'ಬೆಳಗ್ಗೆದ್ದು ಯಾರ ಮುಖವ ನಾನು ನೋಡಿದೆ? ಅಂದಾನೋ, ಅದೃಷ್ಟಾನೋ ಮುಂದೆ ಕುಂತಿದೆ..' ಹೌದು, ಬೆಳಗ್ಗೆ ಸರಿಯಾಗಿ ಆರಂಭವಾದರೆ ಮಾತ್ರ ಅದೃಷ್ಟ ಜೊತೆಯಲ್ಲಿರುತ್ತದೆ. ಬೆಳಗನ್ನು ಹೇಗೆ ಆರಂಭಿಸಬಾರದು ಗೊತ್ತಾ?
ದಿನದಲ್ಲಿ ಏನಾದರೂ ಕೆಡುಕಾದರೆ ಇವತ್ತು ಯಾರ ಮುಖ ನೋಡಿ ಎದ್ದೆನಪ್ಪಾ ಎಂದು ಗೋಳಾಡುವವರಿದ್ದಾರೆ. ಒಳ್ಳೆಯದಾದರೂ ಎಂಥ ಅದೃಷ್ಟ, ಯಾರ್ ಮುಖಾ ನೋಡೆದ್ದೆ ಎಂದು ಕೇಳುವವರಿದ್ದಾರೆ. ಹಾಗೆ ಬೆಳಗನ್ನು ಸರಿಯಾದ ರೀತಿಯಲ್ಲೇ ಆರಂಭಿಸಬೇಕು. ಆಗಷ್ಟೇ ಇಡೀ ದಿನ ಚೆನ್ನಾಗಿ ಸಾಗಲು ಸಾಧ್ಯ ಎಂಬ ನಂಬಿಕೆ ನಮ್ಮೆಲ್ಲರ ನಡುವಿದೆ. ಸಾಮಾನ್ಯವಾಗಿ ಬೆಳಗ್ಗೆದ್ದ ಕೂಡಲೇ ದೇವರ ಫೋಟೋ ನೋಡುವುದು, ಇಲ್ಲವೇ ಅಂಗೈ ನೋಡಿ ದೇವರ ನಾಮ ಪಠಿಸುವುದು ಸರಿಯಾದ ಕೆಲಸ. ಅದು ಬಿಟ್ಟು ಎದ್ದ ಕೂಡಲೇ ಕೆಲ ವಸ್ತುಗಳ ಮುಖ ನೋಡಿದರೆ ದಿನ ಕೆಟ್ಟೀತೆಂದೇ ಅರ್ಥ. ಹಾಗಿದ್ದರೆ ಎದ್ದ ಕೂಡಲೇ ನೋಡಬಾರದ್ದೇನು ಎಂದು ತಿಳ್ಕೋಬೇಕಾ? ಮುಂದೆ ಓದಿ.
ಕನ್ನಡಿ(mirror)
ಬೆಳಗ್ಗೆದ್ದ ಕೂಡಲೇ ಕನ್ನಡಿಯಲ್ಲಿ ನಿಮ್ಮ ನಿದ್ದೆಯಮಲಿನ ಮುಖ ನೋಡಿಕೊಳ್ಳಬೇಡಿ. ಎಲ್ಲಕ್ಕಿಂತ ಹೆಚ್ಚಾಗಿ ಕನ್ನಡಿ ನೋಡಬೇಡಿ. ಏಳುವಾಗ ಎದುರೇ ಕನ್ನಡಿ ಇರುವಂತೆ ಕೋಣೆಯ ವಸ್ತುಗಳ ಜೋಡಣೆ ಇರಬಾರದು. ಹಾಗೊಂದು ವೇಳೆ ಎದ್ದ ಕೂಡಲೇ ಕನ್ನಡಿ ನೋಡಿದರೆ, ನೀವು ರಾತ್ರಿಯ ನೆಗೆಟಿವ್ ಎನರ್ಜಿ(negative energy)ಯನ್ನು ಎಳೆದುಕೊಳ್ಳುವಿರಿ. ಆ ನಕಾರಾತ್ಮಕ ಶಕ್ತಿ ಹಾಗೂ ಯೋಚನೆಗಳು ಇಡೀ ದಿನ ನಿಮ್ಮ ಜೊತೆಗೇ ಇರುತ್ತದೆ. ಹಾಗಾಗಿ, ಯಾವುದೇ ಕೆಲಸ ಮಾಡಲು ಮನಸ್ಸಾಗುವುದಿಲ್ಲ.
Char Dham Yatra: ಮೋಕ್ಷದ ಹಾದಿ ಚಾರ್‌ಧಾಮ್ ಯಾತ್ರೆ
ತೊಳೆಯದ ಪಾತ್ರೆಗಳು(Dirty utensils)
ಹಲವರಿಗೆ ಒಂದು ಅಭ್ಯಾಸವಿರುತ್ತದೆ. ರಾತ್ರಿ ತಿಂದ, ಅಡುಗೆ ಮಾಡಿದ ಪಾತ್ರೆಗಳನ್ನೆಲ್ಲ ಅಡುಗೆ ಮನೆಯ ಸಿಂಕಿನಲ್ಲಿ ರಾಶಿ ಹಾಕುವುದು. ಬೆಳಗ್ಗೆ ಎದ್ದ ಮೇಲೆ ಅದನ್ನು ತೊಳೆಯುವುದೋ ಇಲ್ಲವೇ ಕೆಲಸದಾಕೆ ಬರುವವರೆಗೆ ಇಡುವುದೋ ಮಾಡುತ್ತಾರೆ. ಆದರೆ, ಹೀಗೆ ತೊಳೆಯದೆ ಬಿಟ್ಟ ಪಾತ್ರೆಗಳು ಮನೆಯಲ್ಲಿ ನೆಗೆಟಿವ್ ಎನರ್ಜಿ ಹೆಚ್ಚಿಸುತ್ತವೆ. ಹಾಗಾಗಿ, ಅಡುಗೆಮನೆ(kitchen), ಸಿಂಕನ್ನು ಸಂಪೂರ್ಣ ಸ್ವಚ್ಛಗೊಳಿಸಿದ ಬಳಿಕವೇ ಮಲಗಬೇಕು. ಬೆಳಗ್ಗೆದ್ದ ಕೂಡಲೇ ತೊಳೆಯದ ಪಾತ್ರೆಗಳನ್ನು ನೋಡುವುದು ದುರದೃಷ್ಟವನ್ನು ತರುತ್ತದೆ. ದಿನವಿಡೀ ಟೆನ್ಷನ್‌ನಲ್ಲಿಯೇ ಕಳೆಯುವಂತಾಗುತ್ತದೆ.
ನೆರಳು(shadow)
ಬೆಳಗ್ಗೆ ಎದ್ದ ಕೂಡಲೇ ನಮ್ಮದೇ ಅಥವಾ ಬೇರಾರದೋ ನೆರಳನ್ನು ನೋಡುವುದು ಶುಭ ಸಂಕೇತವಲ್ಲ. ಹಾಗೆ ನೆರಳನ್ನು ನೋಡುವುದರಿಂದ ಇಡೀ ದಿನ ಟೆನ್ಷನ್, ಆತಂಕ, ಸಿಟ್ಟು ಕಾಣಿಸಿಕೊಳ್ಳುತ್ತದೆ. ಹಾಗಾಗಿ ಬೆಳಗ್ಗೆದ್ದ ಕೂಡಲೇ ನೆರಳನ್ನು ನೋಡಬೇಡಿ. ಕೋಣೆಯ ಲೈಟಿಂಗ್ ವ್ಯವಸ್ಥೆ ಕೂಡಾ ನಿಮ್ಮ ನೆರಳನ್ನು ತೋರುವಂತೆ ಮಲಗಿದಲ್ಲಿ ತಲೆ ಮೇಲೆಯೇ ಇರಬಾರದು.
Traits of Tuesday Born: ಮಂಗಳವಾರ ಹುಟ್ಟಿದವರ ವೃತ್ತಿ, ವೈವಾಹಿಕ ಜೀವನ ಹೇಗೆ?
undefined
ಹಾಳಾದ ಗಡಿಯಾರ(Clock)
ಹಾಳಾದ ಗಡಿಯಾರವನ್ನು ಬೆಳ್ಳಂಬೆಳಗ್ಗೆ ನೋಡುವುದರಿಂದ ನಿಮ್ಮ ಸಮಯ ಕೆಟ್ಟಿತೆಂದೇ ಅರ್ಥ. ಇಡೀ ದಿನ ಹಾಳಾಗುವುದು. ಕೇವಲ ಕೆಟ್ಟ ಗಡಿಯಾರವಷ್ಟೇ ಅಲ್ಲ, ಸೂಜಿ ದಾರ, ಒಡೆದ ವಿಗ್ರಹಗಳು ಮುಂತಾದವನ್ನು ಕೂಡಾ ಬೆಳಗ್ಗೆ ಮೊದಲಿಗೆ ನೋಡಬಾರದು.
ಪ್ರಾಣಿಗಳ ಫೋಟೋ
ಕೋಣೆಯಲ್ಲಿ ಪ್ರಾಣಿಗಳ ಫೋಟೋ ಹಾಕಿಕೊಳ್ಳಬೇಡಿ. ಬೆಳಗ್ಗೆ ಎದ್ದ ಕೂಡಲೇ ಪ್ರಾಣಿಗಳ ಮುಖ ನೋಡುವುದರಿಂದ ದಿನದಲ್ಲಿ ಜಗಳ, ಕಿರಿಕಿರಿ ಎದುರಿಸಬೇಕಾಗಬಹುದು. ಆ ದಿನ ತುಂಬಾ ಉದಾಸೀನವಾಗಿ ಸಾಗಬಹುದು.
ಬೆಳಗ್ಗೆ(morning) ಹೇಗೆ ಶುರು ಮಾಡಬೇಕು?
ವಾಸ್ತುಶಾಸ್ತ್ರದ ಪ್ರಕಾರ, ಬೆಳಗ್ಗೆದ್ದ ಕೂಡಲೇ ದೇವರ ಫೋಟೋವನ್ನು ನೋಡಿ ಕೈಮುಗಿಯಬೇಕು. ನಂತರ ನಿಮ್ಮ ಕೈಗಳನ್ನು ಚೆನ್ನಾಗಿ ತಿಕ್ಕಿ ಕಣ್ಣಿಗೊತ್ತಿಕೊಂಡು ನೋಡಬೇಕು. ಆಮೇಲೆ ಅಂಗೈ(palm) ನೋಡುತ್ತಾ ಕರಾಗ್ರೆ ಶ್ಲೋಕ ಹೇಳುವುದು ಇಲ್ಲವೇ ಗಾಯಂತ್ರಿ ಮಂತ್ರ ಹೇಳುವುದು ಒಳ್ಳೆಯದು. ಇದಲ್ಲದೆ, ಎದ್ದ ಕೂಡಲೇ, ನವಿಲಿನ ಕಣ್ಣು(peacock eyes)ಗಳನ್ನು ನೋಡುವುದು, ಹೂವುಗಳನ್ನು ನೋಡುವುದು ಕೂಡಾ ಒಳ್ಳೆಯದು. ನಂತರ ನಿಮ್ಮ ದಿನ ಹೇಗಿರಬೇಕೆಂಬ ಬಗ್ಗೆ ಒಳ್ಳೆಯ ಯೋಚನೆಗಳನ್ನು ಮಾಡಿಕೊಳ್ಳಿ. ಇದರಿಂದ ಧನಾತ್ಮಕ ಶಕ್ತಿ ಇಡೀ ದಿನ ನಿಮ್ಮೊಂದಿಗಿರುತ್ತದೆ.