Valentine Day : ಪ್ರೇಮಿಗಳ ದಿನದಂದು ಈ ರಾಶಿಯವರಿಗೆ ಒಲಿದು ಬರಲಿದೆ ಅದೃಷ್ಟ

By Suvarna News  |  First Published Jan 15, 2022, 5:02 PM IST

ಪ್ರೀತಿ ಒಂದು ಅದ್ಭುತ ಅನುಭವ. ಪ್ರೀತಿ ಅರಸಿ ಹೊರಟ ಎಲ್ಲರಿಗೂ ಇದು ಸಿಗುವುದಿಲ್ಲ. ನಿಜವಾದ ಪ್ರೀತಿ ಎಲ್ಲಿ ಅಡಗಿದೆ ಎಂಬುದನ್ನು ಪತ್ತೆ ಮಾಡುವುದು ಕಷ್ಟ. ಪ್ರೀತಿ ಸಿಕ್ಕಾಗ ಅದನ್ನು ಅನುಭವಿಸಬೇಕು. ಆದ್ರೆ ಎಲ್ಲರಿಗೂ ಈ ಅದೃಷ್ಟವಿರುವುದಿಲ್ಲ. ಈ ಬಾರಿ ಪ್ರೇಮಿಗಳ ದಿನದಂದು ಯಾರೆಲ್ಲ ಪ್ರೀತಿಯ ಮಳೆಯಲ್ಲಿ ಮಿಂದೇಳಲಿದ್ದಾರೆ ಗೊತ್ತಾ?
 


ಪ್ರೀತಿ ಎಂಬುದು ಜಗತ್ತಿನಲ್ಲೇ ಅತಿ ಸುಂದರ ಭಾವನೆ (Emotion). ನಿಜವಾದ ಪ್ರೀತಿ ಪಡೆದವರು ಅದೃಷ್ಟವಂತರು. ಪ್ರೇಮಿಗಳಿಗೆ ವಿಶೇಷ ದಿನದ ಅಗತ್ಯವಿಲ್ಲ. ಪ್ರೀತಿಸುವ ಪ್ರತಿ ಕ್ಷಣ ಪ್ರೇಮಿಗಳ ದಿನವಾಗಿರುತ್ತದೆ. ಆದ್ರೂ ಪ್ರೇಮಿಗಳಿಗಾಗಿಯೇ ಒಂದು ದಿನ ಮೀಸಲಿದೆ. ವಿಶ್ವ (World )ದಾದ್ಯಂತ ಫೆಬ್ರವರಿ 14ರಂದು ವ್ಯಾಲಂಟೈನ್ ಡೇ (Valentine's Day) ಆಚರಿಸಲಾಗುತ್ತದೆ. ಈಗಾಗಲೇ ಪ್ರೀತಿಯಲ್ಲಿ ಬಿದ್ದವರು ಪರಸ್ಪರ ಉಡುಗೊರೆ ನೀಡಿ ಹಬ್ಬದಂತೆ ಈ ದಿನವನ್ನು ಸಂಭ್ರಮಿಸುತ್ತಾರೆ. ಇನ್ನು ಕೆಲವರು ಪ್ರೇಮ ನಿವೇದನೆಗೆ ಈ ದಿನವನ್ನು ಆಯ್ಕೆ ಮಾಡಿಕೊಳ್ತಾರೆ. ವರ್ಷಗಟ್ಟಲೆ ಕಾದು, ಇದಕ್ಕೆ ತಯಾರಿ ನಡೆಸಿ, ಪ್ರೇಮಿ ಮುಂದೆ ಪ್ರಪೋಸ್ ಮಾಡುವುದು ಸುಲಭದ ಸಂಗತಿಯಲ್ಲ. ಹೆಚ್ಚುತ್ತಿರುವ ಹೃದಯ ಬಡಿತದ ಮಧ್ಯೆಯೇ ತಮಗೆ ತೋಚಿದಂತೆ ಪ್ರೇಮ ನಿವೇದನೆ ಮಾಡಿ, ಉತ್ತರಕ್ಕೆ ಕಾಯ್ತಾರೆ. ಈ ಬಾರಿ ಅದೃಷ್ಟ ಪರೀಕ್ಷೆಗೆ ಮುಂದಾಗಿರುವ ಜನರು, ತಯಾರಿ ಜೊತೆಗೆ ಜ್ಯೋತಿಷ್ಯದ ಬಗ್ಗೆಯೂ ಸ್ವಲ್ಪ ಗಮನ ನೀಡಿ. ಈ ವರ್ಷ ಯಾವ ಯಾವ ರಾಶಿಯ ಜನರಿಗೆ ವ್ಯಾಲಂಟೈನ್ ಡೇ ದಿನ ನಿಜವಾದ ಪ್ರೀತಿ ಸಿಗುತ್ತದೆ ಎಂಬುದು ಇಲ್ಲಿದೆ. 

ಮೇಷ ರಾಶಿ : ಫೆಬ್ರವರಿ 14, 2022 ಮೇಷ ರಾಶಿಯವರಿಗೆ ವಿಶೇಷವಾಗಿರುತ್ತದೆ. ಜ್ಯೋತಿಷ್ಯ ಶಾಸ್ತ್ರದ ಪ್ರಕಾರ, ಈ ಬಾರಿ ಪ್ರೇಮಿಗಳ ದಿನದಂದು, ನಿಮಗೆ ನಿಮ್ಮ ಸಂಗಾತಿ ಸಿಗಲಿದ್ದಾರೆ. ಈ ವರ್ಷ ವಿಶೇಷ ವ್ಯಕ್ತಿಗಳು ನಿಮ್ಮ ಜೀವನದಲ್ಲಿ ಪ್ರವೇಶ ಮಾಡಲಿದ್ದಾರೆ. ಪ್ರೀತಿಗಾಗಿ ನೀವು ಹೆಚ್ಚು ಕಷ್ಟಪಡುವ ಅಗತ್ಯವಿಲ್ಲ. ಪ್ರೇಮಿಗಳ ದಿನ ಯಾವ ಭಯವಿಲ್ಲದೆ ನೀವು ಪ್ರಪೋಸ್ ಮಾಡ್ಬಹುದು. ಈಗಾಗಲೇ ಪ್ರೀತಿಯಲ್ಲಿರುವವರು ಹಾಗೂ ದಂಪತಿಗೆ ಕೂಡ ಸುಖ ಸಿಗಲಿದೆ.

Tap to resize

Latest Videos

undefined

Burning Of Milk : ಬುಧವಾರದಂದು ಅಪ್ಪಿತಪ್ಪಿಯೂ ಹಾಲು ತಳ ಹೊತ್ತಿಸ್ಬೇಡಿ‍!

ವೃಷಭ : ಈ ರಾಶಿಯವರಿಗೆ ಇದು ಅತ್ಯಂತ ಅದ್ಭುತವಾದ ವ್ಯಾಲೆಂಟೈನ್ಸ್ ಡೇಯಾಗಲಿದೆ. ಒಂಟಿ ಜನರು ಜಂಟಿಯಾಗುವ ಅವಕಾಶ ಸಿಗಲಿದೆ. ಮದುವೆಯ ಶುಭ ಯೋಗವೂ ಕೂಡಿ ಬರಲಿದೆ. ದೀರ್ಘ ಕಾಲದಿಂದ ಸಂಗಾತಿಗಾಗಿ ಹುಡುಕುತ್ತಿದ್ದ ಈ ರಾಶಿಯ ಜನರಿಗೆ ಕೊನೆಗೂ ಯಶಸ್ಸು ಸಿಗಲಿದೆ. ನೀವು ಊಹಿಸಲಾರದ ಘಟನೆ ಪ್ರೇಮಿಗಳ ದಿನದಂದು ನಡೆಯಲಿದೆ. ಜೀವನ ಪೂರ್ತಿ ಸಂತೋಷ ನೀಡಬಲ್ಲ ಸಂಗಾತಿ ನಿಮಗೆ ಸಿಗಲಿದ್ದಾರೆ.

ಕರ್ಕ ರಾಶಿ : ಈ ಬಾರಿ ಪ್ರೇಮಿಗಳ ದಿನ ಕರ್ಕ ರಾಶಿಯವರಿಗೆ ಹೆಚ್ಚು ರೋಮ್ಯಾಂಟಿಕ್ ಆಗಿರಲಿದೆ. ನಿಮ್ಮ ನೆಚ್ಚಿನ ಸಂಗಾತಿಯನ್ನು ಪಡೆಯುವ ಸಾಧ್ಯತೆಗಳು ತುಂಬಾ ಹೆಚ್ಚಿದೆ. ಯಾರನ್ನಾದರೂ ಪ್ರೀತಿಸುತ್ತಿದ್ದರೆ ವ್ಯಾಲೆಂಟೈನ್ಸ್ ಡೇ ಪ್ರೇಮ ನಿವೇದನೆ ಮಾಡಲು ನಿಮಗೆ ಒಳ್ಳೆಯದ ಸಮಯ. ಪ್ರೇಮವಿವಾಹಕ್ಕೂ ಸಮಯವು ತುಂಬಾ ಅನುಕೂಲಕರವಾಗಿರಲಿದೆ.

Name Brings Luck: ಈ ಅಕ್ಷರದಿಂದ ಹೆಸರು ಆರಂಭವಾಗುವ ಹುಡುಗಿಯರು ತುಂಬಾ ಅದೃಷ್ಟವಂತರು

ತುಲಾ ರಾಶಿ : ತುಲಾ ರಾಶಿಯವರಿಗೆ, 2022 ರ ಈ ಪ್ರೇಮಿಗಳ ದಿನವು ತುಂಬಾ ವಿಶೇಷವಾಗಿರಲಿದೆ. ವಿವಾಹಿತ ಮತ್ತು ಅವಿವಾಹಿತರ ಸಂಬಂಧಗಳಲ್ಲಿ ಹೆಚ್ಚಿನ ಸುಧಾರಣೆ ಕಂಡುಬರಲಿದೆ. ಈ ಪ್ರೇಮಿಗಳ ದಿನದಂದು ನಿಮ್ಮ ಸಂಗಾತಿ ಪ್ರೇಮ ನಿವೇದನೆ ಮಾಡುವ ಸಾಧ್ಯತೆಯಿದೆ. ಈ ರಾಶಿಯವರಿಗೆ ಅಂದು ಮದುವೆಯ ಪ್ರಸ್ತಾಪವೂ ಬರಬಹುದು. ಫೆಬ್ರವರಿ ತಿಂಗಳು ನಿಮ್ಮ ಪ್ರೀತಿ ಪ್ರವರ್ಧಮಾನಕ್ಕೆ ಬರುತ್ತದೆ. 

ಕನ್ಯಾ ರಾಶಿ : ಪ್ರೇಮಿಗಳ ದಿನವು ಕನ್ಯಾ ರಾಶಿಯವರಿಗೆ ಶುಭ ಸೂಚನೆ ನೀಡಲಿದೆ. ಜ್ಯೋತಿಷ್ಯ ಶಾಸ್ತ್ರದ ಪ್ರಕಾರ,ಜೀವನದಲ್ಲಿ ಸಂತೋಷ ತರಲು ಹೊಸ ವ್ಯಕ್ತಿಯ ಆಗಮವಾಗಲಿದೆ. ವಿವಾಹವಾಗಲು ಬಯಸುತ್ತಿರುವ ಜೋಡಿಗೆ ಈ ದಿನ ಮಂಗಳಕರವಾಗಿರುತ್ತದೆ. ಈ ರಾಶಿಯವರ ಪ್ರೀತಿಯ ಸಂಬಂಧ  ಗಾಢವಾಗಲಿದೆ.  

ಧನು ರಾಶಿ : ಜ್ಯೋತಿಷ್ಯದ ಪ್ರಕಾರ, ಧನು ರಾಶಿಯ ಜನರಿಗೆ  ಪ್ರೇಮಿಗಳ ದಿನ ಅದೃಷ್ಟಕರವಾಗಿರಲಿದೆ. ನಿಜವಾದ ಪ್ರೀತಿ ನಿಮಗೆ ಸಿಗಲಿದೆ. ಪ್ರೇಮವಿವಾಹಕ್ಕೆ ಬಂದ ಸಮಸ್ಯೆ ನಿವಾರಣೆಯಾಗಲಿದೆ. ಪ್ರೇಮ ನಿವೇದನೆ ಮಾಡಲು ಬಯಸಿದ್ದರೆ ಯಾವುದೇ ಆತಂಕವಿಲ್ಲದೆ ಹೆಜ್ಜೆ ಮುಂದಿಡಿ.

click me!