ನೋಡೋದಾದ್ರೆ ಈ ವಸ್ತುಗಳನ್ನೇ ನೋಡಿ, ನಿಮಗೆ ಒಲಿಯತ್ತೆ ಅದೃಷ್ಟ..!

By Suvarna News  |  First Published May 30, 2022, 7:02 PM IST

ಪ್ರಮುಖ ಪುರಾಣಗಳಲ್ಲಿ ಒಂದಾದ ಗರುಡ ಪುರಾಣದಲ್ಲಿ ಜೀವನದಲ್ಲಿ ಅಳವಡಿಸಿಕೊಳ್ಳಬೇಕಾದ ಮೌಲ್ಯಗಳನ್ನು ಉಲ್ಲೇಖಿಸಿದ್ದಾರೆ. ಕೆಲವು ವಸ್ತುಗಳು ಕನಸಿನಲ್ಲಿ ಕಂಡರೆ ಮತ್ತು ಇನ್ನು ಕೆಲವು ವಸ್ತುಗಳನ್ನು ನಾವು ನೋಡಿದರೆ ಜೀವನ ಅತ್ಯಂತ ಸುಖ ಮತ್ತು ನೆಮ್ಮದಿಯಿಂದ ಕೂಡಿರುತ್ತದೆ ಎಂದು ಹೇಳಲಾಗುತ್ತದೆ. 
 


ಗರುಡ ಪುರಾಣದ (Garuda purana) ಪ್ರಕಾರ ಈ ವಸ್ತುಗಳನ್ನು ನೋಡುವುದು ಶುಭ ಎಂದು ಹೇಳಲಾಗುತ್ತದೆ. ಗರುಡ ಪುರಾಣದಲ್ಲಿ ಜನನದಿಂದ ಆರಂಭಿಸಿ ಸಾವಿನವರೆಗೂ ಮತ್ತು ಸಾವಿನ ನಂತರ ಆತ್ಮದ (Soul) ಬಗ್ಗೆ ಸವಿಸ್ತಾರವಾಗಿ ತಿಳಿಸಲಾಗಿದೆ. ಅಷ್ಟೇ ಅಲ್ಲದೆ ಜೀವನದಲ್ಲಿ ಪಾಪ, ಪುಣ್ಯ, ಶುಭ ಮತ್ತು ಅಶುಭಗಳ ಬಗ್ಗೆ ಸಹ ಹೇಳಲಾಗಿದೆ. ಗರುಡ ಪುರಾಣದ ಪ್ರಕಾರ ಕೆಲವು ವಸ್ತುಗಳನ್ನು ನೋಡುವುದು ಅತ್ಯಂತ ಶುಭವೆಂದು ಮತ್ತು ಅದರಿಂದ ಜೀವನದಲ್ಲಿ (Life) ಸುಖ – ಸಂತೋಷ (Hppiness) ನೆಮ್ಮದಿ ನೆಲೆಸುತ್ತದೆ ಎಂದು ಹೇಳಲಾಗುತ್ತದೆ. ಹಾಗಾಗಿ ಗರುಡ ಪುರಾಣ ಹೇಳಿರುವ ಪ್ರಕಾರ ಏನನ್ನು ನೋಡಿದರೆ ಒಳ್ಳೆಯದು ಎಂಬುದನ್ನು ನೋಡೋಣ..

ಗರುಡ ಪುರಾಣದಲ್ಲಿ ಜೀವನವನ್ನು ಸುಂದರಗೊಳಿಸಿಗೊಳ್ಳಲು ಬೇಕಾಗುವ ಅಗತ್ಯ ಮಾಹಿತಿಗಳನ್ನು ತಿಳಿಸಿದ್ದಾರೆ. ಇಲ್ಲಿ ಹೇಳಿರುವ ಪ್ರಭಾವಿ ವಿಷಯಗಳನ್ನು ಜನರು ಇಂದಿಗೂ ತಮ್ಮ ಜೀವನದಲ್ಲಿ ಅಳವಡಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಹಿಂದೂ ಧರ್ಮದಲ್ಲಿ ಒಟ್ಟು ಹದಿನೆಂಟು ಪುರಾಣಗಳಿವೆ (Puranas) ಎಂದು ಹೇಳಲಾಗುತ್ತದೆ. ಅಂತಹ ಪ್ರಮುಖವಾದ ಪುರಾಣಗಳಲ್ಲಿ ಗರುಡ ಪುರಾಣವು ಸಹ ಒಂದು. ಶ್ರೀ ಮಹಾವಿಷ್ಣುವಿನ ಪುರಾಣವಾದ ಗರುಡ ಪುರಾಣವನ್ನು ವ್ಯಕ್ತಿಯು ಮರಣ ಹೊಂದಿದ ಸಮಯದಲ್ಲಿ ಪಠಿಸಿ ಹೇಳುವ ರೂಢಿ ಇದೆ. ಇದರಿಂದ ಮರಣ ಹೊಂದಿದ ವ್ಯಕ್ತಿಗೆ ಮೋಕ್ಷ ಪ್ರಾಪ್ತವಾಗುತ್ತದೆ ಎಂದು ಹೇಳಲಾಗುತ್ತದೆ. ಹಾಗೆಯೇ ಈ ಪುರಾಣದಲ್ಲಿ ಯಾವ ವಸ್ತುಗಳನ್ನು ನೋಡುವುದು ಶುಭ ಎಂಬುದರ ಬಗ್ಗೆ ಸಹ ಪ್ರಸ್ತಾಪಿಸಿದ್ದಾರೆ. ಅದರಿಂದ ಜೀವನಕ್ಕೆ ಆಗುವ ಲಾಭಗಳ ಬಗ್ಗೆಯೂ ಉಲ್ಲೇಖಿಸಿದ್ದಾರೆ. ಹಾಗಾದರೆ ಅವುಗಳ ಬಗ್ಗೆ ತಿಳಿಯೋಣ...

ಇದನ್ನು ಓದಿ : ನಿಕಟ ಸಂಬಂಧದಲ್ಲಿ ಜಗಳಗಳಾಗ್ತಿದ್ರೆ ಈ ಗ್ರಹಗಳೇ ಕಾರಣ.. ನೀವೇನು ಮಾಡಬೇಕು?

ಹಸುವಿನ ಹಾಲು (Cow milk)
ಹಿಂದೂ ಧರ್ಮದಲ್ಲಿ ಹಸುವನ್ನು ಗೋ ಮಾತೆ (Gou mata) ಎಂದೇ ಕರೆಯುತ್ತಾರೆ. ಗೋವಿಗೆ ಪೂಜ್ಯ ಸ್ಥಾನವನ್ನು ನೀಡಲಾಗಿದ್ದು, ಗೋ ಮಾತೆಯಲ್ಲಿ 33 ಕೋಟಿ ದೇವತೆಗಳ (God) ವಾಸವಿದೆ ಎಂದು ಪುರಾಣಗಳು ಉಲ್ಲೇಖಿಸುತ್ತವೆ. ಅಷ್ಟೇ ಅಲ್ಲದೆ ಗೋವನ್ನು ಪೂಜಿಸುವುದರಿಂದ ಶ್ರೀಕೃಷ್ಣನ (Shri Krishna) ಕೃಪೆಯನ್ನು ಪಡೆಯುವುದಲ್ಲದೇ ಜೀವನದಲ್ಲಿ ಸಕಲ ಸುಖಗಳು ಪ್ರಾಪ್ತವಾಗುತ್ತದೆ. ಗರುಡ ಪುರಾಣದ ಪ್ರಕಾರ ಕನಸಿನಲ್ಲಿ (Dream) ಹಸುವಿನ ಹಾಲನ್ನು ನೋಡುವುದು ಶುಭವಾಗಿದೆ. ಇದರಿಂದ ಪುಣ್ಯ ಬರುತ್ತದೆ ಎಂದು ಹೇಳಲಾಗಿದೆ. ಇದರಿಂದ ಅನೇಕ ಪೂಜೆ ಅನುಷ್ಠಾನಗಳಿಗೆ ಸಮವಾಗಿದೆ.

ಗೋಶಾಲೆಯನ್ನು ನೋಡುವುದು
ಮನೆಯಲ್ಲಿ ಹಸುವನ್ನು ಕಟ್ಟಿ ಅದರ ಸೇವೆ ಮಾಡುತ್ತಾ ಪುಣ್ಯ ಸಂಪಾದನೆ ಮಾಡುವುದು ಪುರಾಣ ಕಾಲದಿಂದಲೂ ಚಾಲ್ತಿಯಲ್ಲಿದೆ. ಅಷ್ಟೇ ಅಲ್ಲದೆ ಇತ್ತಿಚಿನ ದಿನಗಳಲ್ಲಿ ಗೋಶಾಲೆಗಳಲ್ಲಿ ಗೋವುಗಳನ್ನು ನೋಡಿ ಅದಕ್ಕೆ ತಕ್ಕ ಮಟ್ಟಿನ ಸೇವೆ ಮಾಡಿ ಪುಣ್ಯ ಪಡೆದುಕೊಳ್ಳುತ್ತಿದ್ದಾರೆ. ಗೋವುಗಳ ಸೇವೆ (Serve) ಮಾಡುವುದರಿಂದ ಮತ್ತು ಗೋಶಾಲೆಯನ್ನು ನೋಡಿ ಗೋವುಗಳನ್ನು ಪೂಜಿಸುವುದರಿಂದ ಪುಣ್ಯ ಪ್ರಾಪ್ತಿಯಾಗುತ್ತದೆ ಎಂದು ಗರುಡ ಪುರಾಣದಲ್ಲಿ ಉಲ್ಲೇಖಿಸಲಾಗಿದೆ. ಇದರಿಂದ ಧನಪ್ರಾಪ್ತಿಯ (Money) ಯೋಗವು ಸಹ ಒದಗಿ ಬರುತ್ತದೆ ಎಂದು ಹೇಳಲಾಗುತ್ತದೆ.

ಇದನ್ನು ಓದಿ : ಮಹಿಳೆಯ ರಹಸ್ಯ ತಿಳ್ಕೊಬೇಕಾ? ಅಂದುಕೊಂಡಷ್ಟು ಕಷ್ಟವಲ್ಲ ಬಿಡಿ!

ಫಸಲು ಕಂಡರೆ (Yield)
ಬೆಳೆ ಬೆಳೆಯುವುದು ಸುಲಭದ ಮಾತಲ್ಲ. ಭೂಮಿಯನ್ನು ಹದಗೊಳಿಸುವುದರಿಂದ ಆರಂಭಿಸಿ ಅಂತ್ಯದಲ್ಲಿ ಬೆಳೆ ಕಟಾವು ಮಾಡುವವರೆಗೂ ರೈತನಿಗೆ (Farmer) ಎಲ್ಲಿಲದ ಆತಂಕ. ಹಾಗಾಗಿ ಭೂಮಿ ತಾಯಿಯನ್ನು ಪೂಜಿಸುವ ರೈತರನ್ನು ಸಹ ದೇವರೆಂದೇ ಕಾಣುತ್ತಾರೆ. ಗರುಡ ಪುರಾಣದ ಪ್ರಕಾರ ಕನಸಿನಲ್ಲಿ ಫಸಲನ್ನು ಕಂಡರೆ ಉತ್ತಮವೆಂದು ಹೇಳಲಾಗುತ್ತದೆ. ತೆನೆ ತೂಗುತ್ತಿರುವ ಫಸಲನ್ನು ಕನಸಿನಲ್ಲಿ ಕಂಡರೆ ಅದು ಜೀವನದಲ್ಲಿ ಸುಖ (Happiness) ಬರುತ್ತದೆ ಎನ್ನುವುದನ್ನು ತೋರಿಸುತ್ತದೆ. ಅಷ್ಟೇ ಅಲ್ಲದೆ ಜೀವನದಲ್ಲಿ ಎದುರಾಗುತ್ತಿರುವ ಅಡೆ ತಡೆಗಳು (Problems) ಸಹ ನಿವಾರಣೆಯಾಗುತ್ತವೆ ಎಂದು ಗರುಡ ಪುರಾಣ ಉಲ್ಲೇಖಿಸುತ್ತದೆ.

click me!