ನಿರುದ್ಯೋಗ ಒಂದು ದೊಡ್ಡ ಸಮಸ್ಯೆ. ಓದಿಗೆ ತಕ್ಕ ಕೆಲಸ ಸಿಗೋದು ಕಷ್ಟದ ಕೆಲಸ. ಅನೇಕ ದಿನಗಳಿಂದ ಉದ್ಯೋಗವಿಲ್ಲದೆ ಇದ್ರೆ ಜೀವನ ನಿರ್ವಹಣೆ ಕಷ್ಟ. ಸುಲಭವಾಗಿ, ಬಯಸಿದ ಕೆಲಸ ಸಿಗಬೇಕೆಂದ್ರೆ ಕೆಲ ಉಪಾಯಗಳನ್ನು ಪಾಲನೆ ಮಾಡ್ಬೇಕು,
ಎಷ್ಟೇ ವಿದ್ಯಾಭ್ಯಾಸ (Education) ಮಾಡಿರಲಿ, ದುಡಿಯುವ ಛಲವಿರಲಿ ಅನೇಕ ಬಾರಿ ಕೆಲಸ ಕೈಗೆ ಸಿಗೋದಿಲ್ಲ. ಇಂಟರ್ವ್ಯೂ (Interview) ಗಳಲ್ಲಿ ಫೇಲ್ ಆಗಿ ನಿರಾಶೆ (Disappointment) ಯಿಂದ ಮನೆಗೆ ಬರುವ ಪರಿಸ್ಥಿತಿ ಇರುತ್ತದೆ. ಕೆಲವರು ಇಂಜಿನಿಯರ್ ಮುಗಿಸಿ ಕೆಲಸ ಸಿಗದೆ ಮನೆಯಲ್ಲಿರುವವರಿದ್ದಾರೆ. ನೀವೂ ಅವರಲ್ಲಿ ಒಬ್ಬರಾಗಿದ್ದರೆ ಅದಕ್ಕೆ ನಿಮ್ಮ ಶ್ರಮ ಮಾತ್ರ ಕಾರಣವಲ್ಲ. ನಿಮ್ಮ ಗ್ರಹ ದುರ್ಬಲ ಸ್ಥಾನದಲ್ಲಿರುವುದೂ ಕಾರಣವಾಗಿರಬಹುದು. ಜ್ಯೋತಿಷ್ಯ ಶಾಸ್ತ್ರದಲ್ಲಿ ಗ್ರಹ (planet) ಗಳನ್ನು ಬಲಗೊಳಿಸಲು ಅನೇಕ ವಿಧಾನಗಳನ್ನು ಹೇಳಲಾಗಿದೆ. ಇಷ್ಟಪಟ್ಟ ಕೆಲಸ ಬೇಕೆಂದ್ರೆ ಏನು ಮಾಡ್ಬೇಕೆಂದು ಜ್ಯೋತಿಷ್ಯ ಶಾಸ್ತ್ರ (Astrology) ದಲ್ಲಿ ಹೇಳಲಾಗಿದೆ. ನಾವಿಂದು ನೀವು ಏನು ಮಾಡಿದ್ರೆ ಬೇಗ ಹಾಗೂ ನಿಮ್ಮ ಆಸೆಯಂತೆ ಕೆಲಸ ಸಿಗುತ್ತದೆ ಎಂಬುದನ್ನು ಹೇಳ್ತೇವೆ.
ಬಯಸಿದ ಕೆಲಸವನ್ನು ಪಡೆಯುವ ಮಾರ್ಗಗಳು (Ways) :
ನಿಮ್ಮ ಆಸೆ ಈಡೇರಿಸಬಲ್ಲ ಹನುಮಂತ : ಜ್ಯೋತಿಷ್ಯ ಶಾಸ್ತ್ರದ ಪ್ರಕಾರ, ಪ್ರತಿ ಮಂಗಳವಾರ (Tuesday) ದಂದು ಹನುಮಂತನಿಗೆ ಸಿಂಧೂರವನ್ನು ಅರ್ಪಿಸುವುದು ಮತ್ತು ಕೆಂಪು ಬಣ್ಣದ ಸಿಹಿತಿಂಡಿಗಳನ್ನು ಅರ್ಪಿಸುವುದು ಮಂಗಳಕರವೆಂದು ಪರಿಗಣಿಸಲಾಗುತ್ತದೆ. ನಿಯಮಿತವಾಗಿ ಈ ಕೆಲಸ ಮಾಡ್ತಾ ಬಂದ್ರೆ ನಿಮ್ಮಿಷ್ಟದಂತೆ ನಿಮಗೆ ಕೆಲಸ ಪ್ರಾಪ್ತಿಯಾಗುತ್ತದೆ. ಇಷ್ಟೇ ಅಲ್ಲದೆ ಪ್ರತಿನಿತ್ಯ ಸುಂದರಕಾಂಡ ಪಾರಾಯಣ ಮಾಡುವುದರಿಂದ ಉದ್ಯೋಗದಲ್ಲಿ ಇದ್ದ ಅಡೆತಡೆಗಳು ದೂರವಾಗುತ್ತವೆ.
ಸೋಮವಾರದಂದು ಈ ವಸ್ತುಗಳನ್ನು ಖರೀದಿಸಬೇಡಿ
ಪಕ್ಷಿಗಳಿಗೆ ಧಾನ್ಯ : ನೀವು ನಿರುದ್ಯೋಗದಿಂದ ಬಳಲುತ್ತಿದ್ದು, ಬಯಸಿದ ಉದ್ಯೋಗವನ್ನು ಪಡಯುವ ಆಸೆ ಹೊಂದಿದ್ದರೆ, ಜೀವನದಲ್ಲಿ ಸಾಕಷ್ಟು ಸಂಪತ್ತು ಗಳಿಸುವ ಆಶಯ ಹೊಂದಿದ್ದರೆ ಪ್ರತಿದಿನ ಬೆಳಿಗ್ಗೆ ಪಕ್ಷಿಗಳಿಗೆ 7 ರೀತಿಯ ಧಾನ್ಯಗಳನ್ನು ನೀಡಬೇಕು.
ದೇವಸ್ಥಾನಕ್ಕೆ ಭೇಟಿ (Visting Temple) : ದೇವಸ್ಥಾನದಲ್ಲಿ ಶಾಂತಿ, ನೆಮ್ಮದಿ ಸಿಗುತ್ತದೆ. ಶುದ್ಧ ಮನಸ್ಸಿನಿಂದ ದೇವರಲ್ಲಿ ಪ್ರಾರ್ಥನೆ ಮಾಡಿದ್ರೆ ನೀವು ಬಯಸಿದ ವರವನ್ನು ದೇವರು ನಿಮಗೆ ನೀಡುತ್ತಾನೆ. ಹಾಗಾಗಿ ಉದ್ಯೋಗ ಬಯಸುವ ಜನರು ನಿಯಮಿತವಾಗಿ ದೇವಸ್ಥಾನಕ್ಕೆ ಭೇಟಿ ನೀಡಬೇಕು. ಇದರಿಂದ ಶುಭ ಫಲಿತಾಂಶಗಳು ದೊರೆಯುತ್ತವೆ ಎಂದು ಜ್ಯೋತಿಷ್ಯ ಶಾಸ್ತ್ರದಲ್ಲಿ ಹೇಳಲಾಗಿದೆ.
ಊಟ ಆದ್ಮೇಲೆ ತಟ್ಟೇಲಿ ಕೈ ತೊಳೆಯೋದು ಮಹಾಪಾಪ !
ನಿಂಬೆಯಲ್ಲಿದೆ (Lemon) ಉದ್ಯೋಗದ ಗುಟ್ಟು : ಉದ್ಯೋಗ ಪಡೆಯುವಲ್ಲಿ ಅಡೆತಡೆಗಳನ್ನು ತೊಡೆದು ಹಾಕಲು, ಜ್ಯೋತಿಷ್ಯ ಶಾಸ್ತ್ರದ ಪ್ರಕಾರ, ನಿಂಬೆ ಉಪಾಯ ಬಳಸಬಹುದು. ನಿಂಬೆ ಹಣ್ಣಿನ ಮೇಲೆ 4 ಲವಂಗವನ್ನು ನೆಟ್ಟ ನಂತರ, ಓಂ ಶ್ರೀ ಹನುಮಂತೇ ನಮಃ ಎಂಬ ಮಂತ್ರವನ್ನು 108 ಬಾರಿ ಜಪಿಸಿ. ಉದ್ಯೋಗ ಸಂದರ್ಶನಕ್ಕೆ ಹೋಗುವ ಸಂದರ್ಭದಲ್ಲಿ ನಿಂಬೆ ಹಣ್ಣನ್ನು ನಿಮ್ಮ ಜೊತೆ ತೆಗೆದುಕೊಂಡು ಹೋಗಿ.
ನಿಮ್ಮ ಆಸೆ ಈಡೇರಿಸಬಲ್ಲ ಶ್ರೀಕೃಷ್ಣ : ಜ್ಯೋತಿಷ್ಯ ಶಾಸ್ತ್ರದ ಪ್ರಕಾರ, ಶ್ರೀ ಕೃಷ್ಣನ ಮೂಲ ಮಂತ್ರ ಕ್ರಿಂ ಕೃಷ್ಣಾಯ ನಮಃ ಅನ್ನು ಪ್ರತಿದಿನ 108 ಬಾರಿ ಪಠಿಸುವುದರಿಂದ ಜೀವನದಲ್ಲಿ ಎಲ್ಲಾ ಅಡೆತಡೆಗಳು ಮತ್ತು ತೊಂದರೆಗಳಿಂದ ಮುಕ್ತಿ ಸಿಗುತ್ತದೆ. ನಿಮ್ಮಿಷ್ಟದಂತೆ ನಿಮಗೆ ಉದ್ಯೋಗ ಪ್ರಾಪ್ತಿಯಾಗುತ್ತದೆ.
ಶಿವಲಿಂಗದ ಪೂಜೆ : ಇಷ್ಟೇ ಅಲ್ಲ ಪ್ರತಿ ದಿನ ಶಿವಲಿಂಗಕ್ಕೆ ಪೂಜೆ ಮಾಡುವುದ್ರಿಂದಲೂ ನಿಮ್ಮಿಷ್ಟ ಈಡೇರುತ್ತದೆ. ಪ್ರತಿ ದಿನ ಶಿವಲಿಂಗಕ್ಕೆ ಜಲವನ್ನು ಅರ್ಪಿಸಿ, ಅಕ್ಷತೆಯನ್ನು ಅರ್ಪಿಸಬೇಕು.
ಹಸುವಿಗೆ ಆಹಾರ : ಸಂದರ್ಶನಕ್ಕೆ ಹೋಗುವ ಸಂದರ್ಭದಲ್ಲಿ ದಾರಿ ಮಧ್ಯೆ ಆಕಳು ಕಂಡ್ರೆ ಅದಕ್ಕೆ ಹಿಟ್ಟು ಹಾಗೂ ಬೆಲ್ಲವನ್ನು ನೀಡಬೇಕು. ಇದ್ರಿಂದ ಶುಭ ಫಲ ನಿಮಗೆ ಪ್ರಾಪ್ತಿಯಾಗುತ್ತದೆ. ಹೋದ ಕೆಲಸ ಮಂಗಳಕರವಾಗುತ್ತದೆ.
ಹನುಮಾನ್ ಚಾಲೀಸಾ ಪಠಣೆ : ಹನುಮಾನ್ ಚಾಲೀಸಾ ಓದುವುದ್ರಿಂದ ಸಕಾರಾತ್ಮಕ ಶಕ್ತಿ ಪ್ರಾಪ್ತಿಯಾಗುತ್ತದೆ. ಸಂದರ್ಶನಕ್ಕೆ ಹೋಗುವ ಮೊದಲು ಹನುಮಾನ್ ಚಾಲೀಸ್ ಪಠಣೆ ಮಾಡಿ ನಂತ್ರ ಮನೆಯಿಂದ ಹೊರಗೆ ಹೋದ್ರೆ ಒಳ್ಳೆಯದು.