Color and Personality: ನೀವಿಷ್ಟ ಪಡೋ ಬಣ್ಣಗಳು ನಿಮ್ಮ ಗುಣ ಹೇಳುತ್ತವೆ..

By Suvarna NewsFirst Published Dec 9, 2021, 11:04 AM IST
Highlights

ಒಬ್ಬರಂತೆ ಹೇಗೆ ಒಬ್ಬರು ಇರುವುದು ಅಪರೂಪವೋ ಹಾಗೇ ಒಬ್ಬೊಬ್ಬರಿಗೆ ಒಂದೊಂದು ಬಣ್ಣ ಇಷ್ಟವಿರುತ್ತದೆ. ಜ್ಯೋತಿಷ್ಯ ಶಾಸ್ತ್ರದ ಪ್ರಕಾರ, ಬಣ್ಣಗಳ ಆಧಾರದ ಮೇಲೆ ಆ ವ್ಯಕ್ತಿಗಳ ಗುಣ, ಸ್ವಭಾವಗಳನ್ನು ತಿಳಿದುಕೊಳ್ಳಬಹುದು. ಹೀಗಾಗಿ ಹಳದಿ, ನೇರಳೆ, ಬಿಳಿ, ನೀಲಿ, ಕಿತ್ತಳೆ ಬಣ್ಣದವರ ವ್ಯಕ್ತಿತ್ವದ ಬಗ್ಗೆ ತಿಳಿಯೋಣ... 
 

ಬಣ್ಣವು (Colour) ಭಾವನೆಗಳ (Emotion) ಸಂಕೇತವೆಂದು (Sign) ಹೇಳಲಾಗುತ್ತದೆ. ಪ್ರಕೃತಿಯ (Nature) ಎಲ್ಲ ಬಣ್ಣಗಳಿಗೂ ಒಂದೊಂದು ಆಕರ್ಷಣೆ (Attraction) ಇರುತ್ತದೆ. ಪ್ರತಿ ಬಣ್ಣಕ್ಕೂ ಅದರದ್ದೇ ಆದ ಮಹತ್ವ (Significance) ಮತ್ತು ವಿಶೇಷತೆಗಳಿರುತ್ತವೆ (Speciality). 

ವ್ಯಕ್ತಿಗಳ(Person ) ಸ್ವಭಾವ ಹೇಗೆ ಬೇರೆ ಬೇರೆ ಆಗಿರುತ್ತದೆಯೋ ಹಾಗೆಯೇ ಅವರು ಇಷ್ಟಪಡುವ (Like) ವಸ್ತುಗಳು ಭಿನ್ನವಾಗಿರುತ್ತವೆ. ಜ್ಯೋತಿಷ್ಯ ಶಾಸ್ತ್ರದ (Astrology) ಪ್ರಕಾರ ಇಷ್ಟಪಡುವ ಬಣ್ಣದ (Colour ) ಆಧಾರದ ಮೇಲೆ ವ್ಯಕ್ತಿಗಳ ಸ್ವಭಾವಗಳ ಬಗ್ಗೆ ತಿಳಿಯಬಹುದಾಗಿದೆ. ಆಯಾ ರಾಶಿಗಳ (zodiac sign) ಸ್ವಭಾವ ಗುಣಗಳು  ಭಿನ್ನವಾಗಿರುತ್ತವೆ. ಅದು ವ್ಯಕ್ತಿಗಳ ಮೇಲೂ ಪ್ರಭಾವ (Effect) ಬೀರುತ್ತದೆ. ಹಾಗಾಗಿ ವ್ಯಕ್ತಿಗಳು ಇಷ್ಟಪಡುವ ವಸ್ತುಗಳು (things) ಬೇರೆ (Different) ಬೇರೆಯಾಗಿರುತ್ತದೆ. ಅವುಗಳ ಆಧಾರದ (Basis) ಮೇಲೆ ವ್ಯಕ್ತಿಯ ವ್ಯಕ್ತಿತ್ವವನ್ನು  ತಿಳಿಯಬಹುದಾಗಿದೆ. ಹಾಗಾದರೆ ಯಾರಿಗೆ ಯಾವ ಬಣ್ಣವನ್ನು ಇಷ್ಟ ಎಂಬುದು ತಿಳಿದರೆ ವ್ಯಕ್ತಿತ್ವವನ್ನು ತಿಳಿಯುವುದು ಕಷ್ಟವಾಗುವುದಿಲ್ಲ (Difficult) ಎನ್ನುತ್ತದೆ ಜ್ಯೋತಿಷ್ಯ ಶಾಸ್ತ್ರ. ಹಾಗಾದರೆ ಇಷ್ಟಪಡುವ ಬಣ್ಣಗಳ ಆಧಾರದ ಮೇಲೆ ವ್ಯಕ್ತಿಗಳ ವ್ಯಕ್ತಿತ್ವವನ್ನು ತಿಳಿಯೋಣ.....

ಶ್ವೇತ ವರ್ಣ (White colour)
ಬಿಳಿ ಬಣ್ಣವನ್ನು ಇಷ್ಟಪಡುವ (Like) ವ್ಯಕ್ತಿಗಳು ಎಲ್ಲಾ ವಿಷಯಗಳಲ್ಲೂ ಒಳ್ಳೆಯದನ್ನೇ (Positive) ನೋಡುತ್ತಾರೆ. ಈ ಬಣ್ಣವು ಚಂದ್ರನನ್ನು (Moon) ಪ್ರತಿನಿಧಿಸುತ್ತದೆ.ಶಾಂತಿ (Peace) ನೆಮ್ಮದಿಯನ್ನು  ಈ ವ್ಯಕ್ತಿಗಳು ಇಷ್ಟಪಡುತ್ತಾರೆ. ಸರಿಯಾಗಿ ಯೋಚಿಸಿ (Think) ಮಾತನಾಡುತ್ತಾರೆ. ಅಷ್ಟೇ ಅಲ್ಲದೆ ಇವರ ವಿಚಾರಗಳು ಹೆಚ್ಚು ಯಾರಿಗೂ ತಿಳಿದಿರುವುದಿಲ್ಲ.

ಇದನ್ನು ಓದಿ: Personality of people born on Monday: ಸೋಮವಾರ ಹುಟ್ಟಿದವರು ಹೀಗಿರುತ್ತಾರಂತೆ!

ಹಳದಿ (Yellow)
ಈ ಬಣ್ಣವನ್ನು ಇಷ್ಟಪಡುವ ವ್ಯಕ್ತಿಗಳು ವಿಶಾಲ ಮನೋಭಾವವನ್ನು (Nature) ಹೊಂದಿರುತ್ತಾರೆ. ಈ ವ್ಯಕ್ತಿಗಳು ಆಶಾವಾದಿಗಳಾಗಿರುತ್ತಾರೆ (Optimistic). ಯಾವುದೇ ವಿಚಾರ ತಪ್ಪು (False) ಎಂದು ತಿಳಿದ ಕೂಡಲೇ ಅದನ್ನು ಬಿಟ್ಟುಬಿಡುತ್ತಾರೆ. ಜೀವನದ (Life) ಸಕಾರಾತ್ಮಕತೆಯನ್ನು (Positive) ಹೆಚ್ಚು ನೋಡುತ್ತಾರೆ. ಸತ್ಯವಾದದ್ದನ್ನು (True) ಹೇಳಲು ಈ ವ್ಯಕ್ತಿಗಳು ಹೆದರುವುದಿಲ್ಲ (Scare). ಈ ವ್ಯಕ್ತಿಗಳು ತಮ್ಮ ವ್ಯಕ್ತಿತ್ವದಿಂದಲೇ ಎಲ್ಲರನ್ನು ತಮ್ಮತ್ತ ಸೆಳೆದುಕೊಳ್ಳುತ್ತಾರೆ (Attraction).

ನೇರಳೆ (Purple)
ನೇರಳೆ ಬಣ್ಣವನ್ನು ಇಷ್ಟಪಡುವ ವ್ಯಕ್ತಿಗಳು ಇತರರ ಭಾವನೆಗಳಿಗೆ (Emotion) ಬೆಲೆ ಕೊಡುವುದಲ್ಲದೇ ಅದಕ್ಕೆ ಸ್ಪಂದಿಸುತ್ತಾರೆ. ಅತ್ಯಂತ ಬುದ್ಧಿವಂತರಾಗಿರುವ (Brave) ಈ ವ್ಯಕ್ತಿಗಳು, ಹಾಸ್ಯವನ್ನು (Humour) ಇಷ್ಟಪಡುತ್ತಾರೆ. ಇತರರಿಗೆ ಹೆಚ್ಚು ಸಲಹೆಗಳನ್ನು ನೀಡುತ್ತಾರೆ. ಉತ್ತಮ ದಕ್ಷತೆಯನ್ನು (Effciency) ಹೊಂದಿರುವ ಈ ವ್ಯಕ್ತಿಗಳು, ಸ್ವತಂತ್ರ (Independent) ಸ್ವಭಾವದವರಾಗಿರುತ್ತಾರೆ.

ಕಿತ್ತಳೆ ಬಣ್ಣ (Orange)
ಆರೇಂಜ್ ಕಲರ್ ಇಷ್ಟವಾಗಿದ್ದರೆ  ಅಂಥವರು ಎಲ್ಲೇ ಹೋದರೂ ತಮ್ಮ ಛಾಪನ್ನು ಮೂಡಿಸುತ್ತಾರೆ. ಕೆಂಪು (Red) ಮತ್ತು ಹಳದಿ (Yellow) ಬಣ್ಣದಿಂದ (Color) ಕಿತ್ತಳೆ (Orange) ಬಣ್ಣ ಆಗಲಿದೆ. ಹಾಗಾಗಿ ಕೆಂಪು ಮತ್ತು ಹಳದಿ ಬಣ್ಣಗಳೆರಡರ ಗುಣವನ್ನು ಕಿತ್ತಳೆ ಬಣ್ಣವನ್ನು ಇಷ್ಟಪಡುವವರು (Like) ಹೊಂದಿರುತ್ತಾರೆ.

ಇದನ್ನು ಓದಿ: Personality traits of Amavasya born: ಏಕಾದಶಿ, ಹುಣ್ಣಿಮೆ, ಅಮಾವಾಸ್ಯೆ ತಿಥಿಯಲ್ಲಿ ಹುಟ್ಟಿದವರು ಹೀಗೆ..!

ನೀಲಿ ಬಣ್ಣ (Blue)
ಸಮುದ್ರದ (Sea) ಬಣ್ಣ ನೀಲಿ (Blue) ಆಗಿದೆ. ಈ ಬಣ್ಣವನ್ನು ಇಷ್ಟಪಡುವವರು ಗಂಭೀರವಾಗಿ ವಿಚಾರ ಮಾಡುವವರಾಗಿರುತ್ತಾರೆ. ಈ ವ್ಯಕ್ತಿಗಳ ಮನಸ್ಸಿನಲ್ಲಿ (Mind) ನಡೆಯುವ ವಿಚಾರಗಳು ಇತರರಿಗೆ ತಿಳಿಯುವುದಿಲ್ಲ. ಕ್ಷಣದಲ್ಲಿ ತಮ್ಮ ಯೋಜನೆಗಳನ್ನು (Plan) ಬದಲಿಸುತ್ತಾರೆ. ಇತರರನ್ನು ಬೇಗ ಸ್ನೇಹಿತರನ್ನಾಗಿ (Friend) ಮಾಡಿಕೊಳ್ಳುತ್ತಾರೆ. ತಮ್ಮ ಕೆಲಸವಾದ (Work) ನಂತರ ಸ್ನೇಹಿತರನ್ನು ಮರೆಯುತ್ತಾರೆ. ಇತರರ ಮೇಲೆ ಬೇಗ ವಿಶ್ವಾಸ ಇಡುವುದಿಲ್ಲ. ಪ್ರೀತಿಯ (Love) ವಿಷಯದಲ್ಲಿ (Subject) ಮಾತ್ರ ಈ ವ್ಯಕ್ತಿಗಳು ವಿಶ್ವಾಸಕ್ಕೆ ಅರ್ಹರಾಗಿರುತ್ತಾರೆ.

click me!