ಜಗತ್ತಿನ ಸಮಸ್ಯೆಗೆ ವಚನದಲ್ಲಿ ಪರಿಹಾರ : ಸಾಣೇಹಳ್ಳಿ ಸ್ವಾಮೀಜಿ

By Kannadaprabha News  |  First Published Apr 24, 2023, 9:14 PM IST

ಶ್ರೇಷ್ಠ ಸಂತ ಬಸವಣ್ಣನವರ ವಚನಗಳಲ್ಲಿ ಜಗತ್ತಿನ ಎಲ್ಲ ಸಮಸ್ಯೆಗಳಿಗೆ ಪರಿಹಾರವಿದೆ. ಮನುಷ್ಯರು ಅಂತರಂಗ ಮತ್ತು ಬಹಿರಂಗ ಶುದ್ಧಿಯಾಗಿ ಬದುಕಿದರೆ ಉತ್ತಮ ಸಮಾಜ ನಿರ್ಮಾಣವಾಗುತ್ತದೆ ಎಂದು ತರಳಬಾಳು ಸಾಣೇಹಳ್ಳಿ ಶಾಖಾ ಮಠದ ಪಂಡಿತಾರಾಧ್ಯ ಶಿವಾಚಾರ್ಯ ಸ್ವಾಮೀಜಿ ಅಭಿಪ್ರಾಯಪಟ್ಟರು.


ಬೆಂಗಳೂರು (ಏ.24) : ಬಸವ ಸಮಿತಿ ಭಾನುವಾರ ಬಸವ ಭವನದಲ್ಲಿ ಆಯೋಜಿಸಿದ್ದ ‘ಬಸವ ಜಯಂತಿ’ ಹಾಗೂ ಪ್ರಶಸ್ತಿ ಪ್ರದಾನ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, 12ನೇ ಶತಮಾನದ ಶರಣರಲ್ಲಿ ಬಹುತೇಕರು ಶಾಲೆ-ಕಾಲೇಜುಗಳ ಮೆಟ್ಟಿಲನ್ನೂ ತುಳಿಯದಿದ್ದರೂ ಸತ್ಯ ಮಾರ್ಗದಲ್ಲಿ ನಡೆದಿದ್ದರು. ಪರರ ಧನ ಸತ್ತ ಹೆಗ್ಗಣಕ್ಕೆ ಸಮಾನ ಎಂದು ತಿಳಿದಿದ್ದರು. ಆದರೆ ಇಂದು ಬಹಳಷ್ಟುವಿದ್ಯಾವಂತರು ಭ್ರಷ್ಟಾಚಾರದಲ್ಲಿ ತೊಡಗಿದ್ದು ಕಾಯಕ ಪ್ರಜ್ಞೆ ಮಾಯವಾಗಿದೆ. ಭ್ರಷ್ಟಾಚಾರ ರಹಿತ ಸಮಾಜ ನಿರ್ಮಾಣವಾದರೆ ಕಲ್ಯಾಣ ನಾಡು ನಿರ್ಮಾಣವಾಗುತ್ತದೆ. ಇಲ್ಲದಿದ್ದರೆ ಕಟುಕರ ನಾಡಾಗುತ್ತದೆ ಎಂದು ಎಚ್ಚರಿಸಿದರು.

ಸಮಿತಿ ಕಾರ್ಯ ಶ್ಲಾಘನೀಯ:

Tap to resize

Latest Videos

ಯಾವುದೇ ಸರ್ಕಾರ, ಹಣವಿರುವ ಲಿಂಗಾಯತ ಮಠಗಳೂ ಮಾಡದಂತಹ ಉತ್ತಮ ಕೆಲಸಗಳನ್ನು ಬಸವ ಸಮಿತಿ ಮಾಡುತ್ತಿದೆ. ವಚನಗಳನ್ನು ಬೇರೆ ಭಾಷೆಗಳಿಗೆ ತರ್ಜುಮೆ ಮಾಡಿಸುವ ಅದ್ಭುತ ಕಾರ್ಯವನ್ನು ಸಮಿತಿಯ ಅಧ್ಯಕ್ಷ ಅರವಿಂದ ಜತ್ತಿ ಮಾಡುತ್ತಿದ್ದಾರೆ. ಬಸವ ತತ್ತ$್ವ ಬಿತ್ತುವ ಕಾರ್ಯದಲ್ಲಿ ಸಮಿತಿಯು ಜೊತೆ ನಾವೂ ಹೆಜ್ಜೆ ಹಾಕೋಣ ಎಂದು ಕರೆ ನೀಡಿದರು.

ಕೂಡಲ ಸಂಗಮ(Kudalasangama)ದಲ್ಲಿ ಅಂತಾರಾಷ್ಟ್ರೀಯ ಮ್ಯೂಸಿಯಂ ಸ್ಥಾಪನೆಗೆ ಧಾರವಾಡದ ಕರ್ನಾಟಕ ವಿಶ್ವವಿದ್ಯಾಲ(Karnataka University Dharwad)ಯ ತಯಾರಿಸಿರುವ ವಿಸ್ತೃತ ಯೋಜನಾ ವರದಿಯನ್ನು ಸ್ವೀಕರಿಸಿದ ಕೂಡಲ ಸಂಗಮ ಅಭಿವೃದ್ಧಿ ಮಂಡಳಿ ಆಯುಕ್ತ ಶಿವಯೋಗಿ ಸಿ.ಕಳಸದ ಮಾತನಾಡಿ, 120 ಎಕರೆಯಲ್ಲಿ .350 ಕೋಟಿ ವೆಚ್ಚದಲ್ಲಿ ಅಂತಾರಾಷ್ಟ್ರೀಯ ಮ್ಯೂಸಿಯಂ ನಿರ್ಮಿಸಲಾಗುತ್ತಿದೆ. ಎರಡು ಸಾವಿರ ಭಕ್ತರಿಗೆ ವಸತಿ ಸೇರಿದಂತೆ ಹಲವು ಕೆಲಸಗಳನ್ನು ಕೈಗೊಳ್ಳಲಾಗುತ್ತಿದೆ ಎಂದು ತಿಳಿಸಿದರು.

ಇಂದು ಬಸವ ಜಯಂತಿ: ಆರ್ಥಿಕ ಕ್ರಾಂತಿಗೂ ನಾಂದಿ ಹಾಡಿದ್ದ ಬಸವಣ್ಣ

ಸಮಿತಿಯ ಸಂಶೋಧನಾ ಮತ್ತು ಪ್ರಕಟಣಾ ವಿಭಾಗ ಹೊರತಂದಿರುವ ಹಲವು ಕೃತಿಗಳನ್ನು ಶ್ರೀಗಳು ಲೋಕಾರ್ಪಣೆಗೊಳಿಸಿದರು. ಬೇಲಿಮಠದ ಶಿವರುದ್ರ ಸ್ವಾಮೀಜಿ ಅವರಿಗೆ ಗುರುವಂದನೆ ಸಲ್ಲಿಸಲಾಯಿತು. ಬಸವ ಸಮಿತಿ ಅಧ್ಯಕ್ಷ ಅರವಿಂದ ಜತ್ತಿ ಉಪಸ್ಥಿತರಿದ್ದರು.

ಕೂಡಲಸಂಗಮಕ್ಕೆ ರಾಹುಲ್ ಗಾಂಧಿ ಭೇಟಿ: ಲಿಂಗಾಯತ ಮತಸೆಳೆಯಲು ಕಾಂಗ್ರೆಸ್‌ ಮಾಸ್ಟರ್‌ ಪ್ಲ್ಯಾನ್‌

ಸಾಧಕರಿಗೆ ಪ್ರಶಸ್ತಿ ಪ್ರದಾನ

ಬೆಳಗಾವಿಯ ಉದ್ಯಮಿ ಜಯಂತ ಹುಂಬರವಾಡಿ(Jayant humbaravadi) ಅವರಿಗೆ ‘ಕಾಯಕ ರತ್ನ’ ಪ್ರಶಸ್ತಿ,(Kayaka ratna award) ರಾಷ್ಟ್ರೀಯ ಬಸವ ಪುರಸ್ಕಾರಕ್ಕೆ ಭಾಜನರಾಗಿರುವ ಡಾ ವೀರಣ್ಣ ರಾಜೂರ, ವಚನ ಕೊಂಕಣಿ ಭಾಷೆಯ ಪ್ರಧಾನ ಸಂಪಾದಕ ಡಾ ದಾಮೋದರ ಮೌಜೋ, ಕಾಶ್ಮೀರ ವಿಶ್ವವಿದ್ಯಾಲಯದ ನಿವೃತ್ತ ಪ್ರಾಧ್ಯಾಪಕ ಪ್ರೊ.ಮಹಮ್ಮದ್‌ ಝಮಾನ್‌ ಅವರಿಗೆ ‘ಬಸವ ವಿಭೂಷಣ’ ಪ್ರಶಸ್ತಿ, ಕನ್ನಡ ಸಾಹಿತ್ಯ ಪರಿಷತ್‌ ಮಾಜಿ ಅಧ್ಯಕ್ಷ ಪ್ರೊ.ಜಿ.ಎಸ್‌.ಸಿದ್ದಲಿಂಗಯ್ಯ ಅವರಿಗೆ ‘ಕಾಯಕ ಭೂಷಣ’ ಪ್ರಶಸ್ತಿ ನೀಡಿ ಗೌರವಿಸಲಾಯಿತು

click me!