ರಾಯ​ಚೂರು: ರಾಯರ ಮ​ಠ​ದಲ್ಲಿ ಸುದ​ರ್ಶನ ಹೋಮ, ತಪ್ತ ಮುದ್ರಾಧಾರಣೆ

By Kannadaprabha News  |  First Published Jul 14, 2023, 9:15 PM IST

ಏಕಾ​ದಶಿ ಹಿನ್ನೆ​ಲೆ​ಯ​ಲ್ಲಿ ಶ್ರೀಮ​ಠದ ಪ್ರಾಕಾ​ರ​ದಲ್ಲಿ ಸುದ​ರ್ಶನ ಹೋಮ​ವನ್ನು ಮಾಡ​ಲಾ​ಯಿತು. ಮಂತ್ರಾ​ಲ​ಯದ ಶ್ರೀರಾ​ಘ​ವೇಂದ್ರ ಸ್ವಾಮಿ​ಗಳ ಮಠದ ಪೀಠಾ​ಧಿ​ಪತಿ ಡಾ.ಸು​ಬು​ಧೇಂದ್ರ ತೀರ್ಥರು ಸುದ​ರ್ಶನ ಹೋಮ​ದಲ್ಲಿ ಪಾಲ್ಗೊಂಡು ಪೂರ್ಣಾ​ಹುತಿ ಕಾರ್ಯ​ವನ್ನು ನಡೆ​ಸಿ​ಕೊ​ಟ್ಟರು. ನಂತರ ಶಿಷ್ಯ​ವೃಂದಕ್ಕೆ, ಭಕ್ತ​ರಿಗೆ ಶ್ರೀಗಳು ತಪ್ತ ಮುದ್ರಾ​ಧಾ​ರ​ಣೆ​ ಮಾಡಿ ಆಶೀ​ರ್ವ​ದಿ​ಸಿ​ದರು.


ರಾಯ​ಚೂರು(ಜು.14):  ಇಲ್ಲಿನ ಜವಾಹರ​ನ​ಗರದಲ್ಲಿ​ರುವ ನಂಜ​ನ​ಗೂಡು ಶ್ರೀರಾ​ಘ​ವೇಂದ್ರ ಸ್ವಾಮಿ​ಗಳ ಶಾಖಾ ಮಠ​ದಲ್ಲಿ ಆಶಾಡ ಏಕಾ​ದಶಿ ನಿಮಿತ್ತ ವಿವಿಧ ಧಾರ್ಮಿಕ ಕಾರ್ಯ​ಕ್ರ​ಮ​ಗ​ಳನ್ನು ಗುರು​ವಾರ ನಡೆ​ಸ​ಲಾ​ಯಿತು. ಏಕಾ​ದಶಿ ಹಿನ್ನೆ​ಲೆ​ಯ​ಲ್ಲಿ ಶ್ರೀಮ​ಠದ ಪ್ರಾಕಾ​ರ​ದಲ್ಲಿ ಸುದ​ರ್ಶನ ಹೋಮ​ವನ್ನು ಮಾಡ​ಲಾ​ಯಿತು. ಮಂತ್ರಾ​ಲ​ಯದ ಶ್ರೀರಾ​ಘ​ವೇಂದ್ರ ಸ್ವಾಮಿ​ಗಳ ಮಠದ ಪೀಠಾ​ಧಿ​ಪತಿ ಡಾ.ಸು​ಬು​ಧೇಂದ್ರ ತೀರ್ಥರು ಸುದ​ರ್ಶನ ಹೋಮ​ದಲ್ಲಿ ಪಾಲ್ಗೊಂಡು ಪೂರ್ಣಾ​ಹುತಿ ಕಾರ್ಯ​ವನ್ನು ನಡೆ​ಸಿ​ಕೊ​ಟ್ಟರು. ನಂತರ ಶಿಷ್ಯ​ವೃಂದಕ್ಕೆ, ಭಕ್ತ​ರಿಗೆ ಶ್ರೀಗಳು ತಪ್ತ ಮುದ್ರಾ​ಧಾ​ರ​ಣೆ​ ಮಾಡಿ ಆಶೀ​ರ್ವ​ದಿ​ಸಿ​ದರು.

ಈ ವೇಳೆ ಭಕ್ತ​ರಿಗೆ ಅನು​ಗ್ರಹ ಸಂದೇಶ ನೀಡಿದ ಶ್ರೀಗ​ಳು, ಭಗವಂತನ ಚಿಹ್ನೆಗಳುಳ್ಳ ತಪ್ತ ಮುದ್ರಾಧಾರಣೆಯಿಂದ ಪರ​ಮಾ​ತ್ಮನ ಅನುಗ್ರಹ ಪ್ರಾಪ್ತಿಯಾಗುತ್ತದೆ. ಎಂದು ಹಲ​ವಾರು ಯತಿಗಳು, ವಿದ್ವಾಂಸರು ತಮ್ಮ ಗ್ರಂಥಗಳಲ್ಲಿ ಉಲ್ಲೇಖಿಸಿದ್ದಾರೆ. ಭಗವಂತನಾದ ಶ್ರೀವಿಷ್ಣುವಿನ ಚಿಹ್ನೆಗಳಾದ ಶಂಖ, ಚಕ್ರ, ಗಧಾ, ಪದ್ಮ ಮುಂತಾದ ಪಂಚ ಮುದ್ರೆಗಳಿದ್ದು ಅದರಲ್ಲಿ ಕೆಲವು ಮಠಗಳ ಶಿಷ್ಯರು ಐದು ಮುದ್ರೆ ಧಾರಣೆ ಮಾಡುತ್ತಾರೆ. ಕೆಲವು ಮಠಗಳ ಶಿಷ್ಯರು ಎರೆಡು ಮುದ್ರೆ ಧರಿಸುತ್ತಾರೆ. ಅದು ಅವರವರ ಆಚರಣೆ ಪದ್ಧತಿ ಒಟ್ಟಾರೆ ವೈಷ್ಣವರು ಆದವರು ಭಗವಂತನ ಚಿಹ್ನೆಗಳನ್ನು ದಿನ ನಿತ್ಯ ಸಂಧ್ಯಾವಂದನೆ ವೇಳೆ ಗೋಪಿಚಂದನ ನಿಂದ ಮುಖದಲ್ಲಿ ಮುದ್ರೆ ಧರಿಸುತ್ತಾರೆ ಎಂದರು.

Latest Videos

undefined

ಚಿತ್ತಾಪುರ: ಕೋಳಿ ಎಸೆದು ಹರಕೆ ತೀರಿಸಿದ್ದ ಭಕ್ತರು..!

ಮುದ್ರಾಧಾರಣೆಯಿಂದ ಸಕಲ ಶ್ರೇಯಸ್ಸು ಲಭಿಸುತ್ತದೆ. ಆರೋಗ್ಯ ವೃದ್ಧಿ ಆಗುತ್ತದೆ. ದುಶ್ಚಟ ದೂರವಾಗುತ್ತವೆ. ದುಷ್ಟಶಕ್ತಿಗಳ ಉಪಟಳ ನಿವಾರಣೆಯಾಗುತ್ತದೆ. ಹೀಗೆ ಅನೇಕ ಪ್ರಯೋಜನವಿದ್ದು ಶಾಸ್ತ್ರದಲ್ಲಿ ಮುದ್ರಾಧಾರಣೆಗೆ ವಿಶೇಷ ಮಹತ್ವವಿದೆ ಎಂದು ನುಡಿದ ಅವರು, ಚಾತುರ್ಮಾಸದಲ್ಲಿ ಮೇಲಾಗಿ ಏಕಾದಶಿಯಂದು ಮುದ್ರಾಧಾರಣೆಗೆ ಹೆಚ್ಚಿನ ಪ್ರಾಮುಖ್ಯತೆಯಿದೆ ಎಂದು ರಾಯರ ಮಠದ ಪೀಠಾ​ಧಿ​ಪತಿ ಡಾ.ಸು​ಬು​ಧೇಂದ್ರ ತೀರ್ಥರು ನುಡಿ​ದ​ರು.
ಈ ಸಂದರ್ಭದಲ್ಲಿ ​ಶ್ರೀ​ಮ​ಠದ ವಿದ್ವಾನ್‌ ವಾದಿರಾಜಾಚಾರ್‌, ಕಿನ್ನಾಳ ನಾರಾಯಣಾಚಾರ್‌, ವ್ಯವಸ್ಥಾಪಕ ದ್ವಾರಕಾನಾಥ್‌ ಆಚಾರ್‌, ಪವನ ಆಚಾರ್‌ ಕುರ್ಡಿ ಸೇರಿ ಮಠದ ಪಂಡಿ​ತರು, ವಿದ್ವಾಂಸರು, ಶಿಷ್ಯರು, ಮಹಿ​ಳೆ​ಯರು, ಭಕ್ತರು ಭಾಗ​ವ​ಹಿ​ಸಿ​ದ್ದರು.

click me!