ಸನ್ಯಾಸ ಯೋಗದಿಂದ ಈ ರಾಶಿಯವರಿಗೆ ಅದೃಷ್ಟ; ಜೀವನದಲ್ಲಿ ರಾಜ ಮರ್ಯಾದೆ..!

By Sushma HegdeFirst Published Jul 24, 2023, 2:42 PM IST
Highlights

ಗ್ರಹಗಳ ಸ್ಥಾನವು ಪ್ರತಿದಿನ ಬದಲಾಗುತ್ತದೆ. ಇದರಿಂದ ಕೆಲವೊಮ್ಮೆ ಶುಭ ಮತ್ತು ಕೆಲವೊಮ್ಮೆ ಅಶುಭ ಯೋಗಗಳು ರೂಪುಗೊಳ್ಳುತ್ತದೆ. ಈಗ ಸನ್ಯಾಸ ಯೋಗವು ರೂಪುಗೊಳ್ಳಲಿದೆ, ಅದು ಯಾವ ರಾಶಿಚಕ್ರದ ಚಿಹ್ನೆಗಳಿಗೆ ಅದೃಷ್ಟವನ್ನು ತರಲಿದೆ ಎಂಬ ಮಾಹಿತಿ ಇಲ್ಲಿದೆ. 

ಗ್ರಹಗಳ ಸ್ಥಾನವು ಪ್ರತಿದಿನ ಬದಲಾಗುತ್ತದೆ. ಇದರಿಂದ ಕೆಲವೊಮ್ಮೆ ಶುಭ ಮತ್ತು ಕೆಲವೊಮ್ಮೆ ಅಶುಭ ಯೋಗಗಳು ರೂಪುಗೊಳ್ಳುತ್ತದೆ. ಈಗ ಸನ್ಯಾಸ ಯೋಗ (sanyas yog) ವು ರೂಪುಗೊಳ್ಳಲಿದೆ, ಅದು ಯಾವ ರಾಶಿಚಕ್ರದ ಚಿಹ್ನೆಗಳಿಗೆ ಅದೃಷ್ಟವನ್ನು ತರಲಿದೆ ಎಂಬ ಮಾಹಿತಿ ಇಲ್ಲಿದೆ. 

ಜ್ಯೋತಿಷ್ಯ ಶಾಸ್ತ್ರದ ಪ್ರಕಾರ ಕೆಲವು ಅದೃಷ್ಟ ಯೋಗ ಅಥವಾ ರಾಜಯೋಗವು ಅನೇಕ ಜನರ ಜಾತಕದಲ್ಲಿ ರೂಪುಗೊಳ್ಳುತ್ತದೆ. ಇದರಿಂದ ಅವರು ಯಶಸ್ಸನ್ನು ಪಡೆಯಬಹುದು. ಅಂತಹ ಯೋಗಗಳಲ್ಲಿ ಸನ್ಯಾಸ ಯೋಗವು ಕೂಡ ಒಂದು. ಇದು ಕೆಲವು ರಾಶಿಯವರು ಜೀವನದಲ್ಲಿ ಅನೇಕ ಐಷಾರಾಮಿ (Luxury) ಗಳನ್ನು ಪಡೆಯುತ್ತಾರೆ. ಜೀವನದಲ್ಲಿ ಹೆಚ್ಚು ಸುಖವಾಗಿರುತ್ತಾರೆ. ಇವರಿಗೆ ಸಂಸಾರ ಜೀವನದಲ್ಲಿ ಯಾವುದಕ್ಕೂ ಕೊರತೆ ಬರುವುದಿಲ್ಲ. 

Latest Videos

ಜ್ಯೋತಿಷಿ (astrologer) ಗಳ ಲೆಕ್ಕಾಚಾರದ ಪ್ರಕಾರ, ಕೆಲವು ರಾಶಿಚಕ್ರ ಚಿಹ್ನೆಗಳು ಸನ್ಯಾಸ ಯೋಗದ ಹಂತವನ್ನು ಪ್ರವೇಶಿಸಲಿದ್ದು, ಇದರಿಂದ ಆ ರಾಶಿಯ ವ್ಯಕ್ತಿಗಳು ಅಪಾರ ಸಂಪತ್ತನ್ನು ಪಡೆಯುತ್ತಾರೆ. ಅವರ ವೃತ್ತಿಜೀವನದಲ್ಲಿ ಯಶಸ್ಸ (success) ನ್ನು ಪಡೆಯುತ್ತಾರೆ. ಇದರೊಂದಿಗೆ ಅವರ ಎಲ್ಲಾ ಇಷ್ಟಾರ್ಥಗಳೂ ಈಡೇರುತ್ತವೆ. ಆ ಅದೃಷ್ಟವಂತ ರಾಶಿಗಳಾವುವು ನೋಡಿ.

ಮೇಷ ರಾಶಿ (Aries) 

ಮೇಷ ರಾಶಿಯ ಜನರು ಸನ್ಯಾಸ ಯೋಗದಿಂದ ಅನುಕೂಲಕರ ಅವಧಿಯನ್ನು ಅನುಭವಿಸಬಹುದು. ಈ ಸಮಯದಲ್ಲಿ  ನಿರುದ್ಯೋಗಿ (unemployed) ಗಳು ಹೊಸ ಉದ್ಯೋಗಾವಕಾಶಗಳನ್ನು ಪಡೆಯಬಹುದು. ಈ ಅವಕಾಶಗಳನ್ನು ಸದುಪಯೋಗ ಪಡಿಸಿಕೊಂಡು ಪ್ರಗತಿಯ ಹಾದಿಯಲ್ಲಿ ಮುನ್ನಡೆಯುವುದು ಮುಖ್ಯ. ವ್ಯಾಪಾಸ್ಥರು ಉತ್ತಮ ಲಾಭವನ್ನು ನಿರೀಕ್ಷಿಸಬಹುದು. ಆದಾಗ್ಯೂ ಕೆಲಸದ ಹೊರೆ ಹೆಚ್ಚಾಗುವುದರಿಂದ ಒತ್ತಡ ಮಟ್ಟವು ಹೆಚ್ಚಾಗಬಹುದು. ಹಿಂಜರಿಕೆ (Reluctance) ಯಿಲ್ಲದೆ ಅಗತ್ಯವಿದ್ದಾಗ ವಿರಾಮಗಳನ್ನು ತೆಗೆದುಕೊಳ್ಳುವುದು ಮುಖ್ಯ.

ಶನಿ-ರಾಹು ಸಂಯೋಗ; ಈ 3 ರಾಶಿಯವರಿಗೆ ನರಕ ದರ್ಶನ, ಅಕ್ಟೋಬರ್‌ವರೆಗೆ ಜಾಗೃತೆ..!

 

ಮಿಥುನ ರಾಶಿ (Gemini) 

ಮಿಥುನ  ರಾಶಿಯವರು ಈ ಯೋಗದ ಅವಧಿಯಲ್ಲಿ ಸಂತೋಷದ ಉಡುಗೊರೆ (gift) ಯನ್ನು ಪಡೆಯಬಹುದು. ಸೌಕರ್ಯಗಳಲ್ಲಿ ಸುದಾರಣೆಯಾಗಬಹುದು. ಸಾಮಾಜಿಕ ಮನ್ನಣೆ ಮತ್ತು ಗೌರವ ಹೆಚ್ಚಾಗಬಹುದು. ಸಂಬಂಧಗಳಲ್ಲಿ ಸಕಾರಾತ್ಮಕ  (Positive) ಬದಲಾವಣೆಗಳು ಕಂಡುಬರುತ್ತವೆ ಮತ್ತು ಕುಟುಂಬ ಜೀವನವು ಆನಂದಮಯವಾಗಿರುತ್ತದೆ. ಆದಾಗ್ಯೂ ಆರೋಗ್ಯ ಮತ್ತು ಕ್ಷೇಮಕ್ಕೆ ಆದ್ಯತೆ ನೀಡುವುದು ಮುಖ್ಯ.

ಧನು ರಾಶಿ (Sagittarius) 

ಧನು ರಾಶಿ ಜನರು ಮಂಗಳ ಪ್ರೇರಿತ ಸನ್ಯಾಸ ಯೋಗವನ್ನು ಅನುಭವಿಸಬಹುದು. ಈ ಅವಧಿಯು ಅಪಾರ ಪ್ರಯೋಜನ (benefit) ವನ್ನು ತರುತ್ತದೆ. ನಿಮ್ಮ ಕಾರ್ಯ ಶೈಲಿ ಸುಧಾರಿಸಬಹುದು. ಗೌರವ  (respect) ಮತ್ತು ಪ್ರತಿಷ್ಠೆ  (Prestige) ಹೆಚ್ಚಾಗಬಹುದು ಮತ್ತು ಅನಿರೀಕ್ಷಿತ ಹಣದ ಲಾಭವಾಗಬಹುದು. ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ತಯಾರಿ ನಡೆಸುತ್ತಿರುವ ವಿದ್ಯಾರ್ಥಿ (student) ಗಳಿಗೆ ಇದು ಶುಭ ಸಮಯ. ನಿಮ್ಮ ಶ್ರಮಕ್ಕೆ ತಕ್ಕ ಪ್ರತಿಪಲ ದೊರೆಯುತ್ತದೆ.

ಜ್ಞಾನವಾಪಿ ಮಸೀದಿ ವಿವಾದ; ಮಣ್ಣಲ್ಲಿ ಹೂತು ಹೋಗಿದೆಯಾ ಶಿವನ ದೇವಾಲಯ..?

 

ದಿನ ಭವಿಷ್ಯ, ವಾರ ಭವಿಷ್ಯ, ನಿಮ್ಮ ರಾಶಿ ವಿಶೇಷ, ದಿನ ವಿಶೇಷ, ಹಬ್ಬ ಹರಿದಿನಗಳು, ಸಂಪ್ರದಾಯ ಆಚರಣೆಗಳು, ಅವುಗಳ ವೈಜ್ಞಾನಿಕ ಹಿನ್ನೆಲೆ, ಪುರಾಣ ಪುಣ್ಯ ಕತೆಗಳು, ವಾಸ್ತು ಕುರಿತು ಹೆಚ್ಚಿನ ಮಾಹಿತಿ ಪಡೆಯಲು ಸುವರ್ಣ ನ್ಯೂಸ್ ಜ್ಯೋತಿಷ್ಯ ವಿಭಾಗವನ್ನು ತಪ್ಪದೇ ನೋಡುತ್ತಿರಿ.

click me!