Ramanagara: ಶ್ರವಣಬೆಳಗೊಳದ ಗೊಮ್ಮಟೇಶ್ವರ ನಂತರ ಶ್ರೀ ಚಾಮುಂಡೇಶ್ವರಿ ತಾಯಿಗೆ ಮಹಾಮಸ್ತಾಭಿಷೇಕ

By Govindaraj SFirst Published Jul 28, 2022, 12:33 AM IST
Highlights

ಅದು ಐತಿಹಾಸಿಕ ಪುರಾಣ ಪ್ರಸಿದ್ದ ಕ್ಷೇತ್ರ ಅಲ್ಲಿ ಬೇಡಿ ಬಂದ ಭಕ್ತರನ್ನು ಸಲಹುವ ಶ್ರೀ ಚಾಮುಂಡೇಶ್ವರಿ ತಾಯಿ ನೆಲೆಸಿರುವ ಪುಣ್ಯ ಕ್ಷೇತ್ರ, ಆ ಕ್ಷೇತ್ರದಲ್ಲಿನ ಚಾಮುಂಡೇಶ್ವರಿ ತಾಯಿಗೆ ಇದೀಗ ಮಹಾಮಸ್ತಾಭಿಷೇಕ ನಡೆಸಲು ಸಕಲ ಸಿದ್ದತೆಯಾಗಿದೆ.

ವರದಿ: ಜಗದೀಶ್ ಏಷ್ಯಾನೆಟ್ ಸುವರ್ಣನ್ಯೂಸ್, ರಾಮನಗರ

ರಾಮನಗರ (ಜು.28): ಅದು ಐತಿಹಾಸಿಕ ಪುರಾಣ ಪ್ರಸಿದ್ದ ಕ್ಷೇತ್ರ ಅಲ್ಲಿ ಬೇಡಿ ಬಂದ ಭಕ್ತರನ್ನು ಸಲಹುವ ಶ್ರೀ ಚಾಮುಂಡೇಶ್ವರಿ ತಾಯಿ ನೆಲೆಸಿರುವ ಪುಣ್ಯ ಕ್ಷೇತ್ರ, ಆ ಕ್ಷೇತ್ರದಲ್ಲಿನ ಚಾಮುಂಡೇಶ್ವರಿ ತಾಯಿಗೆ ಇದೀಗ ಮಹಾಮಸ್ತಾಭಿಷೇಕ ನಡೆಸಲು ಸಕಲ ಸಿದ್ದತೆಯಾಗಿದ್ದು, ಈ ಸಂತಸದ ಕ್ಷಣಗಳನ್ನು ಕಣ್ಬುಂಬಿಕೊಳ್ಳಲು ರಾಜ್ಯದ ವಿವಿಧೆಡೆಯಿಂದ ಸಾವಿರಾರು ಭಕ್ತರು ಸೇರಿದಂತೆ ಗಣ್ಯಾತಿಗಣ್ಯರು ಆಗಮಿಸಲಿದ್ದು, ಈಗಾಗಲೇ ವಿಶ್ವ ವಿಖ್ಯಾತಿ ಎಂದು ಹೆಸರು ಪಡೆದಿರುವ ಬೊಂಬೆನಗರಿಗೆ ಚನ್ನಪಟ್ಟಣಕ್ಕೆ ಮತ್ತೊಂದು ಗರಿ ಸಿಗುವುದಕ್ಕೆ ಕ್ಷಣಗಣನೆ ಆರಂಭಗೊಂಡಿದೆ. 

ಹೌದು! ಇಲ್ಲಿ ನೆಲೆಸಿರುವ ಆ ತಾಯಿಯನ್ನ ನಂಬಿ ಒಮ್ಮೆ ಬಂದು ಪ್ರಾರ್ಥಿಸಿದ್ರೆ ಸಾಕು ನಿಮ್ಮ ಕಷ್ಟಗಳಿಗೆ ಮುಕ್ತಿ ಶತಸಿದ್ದ. ಇಲ್ಲಿರುವ ಜೀವಂತ ಪವಾಡ ಬಸವಪ್ಪನಿಗೆ ನಿಮ್ಮ ಕಷ್ಟ ಹೇಳಿಕೊಂಡ್ರೆ ಆ ಬಸಪ್ಪ ತಥಾಸ್ತು ಅಂದ್ರೆ ನಿಮ್ಮ ಸಂಕಷ್ಟಗಳೆಲ್ಲವೂ ನಿವಾರಣೆಯಾಗಲಿದೆ. ಹೌದು ಚನ್ನಪಟ್ಟಣ ತಾಲೂಕಿನ ವಿಶ್ವ ವಿಖ್ಯಾತ ಗೌಡಗೆರೆ ಚಾಮುಂಡೀಶ್ವರಿ ತಾಯಿಗೆ ಇದೇ ಜುಲೈ 31ರಂದು ಮಹಾ ಮಸ್ತಾಭಿಷೇಕ ಮಾಡಲು ದೇವಸ್ಥಾನದ ಆಡಳಿತ ಮಂಡಳಿ ಸಜ್ಜಾಗಿದೆ. ಬಾಹುಬಲಿ ವಿಗ್ರಹಕ್ಕೆ ನಡೆದ ಮಹಾಮಸ್ತಾಭಿಷೇಕ ಮಾದರಿಯಲ್ಲೇ ಈ ಗೌಡಗೆರೆಯಲ್ಲೂ ಕೂಡ ಚಾಮುಂಡೇಶ್ವರಿ ತಾಯಿಗೆ ಮಸ್ತಾಭಿಷೇಕ ನಡೆಸಲು ಸಜ್ಜಾಗಿದೆ.

ಕಾಂಗ್ರೆಸ್‌ ಅಧಿ​ಕಾ​ರಕ್ಕೆ ಬಂದ್ರೆ ಕನ​ಕ​ಪುರ ಮಾದರಿ ರಾಜ್ಯಕ್ಕೆ ವಿಸ್ತ​ರಣೆ: ಡಿಕೆಶಿ

ಇದೇ ಜುಲೈ 31ರಂದು ಭಾನುವಾರ  ಮಸ್ತಾಭಿಷೇಕ ನಡೆಸಲಾಗುತ್ತಿದ್ದು, ಈ ಪುಣ್ಯವನ್ನ ಕಣ್ತುಂಬಿಕೊಳ್ಳಲು ಗಣ್ಯಾತಿಗಣ್ಯರು ಪಾಲ್ಗೊಳ್ಳುವ ನಿರೀಕ್ಷೆ ಇಡಲಾಗಿದೆ. ಜುಲೈ 29ರಂದು ಅಮ್ಮನವರ ಮೂಲಕ ವಿಗ್ರಹಕ್ಕೆ ಮಂಗಳ ಸ್ಥಾನ, ಅಭಿಷೇಕಕ್ಕೆ 36 ವಿವಿಧ ಬಗೆಯ 38  ಸಾವಿರ ಕೆಜಿಯ ವಿವಿಧ ಹಣ್ಣುಗಳು, ಹಾಲು ,‌ಮೊಸರು, ತುಪ್ಪ, ಪಂಚಾಮೃತ ನೈವೇದ್ಯ, ಹಾಗೂ ಭಕ್ತಾಧಿಗಳಿಗೆ ಪ್ರಸಾದ ವಿನಿಯೋಗ ನಡೆಯಲಿದೆ. 101 ಹಾಲರಬಿ ಮೂಲಕ ಬಸವಪ್ಪನಿಗೆ ಕ್ಷೀರಾಭಿಷೇಕ ಮಾಡಲು ಸಿದ್ದತೆ ಮಾಡಿಕೊಳ್ಳಲಾಗಿದೆ. 

ಅಂದಹಾಗೆ ಈ ವಿಶ್ವ ವಿಖ್ಯಾತ ಮಹಾಮಸ್ತಾಭಿಷೇಕ ಕಾರ್ಯಕ್ರಮ ವೀಕ್ಷಣೆಗೆ ಸಾವಿರಾರು ಜನರು ಬರುವ ನಿರೀಕ್ಷೆ ಇದೆ. ಜುಲೈ 31ರಂದು ಬೆಳಿಗ್ಗೆ 10 ಘಂಟೆಗೆ ನಡೆಯಲಿರುವ ಈ ಐತಿಹಾಸಿಕ ಕ್ಷಣಕ್ಕೆ ರಾಜ್ಯದ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ, ಮಾಜಿ ಪ್ರದಾನಿ ಹೆಚ್.ಡಿ.ದೇವೇಗೌಡ ಚಾಲನೆ ನೀಡಲಿದ್ದು, ಶ್ರೀ ಕ್ಷೇತ್ರಕ್ಕೆ ಮಾಜಿ ಸಿಎಂ ಹೆಚ್.ಡಿ.ಕುಮಾರಸ್ವಾಮಿ, ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್, ಸಚಿವ ಡಾ.ಅಶ್ವಥ್ ನಾರಾಯಣ್, ಸಂಸದ ಡಿ.ಕೆ.ಸುರೇಶ್, ಚಿತ್ರನಟ ಸುದೀಪ್, ಶಿವರಾಜ್ ಕುಮಾರ್ ಸೇರಿದಂತೆ ಹಲವು ಸಚಿವರು ಹಾಗೂ ಶಾಸಕರು ಸಾಕ್ಷಿಯಾಗಲಿದ್ದಾರೆ. 

ಬಾಯ್ಮುಚ್ಚಿಕೊಂಡು ಪಕ್ಷದ ಕೆಲ್ಸ ಮಾಡಿ: ಖಡಕ್‌ ಎಚ್ಚರಿಕೆ ಕೊಟ್ಟ ಡಿಕೆಶಿ..!

ಜೊತೆಗೆ ಕ್ಷೇತ್ರಕ್ಕೆ ಬರುವಂತಹ ಎಲ್ಲಾ ಭಕ್ತಾದಿಗಳಿಗೂ ಅನ್ನ ಸಂತರ್ಪಣೆ, ಸೇರಿದಂತೆ ಸ್ವತಹ ತಾಯಿಗೆ ಭಕ್ತರೇ ಅಭಿಷೇಕ ಮಾಡಲು ಅವಕಾಶ ಮಾಡಿಕೊಡಲಾಗಿದ್ದು, ನಾಗಸಾಧುಗಳ‌ ಪ್ರೇರಣೆಯಿಂದ ಶ್ರೀ‌ ಕ್ಷೇತ್ರದಲ್ಲಿ ಈ ಐತಿಹಾಸಿಕ ಕಾರ್ಯಕ್ರಮ ನಡೆಯಲಿದ್ದು,ಈ  ಕ್ಷಣಕ್ಕೆ ಸಾವಿರಾರು ಭಕ್ತರು ಸಾಕ್ಷಿಯಾಗಲಿದ್ದಾರೆ. ಒಟ್ಟಾರೆ ಇದೇ ಪ್ರಪ್ರಥಮ ಭಾರಿಗೆ ವಿಶ್ವ ವಿಖ್ಯಾತ ಐತಿಹಾಸಿಕ ಗೌಡಗೆರೆಯ ಬೃಹತ್ ಚಾಮುಂಡೇಶ್ವರಿ ವಿಗ್ರಹಕ್ಕೆ ಮಹಾಮಸ್ತಾಭಿಷೇಕ ನಡೆಯಲು ಸಕಲ ಸಿದ್ದತೆ ಮಾಡಿಕೊಂಡಿದ್ದು ಭಕ್ತರು ಸಹ ಕಾತುರದಿಂದ ಕಾಯುತ್ತಿದ್ದಾರೆ.

click me!