ಗುರು ಪೂರ್ಣಿಮೆಯಂದು ಅನೇಕ ರಾಜಯೋಗಗಳು ಘಟಿಸುತ್ತಿವೆ. ಈ ದಿನದ ಮಂಗಳಕರ ಸಮಯ ಮತ್ತು ಸ್ನಾನ ಮತ್ತು ದಾನಕ್ಕಾಗಿ ಪ್ರಮುಖ ವಿಷಯಗಳನ್ನು ತಿಳಿಯೋಣ.
ಗುರು ಪೂರ್ಣಿಮೆಯಂದು ಗುರುವನ್ನು ಪೂಜಿಸುವ ಸಂಪ್ರದಾಯ ಶತಮಾನಗಳ ಹಿಂದಿನದು. ಮಹರ್ಷಿ ವೇದ ವ್ಯಾಸರನ್ನು ಎಲ್ಲಾ ಪುರಾಣಗಳ ಕರ್ತೃ ಎಂದು ನಂಬಲಾಗಿದೆ. ಹೀಗಾಗಿ ಅವರ ಜನ್ಮ ದಿನವಾದ ಆಷಾಢ ಪೂರ್ಣಿಮೆಯಂದು ಗುರು ಪೂರ್ಣಿಮಾ ಆಚರಿಸಲಾಗುತ್ತದೆ. ಮಹರ್ಷಿ ವೇದ ವ್ಯಾಸರು ಎಲ್ಲಾ ನಾಲ್ಕು ವೇದಗಳ ಜ್ಞಾನವನ್ನು ಹೊಂದಿದ್ದರು. ಮಹಾಭಾರತದ ಕರ್ತೃವೂ ಹೌದು. ಅವರ ಸ್ಮರಣಾರ್ಥ ಹಾಗೂ ಪ್ರತಿಯೊಬ್ಬ ವ್ಯಕ್ತಿಯ ಜೀವನದ ಗುರುಗಳನ್ನು ಸ್ಮರಿಸಿಕೊಳ್ಳುವ ಮತ್ತು ಅವರಿಗೆ ಕೃತಜ್ಞತೆ ಅರ್ಪಿಸುವ ಸಲುವಾಗಿ ಗುರು ಪೂರ್ಣಿಮಾ ಅಚರಿಸಲಾಗುತ್ತದೆ. 'ಗುರು ದೇವೋ ಭವ' ಎಂದು ಗುರುವನ್ನು ದೇವರ ಸ್ಥಾನದಲ್ಲಿಟ್ಟು ಪೂಜಿಸುವ ಸಂಸ್ಕೃತಿ ನಮ್ಮದು. ಈ ವರ್ಷ ಗುರು ಪೂರ್ಣಿಮಾ ಅಥವಾ ಆಷಾಢ ಪೂರ್ಣಿಮೆಯನ್ನು ಜುಲೈ 13ರಂದು ಆಚರಿಸಲಾಗುತ್ತದೆ.
ಗ್ರಹಗಳ ಶುಭ ಸಂಯೋಗ
ಆಷಾಢ ಪೂರ್ಣಿಮೆಯಂದು ಗ್ರಹಗಳ ಶುಭ ಸ್ಥಾನದಿಂದಾಗಿ ಅನೇಕ ರಾಜಯೋಗಗಳು ರೂಪುಗೊಳ್ಳುತ್ತಿವೆ. ಈ ಬಾರಿ ಗುರು ಪೂರ್ಣಿಮೆಯಂದು ಗುರು, ಮಂಗಳ, ಬುಧ ಮತ್ತು ಶನಿಯ ಶುಭ ಸಂಯೋಜನೆಯಿಂದ ರುಚಕ, ಶಷ, ಹಂಸ ಮತ್ತು ಭದ್ರ ಯೋಗಗಳು ರೂಪುಗೊಳ್ಳುತ್ತಿವೆ. ಗುರುವಿನ ಆರಾಧನೆಯಿಂದ ಗುರುದೋಷ ಮತ್ತು ಪಿತೃದೋಷವು ವ್ಯಕ್ತಿಯ ಜಾತಕದಲ್ಲಿ ಕೊನೆಗೊಳ್ಳುತ್ತದೆ ಎಂದು ನಂಬಲಾಗಿದೆ. ಗುರುವಿನ ಆರಾಧನೆಯಿಂದ ಉದ್ಯೋಗ, ವೃತ್ತಿ ಮತ್ತು ವ್ಯಾಪಾರದಲ್ಲಿ ಲಾಭವನ್ನು ಪಡೆಯುವ ನಂಬಿಕೆ ಇದೆ. ಇದಲ್ಲದೆ, ಈ ಬಾರಿಯ ಗುರುಪೂರ್ಣಿಮೆಯ ದಿನದಂದು ಮೂರು ಪ್ರಮುಖ ಗ್ರಹಗಳು ಒಂದೇ ರಾಶಿಯಲ್ಲಿ ಕುಳಿತುಕೊಳ್ಳುವುದರಿಂದ ತ್ರಿಗ್ರಾಹಿ ಯೋಗವು ರೂಪುಗೊಳ್ಳುತ್ತದೆ. ಈ ದಿನ, ಸೂರ್ಯ, ಶುಕ್ರ ಮತ್ತು ಬುಧ ಗ್ರಹಗಳು ಮಿಥುನ ರಾಶಿಯಲ್ಲಿ ಒಟ್ಟಿಗೆ ಇರುತ್ತಾರೆ. ಈ ಎಲ್ಲ ಯೋಗಗಳಿಂದಾಗಿ ಈ ದಿನ ಶುಭ ಕಾರ್ಯಗಳನ್ನು ಮಾಡುವುದರಿಂದ ಒಳಿತಾಗುತ್ತದೆ.
ಗುರು ಪೂರ್ಣಿಮಾ 2022ದಂದು ತ್ರಿಗ್ರಾಹಿ ಯೋಗ; ಈ ರಾಶಿಗಳ ಅದೃಷ್ಟ ಆರಂಭ..
ಶುಭ ಮುಹೂರ್ತ
ಗುರು ಪೂರ್ಣಿಮೆಯು ಜುಲೈ 13ರಂದು ಮುಂಜಾನೆ 4 ಗಂಟೆಗೆ ಪ್ರಾರಂಭವಾಗಿ ಮರುದಿನ ಜುಲೈ 14 ರಂದು ಗುರುವಾರ ಮಧ್ಯಾಹ್ನ 12.06 ಕ್ಕೆ ಕೊನೆಗೊಳ್ಳುತ್ತದೆ. ಜುಲೈ 13 ರಂದು ಮಧ್ಯಾಹ್ನ 12:45ರವರೆಗೆ ಇಂದ್ರ ಯೋಗವು ಇರುತ್ತದೆ. ಚಂದ್ರೋದಯ ಸಮಯ - ಜುಲೈ 13, ಸಂಜೆ 07:20ಕ್ಕೆ. ಭದ್ರವು ಮುಂಜಾನೆ 05:32 ರಿಂದ ಮಧ್ಯಾಹ್ನ 02:04 ರವರೆಗೆ. ಈ ದಿನದ ರಾಹು ಕಾಲವು ಮಧ್ಯಾಹ್ನ 12.27ರಿಂದ ಮಧ್ಯಾಹ್ನ 02.10 ರವರೆಗೆ ಇರುತ್ತದೆ.
ಗುರು ಪೂರ್ಣಿಮೆಯ ದಿನ ಏನು ಮಾಡಬೇಕು?
ಈ ದಿನ ಕುಂಕುಮ ತಿಲಕವನ್ನು ಹಚ್ಚಬೇಕು ಮತ್ತು ಹಳದಿ ವಸ್ತುಗಳನ್ನು ದಾನ ಮಾಡುವುದು ಮಂಗಳಕರವೆಂದು ಪರಿಗಣಿಸಲಾಗುತ್ತದೆ. ಈ ದಿನ ಗೀತಾ ಪಠಣವು ತುಂಬಾ ಒಳ್ಳೆಯದು ಎಂದು ಪರಿಗಣಿಸಲಾಗುತ್ತದೆ. ಈ ದಿನ ತಂದೆ, ಗುರು ಮತ್ತು ಅಜ್ಜನ ಆಶೀರ್ವಾದವನ್ನು ಪಡೆಯಬೇಕು. ನೀರನ್ನು ಅರ್ಪಿಸುವುದು ಮಂಗಳಕರವೆಂದು ಪರಿಗಣಿಸಲಾಗುತ್ತದೆ. ಈ ದಿನ ಅಶ್ವತ್ಥ ಮರಕ್ಕೆ ಪೂಜಿಸುವುದು ಕೂಡಾ ಒಳ್ಳೆಯದೇ.
ಗುರು ಪೂರ್ಣಿಮಾ 2022; ಹಿಂದೂ, ಜೈನ, ಬೌದ್ಧರೆಲ್ಲರಿಗೂ ಮಹತ್ವದ ದಿನ..
ಗುರು ಪೂರ್ಣಿಮಾ ದಿನದಂದು ಏನು ಖರೀದಿಸಬೇಕು?
ಗುರು ಪೂರ್ಣಿಮೆಯ ದಿನದಂದು, ಬೆಳ್ಳಿ ಅಥವಾ ಹಿತ್ತಾಳೆಯ ಯಾವುದೇ ವಸ್ತುವನ್ನು ಖರೀದಿಸಬೇಕು. ಈ ದಿನದಂದು ಕಾಪಿ-ಪುಸ್ತಕಗಳು ಅಥವಾ ಸ್ಟೇಷನರಿ ವಸ್ತುಗಳನ್ನು ಖರೀದಿಸುವುದು ಮಂಗಳಕರವೆಂದು ಪರಿಗಣಿಸಲಾಗುತ್ತದೆ.
ದಿನ ಭವಿಷ್ಯ, ವಾರ ಭವಿಷ್ಯ, ನಿಮ್ಮ ರಾಶಿ ವಿಶೇಷ, ದಿನ ವಿಶೇಷ, ಹಬ್ಬ ಹರಿದಿನಗಳು, ಸಂಪ್ರದಾಯ ಆಚರಣೆಗಳು, ಅವುಗಳ ವೈಜ್ಞಾನಿಕ ಹಿನ್ನೆಲೆ, ಪುರಾಣ ಪುಣ್ಯ ಕತೆಗಳು, ವಾಸ್ತು ಕುರಿತು ಹೆಚ್ಚಿನ ಮಾಹಿತಿ ಪಡೆಯಲು ಸುವರ್ಣನ್ಯೂಸ್ ಜ್ಯೋತಿಷ್ಯ ವಿಭಾಗವನ್ನು ತಪ್ಪದೇ ನೋಡುತ್ತಿರಿ.