ಜೇಬಲ್ಲಿ ದುಡ್ಡಿಲ್ವಾ? ಈ ದಾರಿದ್ರ್ಯ ಬರಲು ಕಾರಣ ಹೇಳಿದ ಚಾಣಕ್ಯ!

Published : Jul 24, 2023, 01:23 PM ISTUpdated : Mar 28, 2025, 01:22 PM IST
ಜೇಬಲ್ಲಿ ದುಡ್ಡಿಲ್ವಾ? ಈ ದಾರಿದ್ರ್ಯ ಬರಲು ಕಾರಣ ಹೇಳಿದ ಚಾಣಕ್ಯ!

ಸಾರಾಂಶ

ಚಾಣಕ್ಯನ ಪ್ರಕಾರ, ಕೆಲವು ಅಭ್ಯಾಸಗಳು ಬಡತನಕ್ಕೆ ಕಾರಣವಾಗಬಹುದು. ರಹಸ್ಯಗಳನ್ನು ಕಾಪಾಡದಿರುವುದು, ಸ್ವಚ್ಛತೆ ಇಲ್ಲದಿರುವುದು, ಕಟು ಮಾತು, ಮತ್ತು ಹಗಲು ಹೊತ್ತು ಮಲಗುವುದು ದಾರಿದ್ರ್ಯಕ್ಕೆ ದೂಡಬಹುದು. ಈ ಅಭ್ಯಾಸಗಳನ್ನು ಬಿಟ್ಟು, ಪ್ರಾಮಾಣಿಕತೆಯಿಂದ ಕೆಲಸ ಮಾಡಿ, ಮೃದುವಾಗಿ ಮಾತನಾಡಿ, ಸೋಮಾರಿತನವನ್ನು ತ್ಯಜಿಸಿ ಅಭಿವೃದ್ಧಿ ಸಾಧಿಸಬಹುದು ಎಂದು ಚಾಣಕ್ಯ ಹೇಳಿದ್ದಾರೆ.

ಕೌಟಿಲ್ಯ ಎಂದೇ ಹೆಸರಾದ ಚಾಣಕ್ಯ ಜೀವನ ಪಾಠಗಳನ್ನು ನಿಷ್ಠುರವಾಗಿ ಸೊಗಸಾಗಿ ಹೇಳುತ್ತಾರೆ. ಅಂದು ಅವರು ಹೇಳಿದ ಪಾಠ ಸರ್ವಕಾಲಕ್ಕೂ ಸೂಟ್ ಆಗುತ್ತೆ. ಹೀಗಾಗಿಯೇ ಅವರ ಮಾತನ್ನು ಆ ಆಧುನಿಕ ಮಂದಿಯೂ ಭಯ ಭಕ್ತಿಯಿಂದ ಸ್ವೀಕರಿಸುತ್ತಾರೆ. ಅವುಗಳ ಪಾಲನೆಯಿಂದ ತಮ್ಮ ಬದುಕಿನಲ್ಲಿ ಆದ ಅನೇಕ ಬದಲಾವಣೆಗಳನ್ನು ಸ್ವತಃ ಅನುಭವಿಸಿದವರೂ ಇದ್ದಾರೆ. ಚಾಣಕ್ಯ ದಾರಿದ್ರ್ಯದ ಬಗ್ಗೆ ಪರಿಣಾಮಕಾರಿ ಮಾತನ್ನು ಹೇಳಿದ್ದಾರೆ. ಯಾಕೋ ಜೇಬಲ್ಲಿ ಹಣ ಉಳೀತಿಲ್ಲ, ನಾವು ಬಡವರಾಗ್ತಾ ಇದ್ದೀವಿ. ನಮ್ಮ ಆರ್ಥಿಕ ಪರಿಸ್ಥಿತಿ ಕುಸಿಯುತ್ತಿದೆ ಎಂದು ಕೊಂಡವರು ಚಾಣಕ್ಯನ ಮಾತುಗಳಲ್ಲಿ ಅದಕ್ಕೆ ಪರಿಹಾರ ಸಿಗಬಹುದಾ ಯೋಚಿಸಿ. 

ನೀತಿಶಾಸ್ತ್ರದಲ್ಲಿ ಆಚಾರ್ಯ ಚಾಣಕ್ಯ ವ್ಯಕ್ತಿಯ ಕೆಲವು ಅಭ್ಯಾಸಗಳ ಬಗ್ಗೆ ಮಾತನಾಡುತ್ತಾರೆ. ಅಂತಹ ಅಭ್ಯಾಸಗಳು ಕ್ರಮೇಣ ಅವನ ಜೀವನದ ದಿಕ್ಕನ್ನೇ ಬದಲಿಸಿದ್ಬದೂ ಇದೆ. ಅಲ್ಲದೆ ಬದುಕನ್ನು ಬಡವಾಗಿಸಬಹುದು. ಅದಕ್ಕಾಗಿಯೇ ಈ ಕೆಲವು ದುರಾಭ್ಯಾಸಗಳನ್ನು ಬಿಡಬೇಕು ಎಂದು ಕೌಟಿಲ್ಯ ಹೇಳುವ ಗುಟ್ಟು. 

ಗುಟ್ಟನ್ನು ಕಾಯ್ದಿಡದೇ ಇರುವ ಗುಣ
ಎಷ್ಟೋ ಜನರಿಗೆ ಗುಟ್ಟಿನ ಸಂಗತಿಗಳನ್ನು ಗುಟ್ಟಾಗಿಡಲು ತಿಳಿಯದು. ಎಲ್ಲವನ್ನೂ ಅಗತ್ಯ ಇದ್ದೋ ಇಲ್ಲದಿದ್ದರೂ ಹೇಳುತ್ತಾ ಹೋಗೋದು ಅನೇಕರ ಸ್ವಭಾವ. ಇಂಥ ಅತಿ ವರ್ತನೆ ನಿಮ್ಮನ್ನು ಮತ್ತಷ್ಟು ಬಡತನಕ್ಕೆ ತಳ್ಳಬಹುದು. ನೀವು ಯಾವ ಹುದ್ದೆಯಲ್ಲೇ ಇರಿ, ಪ್ರಾಮಾಣಿಕತೆಯಿಂದ ಕೆಲಸ ಮಾಡಿ. ಅದೇ ರೀತಿ ರಹಸ್ಯಗಳನ್ನು ರಹಸ್ಯಗಳಾಗಿ ಕಾಯ್ದುಕೊಳ್ಳುವ ಗುಣವೂ ನಿಮ್ಮಲ್ಲಿರಲಿ. ಆಗ ಅಭಿವೃದ್ಧಿ ಸಾಧ್ಯ ಎನ್ನುವುದರಲ್ಲಿ ಡೌಟೇ ಇಲ್ಲ. 

ಚಾಣಕ್ಯನ ಪ್ರಕಾರ ಗಂಡಸರು ಹೆಂಡತಿಯ ಈ 5 ವಿಷಯಗಳನ್ನು ಯಾರಿಗೂ ಹೇಳಬಾರದಂತೆ!

ಕೊಳಕು ಕೊಳಕಾಗಿರೋದು!
ತಾವಿರುವ ಜಾಗವನ್ನು ಸ್ವಚ್ಛವಾಗಿಟ್ಟುಕೊಳ್ಳದೇ ಇರುವುದು, ಸ್ವಚ್ಛ ಬಟ್ಟೆಗಳನ್ನು ಧರಿಸದೇ ಇರುವುದು, ಸುತ್ತಲಿನ ಪರಿಸರವನ್ನು ಕೆಡಿಸಿಕೊಂಡು ಗಲೀಜಾಗಿ ಬದುಕುವ ಜನರು ಯಾವಾಗಲೂ ಬಡತನದ ಜೀವನವನ್ನೇ ನಡೆಸುತ್ತಾರೆ. ಅದಕ್ಕಾಗಿ ಯಾವಾಗಲೂ ತಮ್ಮ ಸುತ್ತ ಮುತ್ತಲಿನ ಪರಿಸರವನ್ನು ಸ್ವಚ್ಛವಾಗಿಟ್ಟುಕೊಳ್ಳಬೇಕು ಎಂದು ಚಾಣಕ್ಯ ಹೇಳುತ್ತಾರೆ.

ಮುಂಗೋಪ, ಕಟು ಮಾತು
ಬಾಯಿಗೆ ಬಂದ ಹಾಗೆ ಮಾತಾಡೋದು ನಿಮ್ಮನ್ನು ಬಡತನಕ್ಕೆ (poverty) ನೂಕಬಹುದು. ಒರಟು ಒರಟಾಗಿ ಮಾತನ್ನು ಆಡುವವರನ್ನು ಲಕ್ಷ್ಮೀ ದೇವಿಯೂ ಕ್ಷಮಿಸುವುದಿಲ್ಲ. ಅವರ ಬಗ್ಗೆ ದೇವರು (god) ಕೂಡ ಅಸಮಾಧಾನಗೊಳ್ಳುತ್ತಾರೆ. ಪರಿಸ್ಥಿತಿ ಎಂಥದ್ದೇ ಇರಲಿ ಕಟುವಾಗಿ ಮಾತನಾಡುವ ಮುನ್ನ ಎರಡೆರಡು ಸಲ ಯೋಚಿಸಬೇಕು. ಯಾವಾಗಲೂ ಎಲ್ಲರೊಂದಿಗೂ ಸಿಹಿಯಾಗಿ, ಮೃದುವಾಗಿ ಮಾತನಾಡುವುದನ್ನು ಅಭ್ಯಾಸ ಮಾಡಿಕೊಳ್ಳಬೇಕು. ಕಟು ಮಾತುಗಳು ವ್ಯಕ್ತಿಯ ಸಂಬಂಧ (Relationship) ಕೆಡಿಸುವುದು ಮಾತ್ರವಲ್ಲ, ಬಡತನಕ್ಕೂ ಕಾರಣವಾಗಬಹುದು.

ಹಗಲು ನಿದ್ರಿಸುವ ಸೋಮಾರಿತನ
ಚಾಣಕ್ಯ ಹೇಳಿದಂತೆ, ಸೂರ್ಯಾಸ್ತದ ನಂತರ ಸಂಜೆ ಮಲಗುವವರು ಯಾವಾಗಲೂ ಬಡವರಾಗಿಯೇ ಇರುತ್ತಾರೆ. ಈ ಟೈಮಲ್ಲಿ ಮಲಗುವವರನ್ನು ತಾಯಿ ಲಕ್ಷ್ಮೀದೇವಿ ಎಂದಿಗೂ ಆಶೀರ್ವದಿಸುವುದಿಲ್ಲ. ಆ ಕಾರಣಕ್ಕೆ ಕಾಯಿಲೆ (Disease) ಇರುವವರೂ ಈ ಸಮಯದಲ್ಲಿ ಎದ್ದು ಕೂರಬೇಕು ಎಂದು ಹಿರಿಯರು ಹೇಳುತ್ತಾರೆ. ಆಕಸ್ಮಿಕವಾಗಿಯೂ ಆ ವೇಳೆ ಮಲಗುವ (Sleep Habits) ಅಭ್ಯಾಸವನ್ನು ಬಿಡಬೇಕು. ಸೋಮಾರಿತನವು ಕೆಟ್ಟ ಅಭ್ಯಾಸ ಎಂದು ಚಾಣಕ್ಯ ನೀತಿ ಹೇಳುತ್ತದೆ, ಇದು ವ್ಯಕ್ತಿಯೊಬ್ಬನಿಗೆ ಕೆಲಸದಲ್ಲಿ ಯಶಸ್ವಿ (Success) ಕಾಣಲು ಬಿಡುವುದಿಲ್ಲ. ಜೀವನದಲ್ಲಿ ಯಶಸ್ಸು ಕಾಣಬೇಕಾದರೆ ಮೊದಲು ಸೋಮಾರಿತನವನ್ನು ಬಿಡಿ ಎಂದು ಚಾಣಕ್ಯ ಸಲಹೆ ನೀಡುತ್ತಾರೆ. ಚಾಣಾಕ್ಯ ಹೇಳುವ ಈ ನೀತಿಪಾಠಗಳು ಬದುಕಿನಲ್ಲಿ ಶಿಸ್ತನ್ನು ತರುತ್ತವೆ. ಬದುಕಿನ ಶಿಸ್ತೇ ನಮ್ಮನ್ನು ಅಭಿವೃದ್ಧಿಯತ್ತ ಕೊಂಡೊಯ್ಯುತ್ತದೆ.

ಚಾಣಕ್ಯನ ಪ್ರಕಾರ ಹೆಂಡತಿ ಈ ಪರೀಕ್ಷೆಯಲ್ಲಿ ಪಾಸಾದರೆ

PREV
Read more Articles on
click me!

Recommended Stories

ಜೆನ್‌ ಜೀ ಮನಗೆದ್ದ ಭಗವದ್ಗೀತೆ: ಏನಿದರ ಗುಟ್ಟು?
ನಾಳೆ ಡಿಸೆಂಬರ್ 8 ರವಿ ಪುಷ್ಯ ಯೋಗ, 5 ರಾಶಿಗೆ ಅದೃಷ್ಟ ಮತ್ತು ಪ್ರಗತಿ