Horoscope: ಕಟಕ ರಾಶಿಯರನ್ನು ಹರ್ಟ್ ಮಾಡಿದ್ರೆ ಮುಗೀತು ನಿಮ್ ಕಥೆ, ಎಚ್ಚರಿಯಿಂದಿರಲೇ ಬೇಕಾದ ರಾಶಿಗಳಿವು!

By Suvarna News  |  First Published Jul 12, 2022, 12:13 PM IST

ಒಂದೊಂದು ರಾಶಿಯವರನ್ನು ಒಂದೊಂದು ವಿಚಾರದಲ್ಲಿ ಮೀರಿಸೋದಕ್ಕಾಗಲ್ಲ. ಕಟಕ ರಾಶಿಯವರನ್ನು ಹರ್ಟ್ ಮಾಡಿ ಬದುಕೋದಕ್ಕಾಗಲ್ಲ, ಮೇಷ ರಾಶಿಯವರೊಂದಿಗೆ ಫೈಟ್ ಮಾಡಿ ಗೆಲ್ಲೋಕ್ಕಾಗಲ್ಲ. ಯಾವ್ಯಾವ ರಾಶಿಯವರ ಕಥೆ ಹೇಗ್ಹೇಗೆ?


ಮೇಷ: ಮೇಷ ರಾಶಿಯವ್ರ ಜೊತೆಗೆ ಕಾಲ್ ಕೆರ್ಕೊಂಡು ಜಗಳಕ್ಕೆ ಹೋದ್ರೋ, ನಿಮ್ ಕಥೆ ಗೋವಿಂದ. ಆಮೇಲೆ ಜನ್ಮದಲ್ಲಿ ಈ ರಾಶಿಯವ್ರು ಬಿಡಿ, ಹುಲ್ಲು ಕಡ್ಡಿಯಂಥವರ ಜೊತೆಗೂ ಫೈಟ್ ಮಾಡಲಿಕ್ಕೆ ಭಯ ಬಿದ್ದು ಹೋಗ್ತೀರಿ. ಅದು ಮೇಷ ರಾಶಿಯವರ ತಾಕತ್ತು. ಈ ರಾಶಿಯವ್ರ ಜೊತೆಗೆ ಫೈಟ್ ಮಾಡಿ ಜಯಿಸೋದು ಕಷ್ಟ ಮಾತ್ರವಲ್ಲ, ನಷ್ಟವೂ ಹೌದು. ವೃಷಭ: ವೃಷಭ ರಾಶಿಯವರ ಬಳಿ ಊಟ, ತಿಂಡಿ ವಿಚಾರಕ್ಕೆ ಜಗಳ ಮಾಡಿ ಸಿಕ್ಕಾಕೊಳ್ಬೇಡಿ. ಇವರ ಊಟ ಕದಿಯಲೇ ಬೇಡಿ. ಊಟದ ಮೂಲ ದುಡಿಮೆ, ಅಂದರೆ ಕೆಲಸ ಕದಿಯೋದು, ಇವರ ಬ್ಯುಸಿನೆಸ್‌ಗೆ ಕಲ್ಲು ಹಾಕೋ ಕೆಲಸ ಮಾಡೋದು ಇತ್ಯಾದಿ ಕಾಟ ಕೊಟ್ಟರೆ ಕಾಟ ಕೊಟ್ಟವರು ಉದ್ಧಾರ ಆಗಲ್ಲ. ಆ ಲೆವೆಲ್‌ಗೆ ಪಾಠ ಕಲಿಸ್ತಾರೆ ವೃಷಭದವ್ರು.

ಇದನ್ನೂ ಓದಿ: ವೃಷಭ ರಾಶಿಯವರನ್ನು ಪ್ರೀತಿಸ್ತಿದೀರಾ? ಅವರ ಬಗ್ಗೆ ತಿಳ್ಕೋಬೇಕಾ?

Tap to resize

Latest Videos

ಮಿಥುನ: ಜೆಮಿನಿ ಅಥವಾ ಮಿಥುನ ರಾಶಿಯವರ ಜೊತೆಗೆ ಸುಳ್ಳು ಮಾತಾಡ್ಬೇಡಿ. ಪ್ರೇಮದ ವಿಚಾರದಲ್ಲಿ ಇವರ ಮಾತನ್ನು ಅಲ್ಲಗೆಳೆಯಬೇಡಿ. ಇವರ ಪ್ರೇಮಕ್ಕೆ ಅಡ್ಡಿ ಬರಬೇಡಿ. ಹೀಗೆಲ್ಲ ಮಾಡಿದ್ರೆ ಈ ರಾಶಿಯವ್ರು ನಿಮ್ಮನ್ನು ಸುಮ್ಮನೇ ಬಿಡಲ್ಲ. ಜನ್ಮ ಜಾಲಾಡಿ ಬಿಡ್ತಾರೆ.

ಕಟಕ: ಕಟಕ ರಾಶಿಯವ್ರು ಬಹಳ ಎಮೋಶನಲ್. ಇವರನ್ನು ಭಾವನಾತ್ಮಕವಾಗಿ ಹರ್ಟ್ ಮಾಡಿದರೆ ಇವ್ರಿಂದ ತಡ್ಕೊಳ್ಳೋದಕ್ಕಾಗಲ್ಲ. ಭಾವನೆಗೆ ಘಾಸಿಯಾದರೆ ಈ ರಾಶಿಯವ್ರು ಅಳ್ತಾರೆ, ಗೋಳಾಡ್ತಾರೆ, ಅಷ್ಟೇ ಅಲ್ಲ ನಿಮ್ಮ ಲೈಫನ್ನೇ ಅಸಹನೀಯವಾಗಿಸಿಬಿಡುತ್ತಾರೆ. ಈ ರಾಶಿಯವ್ರ ಜೊತೆಗೆ ವ್ಯವಹರಿಸುವಾಗ ಎಚ್ಚರ ಇರಲಿ.

ಸಿಂಹ: ಚಾಲೆಂಜ್ ವಿಷ್ಯಕ್ಕೆ ಬಂದ್ರೆ ಸಿಂಹದವ್ರಿಗೆ ಸಿಂಹದವ್ರೇ ಸಾಟಿ. ಚಾಲೆಂಜ್ ಹಾಕಿದ್ರೆ ನಿಮ್ಮನ್ನ ಮುಗಿಸೇ ಬಿಡ್ತಾರೆ ಈ ರಾಶಿಯವ್ರು. ಕೆಲವೊಂದು ವಿಚಾರದಲ್ಲಿ ಭಲೇ ಹಠಮಾರಿಗಳು. ಅಂಥಾ ಟೈಮಲ್ಲಿ ಅವರನ್ನು ಅವರಷ್ಟಕ್ಕೇ ಬಿಡಬೇಕು, ಇಲ್ಲಾಂದ್ರೆ ಸಮಸ್ಯೆ ಆಗುತ್ತೆ.

ಕನ್ಯಾ: ಕನ್ಯಾ ರಾಶಿಯವ್ರ ಜೊತೆ ನಾನು ಒಳ್ಳೆಯವ್ನು ಅಂತಲೋ, ನಾನು ಕೆಲವೊಂದು ವಿಚಾರದಲ್ಲಿ ಸಖತ್ ಜಾಣ ಅಂತಲೋ ಪ್ರೂವ್ ಮಾಡಲಿಕ್ಕೆ ಹೋಗಬೇಡಿ. ಅವ್ರು ನೀವು ನಿಮ್ಮ ಗ್ರೇಟ್‌ನೆಸ್ ಅಂದುಕೊಂಡಿದ್ದನ್ನೇ ನಗಣ್ಯ ಅಂತ ಸಾಧಿಸಿ ತೋರಿಸ್ತಾರೆ, ಅದೂ ನಾಲ್ಕು ಜನರ ಎದುರಿಗೆ. ಇದು ನಿಮ್ಮ ಆತ್ಮವಿಶ್ವಾಸವನ್ನೇ ಕುಂದಿಸಬಹುದು.

ಇದನ್ನೂ ಓದಿ: Guru Purnima ದಿನ ರೂಪುಗೊಳ್ಳುತ್ತಿವೆ ನಾಲ್ಕು ಯೋಗಗಳು! ಈ ದಿನ ಏನು ದಾನ ಮಾಡಬೇಕು?

ತುಲಾ: ತುಲಾ ರಾಶಿಯವರ ಡ್ರೆಸಿಂಗ್ ಸ್ಟೈಲ್ ಬಹಳ ಚೆನ್ನಾಗಿರುತ್ತೆ. ತಮ್ಮ ಸ್ಟೈಲು, ತಾವು ತೊಡೋ ಡ್ರೆಸ್‌ಗಳ ಮುಂದೆ ಯಾರಿಲ್ಲ ಅಂತ ಅವರು ಭಾವಿಸಿರ್ತಾರೆ. ಅವರೆದುರು ಅವರಿಗಿಂತ ಚೆನ್ನಾಗಿರುವ ಡ್ರೆಸ್ ಹಾಕ್ಕೊಂಡಿದ್ರೂ ನನ್ ಡ್ರೆಸ್ ನಿನ್ ಡ್ರೆಸ್‌ಗಿಂತ ಚೆನ್ನಾಗಿದೆ ಅನ್ನೋದಕ್ಕೆ ಹೋಗ್ಬೇಡಿ, ಬಹಳ ಬೇಗ ನಿಮ್ಮ ಡ್ರೆಸ್ ಎಷ್ಟು ಗಬ್ಬಾಗಿದೆ ಅಂತ ಸಾಧಿಸಿ ತೋರಿಸ್ತಾರೆ. ಆಮೇಲೆ ಡ್ರೆಸ್ ಬಗ್ಗೆ ದನಿ ಎತ್ತದ ಹಾಗೆ ಮಾಡಿಬಿಡ್ತಾರೆ.

ವೃಶ್ಚಿಕ: ಈ ರಾಶಿಯವ್ರನ್ನು ಅಳುವಂತೆ ಮಾಡಬೇಡಿ. ವೃಶ್ಚಿಕ ರಾಶಿಯವರ ಕಣ್ಣೀರು ನಿಮ್ಮನ್ನು ಸುಮ್ಮನೆ ಬಿಡೋದಿಲ್ಲ. ಅವರಿದಕ್ಕೆ ರಿವೆಂಜ್ ತಗೊಂಡೇ ತಗೊಳ್ತಾರೆ. ಅವರಿಗ್ಯಾಗಪ್ಪ ಹೀಗೆ ಮಾಡಿದೆ ಅಂತ ನೀವು ಜನ್ಮಪೂರ್ತಿ ಕೊರಗೋ ಹಾಗೆ ಮಾಡ್ತಾರೆ. ಬಹಳ ಜಾಣತನದಿಂದಲೇ ಎಲ್ಲವನ್ನೂ ನಿಭಾಯಿಸುವ ಈ ರಾಶಿಯವ್ರ ಜೊತೆಗೆ ಚೆನ್ನಾಗಿದ್ದಷ್ಟು ನಿಮಗೇ ಒಳ್ಳೆಯದು.

ಧನು: ಧನುಸ್ಸು ರಾಶಿಯವ್ರಿಗೆ ಸಿಟ್ಟು ತರಿಸುವ ಕೆಲಸ ಮಾಡ್ಬೇಡಿ. ಸಿಟ್ಟಾದ್ರೆ ಇವರನ್ನು ನಿಯಂತ್ರಿಸೋದು ಕಷ್ಟ. ಕನಲಿ ಕೆಂಡವಾಗೋದು ಅಂತಾರಲ್ಲ ಹಾಗಾಗಿ ಬಿಡ್ತಾರೆ. ಸಿಟ್ಟು ಬಂದರೆ ಈ ರಾಶಿಯವ್ರು ಯಾವ ಕೆಲಸ ಮಾಡೋದಕ್ಕೂ ಹೇಸೋದಿಲ್ಲ. ಧನು ರಾಶಿಯವರ ಸಿಟ್ಟಿನ ಬಗ್ಗೆ ಎಚ್ಚರದಿಂದಿರಿ.

ಮಕರ: ಈ ರಾಶಿಯವರು ಸತ್ಯಶೋಧನೆಯಲ್ಲಿ ಎತ್ತಿದ ಕೈ. ಈ ರಾಶಿಯವರ ಬಳಿ ಸುಳ್ಳು ಹೇಳಿದ್ರೋ ಮುಗೀತು ನಿಮ್ಮ ಕತೆ. ಅದರಲ್ಲೂ ನಿಮ್ಮ ಫೀಲಿಂಗ್ಸ್ ಬಗ್ಗೆ ಸುಳ್ಳು ಹೇಳಿದ್ರೆ ಅವರಿಗೆ ನೀವು ಹೇಳ್ತಿರೋದು ಸುಳ್ಳು ಅಂತ ಕೂಡಲೇ ಗೊತ್ತಾಗಿ ಬಿಡುತ್ತೆ. ಸುಳ್ಳನ್ನು ಸಹಿಸದ ಈ ರಾಶಿಯವರು ನಿಮ್ಮನ್ನು ದೂರ ಮಾಡಬಹುದು. ನೀವು ಇವರ ಬಳಿ ಸುಳ್ಳು ಹೇಳಿದ್ದಕ್ಕೆ ಪಶ್ಚಾತಾಪ ಪಡುವ ಹಾಗೆ ಮಾಡಬಹುದು.

ಇದನ್ನೂ ಓದಿ: ಸಣ್ಣಪುಟ್ಟದ್ದಕ್ಕೂ ನೋಯುವ, ಸಿಟ್ಟಾಗುವ, ಅಳುವ ರಾಶಿಚಕ್ರಗಳಿವು..

ಕುಂಭ: ಕುಂಭ ರಾಶಿಯವ್ರ ಜೊತೆಗೆ ವಾದ ಮಾಡಿ ಗೆಲ್ಲೋದು ಕಷ್ಟ. ನೀವು ಸುಮ್ಮನೇ ವಾದಕ್ಕಾಗಿ ವಾದ ಮಾಡಿದ್ರಿ ಅಂತಿಟ್ಕೊಳ್ಳಿ. ಈ ರಾಶಿಯವ್ರು ಅದನ್ನು ಅಷ್ಟಕ್ಕೇ ಬಿಡೋದಿಲ್ಲ. ಪರ್ಸನಲ್ ಆಗಿ ತಗೊಳ್ತಾರೆ. ನಿಮ್ಮನ್ನು ವಾದದಲ್ಲಿ ಸೋಲಿಸಿದ ಮೇಲೆಯೇ ಅವರಿಗೆ ನಿದ್ರೆ ಬರೋದು. ಸುಮ್ ಸುಮ್ನೇ ತಲೆ ಕೆಡಿಸೋ ಕೆಲಸಕ್ಕೆ ಕೈ ಹಾಕದೇ ಇರೋದು ಉತ್ತಮ

ಮೀನ: ಮೀನ ರಾಶಿಯವ್ರು ಕೆಲವೊಮ್ಮೆ ನಿಮಗೆ ನೋಡೋದಕ್ಕೆ ಸಿಂಪಲ್ ಅನಿಸಬಹುದು. ಇವ್ರ ಬಳಿ ಏನಿದೆ ಅಂತನೂ ಮನಸ್ಸಿಗೆ ಬರಬಹುದು. ಆದರೆ ಯಾವ ಸಮಯದಲ್ಲೂ ಈ ರಾಶಿಯವ್ರು ಎದ್ದು ನಿಲ್ಲಬಹುದು. ಹಾಗೆ ನಿಂತರೆ ಜಗತ್ತಿಗೇ ತಾವಿರೋದನ್ನು ತೋರಿಸೋ ತಾಕತ್ತು ಈ ರಾಶಿಯವ್ರಿಗಿದೆ. ಹೀಗಾಗಿ ಮೀನ ರಾಶಿಯವ್ರನ್ನು ಅಂಡರ್ ಎಸ್ಟಿಮೇಟ್ ಮಾಡಬೇಡಿ.

click me!