Great Sages: ಸಪ್ತರ್ಷಿಗಳೆಂದರೆ ಯಾರು, ಅವರ ವಿಶೇಷತೆಗಳೇನು?

By Suvarna News  |  First Published Dec 23, 2021, 3:44 PM IST

ಸಪ್ತರ್ಶಿಗಳು, ಸಪ್ತರ್ಶಿ ಮಂಡಲ ಎಂಬ ಹೆಸರನ್ನು ಕೇಳಿಯೇ ಇರುತ್ತೇವೆ. ಆದರೆ, ಈ ಸಪ್ತರ್ಶಿಗಳ್ಯಾರು, ಅವರ ವಿಶೇಷತೆಗಳೇನು ಗೊತ್ತಾ?


ಸಪ್ತರ್ಷಿ(Saptarishi)ಗಳೆಂದರೆ ಏಳು ಮಂದಿ ಋಷಿವರ್ಯರು. ಅವರು ತಮ್ಮ ತಪಸ್ಸು ಮತ್ತಿತರೆ ಶಕ್ತಿಗಳಿಂದಾಗಿ ಅರೆ-ಶಾಶ್ವತ ಸ್ಥಾನ ಪಡೆದವರು. ನಾಲ್ಕು ಕಾಲಗಳಲ್ಲೂ ಮನುಷ್ಯನಿಗೆ ದಾರಿ ತೋರಲು ನಿಂತವರು. ಶಿವನ ಜೊತೆ ಕೆಲಸ ಮಾಡುತ್ತಾ, ಈ ಭೂಮಿಯ ನಿರ್ವಹಣೆಗೆ ಸಹಾಯಕರಾದವರು. 

ಈ ಎಲ್ಲ ಏಳು ಮಂದಿಯೂ ಬ್ರಹ್ಮನ ಮನಸ್ಸಿನಿಂದ ಜನಿಸಿದವರು. ಒಂದು ಮನ್ವಂತರ ಇವರ ಆಯಸ್ಸು. ಅಂದರೆ 306,720,000 ವರ್ಷಗಳು. ಈ ಸಂದರ್ಭದಲ್ಲಿ ಬ್ರಹ್ಮನ ಪ್ರತಿನಿಧಿಗಳಾಗಿರುವ ಸಪ್ತರ್ಷಿಗಳು ನಂತರ ದೇವರಲ್ಲಿ ಸೇರಿ ಹೋಗುತ್ತಾರೆ. ಎಲ್ಲ ಸಪ್ತ ಋಷಿಗಳೂ ಬ್ರಹ್ಮರ್ಷಿಗಳೇ. ಅಂದರೆ ಈ ಬ್ರಹ್ಮಾಂಡದ ಸಕಲವನ್ನೂ ಅರಿತವರು. ಯಾರೂ ಕೂಡಾ ಕೇವಲ ತಮ್ಮ ಸಾಧನೆಯಿಂದ ಬ್ರಹ್ಮಾಂಡವನ್ನು ಸಂಪೂರ್ಣ ಅರಿಯಲು ಸಾಧ್ಯವಿಲ್ಲ. ಅಂಥದ್ದನ್ನು ಸಾಧಿಸದ್ದು ವಿಶ್ವಾಮಿತ್ರರು ಮಾತ್ರ. ಉಳಿದೆಲ್ಲರೂ ಬ್ರಹ್ಮನ ಸೃಷ್ಟಿಯಾದ್ದರಿಂದ ತಿಳಿದವರು. ವಿಶ್ವಾಮಿತ್ರರು ಸಾವಿರಾರು ವರ್ಷಗಳ ಕಾಲ ತಪಸ್ಸು ಹಾಗೂ ಧ್ಯಾನ ನಿರತರಾಗಿ ಬ್ರಹ್ಮರ್ಶಿ ಪಟ್ಟಕ್ಕೇರಿದ್ದಾರೆ. 

Tap to resize

Latest Videos

ಸಪ್ತರ್ಷಿಗಳು(Seven Great Sages)
ಈ ಬ್ರಹ್ಮರ್ಶಿಗಳು ಎಷ್ಟು ಅಸಾಮಾನ್ಯರೆಂದರೆ, ಅವರು ಭೂಮಿ ಮೇಲಿನ ಎಲ್ಲ ಶಸ್ತ್ರಾಸ್ತ್ರಗಳನ್ನೂ ಸೋಲಿಸಬಲ್ಲರು. ಭವಿಷ್ಯವನ್ನು ಓದಬಲ್ಲರು, ಹುಟ್ಟು ಸಾವಿನ ಬಾಧೆ ಇವರಿಗಿಲ್ಲ. ದೇವತೆಗಳಿಗಿಂತಲೂ ಮೇಲಿನ ಸ್ಥಾನ ಇವರದು. 
ಹಾಗಾದರೆ, ಸಪ್ತರ್ಷಿಗಳು ಯಾರೆಲ್ಲ ಎಂದು ನೋಡೋಣ. 

2022 Happy year ಆಗ್ಬೇಕಂದ್ರೆ ಈ ರಾಶಿಯವರು ಹೀಗ್ ಮಾಡ್ಲೇಬಾರ್ದು...

ಭಾರದ್ವಾಜ(Bharadwaja)
ಅಗ್ನಿರಸ ಮುನಿಯ ವಂಶಸ್ಥರು ಭಾರದ್ವಾಜ ಋಷಿ. ದೇವರ್ಷಿ ಬೃಹಸ್ಪತಿ(Devarsi Brihaspati) ಇವರ ತಂದೆ. ಭಾರದ್ವಾಜರು ಆಯುರ್ವೇದದ ಜನಕ. ಗುರು ದ್ರೋಣಾಚಾರ್ಯ(Dronacharya)ರ ತಂದೆ. ಅಚ್ಚರಿ ಎಂದರೆ, ಇನ್ನೂ ಕೂಡಾ ಅಲಹಾಬಾದ್‌ನಲ್ಲಿ ಭಾರದ್ವಾಜರ ಆಶ್ರಮವಿದೆ. ದೇವಾಸ್ತ್ರಗಳು ಸೇರಿದಂತೆ ಆಧುನಿಕ ಶಸ್ತ್ರಗಳ ಪರಿಣತರು ಇವರು. ಇವರ ಪತ್ನಿ ಸುಶೀಲ.

undefined

ವಿಶ್ವಾಮಿತ್ರ(Vishwamitra)
ವಿಶ್ವಾಮಿತ್ರರು ಸಪ್ತರ್ಶಿಗಳಲ್ಲೇ ಬಹಳ ಪ್ರಸಿದ್ಧಿ ಪಡೆದವರು. ವೇದಗಳಲ್ಲಿ ಕೇಳಿ ಬರುವ ಗಾಯತ್ರಿ ಮಂತ್ರ ಕಂಡುಹಿಡಿದವರು ಇವರೇ. ಸ್ವಂತ ಬಲ ಹಾಗೂ ಸಾಧನೆಯಿಂದ ಬ್ರಹ್ಮರ್ಷಿ ಪಟ್ಟಕ್ಕೇರಿದ ಏಕೈಕ ಮುನಿ ಇವರು. ಹುಟ್ಟು ಕ್ಷತ್ರಿಯರಾಗಿರುವ ವಿಶ್ವಾಮಿತ್ರರು, ರಾಜ ಪದವಿ ಬಿಟ್ಟು ವಸಿಷ್ಠರನ್ನು ಮೀರಿಸುವ ತಪಸ್ವಿಗಳಾಗಬೇಕೆಂದು ಹಂಬಲಿಸಿ ಋಷಿಯಾದವರು. 

Wedding Superstitions: ಮದುವೆ ದಿನ ವಧು ಅತ್ರೆ ಒಳ್ಳೇದಾ ಕೆಟ್ಟದ್ದಾ?

ವಸಿಷ್ಠ(Vasishtha)
ಬ್ರಹ್ಮನ ಮಾನಸ ಪುತ್ರರಾಗಿರುವ ವಸಿಷ್ಠರು ಸೂರ್ಯ ವಂಶದ ರಾಜ ಗುರು. ಇವರ ಪತ್ನಿ ಅರುಂಧತಿ(Arundathi). ವಸಿಷ್ಠ ಸಂಹಿತೆಯನ್ನು ರಚಿಸಿ ಖ್ಯಾತರಾದವರು. ಜೀವನದ ಬಗ್ಗೆ ಬೇಸತ್ತ ರಾಮನ ಎಲ್ಲ ಪ್ರಶ್ನೆಗಳಿಗೆ ಉತ್ತರ ನೀಡಿ ಸಮಾಧಾನ ಪಡಿಸಿದವರು ವಸಿಷ್ಠರು. ಈ ಉತ್ತರಗಳನ್ನೇ ಯೋಗ ವಸಿಷ್ಠದಲ್ಲಿ ಬರೆಯಲಾಗಿರುವುದು. 

ಗೌತಮ(Gautama)
ಗೌತಮ ಋಷಿಗಳು ಕೂಡಾ ಅಗ್ನಿರಸ ವಂಶಸ್ಥರು. ವಾಮದೇವ, ಶತಾನಂದ, ನೋಧಸ್ ಇವರ ಪುತ್ರರು. ಕಾನೂನಿನ ಬಗ್ಗೆ ಮೊದಮೊದಲು ಬರೆದವರು. ಇವರು ಗೌತಮ ಧರ್ಮ ಸೂತ್ರ, ಋಗ್ ಹಾಗೂ ಸಾಮ ವೇದ ಮಂತ್ರಗಳನ್ನು ರಚಿಸಿದ್ದಾರೆ. ಇವರ ಪತ್ನಿ ಅಹಲ್ಯ ಬ್ರಹ್ಮನ ಪುತ್ರಿ. ಒಮ್ಮೆ ಬ್ರಹ್ಮನು ಯಾರು ಭೂಮಿಯನ್ನು ಮೊದಲು ಒಂದು ಸುತ್ತು ಬರುತ್ತಾರೋ ಅವರು ಅಹಲ್ಯೆಯ ಕೈ ಹಿಡಿಯುವುದಾಗಿ ಘೋಷಿಸುತ್ತಾನೆ. ಆಗ ಗೌತಮರು ಕಾಮಧೇನುವಿನ ಸುತ್ತ ಒಂದು ಸುತ್ತು ಬಂದು ನಿಯಮ ಪೂರೈಸುತ್ತಾರೆ. ಅವರಿಬ್ಬರ ವಿವಾಹ ನಡೆಯುತ್ತದೆ. ಅಹಂಕಾರವಿಲ್ಲದ ವ್ಯಕ್ತಿಯೆಂದೇ ಗೌತಮರು ಪ್ರಸಿದ್ಧರು. 

ಅತ್ರಿ(Atri)
ಅತ್ರಿ ಮಹರ್ಷಿಯು ಪವಿತ್ರ ಮಂತ್ರಗಳ ರಚನಕಾರರು. ಅತ್ರಿ ಸಂಹಿತ ಹಾಗೂ ಅತ್ರಿ ಸ್ಮೃತಿ ಇವರ ಕೃತಿಗಳು. ಇವರ ಪತ್ನಿ ಅನುಸೂಯ(Anasuya). ಒಮ್ಮೆ ಅನುಸೂಯಳನ್ನು ಪರೀಕ್ಷಿಸಲು ಬ್ರಹ್ಮ, ವಿಷ್ಣು ಹಾಗೂ ಮಹೇಶ್ವರರು ಬ್ರಾಹ್ಮಣರ ರೂಪದಲ್ಲಿ ಆಕೆಯ ಮನೆಗೆ ಹೋಗುತ್ತಾರೆ. ನಗ್ನಳಾಗಿ ತಮಗೆ ಊಟ ಬಡಿಸಬೇಕೆಂಬ ಶರತ್ತು ವಿಧಿಸುತ್ತಾರೆ. ಇದಕ್ಕೆ ಒಪ್ಪಿದ ಅನುಸೂಯ ಅವರು ಮೂವರನ್ನೂ ಚಿಕ್ಕ ಮಕ್ಕಳಾಗಿಸಿ, ತಾನು ಶರತ್ತನ್ನು ನಿಭಾಯಿಸುತ್ತಾಳೆ. ಆಕೆಯ ಪಾವಿತ್ರ್ಯ ಕಂಡು ಮೆಚ್ಚುವ ಮೂವರೂ ತಮ್ಮ ನಿಜರೂಪ ತೋರುತ್ತಾರೆ. ನಂತರ ಮೂವರ ಅಂಶದಿಂದ ಆಕೆಯ ಮಗು ದತ್ತಾತ್ರೇಯನ ಜನನವಾಗುತ್ತದೆ. 

ಕಶ್ಯಪ(Kashyapa)
ಕಶ್ಯಪರು ಮರೀಚಿಯ ಪುತ್ರ ಹಾಗೂ ಬ್ರಹ್ಮನ ಮೊಮ್ಮಗ. ದೇವ, ಅಸುರ, ನಾಗಾ, ಗರುಡ, ವಾಮನ, ಅಗ್ನಿ, ಆದಿತ್ಯ, ದೈತ್ಯ, ಆರ್ಯಮಾನ್, ಮಿತ್ರ, ಪುಸನ್, ವರುಣ ಹಾಗೂ ಎಲ್ಲ ಮಾನವತೆಯ ಜನಕ ಕಶ್ಯಪ ಮಹರ್ಷಿ. ಮಕ್ಕಳ ಆಯುರ್ವೇದ(Ayurvedic Paediatrics), ಸ್ತ್ರೀರೋಗಗಳ ಚಿಕಿತ್ಸೆ ಸಂಬಂಧಿ ಪುಸ್ತಕ ಕಶ್ಯಪ ಸಂಹಿತವನ್ನು ರಚಿಸಿದವರು ಇವರು. 

ಜಮದಗ್ನಿ(Jamadagni)
ಜಮದಗ್ನಿಯು ವಿಷ್ಣುವಿನ ಆರನೇ ಅವತಾರ ಪರಶುರಾಮರ ತಂದೆ. ಬೃಗು ಋುಷಿಯ ವಂಶಸ್ಥ. ಪತ್ನಿ ರೇಣುಕಾ ಒಮ್ಮೆ ಗಂಧರ್ವರನ್ನು ನೋಡಿ ಮನ ಸೋತಾಗ ಅದನ್ನು ತಿಳಿದು ಮಗನ ಬಳಿಯೇ ತಾಯಿಯನ್ನು ಕೊಲ್ಲುವಂತೆ ಹೇಳುತ್ತಾರೆ ಜಮದಗ್ನಿ. 

click me!