
ಶಿವಮೊಗ್ಗ (ಜು.7) : ನಗರದ ಗುಡ್ಡೇಕಲ್ಲಿನ ದೇವಸ್ಥಾನ ಆವರಣದಲ್ಲಿ ಜು.9ರಂದು ಬೆಳಗ್ಗೆ 10.30 ಗಂಟೆಗೆ ಪ್ರಪಂಚದಲ್ಲಿಯೇ ಅತ್ಯಂತ ಎತ್ತರವಾದ 151 ಅಡಿಯ ಶ್ರೀ ಬಾಲಸುಬ್ರಹ್ಮಣ್ಯ ವಿಗ್ರಹ ಶಿಲಾನ್ಯಾಸ ಕಾರ್ಯಕ್ರಮ ನಡೆಯಲಿದೆ ಎಂದು ಶ್ರೀ ಬಾಲಸುಬ್ರಹ್ಮಣ್ಯ ಟ್ರಸ್ಟ್ ಅಧ್ಯಕ್ಷ ಡಿ.ರಾಜಶೇಖರಪ್ಪ ಹೇಳಿದರು.
ಗುರುವಾರ ಪತ್ರಿಕಾಗೋಷ್ಠಿಯಲ್ಲಿ ಅವರು ಮಾತನಾಡಿ, ಗುಡ್ಡೇಕಲ್ಲಿನ ಜಾತ್ರೆ ಇಡೀ ನಾಡಿನಲ್ಲಿಯೇ ಹೆಸರಾಗಿದೆ. ಈ ಕ್ಷೇತ್ರವನ್ನು ಮತ್ತಷ್ಟುಅಭಿವೃದ್ಧಿಪಡಿಸಬೇಕು. ಪ್ರವಾಸಿ ತಾಣವನ್ನಾಗಿ ಮಾಡಬೇಕು ಎಂಬ ಉದ್ದೇಶದಿಂದ ಇಲ್ಲಿ ಅತಿ ಎತ್ತರದ ಮತ್ತು ವಿಶೇಷವಾದ ಜಗತ್ತಿನ ಗಮನ ಸೆಳೆಯುವಂತೆ ಮಾಡಲು ಬಾಲಸುಬ್ರಹ್ಮಣ್ಯ ಸ್ವಾಮಿ ವಿಗ್ರಹವನ್ನು ಪ್ರತಿಷ್ಠಾಪನೆ ಮಾಡಲಾಗುತ್ತಿದೆ. ಈ ವಿಗ್ರಹವನ್ನು ಮಲೇಶಿಯಾದ ಖ್ಯಾತ ಶಿಲ್ಪಿ ಆರ್.ತ್ಯಾಗರಾಜನ್ ನಿರ್ಮಿಸಿದ್ದಾರೆ ಎಂದು ತಿಳಿಸಿದರು.
ಕುಕ್ಕೆ ಸುಬ್ರಹ್ಮಣ್ಯ: ₹123 ಕೋಟಿ ಆದಾಯ: ರಾಜ್ಯದ ಇತಿಹಾಸದಲ್ಲೇ ಅತೀ ಹೆಚ್ಚು!
ಜು.9ರಂದು ಬೆಳಗ್ಗೆ 10.30 ಗಂಟೆಗೆ ನಡೆಯಲಿರುವ ಶಿಲಾನ್ಯಾಸ ಕಾರ್ಯಕ್ರಮ ಅಂಗವಾಗಿ ಜು.7ರಂದು ಮಹಾಗಣಪತಿ ಹೋಮ, ಜು.8ರಂದು ದೀಪಾರಾಧನೆ, ಯಾಗಶಾಲೆ ಪ್ರವೇಶ ಕಾರ್ಯಕ್ರಮಗಳು ನಡೆಯಲಿವೆ. ಮುಖ್ಯ ಅತಿಥಿಗಳಾಗಿ ಮಾಜಿ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ, ಮಾಜಿ ಉಪ ಮುಖ್ಯಮಂತ್ರಿ ಕೆ.ಎಸ್. ಈಶ್ವರಪ್ಪ, ಸಂಸದ ಬಿ.ವೈ.ರಾಘವೇಂದ್ರ, ಶಾಸಕರಾದ ಎಸ್.ಎನ್. ಚನ್ನಬಸಪ್ಪ, ಶಾರದಾ ಎಸ್. ಪೂರಾರಯ ನಾಯ್ಕ, ಬಿ.ಕೆ.ಸಂಗಮೇಶ್, ಎಸ್.ರುದ್ರೇಗೌಡ, ಡಿ.ಎಸ್. ಅರುಣ್, ಮಹಾನಗರ ಮೇಯರ್ ಶಿವಕುಮಾರ್, ಸದಸ್ಯೆ ಯಮುನಾ ರಂಗೇಗೌಡ, ಎಂ.ಶ್ರೀಕಾಂತ್, ಮೋಹನ್ ರೆಡ್ಡಿ, ಎನ್.ರಮೇಶ್, ಸಿ.ಎಸ್. ಷಡಾಕ್ಷರಿ, ಜಿಲ್ಲಾಧಿಕಾರಿ ಆರ್. ಸೆಲ್ವಮಣಿ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಜಿ.ಕೆ.ಮಿಥುನ್‌ಕುಮಾರ್ ಮತ್ತಿತರರ ಗಣ್ಯರು ಪಾಲ್ಗೊಳ್ಳಲಿದ್ದಾರೆ ಎಂದು ಮಾಹಿತಿ ನೀಡಿದರು.
.12 ಕೋಟಿ ವೆಚ್ಚದಲ್ಲಿ ಕ್ಷೇತ್ರ ಅಭಿವೃದ್ಧಿ:
151 ಅಡಿ ಎತ್ತರದ ಬಾಲಸುಬ್ರಹ್ಮಣ್ಯ ವಿಗ್ರಹದ ಪ್ರತಿಷ್ಠಾಪನೆಯೂ ಸೇರಿದಂತೆ ಸುಮಾರು .12 ಕೋಟಿ ವೆಚ್ಚದಲ್ಲಿ ಗುಡ್ಡೇಕಲ್ ಕ್ಷೇತ್ರವನ್ನು ಅಭಿವೃದ್ಧಿಪಡಿಸಲಾಗುವುದು. ಒಂದು ಸುಂದರ ಪ್ರವಾಸಿ ತಾಣವನ್ನಾಗಿ ಮಾಡಲಾಗುವುದು. ಈಗಾಗಲೇ ದೇವಸ್ಥಾನದಲ್ಲಿ ಮೂರು ಸಮುದಾಯ ಭವನಗಳಿವೆ. ಅತ್ಯಂತ ಬಡವರಿಗೆ ಕಡಿಮೆ ದರದಲ್ಲಿ ಮದುವೆ ಮತ್ತಿತರ ಕಾರ್ಯಗಳಿಗೆ ನೀಡುತ್ತಿದ್ದೇವೆ. ಪ್ರತಿ ಮಂಗಳವಾರ ಷಷ್ಠಿ, ಕೃತಿಕೆ ಮತ್ತು ವಿಶೇಷ ದಿನಗಳಂದು ಅನ್ನದಾಸೋಹ ಇರುತ್ತದೆ. ಈ ಅನ್ನ ದಾಸೋಹವನ್ನು ಪ್ರತಿ ದಿನವೂ ಏರ್ಪಡಿಸಬೇಕು ಎಂಬ ಇಚ್ಛೆ ನಮಗಿದೆ. ಹಾಗೆಯೇ ಸರ್ಕಾರ ಮತ್ತು ಪ್ರವಾಸೋದ್ಯಮ ಇಲಾಖೆಯ ಸಹಕಾರದಲ್ಲಿ ಇಲ್ಲಿ ಮತ್ತಷ್ಟುಜನೋಪಯೋಗಿ ಕಾರ್ಯಕ್ರಮಗಳನ್ನು ನಿರಂತರವಾಗಿ ಏರ್ಪಡಿಸುವ ಉದ್ದೇಶ ಹೊಂದಿದ್ದೇವೆ. ವೃದ್ಧಾಶ್ರಮ, ಅನಾಥ ಮಕ್ಕಳಿಗೆ ವಸತಿ ಶಾಲೆ, ವೇದ ಪಾಠಶಾಲೆ ಪ್ರಾರಂಭಿಸಲಾಗುವುದು ಎಂದು ತಿಳಿಸಿದರು.
ಕುಕ್ಕೆ ಸುಬ್ರಹ್ಮಣ್ಯ: ₹123 ಕೋಟಿ ಆದಾಯ: ರಾಜ್ಯದ ಇತಿಹಾಸದಲ್ಲೇ ಅತೀ ಹೆಚ್ಚು!
ಪತ್ರಿಕಾಗೋಷ್ಠಿಯಲ್ಲಿ ಟ್ರಸ್ಟ್ ಪದಾಧಿಕಾರಿಗಳಾದ ಎಂ.ಪಿ. ಸಂಪತ್, ಟಿ.ರಘುಕುಮಾರ್, ಪಿ.ರವಿಕುಮಾರ್, ಪಿ.ರಘುಕುಮಾರ್, ಎಂ.ಲೋಕೇಶ್, ಎಂ.ಪಿ.ಗಣೇಶ್, ಪಿ. ಸುಬ್ರಮಣಿ, ಎಂ. ಸುಬ್ರಮಣಿ ಮತ್ತಿತರರು ಇದ್ದರು.