Astrology 2022: ಆರೋಗ್ಯ ಚೆನ್ನಾಗಿರ್ಬೇಕು ಅಂದ್ರೆ ಹೀಗೆ ನಿಮ್ಮ ಗ್ರಹಗಳನ್ನು ಬಲಪಡಿಸಿಕೊಳ್ಳಿ..

By Suvarna News  |  First Published Mar 9, 2022, 11:19 AM IST

ಆರೋಗ್ಯದಲ್ಲಿ ಸಮಸ್ಯೆಗಳೆದ್ದಾಗ ಯಾವ ಗ್ರಹ ಜಾತಕದಲ್ಲಿ ದುರ್ಬಲವಾಗಿದೆ ಎಂಬ ಕಡೆ ಗಮನ ಹರಿಸಿ. ಅದನ್ನು ಬಲವಾಗಿಸಿಕೊಳ್ಳುವ ಕ್ರಮ ಕೈಗೊಳ್ಳಬೇಕು. ಆರೋಗ್ಯಕ್ಕಾಗಿ ನಿಮ್ಮ ಕುಂಡಲಿಯ ಗ್ರಹಗಳನ್ನು ಬಲಪಡಿಸಿಕೊಳ್ಳುವುದು ಹೀಗೆ..


ಉತ್ತಮ ಜೀವನಶೈಲಿ(lifestyle)ಯು ಹೇಗೆ ಉತ್ತಮ ಆರೋಗ್ಯ(good health)ಕ್ಕೆ ಕಾರಣವಾಗುತ್ತದೆಯೋ ಉತ್ತಮ ಆರೋಗ್ಯವು ಕೂಡಾ ಉತ್ತಮ ಜೀವನಶೈಲಿಗೆ ಕಾರಣವಾಗುತ್ತದೆ. ನೀವು ಆರೋಗ್ಯವಾಗಿಲ್ಲದಿದ್ದರೆ, ಯಾವ ಕೆಲಸ ಮಾಡಲೂ ಮನಸ್ಸಿರುವುದಿಲ್ಲ. ಈಗಂತೂ ಪ್ರತಿ ಮನೆಯಲ್ಲೂ ಒಬ್ಬರಲ್ಲಾ ಒಬ್ಬರು ಅಸ್ವಸ್ಥರಿರುತ್ತಾರೆ. ಅವರೇಕೆ ದೀರ್ಘಕಾಲ ಅನಾರೋಗ್ಯದಿಂದ ಬಳಲುತ್ತಿದ್ದಾರೆ ಎಂಬುದರ ಬಗ್ಗೆ ನಾವು ಗಮನ ಹರಿಸುವುದಿಲ್ಲ. ಆದರೆ, ಈ ಸಮಯದಲ್ಲೇ ಅರ ಜಾತಕದಲ್ಲಿ ಯಾವ ಗ್ರಹವು ದುರ್ಬಲವಾಗಿದೆ ಎಂಬುದನ್ನು ನೀವು ಗಮನಿಸಬೇಕಾಗಿರುವುದು. ಆ ಗ್ರಹವನ್ನು ಬಲಪಡಿಸಲು ಯಾವ ಕ್ರಮಗಳನ್ನು ತೆಗೆದುಕೊಳ್ಳಬೇಕು. ಈ ಸಣ್ಣ ಕ್ರಮಗಳನ್ನು ಮಾಡಿದರೆ, ಉತ್ತಮ ಆರೋಗ್ಯವನ್ನು ಪಡೆಯುತ್ತೀರಿ. ಮನೆಯಲ್ಲಿ ಎಲ್ಲರೂ ಆರೋಗ್ಯವಾಗಿದ್ದರಷ್ಟೇ ಸಮಾದಾನ, ನೆಮ್ಮದಿ ಸಾಧ್ಯವಲ್ಲವೇ?

ಸೂರ್ಯ ಗ್ರಹ(Sun)
ಮೆದುಳು(brain), ಮೂಳೆಗಳು, ಕಣ್ಣುಗಳು ಅಥವಾ ಬೆನ್ನುಹುರಿಗೆ ಸಂಬಂಧಿಸಿದ ಸಮಸ್ಯೆ ನಿಮಗಿದ್ದರೆ, ನಿಮ್ಮ ಸೂರ್ಯಗ್ರಹವು ದುರ್ಬಲವಾಗಿರುತ್ತದೆ. ಸೂರ್ಯನನ್ನು ಬಲಪಡಿಸಲು ಪ್ರತಿದಿನ ಸೂರ್ಯನಿಗೆ ಅರ್ಘ್ಯ ಅರ್ಪಿಸಿ. ಭಾನುವಾರ(Sunday)ದಂದು ಧಾರ್ಮಿಕ ಸ್ಥಳಗಳಿಗೆ ಭೇಟಿ ನೀಡಿ ಇಡಿ ಗೋಧಿ(wheat) ಅಥವಾ ಹಿಟ್ಟನ್ನು ದಾನ ಮಾಡಿ. ಇದು ನಿಮ್ಮ ಜಾತಕದಲ್ಲಿ ಸೂರ್ಯನ ಗ್ರಹವನ್ನು ಬಲಪಡಿಸುತ್ತದೆ ಮತ್ತು ನಿಮಗೆ ಉತ್ತಮ ಆರೋಗ್ಯವನ್ನು ನೀಡುತ್ತದೆ.

Tap to resize

Latest Videos

ದುರ್ಬಲ ಮಂಗಳ(Mars)
ನೀವು ಅಥವಾ ನಿಮ್ಮ ಮಗುವಿಗೆ ಪದೇ ಪದೆ ಏಟುಗಳಾಗುತ್ತಿದ್ದರೆ, ಗಾಯಗಳನ್ನು ಮಾಡಿಕೊಳ್ಳುತ್ತಿದ್ದರೆ, ಪದೇ ಪದೆ ಜ್ವರ ಬರುವುದು, ಊತ ಕಾಣಿಸಿಕೊಳ್ಳುತ್ತಿದ್ದರೆ, ದೇಹ ಕೆಂಪಾಗಿ ಬಿಸಿಯಾಗಿದ್ದರೆ ಮಂಗಳ ದುರ್ಬಲನಾಗಿದ್ದಾನೆ ಎಂದರ್ಥ. ಮಂಗಳನನ್ನು ಬಲಪಡಿಸಲು ಹೀಗೆ ಮಾಡಿ. 
ನೀರಿಗೆ ಸ್ವಲ್ಪ ಸಕ್ಕರೆ ಹಾಕಿ ಸೂರ್ಯ ದೇವನಿಗೆ ಅರ್ಪಿಸಿ. ಮಂಗಳವಾರ ಆಂಜನೇಯ(Hanuman ji) ದೇವಾಲಯಕ್ಕೆ ಭೇಟಿ ನೀಡಿ ಆಂಜನೇಯನ ಪಾದತಳದಲ್ಲಿರುವ ಕುಂಕುಮವನ್ನು ಹಚ್ಚಿಕೊಳ್ಳಿ. 8 ವರ್ಷಕ್ಕಿಂತ ಕಡಿಮೆ ವಯಸ್ಸಿನ ಹೆಣ್ಣುಮಕ್ಕಳಿಗೆ ಆಹಾರ ನೀಡಿ. ಇದರಿಂದ ಮಂಗಳ ಬಲವಾಗುತ್ತಾನೆ. 

Putin Kundli: ಅಣ್ವಸ್ತ್ರ ಮಹಾಯುದ್ಧ ನಡೆಯುತ್ತಾ? ಪುಟಿನ್ ಜಾತಕ ಏನನ್ನುತ್ತೆ?

ಗುರು(Jupiter planet) ದುರ್ಬಲನಾಗಿದ್ದಾಗ
ಜಾತಕದಲ್ಲಿ ಗುರು ದುರ್ಬಲನಾದಾಗ ಲಿವರ್‌ಗೆ ಸಂಬಂಧಿಸಿದ ಸಮಸ್ಯೆಗಳು ಎದುರಾಗುತ್ತವೆ. ಅಂಥ ಸಂದರ್ಭದಲ್ಲಿ ಅರಿಶಿನ, ಹಳದಿ ಬಣ್ಣದ ಧಾನ್ಯಗಳು ಹಾಗೂ ಪುಸ್ತಕಗಳನ್ನು ದಾನ ಮಾಡಬೇಕು. ಇವರು ಕೈಗೆ ಹಳದಿ ಹಾಗೂ ಕೇಸರಿ ಬಣ್ಣದ ದಾರ ಧರಿಸಬೇಕು. ಹಣೆ, ಹೃದಯ ಹಾಗೂ ಹೊಕ್ಕಳಿಗೆ ಕೇಸರಿ ಹಚ್ಚಿಕೊಳ್ಳಬೇಕು. ಇದರಿಂದ ಆರೋಗ್ಯ ಸುಧಾರಿಸುತ್ತದೆ. 

ದುರ್ಬಲ ಚಂದ್ರ (moon)
ಚಂದ್ರನು ದುರ್ಬಲನಾಗಿದ್ದಾಗ ಮಾನಸಿಕ ಒತ್ತಡ ಹಾಗೂ ಹೃದಯ ಸಂಬಂಧಿ ಸಮಸ್ಯೆಗಳು ಹೆಚ್ಚುತ್ತವೆ. ಅಂಥವರು ತೆಂಗಿನಕಾಯಿಯನ್ನು ಸೇವಿಸಬೇಕು. ಮನೆಯಲ್ಲಿ ನವಿಲುಗರಿ ಇಟ್ಟುಕೊಳ್ಳಬೇಕು ಹಾಗೂ ಬಿಳಿ ವಸ್ತುಗಳನ್ನು ದಾನ ಮಾಡಬೇಕು. ಅಮ್ಮ ಇಲ್ಲವೇ ಚಿಕ್ಕಮ್ಮನಿಂದ ಬೆಳ್ಳಿಯ ಚೈನ್ ತೆಗೆದುಕೊಂಡು ಕತ್ತಿನ ಸುತ್ತ ಹಾಕಿಕೊಳ್ಳಿ. 

Holi 2022: ಕಾಮ ದಹನದ ದಿನ ಈ ಒಂದು ಕೆಲ್ಸ ಮಾಡಿ ನೋಡಿ

ದುರ್ಬಲ ಶುಕ್ರ(Venus)
ಶುಕ್ರ ದುರ್ಬಲನಾಗಿದ್ದಾಗ ಜೀರ್ಣಾಂಗ ಸಮಸ್ಯೆಗಳು ಹಾಗೂ ಮೂತ್ರ ಸಂಬಂಧಿ ಸಮಸ್ಯೆಗಳು ಎದುರಾಗುತ್ತವೆ. ಹೀಗೊಂದು ವೇಳೆ ನಿಮಗೂ ಆಗುತ್ತಿದ್ದರೆ ಹೆಬ್ಬೆರಳಿಗೆ ಬೆಳ್ಳಿಯ ಉಂಗುರ ಧರಿಸಿ ಗಾಯತ್ರಿ ಮಂತ್ರ ಹೇಳಿಕೊಳ್ಳಿ. ಇದಕ್ಕಾಗಿ ನೀವು ಹಾಲಿಗೆ ನಿಂಬೆರಸ ಹಾಕಿ ಒಡೆದ ಹಾಲನ್ನು ಮಲಗುವ ಮುನ್ನ ಕುಡಿಯಬೇಕು. 

ದುರ್ಬಲ ಶನಿ(Saturn)
ಶನಿ ದುರ್ಬಲನಾಗಿದ್ದಾಗ ದೇಹದಲ್ಲಿ ಸಿಕ್ಕಾಪಟ್ಟೆ ವಿಷ ಶೇಖರಣೆಯಾಗುತ್ತದೆ, ಉದರ ಸಂಬಂಧಿ ಸಮಸ್ಯೆಗಳಿರಬೇಕು. ಇದಕ್ಕಾಗಿ ಉದ್ದಿನ ಬೇಳೆಯ ಕಿಚಡಿಯನ್ನು ಶನಿವಾರದಂದು ದಾನ ಮಾಡಿ. ನಿಮ್ಮ ಆಹಾರಕ್ಕೆ ಕರಿಮೆಣಸು ಹಾಗೂ ಕಪ್ಪು ಉಪ್ಪು ಹಾಕಿ ಸೇವಿಸಿ. 

ದುರ್ಬಲ ಬುಧ(Mercury)
ಬುಧ ದುರ್ಬಲನಾಗಿದ್ದಾಗ ನರಕ್ಕೆ ಸಂಬಂಧಿಸಿದ ಸಮಸ್ಯೆಗಳಿರುತ್ತವೆ. ಜೊತೆಗೆ ಕೂದಲು ಹಾಗೂ ಚರ್ಮ ಸಮಸ್ಯೆಗಳೂ ಇರುತ್ತವೆ. ಇದರಿಂದ ಮುಕ್ತಿ ಹೊಂದಲು ಇರುವೆ ಹಾಗೂ ಬೆಕ್ಕುಗಳಿಗೆ ಆಹಾರ ನೀಡಿ. ಮಾತು ಕಡಿಮೆ ಮಾಡಿ. ಜೇನುತುಪ್ಪವನ್ನು ಖಾಲಿ ನೆಲದ ಮೇಲೆ ಹರಡಿ. 

click me!