Daily Horoscope: ಸಿಂಹಕ್ಕೆ ವ್ಯಾಕುಲತೆ, ವೃಶ್ಚಿಕಕ್ಕೆ ನಿರಾಸೆ

Published : Mar 09, 2022, 07:10 AM IST
Daily Horoscope: ಸಿಂಹಕ್ಕೆ ವ್ಯಾಕುಲತೆ, ವೃಶ್ಚಿಕಕ್ಕೆ ನಿರಾಸೆ

ಸಾರಾಂಶ

9 ಮಾರ್ಚ್ 2022, ಬುಧವಾರದ ಭವಿಷ್ಯ ಹೇಗಿದೆ? ಯಾವ ರಾಶಿಗೆ ಶುಭ ಫಲವಿದೆ? ಮೀನಕ್ಕೆ ಹೆಚ್ಚುವ ಆತ್ಮವಿಶ್ವಾಸ

ಮೇಷ(Aries): ಆರೋಗ್ಯ ಸಮಸ್ಯೆ ಹೆಚ್ಚಲಿದೆ. ದೂರದ ಸ್ನೇಹಿತರ ಸಹಕಾರದಿಂದ ಕೆಲ ಕಾರ್ಯಗಳು ಯಶಸ್ವಿಯಾಗಲಿವೆ. ಕೆಟ್ಟ ಚಟಗಳಿಂದ ಗೌರವ ಹಾಳು ಮಾಡಿಕೊಳ್ಳುವ ಸಾಧ್ಯತೆ ಇದೆ. ಪಾಲುದಾರಿಕೆಯಲ್ಲಿ ವಂಚನೆ ಸಾಧ್ಯತೆ. ಪ್ರಯಾಣದಲ್ಲಿ ತೊಡಕುಗಳು ಹೆಚ್ಚಬಹುದು. ಗಣಪತಿ ಸ್ಮರಣೆ ಮಾಡಿ. 

ವೃಷಭ(Taurus): ಕೇವಲ ಮತ್ತೊಬ್ಬರ ಕ್ಷೇಮವನ್ನು ನೋಡುತ್ತಾ ನಿಮ್ಮ ಆರೋಗ್ಯ ಕಡೆಗಣಿಸದಿರಿ. ಸಂಬಂಧಿಕರ ಕಡೆಯಿಂದ ಶುಭ ಸುದ್ದಿ ಕೇಳಿ ಸಂತೋಷ ಹೆಚ್ಚುವುದು. ಸ್ವಯಂಕೃತಾಪರಾಧದಿಂದ ಮಾನಸಿಕ ವೇದನೆ. ಹಳೆಯ ಗಾಯವನ್ನೇ ಕೆರೆದುಕೊಂಡು ದೊಡ್ಡದಾಗಿಸಿಕೊಳ್ಳಬೇಡಿ. ನವಗ್ರಹ ಶ್ಲೋಕ ಹೇಳಿಕೊಳ್ಳಿ. 

ಮಿಥುನ(Gemini): ದಿನದ ಆರಂಭವು ಉತ್ತಮವಾಗಿರಲಿದೆ. ಶುಭ ಸುದ್ದಿಗಳು ಕಿವಿಗೆ ಬೀಳಲಿದೆ. ಅವಿವಾಹಿತರಿಗೆ ಯೋಗ್ಯ ಸಂಬಂಧ ಒದಗಿ ಬಂದು ಮನೆಯಲ್ಲಿ ಸಂತಸದ ವಾತಾವರಣ ಏರ್ಪಡುವುದು. ಧೈರ್ಯ, ಆತ್ಮವಿಶ್ವಾಸ ಹೆಚ್ಚಲಿದೆ. ಗಣಪತಿ ಆರಾಧನೆ ಮಾಡಿ. 

ಕಟಕ(Cancer): ಮಾಡದ ತಪ್ಪಿಗೆ ಅಪವಾದ ಎದುರಿಸಬೇಕಾಗಬಹುದು. ಅಲ್ಪ ಆದಾಯ. ಎಲೆಕ್ಟ್ರಾನಿಕ್ ಉಪಕರಣಗಳು ರಿಪೇರಿಗೆ ಬಂದು ಕಿರಿಕಿರಿಯಾಗಬಹುದು. ಕೆಲಸಗಳು ನಿಧಾನಗತಿಯಲ್ಲಿ ಸಾಗಲಿವೆ. ನಿಮ್ಮ ಹಟಮಾರಿತನದಿಂದ ಕುಟುಂಬಕ್ಕೆ ಸಮಸ್ಯೆಗಳು ಹೆಚ್ಚಬಹುದು. ಕೋಪ ನಿಯಂತ್ರಿಸಿಕೊಳ್ಳಿ. ಗಣಪತಿಗೆ 21 ದರ್ಬೆ ಅರ್ಪಿಸಿ. 

ಸಿಂಹ(Leo): ಮನಸ್ಸು ವ್ಯಾಕುತಲೆಗೊಳಗಾಗಿ, ಎಲ್ಲ ವಿಷಯಕ್ಕೂ ಕೋಪ ಬರಬಹುದು. ಕಚೇರಿಯಲ್ಲಿ ಕೆಲಸಗಳು ಹೆಚ್ಚಲಿವೆ. ಜವಾಬ್ದಾರಿ ಬದಲಾಗಬಹುದು. ವ್ಯಾಪಾರ, ವ್ಯವಹಾರಗಳಲ್ಲಿ ಅಲ್ಪಲಾಭವಿರಲಿದೆ. ಏನೇ ಪ್ರಯತ್ನ ಹಾಕಿದರೂ ಫಲ ದೊರೆಯುತ್ತಿಲ್ಲವಲ್ಲ ಎನಿಸಬಹುದು. ವಿನಾಯಕನಿಗೆ ಕಡಲೆ ನೈವೇದ್ಯ ಮಾಡಿ. 

ಕನ್ಯಾ(Virgo): ಸಹೋದರರ ಸಹಕಾರದಿಂದ ಗೃಹ ಕಾರ್ಯಗಳು ಸುಲಭವಾಗುವುವು. ಪ್ರಗತಿಯ ಹಲವು ಮಾರ್ಗಗಳು ತೆರೆಯಲಿವೆ. ಸಂಗಾತಿಯೊಂದಿಗೆ ಮೌನ ಯುದ್ಧ ನಡೆಯಬಹುದು. ಕಚೇರಿಯಲ್ಲಿ ಕೆಲಸಗಳು ಹೆಚ್ಚಲಿವೆ. ಮನೆದೇವರಿಗೆ ತುಪ್ಪದ ದೀಪ ಹಚ್ಚಿ.

ಕುಜದೋಷ ನಿವಾರಿಸುವ ತಾಮ್ರ, ಯಾರೆಲ್ಲ ಧರಿಸಬಹುದು?

ತುಲಾ(Libra): ಸಣ್ಣಪುಟ್ಟ ವಿಷಯವನ್ನೇ ದೊಡ್ಡದಾಗಿ ಎಳೆದಾಡಿ ಮನಃಶಾಂತಿ ಹಾಳು ಮಾಡಿಕೊಳ್ಳುವಿರಿ. ಇಂದು ಹೊರ ಹೋಗುವಾಗ ಅತ್ಯಂತ ಜಾಗರೂಕರಾಗಿರಿ. ವಸ್ತು ನಷ್ಟ ಸಾಧ್ಯತೆ ಇದೆ. ಇಡೀ ದಿನ ಮೈಯ್ಯೆಲ್ಲ ಕಣ್ಣಾಗಿರಿ. ವ್ಯಾಪಾರಿಗಳಿಗೆ ನಷ್ಟ. ಖಿನ್ನತೆ ಆವರಿಸಬಹುದು. ಕುಲದೇವರ ಸ್ಮರಣೆ ಮಾಡಿ. 

ವೃಶ್ಚಿಕ(Scorpio): ಸ್ವಯಂಕೃತಾಪರಾಧದಿಂದ ಮಾನಸಿಕ ವೇದನೆಗಳು ಹೆಚ್ಚಲಿವೆ. ಬಹಳ ನಿರೀಕ್ಷೆಯಿಟ್ಟುಕೊಂಡಿದ್ದ ವಿಷಯವೊಂದು ನಿರಾಸೆ ಮೂಡಿಸುವುದು.  ವಾಹನ ಅಪಘಾತ ಸಾಧ್ಯತೆ ಇದ್ದು ಇದು ಅಪಾಯದ ದಿನವಾಗಿದೆ. ವಾಹನ ಬಳಸದಿದ್ದರೂ ಉತ್ತಮ. ಬಡವರಿಗೆ ದಾನ ಮಾಡಿ. 

Samudrika Shastra: ಈ 'ಲಕ್ಷಣಗಳಲ್ಲಿ' ಅರ್ಧದಷ್ಟು ಗುಣವಿದ್ದರೂ ಆತನನ್ನು ಕಣ್ಣು ಮುಚ್ಚಿ ವಿವಾಹವಾಗಿ!

ಧನುಸ್ಸು(Sagittarius): ಕೆಲಸದ ಕ್ಷೇತ್ರದಲ್ಲಿ ನಿಮ್ಮ ಪ್ರತಿಸ್ಪರ್ಧಿಗಳಿಗಿಂತ ನೀವು ಮುಂದಿರುವಿರಿ. ಅದೃಷ್ಟದ ಬೆಂಬಲ ನಿಮ್ಮದಾಗಲಿದೆ. ನಿಮ್ಮ ಮಹತ್ವಾಕಾಂಕ್ಷೆ ಸಾಧನೆಗೆ ಪ್ರೇರೇಪಿಸಲಿದೆ. ವಿದ್ಯಾರ್ಥಿಗಳು ಏಕಾಗ್ರತೆಯಿಂದ ಅಭ್ಯಾಸ ಮಾಡುವರು. ಗೋ ಗ್ರಾಸ ನೀಡಿ. 

ಮಕರ(Capricorn): ಆನ್‌ಲೈನ್ ವ್ಯವಹಾರಗಳನ್ನೂ ಎರಡೆರಡು ಬಾರಿ ಪರಿಶೀಲಿಸಿ ಮುಂದುವರಿಸಿ. ನೆಂಟರಿಷ್ಟರ ನಡೆಗಳು ಮನಸ್ಸಿನಲ್ಲಿ ಕ್ಲೇಶ ಉಂಟು ಮಾಡಬಹುದು. ಬೇಡದ ಅತಿಥಿಯ ಆಗಮನವಾಗಬಹುದು. ತೀರಾ ನಂಬಿದವರಿಂದಲೇ ಮೋಸವಾಗಬಹುದು. ಪಕ್ಷಿಗಳಿಗೆ ಕಾಳು ತಿನ್ನಿಸಿ. 

ಕುಂಭ(Aquarius): ಕಚೇರಿಯಲ್ಲಾಗುವ ದೊಡ್ಡ ಬದಲಾವಣೆ ನಿಮ್ಮ ಬದುಕಿನ ಮೇಲೆ ಹೆಚ್ಚಿನ ಪರಿಣಾಮ ಬೀರುವುದು. ಇಂದು ಯಾರಿಗೂ ಸಾಲ ನೀಡಬೇಡಿ. ಅದು ಮರಳುವ ಸಾಧ್ಯತೆ ಕಡಿಮೆ. ದಾಂಪತ್ಯದಲ್ಲಿ ಅಸಮಾಧಾನ ಹೆಚ್ಚುವುದು. ಗಣಪತಿ ಶ್ಲೋಕ ಹೇಳಿಕೊಳ್ಳಿ. 

ಮೀನ(Pisces): ಪ್ರಭಾವಿ ವ್ಯಕ್ತಿಗಳ ಸಂಪರ್ಕದಿಂದ ಕಾರ್ಯ ಸಾಧನೆಯಾಗಲಿದೆ.  ಬುದ್ಧಿ ಚುರುಕಾಗಿದ್ದು, ಆತ್ಮವಿಶ್ವಾಸ ಹೆಚ್ಚಲಿದೆ. ನಿರುದ್ಯೋಗಿಗಳು ಉದ್ಯೋಗ ಅವಕಾಶಗಳು ಲಭಿಸಲಿವೆ. ಹಿಂದೆ ಮಾಡಿದ ಉತ್ತಮ ಕೆಲಸಗಳ ಫಲವಾಗಿ ಇಂದು ಸಂತೋಷವಾಗಿರಲಿದ್ದೀರಿ. ನವಗ್ರಹ ಶ್ಲೋಕ ಹೇಳಿ.

PREV
Read more Articles on
click me!

Recommended Stories

ಈ 4 ರಾಶಿಯವರಲ್ಲಿ ಒಳ್ಳೆಯದಕ್ಕಿಂತ ಕೆಟ್ಟ ಗುಣಗಳೇ ಹೆಚ್ಚು, ದ್ವೇಷ ಸಾಧಿಸೋದ್ರಲ್ಲಿ ನಿಸ್ಸೀಮರು
ಹೊಸ ವರ್ಷದಲ್ಲಿ 3 ರಾಜಯೋಗ, 3 ರಾಶಿಗೆ ಬಹಳಷ್ಟು ಹಣ