ಮಕರ ಸಂಕ್ರಾಂತಿ: ಗ್ರಹದ ರಾಶಿ ಪರಿವರ್ತನೆಯಿಂದ ಈ ರಾಶಿಗಳಿಗೆ ಶುಭಯೋಗ

By Suvarna NewsFirst Published Jan 14, 2021, 1:43 PM IST
Highlights

ಎಳ್ಳು-ಬೆಲ್ಲವನ್ನು ಹಂಚಿ ಸಿಹಿಯಾದ ಮಾತನಾಡಿ, ಖುಷಿಯಿಂದ ಆಚರಿಸುವ ಹಬ್ಬವೇ ಸಂಕ್ರಾಂತಿ. ಸೂರ್ಯನು ಧನು ರಾಶಿಯಿಂದ ಮಕರ ರಾಶಿಗೆ ಪ್ರವೇಶಿಸುವ ಈ ದಿನವನ್ನು ಮಕರ ಸಂಕ್ರಾಂತಿ ಎಂದು ಆಚರಿಸಲಾಗುತ್ತದೆ. ಈ ದಿನದಿಂದ ಉತ್ತರಾಯಣ ಪುಣ್ಯಕಾಲವು ಆರಂಭವಾಗಲಿದ್ದು, ಈ ಸಮಯದಲ್ಲಿ ಸ್ವರ್ಗದ ಬಾಗಿಲು ತೆರೆಯುತ್ತದೆ ಎಂಬ ನಂಬಿಕೆ ಸಹ ಇದೆ. ಸೂರ್ಯನ ರಾಶಿ ಪರಿವರ್ತನೆಯಿಂದ ರಾಶಿಗಳ ಮೇಲಾಗುವ ಪರಿಣಾಮವನ್ನು ತಿಳಿಯೋಣ...

ಸೂರ್ಯ ಗ್ರಹವು ಇದೇ ಜನವರಿ 14ರಂದು ಧನು ರಾಶಿಯಿಂದ ಮಕರ ರಾಶಿಗೆ ರಾಶಿ ಪರಿವರ್ತನೆ ಹೊಂದಲಿದೆ. ಈ ದಿನ ಮಕರ ಸಂಕ್ರಾಂತಿಯನ್ನು ಆಚರಿಸಲಾಗುತ್ತದೆ. ಮಕರ ರಾಶಿಯಲ್ಲಿ ಸೂರ್ಯ, ಬುಧ, ಗುರು ಮತ್ತು ಶನಿ ಗ್ರಹವು ಏಕಕಾಲಕ್ಕೆ ಸ್ಥಿತವಾಗಿರುವ ಕಾರಣ ಈ ಯುತಿಯನ್ನು ಚತುರ್ಗ್ರಹ ಯೋಗವೆಂದು ಕರೆಯಲಾಗುತ್ತದೆ. ಇದೇ ಸಮಯದಲ್ಲಿ ಉತ್ತರಾಯಣ ಪುಣ್ಯಕಾಲವು ಆರಂಭವಾಗಲಿದೆ. ಈ ಸಂಕ್ರಾಂತಿಯಲ್ಲಿ ಸೂರ್ಯಗ್ರಹವು ಮಕರ ರಾಶಿಗೆ ಪ್ರವೇಶ ಮಾಡಿದ್ದರಿಂದ ಪ್ರತ್ಯೇಕ ರಾಶಿಗಳ ಮೇಲಾಗುವ ಶುಭ-ಅಶುಭ ಪ್ರಭಾವಗಳ ಬಗ್ಗೆ ತಿಳಿಯೋಣ...

ಮೇಷ ರಾಶಿ
ಈ ರಾಶಿಯವರ ಆರ್ಥಿಕ ಸ್ಥಿತಿ ಉತ್ತಮವಾಗಲಿದೆ. ವಿದ್ಯಾರ್ಥಿಗಳು ಈ ಅವಧಿಯಲ್ಲಿ ಉತ್ತಮ ಯಶಸ್ಸನ್ನು ಕಾಣಬಹುದಾಗಿದೆ. ವ್ಯಾಪಾರಸ್ಥರಿಗೆ ಲಾಭದ ಯೋಗವಿದೆ. ಉದ್ಯೋಗಿಗಳು ನೌಕರಿಯಲ್ಲಿ ಬಡ್ತಿ ಪಡೆಯುವ ಯೋಗವಿದೆ. ಅಷ್ಟೇ ಅಲ್ಲದೆ ಈ ರಾಶಿಯವರಿಗೆ ಹೊಸ ಉದ್ಯೋಗ ಪ್ರಾಪ್ತಿಯಾಗುವ ಯೋಗವನ್ನು ಕಾಣಬಹುದಾಗಿದೆ. ವಿದೇಶಿ ಕಂಪನಿಗಳಿಂದ ಸಹ ಆಹ್ವಾನ ಬರುವ ಸಾಧ್ಯತೆ ಇದ್ದು, ಈ ಬಾರಿಯ ಸಂಕ್ರಾಂತಿ ಈ ರಾಶಿಯವರಿಗೆ ಸಂತಸವನ್ನು ತರಲಿದೆ.

ವೃಷಭ ರಾಶಿ
ಉದ್ಯೋಗ ಮತ್ತು ವ್ಯಾಪಾರದ ದೃಷ್ಟಿಯಿಂದ ಈ ರಾಶಿ ಪರಿವರ್ತನೆಯು ಉತ್ತಮವಾಗಿರಲಿದೆ. ಧಾರ್ಮಿಕ ಕಾರ್ಯಕ್ರಮಗಳಲ್ಲಿ ಆಸಕ್ತಿಯಿಂದ ಪಾಲ್ಗೊಳ್ಳುವುದಲ್ಲದೆ, ದಾನ-ಧರ್ಮಗಳನ್ನು ಮಾಡುವ ಯೋಗವಿದೆ. ವಿದೇಶಿ ಕಂಪನಿಗಳಲ್ಲಿ ಕೆಲಸಕ್ಕೆ ಆಹ್ವಾನ ಸಿಗುವ ಸಾಧ್ಯತೆಯು ಇದೆ. ಮಕ್ಕಳ ಬಗ್ಗೆ ಇರುವ ಚಿಂತೆ ದೂರಾಗಲಿದೆ.

ಇದನ್ನು ಓದಿ: ಮಕರ ಸಂಕ್ರಾಂತಿ: ರಾಶಿಯನುಸಾರ ಈ ಕಾರ್ಯ ಮಾಡಿ.. ಸಮೃದ್ಧಿ ಪಡೆಯಿರಿ.....

ಮಿಥುನ ರಾಶಿ
ಈ ರಾಶಿ ಪರಿವರ್ತನೆಯು ಮಿಥುನ ರಾಶಿಯವರಿಗೆ ಮಿಶ್ರಫಲವನ್ನು ನೀಡಲಿದೆ. ಸಮಾಜದಲ್ಲಿ ಗೌರವಾದರಗಳು ಹೆಚ್ಚಲಿವೆ. ಉದ್ಯೋಗ ಮತ್ತು ವ್ಯಾಪಾರ ಸಾಧಾರಣವಾಗಿರಲಿದ್ದು, ಆಕಸ್ಮಿಕ ಖರ್ಚು ಎದುರಾಗುವ ಸಾಧ್ಯತೆ ಇದೆ. ಆರೋಗ್ಯದ ಬಗ್ಗೆ ಹೆಚ್ಚಿನ ಕಾಳಜಿ ವಹಿಸುವುದು ಉತ್ತಮ.

ಕರ್ಕಾಟಕ ರಾಶಿ
ಈ ರಾಶಿಯವರು ಮಿಶ್ರ ಫಲವನ್ನು ಪಡೆಯಲಿದ್ದಾರೆ. ಆರೋಗ್ಯದ ಬಗ್ಗೆ ನಿಗಾ ವಹಿಸುವುದು ಉತ್ತಮ. ಉದ್ಯೋಗ ಮತ್ತು ವ್ಯಾಪಾರವು ಉತ್ತಮವಾಗಲಿದೆ. ಮಹಿಳೆಯರು ಕೆಲವು ಕಠಿಣ ಪರಿಸ್ಥಿತಿಯನ್ನು ಎದುರಿಸಬೇಕಾಗಬಹುದು. ಉದ್ಯೋಗದಲ್ಲಿ ಬಡ್ತಿ ಪಡೆಯುವ ಸಂಭವ ಮತ್ತು ಸಾಮಾಜಿಕ ಪ್ರತಿಷ್ಠೆ ಹೆಚ್ಚುವ ಸಾಧ್ಯತೆಯಿದೆ.

ಸಿಂಹ ರಾಶಿ
ಕೋರ್ಟ್ ಕಚೇರಿ ವ್ಯವಹಾರಗಳು ಈ ರಾಶಿಯವರಿಗೆ ಅನುಕೂಲಕರವಾಗಿರಲಿದೆ. ಸ್ವಾಸ್ಥ್ಯಕ್ಕೆ ಸಂಬಂಧಿಸಿದಂತೆ ಚಿಂತೆ ಹೆಚ್ಚಲಿದೆ. ಸಾಲ ನೀಡುವಾಗ ಎಚ್ಚರಿಕೆ ವಹಿಸುವುದು ಅಗತ್ಯ. ಕಾರ್ಯಕ್ಷೇತ್ರದಲ್ಲಿ ಬುದ್ಧಿವಂತಿಕೆಯಿಂದ ಕೆಲಸ ನಿರ್ವಹಿಸಿದಲ್ಲಿ ಯಶಸ್ಸನ್ನು ಪಡೆಯಬಹುದಾಗಿದೆ.

ಇದನ್ನು ಓದಿ: 2021ರಲ್ಲಿ ಧನ ಸಮೃದ್ಧಿಯಾಗಲು ರಾಶಿಯನುಸಾರ ಹೀಗೆ ಮಾಡಿ..! 

ಕನ್ಯಾ ರಾಶಿ
ವಿದ್ಯಾರ್ಥಿಗಳಿಗೆ ಈ ಅವಧಿ ಕಠಿಣವಾಗಿರಲಿದೆ. ವ್ಯಾಪಾರಸ್ಥರಿಗೆ ಉತ್ತಮ ಯೋಗವಿದೆ. ಹೊಸ ಕೆಲಸವನ್ನು ಆರಂಭಿಸುವವರಿಗೆ ಈ ಸಮಯ ಉತ್ತಮವಾಗಿರಲಿದೆ. ಮಕ್ಕಳ ಬಗೆಗಿನ ಚಿಂತೆ ಹೆಚ್ಚುವ ಸಾಧ್ಯತೆ ಇದೆ.

ತುಲಾ ರಾಶಿ
ಈ ರಾಶಿಯವರು ಕುಟುಂಬದಲ್ಲಾಗುವ ಸಮಸ್ಯೆಯಿಂದ ಮಾನಸಿಕ ಅಶಾಂತಿಯನ್ನು ಹೊಂದುವ ಸಾಧ್ಯತೆ ಇದೆ. ಕೆಲಸ ಕಾರ್ಯಗಳಿಗೆ ಸಮಸ್ಯೆ ಎದುರಾಗುವ ಸಂಭವವಿದೆ. ಶ್ರದ್ಧೆ ಮತ್ತು ವಿಶ್ವಾಸದಿಂದ ಮುಂದುವರೆದಲ್ಲಿ ಜಯ ನಿಮ್ಮದಾಗುತ್ತದೆ. ಜಮೀನಿಗೆ ಸಂಬಂಧಿಸಿದ ವಿಷಯಗಳು ಸುಗಮವಾಗಿ ಪೂರ್ಣಗೊಳ್ಳಲಿವೆ.

ವೃಶ್ಚಿಕ ರಾಶಿ
ಈ ರಾಶಿಯವರ ಶಕ್ತಿಯು ವೃದ್ಧಿಯಾಗಲಿದ್ದು, ಕಾರ್ಯಕ್ಷೇತ್ರದಲ್ಲಿ ಸಫಲತೆ ದೊರೆಯಲಿದೆ. ವಿದ್ಯಾರ್ಥಿಗಳಿಗೆ ಉತ್ತಮ ಫಲಪ್ರಾಪ್ತಿ ಯೋಗವಿದೆ. ಮಹಿಳೆಯರಿಗೆ ಉದ್ಯೋಗದಲ್ಲಿ ಬಡ್ತಿ ಮತ್ತು ಹೊಸ ಉದ್ಯೋಗಕ್ಕೆ ಆಹ್ವಾನ ಬರುವ ಸಾಧ್ಯತೆ ಇದೆ. ವಿದೇಶ ಪ್ರವಾಸಕ್ಕೆ ಪ್ರಯತ್ನಿಸುತ್ತಿದ್ದರೆ ಯೋಗ ಉತ್ತಮವಾಗಿದೆ.

ಧನು ರಾಶಿ
ಈ ರಾಶಿಯವರು ಮಿಶ್ರ ಫಲವನ್ನು ಪಡೆಲಿದ್ದಾರೆ. ಕುಟುಂಬ ಕಲಹದಿಂದ ಮಾನಸಿಕ ಅಶಾಂತಿ  ಉಂಟಾಗುವ ಸಾಧ್ಯತೆ ಇದೆ. ಆರ್ಥಿಕ ಸ್ಥಿತಿ ಉತ್ತಮವಾಗಲಿದೆ. ಆಕಸ್ಮಿಕ ಧನಲಾಭವಾಗುವ ಸಾಧ್ಯತೆ ಇದೆ. ಆರೋಗ್ಯದ ಕಾಳಜಿ ವಹಿಸುವುದು ಉತ್ತಮ.



ಮಕರ ರಾಶಿ
ಕುಟುಂಬ ಕಲಹದಿಂದ ಮಾನಸಿಕ ನೆಮ್ಮದಿ ಕೆಡಲಿದೆ. ಕೇಂದ್ರ ಅಥವಾ ರಾಜ್ಯ ಸರ್ಕಾರಗಳ ಕೆಲಸ ಸಿಗುವ ಸಂಭವವಿದೆ. ವಿದ್ಯಾರ್ಥಿಗಳಿಗೆ ಉತ್ತಮ ಯೋಗವಿದೆ. ವಿವಾಹಕ್ಕೆ ಸಂಬಂಧಿಸಿದಂತೆ ಯೋಗ ಉತ್ತಮವಾಗಿದೆ.

ಇದನ್ನು ಓದಿ: ಈ ರಾಶಿಯವರುವಿವಾಹವಾದರೆ ಮಹಾಯುದ್ಧವೇ ಸರಿ; ನಿಮ್ಮ ರಾಶಿ ಸೇರಿದ್ಯಾ? 

ಕುಂಭ ರಾಶಿ
ಈ ರಾಶಿಯವರಿಗಿದು ಒತ್ತಡದ ಸಮಯವಾಗಿರಲಿದೆ. ಖರ್ಚು ಹೆಚ್ಚಾಗಲಿದೆ. ಆರ್ಥಿಕ ಸಮಸ್ಯೆ ಎದುರಾಗಲಿದೆ. ಸ್ವಾಸ್ಥ್ಯದ ಬಗ್ಗೆ, ಅದರಲ್ಲೂ ಕಣ್ಣಿನ ಕಾಳಜಿಯನ್ನು ಹೆಚ್ಚು ವಹಿಸುವುದು ಉತ್ತಮ. ವಿದ್ಯಾರ್ಥಿಗಳು ಯಶಸ್ಸನ್ನು ಕಾಣಬಹುದಾಗಿದೆ.

ಮೀನ ರಾಶಿ
ಮೀನ ರಾಶಿಯವರಿಗೆ ಧನ ಪ್ರಾಪ್ತಿ ಯೋಗವಿದೆ. ವ್ಯಾಪಾರಿಗಳಿಗೆ ಲಾಭವಾಗುವ ಸಾಧ್ಯತೆ ಇದೆ. ಕುಟುಂಬದ ಹಿರಿಯರೊಡನೆ ವಾದ-ವಿವಾದ ಮಾಡದಿರುವುದು ಉತ್ತಮ. ಮಕ್ಕಳ ಬಗ್ಗೆ ಇರುವ ಚಿಂತೆ ದೂರೂಗಲಿದೆ.

click me!