Navagraha And Health: ಆರೋಗ್ಯಕ್ಕೂ ನವಗ್ರಹಗಳಿಗೂ ಉಂಟು ಬಾದರಾಯಣ ಸಂಬಂಧ!

By Suvarna News  |  First Published Jan 16, 2022, 11:30 AM IST

ಇಂದ್ರಿಯಗಳು ನಮ್ಮ ದೇಹವನ್ನು ನಿಯಂತ್ರಿಸುವಂತೆ ನವಗ್ರಹಗಳು ನಮ್ಮ ಜೀವನದ ಆಗು ಹೋಗುಗಳನ್ನು ನಿಯಂತ್ರಿಸುತ್ತವೆ. ಈ ಒಂಬತ್ತು ಗ್ರಹಗಳ ಬಗ್ಗೆ ತಿಳಿಯೋಣ.


ಗ್ರಹಗಳು ಮನುಷ್ಯನ ಜೀವನದ ಮೇಲೆ ಬೀರುವ ಪರಿಣಾಮಗಳು ಅಗಾಧ. ಕೇವಲ ಜ್ಯೋತಿಷ್ಯ ಮಾತಲ್ಲ, ಆಧುನಿಕ ವಿಜ್ಞಾನ(modern science)  ಕೂಡಾ ಅದನ್ನೇ ಹೇಳುತ್ತದೆ. ಹಿಂದಿನ ಋಷಿಮುನಿಗಳು ನಮ್ಮ ಬ್ರಹ್ಮಾಂಡವನ್ನು ಚೆನ್ನಾಗಿ ಅರ್ಥ ಮಾಡಿಕೊಂಡಿದ್ದರು. ಅವರಿಗೆ ಗ್ರಹಗಳ ಬಗ್ಗೆ ಅಪಾರ ಅರಿವು ಇತ್ತು. ಅವನ್ನೇ ಸೇರಿಸಿ ಪರಾಶರ ಮುನಿ(Parashara Rishi) ಹಾಗೂ ಜೈಮಿನಿ(Jaimini) ಋಷಿಯು ಜ್ಯೋತಿಷ್ಯ ಶಾಸ್ತ್ರ ರಚಿಸಿದ್ದಾರೆ. 

ಜ್ಯೋತಿಷ್ಯ ಶಾಸ್ತ್ರದ ಪ್ರಕಾರ ಒಂಬತ್ತು ಗ್ರಹಗಳಿದ್ದು, ಎಲ್ಲವೂ ತಮ್ಮದೇ ಆದ ಪ್ರತ್ಯೇಕ ಎನರ್ಜಿ ಹೊಂದಿವೆ. ಈ ನವಗ್ರಹಗಳು ಎಲ್ಲ ರಾಶಿಯ ಮೇಲೆ ಪರಿಣಾಮಗಳನ್ನು ಬೀರಲಿವೆ. ಇಂದ್ರಿಯಗಳು ನಮ್ಮ ದೇಹವನ್ನು ನಿಯಂತ್ರಿಸುವಂತೆ ಗ್ರಹಗಳು ನಮ್ಮ ಜೀವನದ ಆಗು ಹೋಗುಗಳನ್ನು ನಿಯಂತ್ರಿಸುತ್ತವೆ. ಈ ನವಗ್ರಹಗಳಲ್ಲಿ 7 ಭೌತಿಕವಾಗಿ ಇದ್ದರೆ, ಇನ್ನೆರಡನ್ನು(ರಾಹು, ಕೇತು) ಭೌತಿಕವಾಗಿ ಗುರುತಿಸಲಾಗುವುದಿಲ್ಲ. ಈ ಗ್ರಹಗಳು ಯಾವೆಲ್ಲ, ಅವುಗಳ ಕೆಲಸವೇನು ನೋಡೋಣ.

Tap to resize

Latest Videos

undefined

ಸೂರ್ಯ(Sun): ಎಲ್ಲ ಗ್ರಹಗಳ ಮಧ್ಯೆ ನಿಂತು ಪೂರ್ವಕ್ಕೆ ಮುಖ ಮಾಡಿರುವ ಸೂರ್ಯ ದೇವ ಗ್ರಹಪತಿ ಎಂದರೆ, ಗ್ರಹಗಳ ರಾಜನಾಗಿದ್ದಾನೆ. ಏಳು ಕುದುರೆಗಳು ಎಳೆಯುವ ಒಂದು ಚಕ್ರದ ರಥವನ್ನು ಈತ ಓಡಿಸುತ್ತಾನೆ. ಏಳು ಕುದುರೆಗಳು ಏಳು ಬಣ್ಣ(seven colors) ಹಾಗೂ ವಾರದ ಏಳು ದಿನವನ್ನು ಪ್ರತಿನಿಧಿಸುತ್ತವೆ. ಸೂರ್ಯನ ದಿನ ರವಿವಾರವಾಗಿದ್ದು, ಮಾಣಿಕ್ಯ(Ruby) ಈತನ ರತ್ನ. ಸೂರ್ಯನು ಜಾತಕದಲ್ಲಿ ಸರಿಯಾದ ಸ್ಥಾನದಲ್ಲಿಲ್ಲದಿದ್ದರೆ ಚಿಂತೆಗಳು, ತಲೆನೋವು, ಜ್ವರ, ಮೈ ನೋವು, ಹೃದಯದ ಸಮಸ್ಯೆಗಳು ಕಾಣಿಸಿಕೊಳ್ಳುತ್ತವೆ. ಸೂರ್ಯ ನಮಸ್ಕಾರ ಅಭ್ಯಾಸದಿಂದ ಆರೋಗ್ಯ ಚೆನ್ನಾಗಿಟ್ಟುಕೊಳ್ಳಬಹುದು. 

ಚಂದ್ರ(Moon): ಸೋಮ ಎಂದು ಕರೆಸಿಕೊಳ್ಳುವ ಚಂದ್ರನು 10 ಕುದುರೆಗಳು ಓಡಿಸುವ ರಥ(chariot) ವಾಹನವನ್ನು ಹೊಂದಿದ್ದಾನೆ. ಮನಸ್ಸು, ಹೆಣ್ಣಿನ ಗುಣ, ಸೌಂದರ್ಯ, ಸಂತೋಷ ಹಾಗೂ ಮಾನಸಿಕ ಸ್ಥಿರತೆಗೆ ಚಂದ್ರ ಕಾರಣನಾಗಿದ್ದಾನೆ. ಆತ ಜಾತಕದಲ್ಲಿ ಎಲ್ಲಿದ್ದಾನೆ ಎಂಬ ಆಧಾರದ ಮೇಲೆ ಈ ವಿಷಯಗಳು ನಿರ್ಧಾರವಾಗುತ್ತವೆ. ಚಂದ್ರ ತಪ್ಪು ಸ್ಥಾನದಲ್ಲಿದ್ದರೆ ಮೂತ್ರ ಸೋಂಕು, ಶ್ವಾಸಕೋಶ ಸಮಸ್ಯೆ, ಹೊಟ್ಟೆಯ ಸಮಸ್ಯೆಗಳು ಎದುರಾಗುತ್ತವೆ. ಸೋಮವಾರ ಚಂದ್ರನ ದಿನವಾಗಿದ್ದು, ಮುತ್ತು(Pearl) ಆತನ ರತ್ನವಾಗಿದೆ. 

Weekly Horoscope: ವೈವಾಹಿಕ ಕಲಹಕ್ಕೆ ಕಟಕ ತತ್ತರ, ಸಾಡೇಸಾತಿ ಅಂತಿಮ ಘಟ್ಟದಲ್ಲಿ ಧನುವಿಗೆ ಲಾಭ

ಮಂಗಳ(Mars): ನಾಲ್ಕು ಕೈಗಳ ದೇವರಾದ ಮಂಗಳನಿಗೆ ಅಂಗಾರಕನೆಂದೂ ಹೇಳಲಾಗುತ್ತದೆ. ಈತ ಧರ್ಮ ಕಾಯುವವನು. ಈತ ದೇಹದ ಸ್ನಾಯು ವ್ಯವಸ್ಥೆಯನ್ನು ಆಳುತ್ತಾನೆ. ಮೂಗು, ಹಣೆ ಹಾಗೂ ರಕ್ತ ಪರಿಚಲನೆ ವ್ಯವಸ್ಥೆಯೂ ಈತನದೇ. ಜಾತಕದಲ್ಲಿ ಮಂಗಳನು 1, 2, 4, 7, 8 ಹಾಗೂ 12ನೇ ಮನೆಯಲ್ಲಿದ್ದರೆ ಕುಜ ದೋಷ ಎನ್ನಲಾಗುತ್ತದೆ. ಇದರಿಂದ ಸಮಸ್ಯೆಗಳನ್ನು ಎದುರಿಸಬೇಕಾಗುತ್ತದೆ. ಮಂಗಳವಾರ ಈತನದಾಗಿದ್ದು, ಹವಳ(Coral) ಈತನ ರತ್ನ. 

ಬುಧ(Mercury): ಬುಧನು ನಮ್ಮ ನರಮಂಡಲ ವ್ಯವಸ್ಥೆಯ ಅಧಿಪತಿ. ಆತ ನಮ್ಮ ಬುದ್ಧಿಶಕ್ತಿ ಹಾಗೂ ಸಂವಹನವನ್ನು ಪ್ರತಿನಿಧಿಸುತ್ತಾನೆ. ಸಿಂಹ ಇಲ್ಲವೇ ರಥವನ್ನು ವಾಹನವನ್ನಾಗಿ ಬಳಸುವ ಈತನ ದಿನ ಬುಧವಾರ. ಪಚ್ಚೆ(emerald) ಈತನ ರತ್ನ. ಬುಧ ಜಾತಕದಲ್ಲಿ ಸರಿಯಾದ ಸ್ಥಾನದಲ್ಲಿಲ್ಲದಿದ್ದರೆ ತೊದಲುವಿಕೆ, ಶ್ವಾಸಕೋಶ ಸಮಸ್ಯೆ, ಅಸ್ತಮಾ, ಪ್ಯಾರಲಿಸಿಸ್, ಮೆದುಳು ಜ್ವರ ಮುಂತಾದವು ಕಾಣಿಸಿಕೊಳ್ಳುತ್ತವೆ. 

ಗುರು(Jupiter): ಬೃಹಸ್ಪತಿಯು ಜ್ಞಾನ, ಪ್ರೀತಿ, ಆಧ್ಯಾತ್ಮವನ್ನು ಸೂಚಿಸುತ್ತಾನೆ. ಈತ ಎಲ್ಲ ದೇವರ ಗುರುವಾಗಿದ್ದು, ಎಂಟು ಕುದುರೆಗಳ ರಥ ವಾಹನವಾಗಿ ಬಳಸುತ್ತಾನೆ. ಗುರುವಾರ ಈತನದಾಗಿದ್ದು, ಹಳದಿ ನೀಲಮಣಿ(yellow sapphire) ಈತನ ರತ್ನ. ಈತ ಜಾತಕದಲ್ಲಿ ಸರಿ ಸ್ಥಾನದಲ್ಲಿಲ್ಲದಿದ್ದರೆ ಡಯಾಬಿಟೀಸ್, ಪೈಲ್ಸ್, ಗಡ್ಡೆಗಳು, ಲಿವರ್ ಸಮಸ್ಯೆ, ರಕ್ತದ ಕ್ಯಾನ್ಸರ್ ಮುಂತಾದವು ಕಾಣಿಸುತ್ತವೆ. ಈತ ಮಾಂಸ, ಮಜ್ಜೆ, ಲಿವರ್, ಕಿಡ್ನಿ, ತೊಡೆಗಳು ಹಾಗೂ ಹೃದಯ ವ್ಯವಸ್ಥೆಯನ್ನು ಆಳುತ್ತಾನೆ. 

Vastu Tips: ಮಂಗಳವಾರ ಈ ಕೆಲ್ಸಗಳ್ನ ಮಾಡಿ ಅಮಂಗಳಕ್ಕೆ ಕಾರಣವಾಗ್ಬೇಡಿ..

ಶುಕ್ರ(Venus): ಈತ ರಾಕ್ಷಸರ ಗುರುವಾಗಿದ್ದು, ಶುಕ್ರವಾರ ಹಾಗೂ ವಜ್ರ ಈತನದಾಗಿದೆ. ಈತನ ದೋಷ ಜಾತಕದಲ್ಲಿದ್ದರೆ ಕಣ್ಣಿನ ಕಾಯಿಲೆಗಳು, ಜೀರ್ಣ ಸಮಸ್ಯೆಗಳು, ಚರ್ಮದ ತೊಂದರೆಗಳು, ಬಂಜೆತನ ಕಾಡುತ್ತದೆ. 

ಶನಿ(Saturn): ಶನಿಯು ಅತಿ ಪ್ರಭಾವಶಾಲಿ ಗ್ರಹವಾಗಿದ್ದು, ಕರ್ಮಕ್ಕನುಸಾರ ಪರಿಣಾಮ ಬೀರುತ್ತಾನೆ. ಈತ ರಣಹದ್ದನ್ನು ವಾಹನವಾಗಿ ಬಳಸುತ್ತಾನೆ. ಶನಿವಾರ ಹಾಗೂ ನೀಲಮಣಿ ಈತನಿಗೆ ಮೀಸಲು. ಜಾತಕದಲ್ಲಿ ಶನಿ ಸರಿ ಸ್ಥಾನದಲ್ಲಿಲ್ಲದಿದ್ದರೆ ಅಸ್ತಮಾ, ಬಂಜೆತನ ಮುಂತಾದ  ಸಮಸ್ಯೆ ಎದುರಾಗುತ್ತವೆ. 

ರಾಹು(Rahu): ಈತ ನೋಡಲು ಬುಧನಂತೆಯೇ ಇದ್ದರೂ ಗುಣದಲ್ಲಿ ಸಂಪೂರ್ಣ ತದ್ವಿರುದ್ಧ. ಕಪ್ಪು ಸಿಂಹ ಈತನ ವಾಹನ. ಈತನಿಗಾಗಿ ಯಾವುದೇ ವಿಶೇಷ ದಿನಗಳಿಲ್ಲ. ಗ್ರಹಣಕಾರಕನಾದ ಈತ ಯಶಸ್ಸಿಗೆ ಅಡೆತಡೆಗಳನ್ನು ತರುತ್ತಲೇ ಇರುತ್ತಾನೆ. 

ಕೇತು(Ketu): ಈತನಿಗೇ ಧೂಮಕೇತು ಎನ್ನುವುದು. ಈತ ಒಳಿತು ಕೆಡುಕು, ಆಧ್ಯಾತ್ಮ, ಅಲೌಕಿಕ ಪ್ರಭಾವವನ್ನು ಬೀರುತ್ತಾನೆ. 
 

click me!