Rakshabandhan : ರಾಶಿಗನುಗುಣವಾಗಿ ಸಹೋದರಿಗೆ ನೀಡಿ ಈ ಗಿಫ್ಟ್

Published : Aug 09, 2022, 03:45 PM ISTUpdated : Aug 09, 2022, 04:23 PM IST
Rakshabandhan : ರಾಶಿಗನುಗುಣವಾಗಿ ಸಹೋದರಿಗೆ ನೀಡಿ ಈ ಗಿಫ್ಟ್

ಸಾರಾಂಶ

ರಕ್ಷಾಬಂಧನದ ದಿನ ಸಹೋದರ, ಸಹೋದರಿಗೆ ಉಡುಗೊರೆ ನೀಡೋದು ಸಂಪ್ರದಾಯ. ಆದ್ರೆ ಸಹೋದರಿಗೆ ಯಾವ ಉಡುಗೊರೆ ಇಷ್ಟವಾಗುತ್ತೆ ಎಂಬ ಗೊಂದಲವಿರುತ್ತದೆ. ನಿಮಗೂ ಕನ್ಫ್ಯೂಜ್ ಇದ್ರೆ ಈ ಟಿಪ್ಸ್ ಫಾಲೋ ಮಾಡಿ.  

ರಕ್ಷಾಬಂಧನದ ಹತ್ತಿರ ಬರ್ತಾ ಇದೆ. ಸಹೋದರ – ಸಹೋದರಿಯರ ಹಬ್ಬವಿದು.  ಈ ಹಬ್ಬದಂದು ಸಹೋದರನಿಗೆ ಆರತಿ ಬೆಳಗಿ, ರಾಖಿ ಕಟ್ಟುವುದು ಸಂಪ್ರದಾಯ. ಸಹೋದರ ಸದಾ ಸಂತೋಷವಾಗಿರಲೆಂದು, ಆತನ ಆಯಸ್ಸು, ಐಶ್ವರ್ಯ ವೃದ್ಧಿಗೆ ಸಹೋದರಿಯರು ಪ್ರಾರ್ಥನೆ ಮಾಡ್ತಾರೆ. ಈ ಶುಭ ಸಂದರ್ಭದಲ್ಲಿ ಸಹೋದರಿಗೆ, ಸಹೋದರನಾದವನು ಉಡುಗೊರೆ ನೀಡ್ತಾನೆ. ಸಾಮಾನ್ಯವಾಗಿ ಉಡುಗೊರೆ ಏನು ನೀಡ್ಬೇಕೆಂಬ ಗೊಂದಲವಿರುತ್ತದೆ. ಇಂದು ನಾವು ರಾಶಿಗೆ ತಕ್ಕಂತೆ ಯಾವ ಉಡುಗೊರೆ ನೀಡ್ಬೇಕು ಎಂಬುದನ್ನು ಹೇಳ್ತೇವೆ.

ರಾಶಿಗನುಗುಣವಾಗಿ ನೀಡಿ ಉಡುಗೊರೆ :
ಮೇಷ ರಾಶಿ (Aries) :
ಈ ರಾಶಿಯ ಜನರ ಸಹೋದರಿ ಚಿಕ್ಕವರಾಗಿದ್ದರೆ ಕ್ರೀಡೆಗೆ ಸಂಬಂಧಿತ ವಸ್ತುಗಳನ್ನು ನೀಡುವುದು ಉತ್ತಮ. ಆದರೆ ಸಹೋದರಿ ದೊಡ್ಡವರಾಗಿದ್ದರೆ  ಆಕೆಯ ಆರೋಗ್ಯದ ಬಗ್ಗೆ ನಿಗಾ ಇಡಲು ಮತ್ತು ಆರೋಗ್ಯವಾಗಿರಲು ಸ್ಮಾರ್ಟ್ ವಾಚ್‌ (Smart Watch) ನಂತಹ ಅವಳ ಆರೋಗ್ಯಕ್ಕೆ ಸಂಬಂಧಿಸಿದ ಎಲೆಕ್ಟ್ರಾನಿಕ್ ವಸ್ತುವನ್ನು ನೀಡಬೇಕು.

ವೃಷಭ ರಾಶಿ (Taurus) : ವೃಷಭ ರಾಶಿಯ ಜನರು ತಮ್ಮ ಸಹೋದರಿಯನ್ನು ಮೆಚ್ಚಿಸಲು ಉತ್ತಮ ಪೇಂಟಿಂಗ್ ಅಥವಾ ಮನೆಯ ಅಲಂಕಾರಕ್ಕೆ ಸಂಬಂಧಿಸಿದ ವಸ್ತುವನ್ನು ಉಡುಗೊರೆ ನೀಡಬೇಕು. ಸಹೋದರಿ ಚಿಕ್ಕವಳಾಗಿದ್ದರೆ ಮತ್ತು ಓದುತ್ತಿದ್ದರೆ ಅವಳಿಗೆ ಪುಸ್ತಕ (Book) ಗಳನ್ನು ಸಹ ನೀಡಬಹುದು.

ಮಿಥುನ ರಾಶಿ : ಈ ರಾಶಿಯವರು ಸಹೋದರಿಗೆ ಹಸಿರು ಬಣ್ಣದ ಬಟ್ಟೆಗಳನ್ನು ನೀಡಬೇಕು. ಸಹೋದರಿಗೆ ವಿವಾಹವಾಗಿದ್ದರೆ ಗೃಹೋಪಯೋಗಿ ವಸ್ತುಗಳನ್ನು ನೀಡಬಹುದು.

ಕರ್ಕಾಟಕ (Cancer) ರಾಶಿ : ಕರ್ಕ ರಾಶಿಯವರು ತಮ್ಮ ಸಹೋದರಿಗೆ ಪಾದರಕ್ಷೆ ಸೇರಿದಂತೆ ಪ್ರಯಾಣಕ್ಕೆ ಸಂಬಂಧಿಸಿದ ವಸ್ತುಗಳನ್ನು ನೀಡಬಹುದು.    ಬ್ಯಾಂಡ್, ವಾಚ್, ಉಂಗುರ, ಬಳೆ ಇತ್ಯಾದಿಗಳನ್ನು ಸಹ ನೀಡಬಹುದು.

ಸಿಂಹ ರಾಶಿ : ಈ ರಾಶಿಯ ಸಹೋದರರು, ತಮ್ಮ ಸಹೋದರಿಗೆ  ಅವರು ಇಷ್ಟಪಡುವ ಆಹಾರ ಮತ್ತು ಪಾನೀಯವನ್ನು ನೀಡಬಹುದು. 

ಮಲಗುವಾಗ ಈ ವಸ್ತುಗಳನ್ನು ತಲೆ ಬಳಿ ಇಟ್ರೆ ಅದೃಷ್ಟ ಬದಲಾಗುತ್ತಂತೆ!

ಕನ್ಯಾ ರಾಶಿ : ಕನ್ಯಾ ರಾಶಿಯವರು ತಮ್ಮ ಸಹೋದರಿಗೆ ಎಲೆಕ್ಟ್ರಾನಿಕ್ ವಸ್ತುಗಳನ್ನು ನೀಡಬೇಕು. ಸಹೋದರಿ ಶಾಲೆಗೆ ಹೋದರೆ ಬ್ಯಾಗ್, ಲಂಚ್ ಬಾಕ್ಸ್ ಮತ್ತು ಪೆನ್ನು ಇತ್ಯಾದಿಗಳನ್ನು ನೀಡಬಹುದು.

ತುಲಾ ರಾಶಿ : ಈ ರಾಶಿಯ ಜನರು ತಮ್ಮ ಸಹೋದರಿಗೆ ವರ್ಣರಂಜಿತ ಪೇಂಟಿಂಗ್ ಅನ್ನು ನೀಡಬೇಕು. ಸಹೋದರಿ ಚಿಕ್ಕವಳಾಗಿದ್ದರೆ ಆಕೆಗೆ ಬಣ್ಣ ನೀಡಬಹುದು.

ವೃಶ್ಚಿಕ ರಾಶಿ : ವೃಶ್ಚಿಕ ರಾಶಿಯವರು ಸಹೋದರಿಗೆ ತುಂಬಾ ಅಗತ್ಯವಿರುವ ವಸ್ತುವನ್ನು ಉಡುಗೊರೆ ನೀಡಬೇಕು. ಅವಳಿಗೆ ಏನು ಬೇಕು ಎಂಬುದನ್ನು ಕೇಳಿ ನೀಡಬೇಕು. ಇದ್ರ ಜೊತೆಗೆ ಸಿಹಿಯನ್ನು ಕೂಡ ನೀಡಬೇಕು.

ಧನು ರಾಶಿ : ಈ ರಾಶಿಯವರು ತಮ್ಮ ಸಹೋದರಿಗೆ ಮೊಬೈಲ್ ಫೋನ್, ಇಯರ್ ಫೋನ್ ಇತ್ಯಾದಿ ನೀಡಬಹುದು. ಒಂದು ವೇಳೆ ಆಕೆ ದೂರದ ಊರಿನಲ್ಲಿ ವಾಸವಾಗಿದ್ದರೆ ಆಕೆಯನ್ನು ಅವಶ್ಯಕವಾಗಿ ಭೇಟಿಯಾಗಿ.

ಮಕರ ರಾಶಿ : ಮಕರ ರಾಶಿಯ ಸಹೋದರಿಗೆ ಫೋಟೋ ಆಲ್ಬಮ್, ಫೋಟೋ ಫ್ರೇಮ್, ಕ್ಯಾಮೆರಾ ಇತ್ಯಾದಿ ನೀಡಬಹುದು. ಸುಂದರ ನೆನಪುಗಳನ್ನು ಸಂಗ್ರಹಿಸುವ ಯಾವುದೇ ವಸ್ತುವನ್ನು ನೀವು ಉಡುಗೊರೆಯಾಗಿ ನೀಡಬಹುದು. ಪುರಾತನ ವಸ್ತುಗಳನ್ನು ಕೂಡ ನೀವು ಉಡುಗೊರೆಯಾಗಿ ನೀಡಬಹುದು.

ಮೇಲಿಂದ ಕೆಳಗೆ ಬೀಳ್ತಿರೋ ಕನಸು ಪದೆ ಪದೇ ಕಾಣ್ತಿದೆಯಾ?

ಕುಂಭ ರಾಶಿ : ಸಹೋದರಿ ಭೇಟಿಗೆ ಮಹತ್ವ ನೀಡಿ. ಅವರ ಪ್ರಯಾಣಕ್ಕೆ ತೊಂದರೆಯಾಗ್ತಿದ್ದರೆ ಅದನ್ನು ಬಗೆಹರಿಸಿ. ಧಾರ್ಮಿಕ ಪುಸ್ತಕ ಸೇರಿದಂತೆ  ಧರ್ಮಕ್ಕೆ ಸಂಬಂಧಿಸಿದ ವಸ್ತು ನೀಡಿ. ಧಾರ್ಮಿಕ ಸ್ಥಳಕ್ಕೆ ಪ್ರವಾಸಕ್ಕೆ ಹೋಗಿ.

ಮೀನ ರಾಶಿ : ಮೀನ ರಾಶಿಯವರು ತಮ್ಮ ಸಹೋದರಿಗೆ ನೆಚ್ಚಿನ ಉಡುಗೊರೆಯನ್ನು ನೀಡಿ ಅಥವಾ ಅವಳು ಏನನ್ನು ಕೇಳುತ್ತಾಳೋ ಅದನ್ನು ನೀಡಬೇಕು.  ಸುಂದರವಾದ ಬಟ್ಟೆಗಳನ್ನು ಸಹ ಉಡುಗೊರೆಯಾಗಿ ನೀಡಬಹುದು.

PREV
Read more Articles on
click me!

Recommended Stories

ಈ 4 ರಾಶಿಯವರಲ್ಲಿ ಒಳ್ಳೆಯದಕ್ಕಿಂತ ಕೆಟ್ಟ ಗುಣಗಳೇ ಹೆಚ್ಚು, ದ್ವೇಷ ಸಾಧಿಸೋದ್ರಲ್ಲಿ ನಿಸ್ಸೀಮರು
ಹೊಸ ವರ್ಷದಲ್ಲಿ 3 ರಾಜಯೋಗ, 3 ರಾಶಿಗೆ ಬಹಳಷ್ಟು ಹಣ