ಕೆಲವರು ಕೋತಿಯನ್ನು ಹನುಮಂತನ ರೂಪವೆಂದು ಪೂಜಿಸ್ತಾರೆ. ಮತ್ತೆ ಕೆಲವರು ಪ್ರಾಣಿ ಎನ್ನುವ ಕಾರಣಕ್ಕೆ ಪ್ರೀತಿ ತೋರಿಸ್ತಾರೆ. ಇನ್ನು ಕೆಲವರು ಕೋತಿ ಕಂಡಾಗೆಲ್ಲ ಅದಕ್ಕೆ ಆಹಾರ ನೀಡ್ತಿರುತ್ತಾರೆ. ನೀವೂ ಕೋತಿ ಕಂಡಾಗ ಆಹಾರ ಹಾಕ್ತಿನಿ ಎನ್ನುವವರಾಗಿದ್ದರೆ ಅದ್ರಿಂದ ಏನೆಲ್ಲ ಫಲ ಸಿಗುತ್ತೆ ನೋಡಿ.
ಹಿಂದೂ ಧರ್ಮದಲ್ಲಿ ಪ್ರಾಣಿಗಳಿಗೆ ದೇವರ ಸ್ಥಾನ ನೀಡಲಾಗಿದೆ. ಕೆಲ ಪ್ರಾಣಿ, ಪಕ್ಷಿಗಳನ್ನು ದೇವರ ವಾಹನವೆಂದು ಪರಿಗಣಿಸಲಾಗುತ್ತದೆ. ಇದೇ ಕಾರಣಕ್ಕೆ ಅವುಗಳ ಪೂಜೆ ಕೂಡ ನಡೆಯುತ್ತದೆ. ಗಣೇಶನ ವಾಹನ ಇಲಿ, ಲಕ್ಷ್ಮಿಯ ವಾಹನ ಗೂಬೆ, ವಿಷ್ಣುವಿನ ವಾಹನ ಗರುಡ ಹೀಗೆ ಒಂದೊಂದು ದೇವರು ಒಂದೊಂದು ಪ್ರಾಣಿಗಳನ್ನು ವಾಹನ ಮಾಡಿಕೊಂಡಿದ್ದಾರೆ ಎಂದು ಧರ್ಮ ಗ್ರಂಥಗಳಲ್ಲಿ ಹೇಳಲಾಗುತ್ತದೆ. ಹಾಗೆಯೇ ಹಿಂದೂ ಧರ್ಮದಲ್ಲಿ ಕೋತಿಗೆ ಮಹತ್ವದ ಸ್ಥಾನವಿದೆ. ಕೋತಿಯನ್ನು ಹನುಮಂತನ ರೂಪವೆಂದು ಪೂಜಿಸಲಾಗುತ್ತದೆ. ಕೋತಿ ಕಂಡ್ರೆ ಅದಕ್ಕೆ ಆಹಾರ ನೀಡುವ ಪದ್ಧತಿ ನಮ್ಮಲ್ಲಿದೆ.
ಬಹುತೇಕ ಪ್ರವಾಸಿ (Tourist) ತಾಣಗಳಲ್ಲಿ ಮಂಗ (Monkey) ಗಳ ಸಂಖ್ಯೆ ಹೆಚ್ಚಿರುತ್ತದೆ. ಅದ್ರಲ್ಲೂ ದೇವಸ್ಥಾನ (Temple) ಗಳಿರುವ ಜಾಗದಲ್ಲಿ ನೀವು ಹೆಚ್ಚಿನ ಮಂಗಗಳನ್ನು ನೋಡ್ಬಹುದು. ಭಕ್ತರು ದೇವರ ದರ್ಶನ ಪಡೆದ ನಂತ್ರ ಮಂಗಕ್ಕೆ ಹಣ್ಣು, ಬ್ರೇಡ್ ಸೇರಿದಂತೆ ಆಹಾರ ನೀಡ್ತಾರೆ. ನೀವು ನೀಡುವ ಆಹಾರ (Food) ದಿಂದ ಮಂಗಗಳ ಹೊಟ್ಟೆ ತುಂಬುವುದು ಮಾತ್ರವಲ್ಲ ಇದ್ರಿಂದ ನಿಮಗೂ ಪ್ರಯೋಜನವಿದೆ. ನಾವಿಂದು ಮಂಗಕ್ಕೆ ಆಹಾರ ನೀಡಿದ್ರೆ ಏನೆಲ್ಲ ಪ್ರಯೋಜನವಿದೆ ಎಂಬುದನ್ನು ನಿಮಗೆ ಹೇಳ್ತೇವೆ. ಕೋತಿಗಳು ಹನುಮಂತನ ರೂಪ ಮಾತ್ರವಲ್ಲ. ಇದು ಬುಧ ಗ್ರಹವನ್ನು ಪ್ರತಿನಿಧಿಸುತ್ತದೆ. ನೀವು ಬಜರಂಗಬಲಿಯ ಭಕ್ತರಾಗಿದ್ದರೆ ಅಥವಾ ನಿಮ್ಮ ಜಾತಕದಲ್ಲಿ ಬುಧ ಗ್ರಹ ದುರ್ಬಲವಾಗಿದ್ದರೆ, ನೀವು ಮಂಗಗಳಿಗೆ ಆಹಾರವನ್ನು ನೀಡಬೇಕು ಎನ್ನುತ್ತಾರೆ ಜ್ಯೋತಿಷ್ಯಿಗಳು.
ಮನೋಕಾಮನ ಈಡೇರಲು ಶಿವಲಿಂಗಕ್ಕೆ ಈ ಒಂದು ವಸ್ತುವನ್ನು ಅರ್ಪಿಸಿ
ಧರ್ಮಗ್ರಂಥಗಳಲ್ಲಿ ಕೋತಿಗಿದೆ ಪ್ರಾಮುಖ್ಯತೆ :
ಬೆಳಿಗ್ಗೆ ಕೋತಿ ಕಂಡ್ರೆ ಏನು ಅರ್ಥ? : ಕೋತಿಯನ್ನು ನೋಡುವುದು ಶುಭ ಸಂಕೇತ. ಅದರಲ್ಲೂ ಮುಂಜಾನೆಯೇ ಕೋತಿಯನ್ನು ಕಂಡರೆ ನಿಮ್ಮ ಇಡೀ ದಿನ ಖುಷಿಯಿಂದ ಕಳೆಯುತ್ತದೆ ಎಂದು ಶಾಸ್ತ್ರದಲ್ಲಿ ಹೇಳಲಾಗಿದೆ.
ಕೋತಿಗೆ ಎರಡು ಸಮಯ ನೀಡಿ ಆಹಾರ : ಬೆಳಿಗ್ಗೆ ಮತ್ತು ಸಂಜೆ ಕೋತಿಗೆ ಆಹಾರ ನೀಡುವುದ್ರಿಂದ ಶುಭ ಫಲ ಪ್ರಾಪ್ತಿಯಾಗುತ್ತದೆ. ಮಂಗಗಳಿಗೆ ಆಹಾರ ನೀಡುವುದು ಎಂದರೆ ಹನುಮಂತನಿಗೆ ಅನ್ನವನ್ನು ಅರ್ಪಿಸಿದಂತೆ.
ಮಂಗಗಳಿಗೆ ಯಾವ ಆಹಾರ ನೀಡ್ಬೇಕು ? : ಮಂಗಗಳಿಗೆ ಅಪ್ಪಿತಪ್ಪಿಯೂ ನೀವು ಮಾಂಸಾಹಾರವನ್ನು ನೀಡಬೇಡಿ. ಅವುಗಳಿಗೆ ಸಸ್ಯಾಹಾರಿ ಆಹಾರವನ್ನು ನೀಡಬೇಕು ಎಂಬುದನ್ನು ನೆನಪಿನಲ್ಲಿಡಿ.
ಗ್ರಹ ದುರ್ಬಲವಾಗಿದ್ದರೆ ಈ ಆಹಾರ ನೀಡಿ : ನಿಮ್ಮ ಜಾತಕದಲ್ಲಿ ಮಂಗಳ ಗ್ರಹವು ದುರ್ಬಲವಾಗಿದ್ದರೆ ನೀವು ಕೋತಿಗೆ ಕೆಂಪು ಬಣ್ಣದ ಹಣ್ಣನ್ನು ನೀಡಬೇಕು. ಬುಧ ಗ್ರಹ ನಿಮ್ಮ ಜಾತಕದಲ್ಲಿ ದುರ್ಬಲನಾಗಿದ್ದರೆ ಕೋತಿಗಳಿಗೆ ತಿನ್ನಲು ನಿಯಮಿತವಾಗಿ ದೇಸಿ ತುಪ್ಪದಿಂದ ತಯಾರಿಸಿದ ರೊಟ್ಟಿಯನ್ನು ನೀಡಬೇಕು.
ನೀರು ಕೊಟ್ಟು ಪುಣ್ಯ ಕಟ್ಟಿಕೊಳ್ಳಿ : ಯಾವುದೇ ಪ್ರಾಣಿ, ಪಕ್ಷಿ ಅಥವಾ ಮನುಷ್ಯನಿಗೆ ನೀರು ನೀಡುವುದು ಪುಣ್ಯದ ಕೆಲಸ. ನೀವು ಪ್ರತಿ ದಿನ ಕೋತಿಗೆ ನೀರು ನೀಡ್ತಿದ್ದರೆ ನಿಮ್ಮ ಜಾತಕದಲ್ಲಿರುವ ಚಂದ್ರ ಬಲಪಡೆಯುತ್ತಾನೆ. ತಾಯಿ ಜೊತೆಗಿನ ಸಂಬಂಧ ಗಟ್ಟಿಯಾಗುವ ಜೊತೆಗೆ ತಾಯಿಯ ಆರೋಗ್ಯದಲ್ಲಿ ಸುಧಾರಣೆ ಕಾಣಿಸುತ್ತದೆ.
ಕೋತಿಗೆ ನೀಡಿ ಅನ್ನ : ನೀವು ಕೋತಿಗಳಿಗೆ ಅನ್ನ ಕೂಡ ನೀಡಬಹುದು. ಅನ್ನ ಶುಕ್ರ ಗ್ರಹಕ್ಕೆ ಶಕ್ತಿ ತುಂಬುತ್ತದೆ. ಇದ್ರಿಂದ ಮಹಿಳೆಯರಿಗೆ ಹೆಚ್ಚು ಲಾಭ. ಇದ್ರಿಂದ ನಿಮ್ಮ ಸೌಂದರ್ಯ ಡಬಲ್ ಆಗುತ್ತದೆ.
ಕೋತಿಗೆ ಸಿಹಿ ನೀಡಿ : ಮಂಗಗಳು ಸಿಹಿಯನ್ನು ತಿನ್ನುತ್ತವೆ. ನೀವು ಸಿಹಿ ಆಹಾರವನ್ನು ಕೋತಿಗೆ ನೀಡಬಹುದು. ಇದ್ರಿಂದ ನಿಮ್ಮ ಮನೆಯ ಸಂತೋಷ ಹೆಚ್ಚಾಗುತ್ತದೆ. ಮಂಗಳ ಗ್ರಹ ಬಲವಾಗುತ್ತಾನೆ.
ಕೋತಿಗೆ ಪಪ್ಪಾಯಿ ಹಣ್ಣು ನೀಡಿದ್ರೆ ಏನು ಲಾಭ ಗೊತ್ತಾ? : ಮಂಗಗಳಿಗೆ ಪಪ್ಪಾಯಿ ಹಣ್ಣನ್ನು ನೀಡುವುದ್ರಿಂದ ನಿಮ್ಮ ಜಾತಕದಲ್ಲಿರುವ ಗುರು ಬಲಗೊಳ್ಳುತ್ತಾನೆ. ಇದ್ರಿಂದ ಮದುವೆಗೆ ಸಂಬಂಧಿಸಿದ ಎಲ್ಲ ಸಮಸ್ಯೆ ದೂರವಾಗುತ್ತದೆ. ಪಪ್ಪಾಯಿ ಮಾತ್ರವಲ್ಲದೆ ನೀವು ಯಾವುದೇ ಹಳದಿ ವಸ್ತುವನ್ನು ಕೋತಿಗೆ ಅರ್ಪಿಸಿದ್ರೆ ಗುರು ನಿಮಗೆ ಪ್ರಯೋಜನಕಾರಿಯಾಗ್ತಾನೆ.
Zodiac Sign: ಸಂಗಾತಿಯನ್ನ ಅಮ್ಮನಂತೆ ಕಾಳಜಿ, ಪ್ರೀತಿ ಮಾಡೋ ರಾಶಿಗಳಿವು
ಶನಿಯ ಕೆಂಗಣ್ಣಿನಿಂದ ತಪ್ಪಿಸಿಕೊಳ್ಳಲು ಹೀಗೆ ಮಾಡಿ : ಕರಿಬೇವು ಕೋತಿಗೆ ಬಹಳ ಪ್ರಿಯ. ಶನಿಯ ಕೋಪ ನಿಮ್ಮ ಮೇಲಿದ್ದರೆ ಕರಿಬೇವನ್ನು ಕೋತಿಗಳಿಗೆ ಆಹಾರದ ರೂಪದಲ್ಲಿ ನೀಡಬೇಕು. ನೀವು ಕರಿಬೇವನ್ನು ಪ್ರತಿ ದಿನ ಬೆಳಿಗ್ಗೆ ಅಥವಾ ಶನಿವಾರ ಬೆಳಿಗ್ಗೆ ನೀಡಬಹುದು.