ಆಹಾರ, ಬಟ್ಟೆ, ಸ್ಥಳ ಸೇರಿದಂತೆ ಎಲ್ಲ ವಿಷಯಗಳಲ್ಲೂ ಪ್ರತಿಯೊಬ್ಬರಿಗೂ ಅವರದೇ ಆದ ಇಷ್ಟಗಳಿರುತ್ತವೆ, ಆಯ್ಕೆಗಳಿರುತ್ತವೆ. ಹೀಗೆ ಒಬ್ಬೊಬ್ಬರಿಗೆ ಒಂದೊಂದು ಬಣ್ಣ ಇಷ್ಟ. ನಿಮ್ಮಿಷ್ಟದ ಬಣ್ಣ ನಿಮ್ಮ ಬಗ್ಗೆ ಏನು ಹೇಳುತ್ತದೆ ತಿಳಿಯಬೇಕಾ?
ಲೋಕೋ ಭಿನ್ನ ರುಚಿಃ ಎಂಬಂತೆ ಒಬ್ಬೊಬ್ಬರ ಇಷ್ಟಕಷ್ಟಗಳು ಒಂದೊಂದು ರೀತಿ. ಅದು ಆಹಾರವಿರಬಹುದು, ಬಟ್ಟೆ, ಒಡವೆ, ಪ್ರೀತಿ ಇತ್ಯಾದಿ ಏನೇ ಇರಬಹುದು. ಹಾಗೆಯೇ ಒಬ್ಬೊಬ್ಬರಿಗೆ ಒಂದೊಂದು ಬಣ್ಣ ಇಷ್ಟವಿರುತ್ತದೆ. ಯಾಕೆ ಅದೇ ಬಣ್ಣ ಇಷ್ಟವಾಗುತ್ತೆ ಎಂದು ಹೇಳೋದು ಕಷ್ಟ. ಜಗತ್ತಿನಲ್ಲಿ ಅತಿ ಹೆಚ್ಚು ಜನ ಇಷ್ಟಪಡುವ ಬಣ್ಣವೆಂದರೆ ನೀಲಿ. ಅದರಲ್ಲೂ ಪುರುಷರಿಗೆ ಈ ಬಣ್ಣ ಹೆಚ್ಚು ಇಷ್ಟ. ಬಣ್ಣಗಳು ಈ ಜಗತ್ತನ್ನು ಸಾಕಷ್ಟು ಸುಂದರವಾಗಿಸಿವೆ. ಅದು ಬಿಡಿ, ಆಯಾ ಬಣ್ಣದ ಇಷ್ಟದ ಅನುಸಾರ ವ್ಯಕ್ತಿಯ ಗುಣ ಸ್ವಭಾವಗಳನ್ನು ತಿಳಿಯಬಹುದು.
ಗುಲಾಬಿ ಬಣ್ಣ(Pink)
ಗುಲಾಬಿ ಬಣ್ಣ ಸಾಮಾನ್ಯವಾಗಿ ಹುಡುಗಿಯರ ನೆಚ್ಚಿನ ಬಣ್ಣ ಎಂದು ಹೆಸರಾಗಿದ್ದರೂ, ಕೆಲವು ಹುಡುಗರು ಈ ಬಣ್ಣವನ್ನು ವಿಶೇಷವಾಗಿ ಇಷ್ಟಪಡುತ್ತಾರೆ. ಗುಲಾಬಿ ಬಣ್ಣವನ್ನು ಇಷ್ಟಪಡುವ ಜನರು ತುಂಬಾ ಮೃದು ಹೃದಯದವರು. ಅವರ ಹೃದಯದಲ್ಲಿ ಏನಾಗುತ್ತದೆಯೋ ಅದೇ ಅವರ ನಾಲಿಗೆಯ ಮೇಲೂ ಬರುತ್ತದೆ. ಅಂಥವರು ತಮ್ಮ ಆಲೋಚನೆಗಳ ಜಗತ್ತಿನಲ್ಲಿ ಬದುಕಲು ಇಷ್ಟಪಡುತ್ತಾರೆ. ಇವರು ಸ್ವಲ್ಪ ಹೆಚ್ಚೇ ಫ್ಲರ್ಟಿ ಮತ್ತು ರೊಮ್ಯಾಂಟಿಕ್.
ಕೆಂಪು ಬಣ್ಣ(Red)
ಕೆಂಪು ಬಣ್ಣವನ್ನು ಪ್ರೀತಿಯ ಬಣ್ಣ ಎಂದು ಕರೆಯಲಾಗುತ್ತದೆ. ಅದರಲ್ಲಿ ಯಾವುದೇ ಸಂದೇಹವಿಲ್ಲ. ನೆಚ್ಚಿನ ಬಣ್ಣವು ಕೆಂಪು ಬಣ್ಣದ್ದಾಗಿರುವ ಜನರು ತುಂಬಾ ರೋಮ್ಯಾಂಟಿಕ್ ಮತ್ತು ಹೃದಯದಲ್ಲಿ ಶುದ್ಧರಾಗಿರುತ್ತಾರೆ, ಆದರೆ ಅವರು ಬೇಗನೆ ಕೋಪಗೊಳ್ಳುತ್ತಾರೆ.
ನಂದಿಯ ಕಿವಿಯಲ್ಲಿ ಹೇಳೋ ಆಶಯ ಈಡೇರುತ್ತೆ ನಿಜ, ಆದ್ರೆ ನಿಯಮಗಳು ಗೊತ್ತಾ?
ನೀಲಿ ಬಣ್ಣ(Blue)
ನೀಲಿ ಬಣ್ಣವನ್ನು ಇಷ್ಟಪಡುವವರು, ತಮ್ಮೊಳಗೆ ಅನಂತ-ಆಳವನ್ನು ಹೊಂದಿರುತ್ತಾರೆ, ಅಂತಹ ಜನರು ತುಂಬಾ ಶುದ್ಧ ಹೃದಯವನ್ನು ಹೊಂದಿರುತ್ತಾರೆ. ಆದರೆ ಅವರು ತಮ್ಮ ಕಷ್ಟಗಳನ್ನು ಯಾರೊಂದಿಗೂ ತ್ವರಿತವಾಗಿ ಹಂಚಿಕೊಳ್ಳುವುದಿಲ್ಲ. ಎಲ್ಲರಿಗೂ ಪ್ರೀತಿ ನೀಡುವ ಭಾವ ಅವರಲ್ಲಿರುತ್ತದೆ.
ಹಸಿರು ಬಣ್ಣ(Green)
ಯಾರ ನೆಚ್ಚಿನ ಬಣ್ಣ ಹಸಿರಾಗಿರುತ್ತದೋ ಅಂಥ ಜನರು, ತಮ್ಮ ಬಗ್ಗೆ ಜನರು ಏನು ಯೋಚಿಸುತ್ತಾರೆ ಎಂಬುದರ ಬಗ್ಗೆ ಹೆಚ್ಚು ಕಾಳಜಿ ವಹಿಸುತ್ತಾರೆ. ಅವರು ಇತರರ ಅಭಿಪ್ರಾಯದಿಂದ ಬೇಗನೆ ಪ್ರಭಾವಿತರಾಗುತ್ತಾರೆ. ಮತ್ತೊಬ್ಬರು ತಮ್ಮ ಬಗ್ಗೆ ಏನೂ ಕೆಟ್ಟದ್ದು ಯೋಚಿಸಲೇಬಾರದು ಎಂದುಕೊಳ್ಳುತ್ತಾರೆ.
ಹಳದಿ ಬಣ್ಣ(Yellow)
ಕೇಳಿದರೆ ಆಶ್ಚರ್ಯವಾಗಬಹುದು, ಆದರೆ, ಹಳದಿ ಬಣ್ಣವನ್ನು ಇಷ್ಟಪಡುವವರು ಬಹಳ ಕಡಿಮೆ. ಯಾರು ಹಳದಿ ಬಣ್ಣವನ್ನು ತುಂಬಾ ಇಷ್ಟ ಪಡುತ್ತಾರೋ ಅಂಥ ಜನರು ತುಂಬಾ ಸಂತೋಷವಾಗಿರುತ್ತಾರೆ. ಅವರು ತಮ್ಮ ಜೀವನದಲ್ಲಿ ಯಾವುದರ ಬಗ್ಗೆಯೂ ಹೆಚ್ಚು ತಲೆ ಕೆಡಿಸಿಕೊಳ್ಳುವುದಿಲ್ಲ ಮತ್ತು ಜೀವನ ಹೇಗೆ ಬರುತ್ತದೋ ಹಾಗೆ ತೆಗೆದುಕೊಳ್ಳುತ್ತಾರೆ.
Name and Astrology: ಈ ಹೆಸರಿನ ಪತಿ ಪಡೆದ ಮಹಿಳೆಯರು ಲಕ್ಕಿ
ಕಪ್ಪು ಬಣ್ಣ(Black)
ಕಪ್ಪು ಬಣ್ಣವನ್ನು ಅನೇಕ ಜನರು ಇಷ್ಟಪಡುತ್ತಾರೆ. ತಮ್ಮ ನೆಚ್ಚಿನ ಬಣ್ಣ ಕಪ್ಪಾಗಿರುವವರು ಸದಾ ಅವರ ದೃಷ್ಟಿಕೋನಕ್ಕೆ ಅಂಟಿಕೊಳ್ಳುತ್ತಾರೆ ಮತ್ತು ತುಂಬಾ ಕೋಪಗೊಳ್ಳುತ್ತಾರೆ. ಈ ಜನರು ಸಣ್ಣ ವಿಷಯಗಳಿಗೆ ಬೇಗನೆ ಸಿಟ್ಟಾಗುತ್ತಾರೆ. ಇವರಿಗೆ ಅಧಿಕಾರ ಚಲಾಯಿಸುವುದಿಷ್ಟ. ಎಲ್ಲ ತಮ್ಮ ನಿಯಂತ್ರಣದಲ್ಲಿರಬೇಕೆಂದು ಬಯಸುತ್ತಾರೆ.
ಬಿಳಿ ಬಣ್ಣ(White)
ಬಿಳಿ ಬಣ್ಣವು ಶಾಂತಿ ಮತ್ತು ಸರಳತೆಯನ್ನು ಸಂಕೇತಿಸುತ್ತದೆ. ಬಿಳಿ ಬಣ್ಣವನ್ನು ಇಷ್ಟಪಡುವ ಜನರು ಕೂಡಾ ತುಂಬಾ ಸರಳ ಮತ್ತು ಶುದ್ಧ ಹೃದಯವನ್ನು ಹೊಂದಿರುತ್ತಾರೆ. ಅವರು ಏನನ್ನೂ ಪ್ರದರ್ಶಿಸಲು ಇಷ್ಟಪಡುವುದಿಲ್ಲ. ಅವರು ತಮ್ಮ ಕೆಲಸದ ಬಗ್ಗೆ ಮಾತ್ರ ಕಾಳಜಿ ವಹಿಸುತ್ತಾರೆ.
ದಿನ ಭವಿಷ್ಯ, ವಾರ ಭವಿಷ್ಯ, ನಿಮ್ಮ ರಾಶಿ ವಿಶೇಷ, ದಿನ ವಿಶೇಷ, ಹಬ್ಬ ಹರಿದಿನಗಳು, ಸಂಪ್ರದಾಯ ಆಚರಣೆಗಳು, ಅವುಗಳ ವೈಜ್ಞಾನಿಕ ಹಿನ್ನೆಲೆ, ಪುರಾಣ ಪುಣ್ಯ ಕತೆಗಳು, ವಾಸ್ತು ಕುರಿತು ಹೆಚ್ಚಿನ ಮಾಹಿತಿ ಪಡೆಯಲು ಸುವರ್ಣ ನ್ಯೂಸ್ ಜ್ಯೋತಿಷ್ಯ ವಿಭಾಗವನ್ನು ತಪ್ಪದೇ ನೋಡುತ್ತಿರಿ.