ಮನೋಭಿಲಾಷೆ ಫಲಿಸಲು ರಾಶಿಗನುಗುಣವಾಗಿ ಇವುಗಳಿಂದ ರುದ್ರಾಭಿಷೇಕ ಮಾಡಿ..!

By Suvarna News  |  First Published Aug 4, 2020, 7:19 PM IST

ಶಿವನಿಗೆ ರುದ್ರಾಭಿಷೇಕವನ್ನು ಮಾಡಿದಲ್ಲಿ ಅಥವಾ ಮಾಡಿಸಿದಲ್ಲಿ ಸಕಲ ಪಾಪಗಳಿಂದ ಮುಕ್ತಿ ಹೊಂದಬಹುದಾಗಿದೆ. ರುದ್ರಾಭಿಷೇಕದಿಂದ ಶಿವನ ಕೃಪೆ ದೊರಕುವುದಲ್ಲದೇ ಅನೇಕ ರೀತಿಯ ಲಾಭಗಳನ್ನು ಪಡೆಯಬಹುದಾಗಿದೆ. ಶಿವ ಬೇಗ ಒಲಿಯುತ್ತಾನೆ ಎಂಬ ಮಾತಿದೆ, ಹಾಗೆಯೇ ಶಿವನ ಆರಾಧನೆಗೆ ಪ್ರಶಸ್ತವಾದ ಶ್ರಾವಣ ಮಾಸದಲ್ಲಿ ರುದ್ರಾಭಿಷೇಕವನ್ನು ಮಾಡಿ ಶಿವನ ಒಲುಮೆಗೆ ಪಾತ್ರರಾಗಬಹುದಾಗಿದೆ. ರುದ್ರಾಭಿಷೇಕದಲ್ಲಿ ನಾನಾ ಪ್ರಕಾರಗಳಿವೆ, ಎಲ್ಲವೂ ಶಿವನಿಗೆ ಪ್ರಿಯವೇ ಆಗಿದೆ. ಇಲ್ಲಿ ರುದ್ರಾಭಿಷೇಕದ ಮಹತ್ವವನ್ನು ಮತ್ತು ಯಾವ ರಾಶಿಯವರು ಯಾವ ರೀತಿಯ ರುದ್ರಾಭಿಷೇಕ ಮಾಡಿದರೆ ಪರಶಿವನ ಒಲುಮೆಗೆ ಬೇಗ ಪಾತ್ರರಾಗಬಹುದು ಎನ್ನುವ ಬಗ್ಗೆ ತಿಳಿಯೋಣ.


ಶ್ರಾವಣ ಮಾಸ ಬಂತೆಂದರೆ ಹಬ್ಬಗಳ ಸಂಭ್ರಮ. ಮನೆಮಂದಿಯೆಲ್ಲಾ ಸೇರಿ ಸಡಗರದಿಂದ ಹಬ್ಬವನ್ನು ಆಚರಿಸಿ, ಸಂಭ್ರಮಿಸಿ ದೇವರ ಕೃಪೆಗೆ ಪಾತ್ರರಾಗುತ್ತಾರೆ. ದೇವರ ಕೃಪೆಗೆ ಪಾತ್ರರಾಗಲು, ಮನೋಕಾಮನೆಗಳನ್ನು ಪೂರೈಸಿಕೊಳ್ಳಲು ಶ್ರಾವಣ ಮಾಸ ಪ್ರಶಸ್ತವಾದ ಕಾಲವಾಗಿದೆ. ಈ ಮಾಸದಲ್ಲಿ ಶ್ರದ್ಧೆ ಮತ್ತು ಭಕ್ತಿಯಿಂದ ಶಿವನಿಗೆ ರುದ್ರಾಭಿಷೇಕವನ್ನು ಮಾಡಿದಲ್ಲಿ ಅಥವಾ ಮಾಡಿಸಿದಲ್ಲಿ ಸಕಲ ಸುಖ-ಸಂಪತ್ತನ್ನು ಹೊಂದಬಹುದೆಂದು ಪುರಾಣಗಳಲ್ಲಿ ತಿಳಿಸಿದ್ದಾರೆ. 

ಬೇಡಿದ್ದನ್ನೆಲ್ಲಾ ಕೊಡುವ ಶಂಕರನ ಆರಾಧನೆಗೆ ಶ್ರಾವಣ ಮಾಸ ಪವಿತ್ರವಾದ ಕಾಲ. ಈ ಸಮಯದಲ್ಲಿ ಶಿವನ ಒಲುಮೆಗೆ ಪಾತ್ರರಾಗಬೇಕೆಂದರೆ ಮಂತ್ರ ಪಠಣ, ಬಿಲ್ವಾರ್ಚನೆ, ಅಭಿಷೇಕಗಳನ್ನು ಮಾಡಿಸುತ್ತಾರೆ. ಹಾಗೆಯೇ ಶಿವನಿಗೆ ಪ್ರಿಯವಾದ ರುದ್ರಾಭಿಷೇಕವನ್ನು ಮಾಡುವುದರಿಂದ ಈಶ್ವರನನ್ನು ಬೇಗ ಒಲಿಸಿಕೊಳ್ಳಬಹುದಾಗಿದೆ.

ಇದನ್ನು ಓದಿ: ಈ ಐದು ರಾಶಿಯವರು ನೆಚ್ಚಿನ ಮಡದಿಯಾಗುತ್ತಾರೆ!

ರುದ್ರಾಭಿಷೇಕದಿಂದಾಗುವ ಲಾಭಗಳು
ರುದ್ರಾಭಿಷೇಕಕ್ಕೆ ಅದರದ್ದೇ ಆದ ಮಹತ್ವವಿದೆ. ರುದ್ರಾಭಿಷೇಕವನ್ನು ಮಡುವುದರಿಂದ ಜನ್ಮಗಳ ಪಾಪಗಳಿಂದ ಮುಕ್ತಿ ಹೊಂದಬಹುದೆಂದು ಪುರಾಣದ ಉಲ್ಲೇಖಗಳಿಂದ ತಿಳಿಯಬಹುದಾಗಿದೆ. ನಕಾರಾತ್ಮಕತೆ ದೂರವಾಗಿ ಸಕಾರಾತ್ಮಕ ಶಕ್ತಿಯು ಹೆಚ್ಚುತ್ತದೆ. ಶತ್ರುಗಳ ಪ್ರಭಾವ ಕಡಿಮೆಯಾಗುವುದಲ್ಲದೇ, ಪ್ರೇತ ಬಾಧೆಗಳಿಂದ ಮುಕ್ತಿಹೊಂದಬಹುದಾಹಗಿದೆ. ವಿದ್ಯಾಪ್ರಾಪ್ತಿಗೆ, ಹಣಕಾಸಿನ ಸ್ಥಿತಿ ಸುಧಾರಣೆಯಾಗಿ ಆರ್ಥಿಕವಾಗಿ ಅಭಿವೃದ್ಧಿಹೊಂದಲು, ವಿವಾಹ ವಿಳಂಬವಾಗುತ್ತಿದ್ದರೆ ಇನ್ನೂ ಮುಂತಾದ ಅನೇಕ ಸಮಸ್ಯೆಗಳಿಗೆ ರುದ್ರಾಭಿಷೇಕದಿಂದ ಉತ್ತಮ ಫಲವನ್ನು ಪಡೆಯಬಹುದಾಗಿದೆ. ಅಷ್ಟೇ ಅಲ್ಲದೇ ಸಂತಾನ ಸಮಸ್ಯೆಗೆ, ಸಾಲಗಳಿಂದ ಮುಕ್ತಿ ಪಡೆಯಲು, ರೋಗ ಶಮನಕ್ಕೆ, ಮನೆಯಲ್ಲಿ ನೆಮ್ಮದಿ ನೆಲೆಸಲು ರುದ್ರಾಭಿಷೇಕವನ್ನು ಮಾಡುವರಿಂದ ಒಳಿತಾಗುತ್ತದೆ.



ರುದ್ರಾಭಿಷೇಕದಲ್ಲಿ ಅನೇಕ ವಿಧಗಳಿವೆ. ಸಮಸ್ಯೆಯ ಪರಿಹಾರಕ್ಕೆ ಸೂಕ್ತವಾದ ಪದಾರ್ಥಗಳಿಂದ ಅಭಿಷೇಕ ಮಾಡಿಸಿದಲ್ಲಿ ಉತ್ತಮ ಫಲವನ್ನು ಹೊಂದಬಹುದಾಗಿದೆ. ಹಾಗೆಯೇ ರಾಶಿಗೆ ಅನುಗುಣವಾಗಿ ಈ ರೀತಿ ರುದ್ರಾಭಿಷೇಕವನ್ನು ಮಾಡಿದರೆ ಒಳ್ಳೆಯ ಅಭಿವೃದ್ಧಿಯನ್ನು ಹೊಂದಬಹುದಾಗಿದೆ.

ಮೇಷ ರಾಶಿ
ಈ ರಾಶಿಯವರು ಜೇನು ತುಪ್ಪ ಮತ್ತು ಕಬ್ಬಿನ ರಸದಿಂದ ಶಿವನಿಗೆ ರುದ್ರಾಭಿಷೇಕವನ್ನು ಮಾಡಿದರೆ, ಶಿವನ ಕೃಪೆಗೆ ಪಾತ್ರರಾಗಬಹುದಾಗಿದೆ. ಇದರಿಂದ ಸುಖ, ಸಂಪತ್ತು ಮತ್ತು ಮುಖ್ಯವಾಗಿ ಧನಲಕ್ಷ್ಮೀಯ ಕೃಪೆ ಪಡೆಯಬಹುದಾಗಿದೆ.

ವೃಷಭ ರಾಶಿ
ಈ ರಾಶಿಯವರು ರುದ್ರಾಭಿಷೇಕವನ್ನು ಮಾಡುವುದರಿಂದ ನೆಮ್ಮದಿ ಹಾಗೂ ಐಶ್ವರ್ಯವನ್ನು ಹೊಂದುಬಹುದಾಗಿದ್ದು, ಹಾಲು ಮತ್ತು ಮೊಸರಿನಿಂದ ಮಹಾದೇವನಿಗೆ ಅಭಿಷೇಕ ಮಾಡಿದಲ್ಲಿ ಸದಾಶಿವನ ಒಲುಮೆಗೆ ಪಾತ್ರರಾಗಬಹುದಾಗಿದೆ.

ಮಿಥುನ ರಾಶಿ
ಮಹಾದೇವನ ವಿಶೇಷ ಕೃಪೆಗೆ ಪಾತ್ರರಾಗಬೇಕೆಂದರೆ ಈ ರಾಶಿಯವರು ದುರ್ವೆ(ಗರಿಕೆ)ಯಿಂದ ರುದ್ರಾಭಿಷೇಕವನ್ನು ಮಾಡವುದು ಉತ್ತಮ. ಇದರಿಂದ ಆರ್ಥಿಕ ಸ್ಥಿತಿಯು ಉತ್ತಮವಾಗುತ್ತದೆ.

ಕರ್ಕಾಟಕ ರಾಶಿ
ಈ ರಾಶಿಯವರು ಹಾಲು ಮತ್ತು ಜೇನುತುಪ್ಪದಿಂದ ಶಿವನಿಗೆ ರುದ್ರಾಭಿಷೇಕವನ್ನು ಮಾಡಿದರೆ ಪರಶಿವನ ಒಲುಮೆ ದೊರಕುವುದಲ್ಲದೇ ಲಕ್ಷ್ಮೀಯ ಕೃಪೆಯು ಲಭಿಸುತ್ತದೆ.

ಇದನ್ನು ಓದಿ: ಈ ಐದು ರಾಶಿಯವರು ಸಖತ್ ಸೋಮಾರಿಗಳು…! ನಿಮ್ಮ ರಾಶಿಯೂ ಇದ್ಯಾ?

ಸಿಂಹ ರಾಶಿ
ಈ ರಾಶಿಯವರು ಜೇನುತುಪ್ಪ ಮತ್ತು ಕಬ್ಬಿನ ರಸದಿಂದ ರುದ್ರಾಭಿಷೇಕವನ್ನು ಮಾಡಿದರೆ, ಶಿವನ ಕೃಪೆಯಿಂದ ಸುಖ-ಸಂಪತ್ತನ್ನು ಹೊಂದಬಹುದಾಗಿದೆ.

ಕನ್ಯಾ ರಾಶಿ
ಈ ರಾಶಿಯವರು ದೂರ್ವೆ ಮತ್ತು ಮೊಸರಿನಿಂದ ರುದ್ರನಿಗೆ ರುದ್ರಾಭಿಷೇಕ ಮಾಡಿದರೆ ಒಳಿತು. ಇದರಿಂದ ಸಮಸ್ಯೆಗಳಿಂದ ಮುಕ್ತಿ ಹೊಂದಬಹುದಾಗಿದೆ.

ತುಲಾ ರಾಶಿ
ಈ ರಾಶಿಯವರು  ಹಾಲು ಮತ್ತು ಜೇನು ತುಪ್ಪದೊಂದಿಗೆ ರುದ್ರಾಭಿಷೇಕವನ್ನು ಮಾಡಿದರೆ ಸಕಲ ಸಂಪತ್ತನ್ನು, ಶತ್ರುಗಳ ಕಾಟದಿಂದ ಮುಕ್ತಿ ಪಡೆಯಬಹುದಾಗಿದೆ.

ವೃಶ್ಚಿಕ ರಾಶಿ
ಈ ರಾಶಿಯವರು ಜೇನುತುಪ್ಪ, ಕಬ್ಬಿನ ರಸ ಮತ್ತು ಮೊಸರು ಇವುಗಳಿಂದ ರುದ್ರಾಭಿಷೇಕವನ್ನು ಮಾಡಬೇಕು. ಇದರಿಂದ ಉತ್ತಮ ಫಲಗಳನ್ನು ಹೊಂದುವುದಲ್ಲದೇ, ನೆಮ್ಮದಿಯನ್ನು ಪಡೆಯಬಹುದಾಗಿದೆ.

ಧನು ರಾಶಿ
ಈ ರಾಶಿಯವರು ಜೇನುತುಪ್ಪ ಮತ್ತು ಹಾಲಿನಿಂದ ರುದ್ರಾಭಿಷೇಕವನ್ನು ಮಾಡುವುದರಿಂದ ಶಿವನನ್ನು ಪ್ರಸನ್ನಗೊಳಿಸಿಕೊಳ್ಳಬಹುದಾಗಿದೆ. ಶಿವನ ಕೃಪೆಯಿಂದ ಬಯಸಿದ್ದನ್ನು ಹೊಂದಬಹುದಾಗಿದೆ.

ಮಕರ ರಾಶಿ
ಈ ರಾಶಿಯವರು ಗಂಗಾಜಲಕ್ಕೆ ಬೆಲ್ಲವನ್ನು ಸೇರಿಸಿ, ಸಿಹಿಯಾದ ಪವಿತ್ರ ಜಲದಿಂದ ಶಿವನಿಗೆ ರುದ್ರಾಭಿಷೇಕವನ್ನು ಮಾಡಬೇಕು. ಇದರಿಂದ ಉತ್ತಮ ಅಭಿವೃದ್ಧಿಯನ್ನು ಹೊಂದಬಹುದಾಗಿದೆ.

ಇದನ್ನು ಓದಿ: ಪರಶಿವನ ಕೃಪೆ ಪಡೆವ ಶ್ರಾವಣ ಮಾಸ ಮಹತ್ವ, ಆಚರಣೆ!

ಕುಂಭ ರಾಶಿ
ಈ ರಾಶಿಯವರು ಮೊಸರಿನಿಂದ ಶಿವನಿಗೆ ರುದ್ರಾಭಿಷೇಕವನ್ನು ಮಾಡಬೇಕು. ಇದರಿಂದ ಪಾಪಗಳಿಂದ ಮುಕ್ತಿಹೊಂದಿ ಪುಣ್ಯಫಲವನ್ನು ಕಾಣಬಹುದಾಗಿದೆ.

ಮೀನ ರಾಶಿ
ಈ ರಾಶಿಯವರು ಮೊಸರು, ಹಾಲು ಮತ್ತು ಕಬ್ಬಿನ ರಸದಿಂದ ಮಹಾದೇವನಿಗೆ ರುದ್ರಾಭಿಷೇಕವನ್ನು ಮಾಡುವುದರಿಂದ ಸಕಲ ಸಂಪತ್ತನ್ನು ಪಡೆಯಬಹುದಾಗಿದೆ.

Tap to resize

Latest Videos

click me!