಸಮಸ್ಯೆ ಎದುರಾದೀತು ಆದ್ದರಿಂಧ ಪ್ರಯಾಣ ಬೇಡ. ಹಾಗೇ ನಿಮ್ಮ ಸಂಗಾತಿಗಳ ಆರೋಗ್ಯದ ಬಗ್ಗೆ ಒಂದು ಕಣ್ಣು ಇಟ್ಟಿರಿ. ನಿಮ್ಮ ಸ್ಪರ್ಧಿಗಳ ಬಗ್ಗೆಯೂ ಒಂದು ಕಣ್ಣು ಇಟ್ಟಿರಿ. ಕೆಲವು ಕಾರ್ಯಗಳಲ್ಲಿ ವಿಳಂಬ ಉಂಟಾಗಬಹುದು. ಆದರೆ ವೃತ್ತಿಯಲ್ಲಿ ಮತ್ತು ಪಾಲುದಾರಿಕೆ ವ್ಯವಹಾರದಲ್ಲಿ ಸ್ವಲ್ಪ ನಷ್ಟ ಉಂಟಾಗಬಹುದಾದರೂ ಅದು ತಾತ್ಕಾಲಿಕ.

ಕುಂಭ ರಾಶಿ
ಸೂರ್ಯ ಆರನೇ ಸ್ಥಾನದಲ್ಲಿದ್ದು ನಿಮಗೆ ಶುಭವನ್ನು ಒದಗಿಸುತ್ತಿರುತ್ತಾನೆ. ನಿಮ್ಮ ನಾಯಕತ್ವ ಗುಣಗಳು ಹಾಗೂ ಪೈಪೋಟಿಯ ಗುಣಗಳು ಹೆಚ್ಚು ತೀವ್ರವಾಗಿರುತ್ತವೆ. ಹೆಚ್ಚಿನ ಉದ್ಯೋಗಾವಕಾಶ ಸಿಗಬಹುದು. ಕೆರಿಯರ್‌ನಲ್ಲಿ ಉಜ್ವಲ ಅವಕಾಶ ದೊರೆಯಬಹುದು. ಆರೋಗ್ಯ ಉತ್ತಮವಾಗಿರುತ್ತದೆ. ಸಂಗಾತಿಯನ್ನು ಚೆನ್ನಾಗಿ ನೋಡಿಕೊಳ್ಳಿ.

ನಿಮ್ಮ ರಾಶಿಗೆ ಇವರು ಆರೋಗ್ಯ ದೇವತೆ! 

ಮೀನ ರಾಶಿ
ಸೂರ್ಯನು ಐದನೇ ಮನೆಯಲ್ಲಿದ್ದು ನಿಮ್ಮ ಮೇಲೆ ತನ್ನ ಪ್ರಖರ ಕಿರಣಗಳನ್ನು ಬೀರುವುದರಿಂದ, ಸ್ವಲ್ಪ ಸಂಕಷ್ಟದ ಸನ್ನಿವೇಶ ಉಂಟಾಗಬಹುದು. ಕುಟುಂಬ ಜೀವನದಲ್ಲಿ ಕಿರಿಕಿರಿ, ವೈಮನಸ್ಯ, ಕೋಪ., ಕಲಹ ಉಂಟಾಗಬಹುದು. ನಿಮ್ಮ ವರ್ತನೆಗಳಲ್ಲಿ ಕೊಂಚ ನಯ ನಾಜೂಕು ಅಳವಡಿಸಿಕೊಳ್ಳಿ. ಶತ್ರುಗಳನ್ನು ಕೆಣಕಬೇಡಿ, ಯಾರನ್ನೂ ಶತ್ರುಗಳನ್ನಾಗಿ ಮಾಡಿಕೊಳ್ಳಬೇಡಿ.
 

click me!