ನಿನ್ನ ‘ಈ ಗುಣ’ಗಳೇ ನಿನ್ನ ದರಿದ್ರ ಸ್ಥಿತಿಗೆ ಕಾರಣ; ಗರುಡ ಪುರಾಣ ಏನು ಹೇಳುತ್ತೆ?

Published : Jul 07, 2023, 01:26 PM IST
ನಿನ್ನ ‘ಈ ಗುಣ’ಗಳೇ ನಿನ್ನ ದರಿದ್ರ ಸ್ಥಿತಿಗೆ ಕಾರಣ; ಗರುಡ ಪುರಾಣ ಏನು ಹೇಳುತ್ತೆ?

ಸಾರಾಂಶ

ಗರುಡ ಪುರಾಣದ ನಿಯಮಗಳನ್ನು ಅನುಸರಿಸಿ ಜೀವನದ ತೊಂದರೆಗಳಿಂದ ಪರಿಹಾರ ಪಡೆಯಬಹುದು. ದೈನಂದಿನ ಜೀವನದಲ್ಲಿ ಕೆಲವು ಕೆಟ್ಟ ಅಭ್ಯಾಸಗಳು ಮನುಷ್ಯರನ್ನು ಬಡವರನ್ನಾಗಿ ಮಾಡುತ್ತವೆ. ಈ ಕುರಿತು ಇಲ್ಲಿದೆ ಮಾಹಿತಿ.

ಗರುಡ ಪುರಾಣದ ನಿಯಮಗಳನ್ನು ಅನುಸರಿಸಿ ಜೀವನದ ತೊಂದರೆಗಳಿಂದ ಪರಿಹಾರ  (solution) ಪಡೆಯಬಹುದು. ದೈನಂದಿನ ಜೀವನದಲ್ಲಿ ಕೆಲವು ಕೆಟ್ಟ ಅಭ್ಯಾಸ (practice) ಗಳು ಮನುಷ್ಯರನ್ನು ಬಡವರನ್ನಾಗಿ ಮಾಡುತ್ತವೆ. ಈ ಕುರಿತು ಇಲ್ಲಿದೆ ಮಾಹಿತಿ.

ಗರುಡ ಪುರಾಣ (Garuda Purana) ದಲ್ಲಿ, ಭಗವಾನ್ ವಿಷ್ಣುವಿನ ವಾಹನವಾದ ಗರುಡ ಮತ್ತು ನಾರಾಯಣನ ನಡುವಿನ ಸಂಭಾಷಣೆಯನ್ನು ಸಂಪೂರ್ಣವಾಗಿ ವಿವರಿಸಲಾಗಿದೆ. ಹಿಂದೂ ಧರ್ಮದಲ್ಲಿರುವ 18 ಪುರಾಣಗಳಲ್ಲಿ ಗರುಡ ಪುರಾಣವು ಒಂದು. ಇದಕ್ಕೆ ವಿಶೇಷ ಮಹತ್ವವಿದ್ದು, ಜೀವನವನ್ನು ನಡೆಸಲು ಸರಿಯಾದ ಮಾರ್ಗಗಳ ಬಗ್ಗೆ ಗರುಡ ಪುರಾಣದಲ್ಲಿ ಹೇಳಲಾಗಿದೆ. ಕೆಲವು ಕೆಟ್ಟ ಅಭ್ಯಾಸಗಳು ನಮ್ಮನ್ನು ಬಡವರನ್ನಾಗಿ ಮಾಡುತ್ತದೆ. ಅವುಗಳಿಂದ ದೂರವಿರಿ ಎಂದು ಗರುಡ ಪುರಾಣದಲ್ಲಿ ಹೇಳಲಾಗಿದೆ.

ಸೂರ್ಯೋದಯದ ನಂತರ ನಿದ್ರೆ

ಗರುಡ ಪುರಾಣದ ಪ್ರಕಾರ ಸೂರ್ಯೋದಯ (sunrise) ದ ನಂತರ ಮಲಗಲೇಬಾರದು. ಸೂರ್ಯ ಹುಟ್ಟಿದ ನಂತರ ಮಲಗಿದರೆ ಅದು ದರಿದ್ರದ ಸಂಕೇತ. ಆತನಿಗೆ ಬಡತನ (Poverty) ಬೆನ್ನು ಹತ್ತುತ್ತದೆ. ಆತ ಎಂದಿಗೂ ಶ್ರೀಮಂತ ಆಗಲಾರ ಎಂದು ಹೇಳುತ್ತೆ ಗರುಡ ಪುರಾಣ. ಅವನಿಗೆ ಅನೇಕ ರೀತಿಯ ಸಮಸ್ಯೆ (problem) ಗಳು ಬರುತ್ತವೆ. ಆದ್ದರಿಂದ ಸೂರ್ಯೋದಯಕ್ಕೆ ಮುನ್ನ ಎದ್ದು ದೈನಂದಿನ ಕಾರ್ಯದಲ್ಲಿ ತೊಡಗಬೇಕು.

ದುರಾಸೆ

ಗರುಡ ಪುರಾಣದ ಪ್ರಕಾರ ದುರಾಸೆ (Greed)  ಒಳ್ಳೆಯದಲ್ಲ ಎಂದು ಹೇಳಲಾಗಿದೆ. ದುರಾಸೆ ಇರುವ ವ್ಯಕ್ತಿಯು ಹೆಚ್ಚಿನದನ್ನು ಪಡೆಯುವ ಕೆಟ್ಟ ಹಾದಿಯಲ್ಲಿ ನಡೆಯಲು ಪ್ರಾರಂಭಿಸುತ್ತಾನೆ. ಅಂತಹ ಜನರ ಬಳಿ ಹಣವು ಹೆಚ್ಚು ಕಾಲ ಉಳಿಯುವುದಿಲ್ಲ. ಹಣದ ದುರಾಸೆಯುಳ್ಳವನಿಗೆ ತಾಯಿ ಲಕ್ಷ್ಮಿಯು ಅವನಿಂದ ದೂರವಾಗುತ್ತಾಳೆ. ಅವರು ಬೇಗ ಬಡವ (poor) ರಾಗುತ್ತಾರೆ.

ಈ ರಾಶಿಯವರು ಲಕ್ಕಿ ಗರ್ಲ್; ಇವರು ಮನೆಗೆ ಅದೃಷ್ಟ ದೇವತೆಯರು..!

 

ದಾನ ಮಾಡದ ವ್ಯಕ್ತಿ ಬಡವ

ಯಾವುದೇ ಒಬ್ಬ ಮನುಷ್ಯನು ದಾನ (charity)  ಮಾಡುವ ಗುಣ ಹೊಂದಿರಬೇಕು. ದಾನವು ಮನುಷ್ಯನನ್ನು ಶ್ರೇಷ್ಠನನ್ನಾಗಿ ಮಾಡುತ್ತದೆ. ಪೂರ್ವಜರು (Ancestors) ಮಾಡಿಟ್ಟ ಹಣದಲ್ಲಿ ಜೀವನ ನಡೆಸುವುದು ಒಳ್ಳೆಯದಲ್ಲ. ಕೆಲವು ಶ್ರೀಮಂತರು ತಮ್ಮಲ್ಲಿ ಎಷ್ಟೇ ಹಣ (money) ವಿದ್ದರೂ ಯಾರಿಗೂ ಒಂದು ರೂಪಾಯಿ ದಾನವಾಗಿ ನೀಡುವುದಿಲ್ಲ. ಇಂತಹ ವ್ಯಕ್ತಿಗಳ ಮೇಲೆ ಲಕ್ಷ್ಮಿ ದೇವಿಯು ಯಾವಾಗಲೂ ಅಸಮಾಧಾನ (displeasure) ವನ್ನು ಹೊಂದಿರುತ್ತಾಳೆ ಎಂದು ಗರುಣ ಪುರಾಣದಲ್ಲಿ ಹೇಳಲಾಗಿದೆ. ಇವರು ಆದಷ್ಟು ಬೇಗ ಬಡವರು ಆಗುತ್ತಾರೆ ಎಂದು ತಿಳಿಸಲಾಗಿದೆ.

ಕೊಳಕು ಬಟ್ಟೆ ಶೋಭೆಯಲ್ಲ

ಗರುಡ ಪುರಾಣದ ಪ್ರಕಾರ ಮನುಷ್ಯ ಕೊಳಕು ಬಟ್ಟೆ (dirty clothes) ಯನ್ನು ಎಂದಿಗೂ ಧರಿಸಬಾರದು ಎನ್ನಲಾಗಿದೆ. ಅಂತವರ ಮೇಲೆ ಲಕ್ಷ್ಮಿಯು ಕೋಪ (anger) ಗೊಳ್ಳುತ್ತಾಳೆ ಎನ್ನಲಾಗಿದೆ. ಇದರಿಂದ ಹಣ ಸಮಸ್ಯೆಗಳನ್ನು ಎದುರಾಗಲಿವೆ. ಇವರು ಬೇಗನೆ ಬಡವರಾಗುತ್ತಾರೆ. ಆದ್ದರಿಂದ ಯಾವಾಗಲೂ ಸ್ವಚ್ಛವಾದ ಬಟ್ಟೆಗಳನ್ನು ಧರಿಸಬೇಕು ಎಂದು ಗರುಡ ಪುರಾಣ ಹೇಳುತ್ತದೆ.

ಸಮುದ್ರ ಮಂಥನದಿಂದ ಬಂದ ಈ ವಸ್ತುಗಳನ್ನು ಮನೆಗೆ ತನ್ನಿ; ಸಂಪತ್ತು ತುಂಬಿ ತುಳುಕಲಿದೆ..!

 

ದಿನ ಭವಿಷ್ಯ, ವಾರ ಭವಿಷ್ಯ, ನಿಮ್ಮ ರಾಶಿ ವಿಶೇಷ, ದಿನ ವಿಶೇಷ, ಹಬ್ಬ ಹರಿದಿನಗಳು, ಸಂಪ್ರದಾಯ ಆಚರಣೆಗಳು, ಅವುಗಳ ವೈಜ್ಞಾನಿಕ ಹಿನ್ನೆಲೆ, ಪುರಾಣ ಪುಣ್ಯ ಕತೆಗಳು, ವಾಸ್ತು ಕುರಿತು ಹೆಚ್ಚಿನ ಮಾಹಿತಿ ಪಡೆಯಲು ಸುವರ್ಣ ನ್ಯೂಸ್ ಜ್ಯೋತಿಷ್ಯ ವಿಭಾಗವನ್ನು ತಪ್ಪದೇ ನೋಡುತ್ತಿರಿ.

PREV
Read more Articles on
click me!

Recommended Stories

ಡಿಸೆಂಬರ್ 29 ರಿಂದ ಜನವರಿ 4, 2026 ರವರೆಗೆ 5 ರಾಶಿಗೆ ಹಠಾತ್ ಲಾಭ, ಸಂತೋಷ
ಜನವರಿ 6 ರಿಂದ 2 ಶಕ್ತಿಶಾಲಿ ಗ್ರಹಗಳ ನಡುವೆ ಭಯಾನಕ ಯುದ್ಧ 4 ರಾಶಿಗೆ ಭಾರೀ ನಷ್ಟ