ಬದಲಾವಣೆ ತರುವ ಈ ಸಂವತ್ಸರದ ಪ್ರಮುಖ ಗ್ರಹಪಲ್ಲಟಗಳು ಹೀಗಿವೆ..

Published : Apr 02, 2022, 11:58 AM ISTUpdated : Apr 02, 2022, 12:00 PM IST
ಬದಲಾವಣೆ ತರುವ ಈ ಸಂವತ್ಸರದ ಪ್ರಮುಖ ಗ್ರಹಪಲ್ಲಟಗಳು ಹೀಗಿವೆ..

ಸಾರಾಂಶ

ಈ ಹೊಸ ಸಂವತ್ಸರದ ಆರಂಭಿಕ ಮಾಸದಲ್ಲೇ ಪ್ರಮುಖ ಗ್ರಹಗಳು ಸ್ಥಾನ ಬದಲಾವಣೆ ಮಾಡುತ್ತಿವೆ. ಇದರ ಪರಿಣಾಮ ಎಲ್ಲ ರಾಶಿಗಳ ಮೇಲೆ ಅಗಾಧವಾಗಿರುತ್ತದೆ. ಯಾವೆಲ್ಲ ಗ್ರಹಗಳು ಯಾವತ್ತು ತಮ್ಮ ಸ್ಥಾನ ಬದಲಾವಣೆ ಮಾಡುತ್ತವೆ ನೋಡೋಣ. 

ಶ್ರೀಕಂಠ ಶಾಸ್ತ್ರಿಗಳು, ಸುವರ್ಣ ನ್ಯೂಸ್

ಹೊಸ ವರ್ಷ ಆರಂಭವಾಗಿದೆ. ಹೊಸ ವರ್ಷ(new year)ದ ಆದಿಯಲ್ಲೇ ಪ್ರಮುಖ ಗ್ರಹಗಳ ಬದಲಾವಣೆ ಇರುವುದರಿಂದ ಈ ವರ್ಷಫಲ ಕುತೂಹಲಕಾರಿಯೂ, ವಿಶೇಷ ಬದಲಾವಣಾ ಪರ್ವ ಕಾಲವಾಗಿಯೂ ಇರಲಿದೆ ಎಂಬುದರಲ್ಲಿ ಸಂಶಯವಿಲ್ಲ.  ಏಪ್ರಿಲ್ ತಿಂಗಳೊಂದರಲ್ಲೇ ಪ್ರಮುಖ ಗ್ರಹಗಳಾದ ಶನಿ, ಗುರು, ರಾಹು, ಕೇತು ಸ್ಥಾನ ಪಲ್ಲಟ ಮಾಡಲಿವೆ. ಈ ತಿಂಗಳಲ್ಲಿ ಒಂಬತ್ತಕ್ಕೆ ಒಂಬತ್ತೂ ಗ್ರಹಗಳು ರಾಶಿ ಬದಲಿಸುತ್ತಿವೆ. ಅಷ್ಟೇ ಏಕೆ, ಗ್ರಹಣ ಕೂಡಾ ಇದೆ. ಜ್ಯೋತಿಷ್ಯ ಕ್ಷೇತ್ರದಲ್ಲಿ ಇದೊಂದು ಮಹತ್ತರ ಬದಲಾವಣೆಯಾಗಿದ್ದು, ಹಿಂದೂ ವರ್ಷ ಆರಂಭದ ಮಾಸದಲ್ಲೇ ಇಷ್ಟೊಂದು ಬದಲಾವಣೆಯಾಗುತ್ತಿರುವುದರಿಂದ ಅದರ ಪರಿಣಾಮ ಎಲ್ಲ ರಾಶಿಗಳ ಮೇಲೂ ಆಗಲಿದೆ. ಇದರಿಂದ  ಈ ವರ್ಷದಲ್ಲಿ ಆಗುವ ಪ್ರಧಾನ ಗ್ರಹಪಲ್ಲಟಗಳನ್ನು ಗಮನಿಸಿಕೊಳ್ಳೋಣ. 

ಇದೇ ಏಪ್ರಿಲ್ 7 ರಂದು ಕುಜ(Mars) ಗ್ರಹ ಮಕರ ರಾಶಿಯಿಂದ ಕುಂಭ ರಾಶಿ(Aquarius)ಯನ್ನು ಪ್ರವೇಶಿಸಲಿದ್ದಾನೆ. (ಮೇಷ, ಸಿಂಹ, ವೃಶ್ಚಕ, ಧನಸ್ಸು, ಮಕರ, ಮೀನ ರಾಶಿಗಳು ಶುಭ ಸ್ಥಾನಗಳು )

ಶುಭಕೃತ್ ಸಂವತ್ಸರ 12 ರಾಶಿಗಳಿಗೆ ಯಾವೆಲ್ಲ ಫಲಗಳನ್ನು ತರಲಿದೆ ನೋಡಿ..

ಇದೇ ಏಪ್ರಿಲ್ 8 ರಂದು ಬುಧ ಗ್ರಹ ಮೀನ ರಾಶಿಯಿಂದ  ಮೇಷ ರಾಶಿ(Aries)ಯನ್ನು ಪ್ರವೇಶಿಸಲಿದ್ದಾನೆ.  (ವೃಷಭ, ಮಿಥುನ, ಸಿಂಹ, ಕನ್ಯಾ, ತುಲಾ, ಮಕರ, ಕುಂಭ ರಾಶಿಗಳು ಶುಭ ಸ್ಥಾನಗಳು).  25ನೇ ತಾರೀಖಿನವರೆಗೂ ಅಲ್ಲಿಯೇ ಇರಲಿದ್ದಾನೆ. ಅಂದು ವೃಷಭ ರಾಶಿಗೆ ಸಂಚರಿಸುತ್ತಾನೆ.

ಇದೇ ಏಪ್ರಿಲ್ 12 ರಂದು ರಾಹು(rahu) ಗ್ರಹ ವೃಷಭ ರಾಶಿಯಿಂದ ಮೇಷ ರಾಶಿಯನ್ನು ಪ್ರವೇಶಿಸಲಿದ್ದಾನೆ, ವರ್ಷಾಂತ್ಯದವರೆಗೂ ಇರುತ್ತಾನೆ.

ಇದೇ ಏಪ್ರಿಲ್ 12 ರಂದು ಕೇತು ಗ್ರಹ ವೃಶ್ಚಿಕ ರಾಶಿ(scorpio)ಯಿಂದ ತುಲಾ ರಾಶಿಯನ್ನು ಪ್ರವೇಶಿಸಲಿದ್ದಾನೆ. ವರ್ಷಾಂತ್ಯದವರೆಗೂ ಇರುತ್ತಾನೆ.

ಇದೇ ಏಪ್ರಿಲ್ 13 ರಂದು ಗುರು ಗ್ರಹ ಕುಂಭ ರಾಶಿಯಿಂದ ಮೀನ ರಾಶಿ(Pisces)ಯನ್ನು ಪ್ರವೇಶಿಸಲಿದ್ದಾನೆ. ವರ್ಷ ಪೂರ್ತಿ ಅದೇ ಸ್ಥಾನದಲ್ಲಿರಲಿದ್ದಾನೆ. ( ಶುಭ ಸ್ಥಾನ )

ಇದೇ ಏಪ್ರಿಲ್ 14 ರಂದು ರವಿ ಗ್ರಹ ಮೀನ ರಾಶಿಯಿಂದ ಮೇಷ ರಾಶಿಯನ್ನು ಪ್ರವೇಶಿಸಲಿದ್ದಾನೆ.  (ಮಿಥುನ, ಕಟಕ, ಸಿಂಹ, ಕನ್ಯಾ, ವೃಶ್ಚಿಕ, ಧನಸ್ಸು, ಮೀನ ರಾಶಿಗಳು ಶುಭ ಸ್ಥಾನಗಳು ) ಮೇ 17ರವರೆಗೂ ಇಲ್ಲಿಯೇ ಇರಲಿದ್ದಾನೆ.

ಏಪ್ರಿಲ್‌ನಲ್ಲಿ ನಡೆಯಲಿದೆ 'ಮಹಾಗೋಚಾರ', ಈ ಐದು ರಾಶಿಗಳಿಗೆ ಶುಭ ವಿಚಾರ

ಇದೇ ಏಪ್ರಿಲ್ 27 ರಂದು ಶುಕ್ರ ಗ್ರಹ ಕುಂಭ ರಾಶಿಯಿಂದ ಮೀನ ರಾಶಿಯನ್ನು ಪ್ರವೇಶಿಸುತ್ತಿದ್ದಾನೆ. ( ಮೀನ, ವೃಷಭ, ಮಿಧುನ, ತುಲಾ, ಮಕರ, ಕುಂಭ ರಾಶಿಗಳು ಶುಭಸ್ಥಾನ)

ಇದೇ ಏಪ್ರಿಲ್ 28 ರಂದು ಶನೈಶ್ಚರ ಗ್ರಹ ಮಕರ ರಾಶಿಯಿಂದ ಕುಂಭ ರಾಶಿಯನ್ನು ಪ್ರವೇಶಿಸುತ್ತಿದ್ದಾನೆ. ( ಮಕರ - ಕುಂಭಗಳು ಶನಿಯ ಸ್ವಕ್ಷೇತ್ರ-ಮೂಲತ್ರಿಕೋಣ ಸ್ಥಾನ ) ಮತ್ತು ಜುಲೈ 12 ರಂದು ಶನೈಶ್ಚರ ಗ್ರಹ ವಕ್ರಗತಿಯಲ್ಲಿ ಮತ್ತೆ ಮಕರ ರಾಶಿಯನ್ನು ಪ್ರವೇಶಿಸುತ್ತಾನೆ ಮತ್ತೂ 17 ಜನವರಿ 2023 ರಂದು ಮತ್ತೆ ಶನೈಶ್ಚರ ಕುಂಭ ರಾಶಿಯನ್ನು ಪ್ರವೇಶಿಸಲಿದ್ದಾನೆ.

ಇದು ಈ ವರ್ಷದಲ್ಲಿ  ಆಗುವ ಪ್ರಮುಖ ಗ್ರಹಗಳ ಸಂಚಾರದ ಕೋಷ್ಟಕ. ಈ ರೀತಿಯ ಗ್ರಹಗಳ ಸಂಚಾರದಿಂದ ಹನ್ನೆರಡೂ ರಾಶಿಗಳ ಮೇಲೆ ಪರಿಣಾಮ- ಪ್ರಭಾವಗಳು ಉಂಟಾಗಲಿವೆ. ಗ್ರಹಗಳ ಶುಭ ರಾಶಿಯಲ್ಲಿ ಸಂಚರಿಸುವಾಗ ಶುಭಫಲ-ಉಳಿದ ರಾಶಿಯಲ್ಲಿ ಸಂಚರಿಸುವಾಗ ಸಾಧಾರಣ ಅಥವ ಅಸಮಾಧಾನದ ಫಲಗಳಿರುತ್ತವೆ. 

ದಿನ ಭವಿಷ್ಯ, ವಾರ ಭವಿಷ್ಯ, ನಿಮ್ಮ ರಾಶಿ ವಿಶೇಷ, ದಿನ ವಿಶೇಷ, ಹಬ್ಬ ಹರಿದಿನಗಳು, ಸಂಪ್ರದಾಯ ಆಚರಣೆಗಳ ಕುರಿತು ಹೆಚ್ಚಿನ ಮಾಹಿತಿ ಪಡೆಯಲು ಸುವರ್ಣನ್ಯೂಸ್ ಜ್ಯೋತಿಷ್ಯ ವಿಭಾಗವನ್ನು ತಪ್ಪದೇ ನೋಡುತ್ತಿರಿ.

PREV
Read more Articles on
click me!

Recommended Stories

ಈ 4 ರಾಶಿಯವರಲ್ಲಿ ಒಳ್ಳೆಯದಕ್ಕಿಂತ ಕೆಟ್ಟ ಗುಣಗಳೇ ಹೆಚ್ಚು, ದ್ವೇಷ ಸಾಧಿಸೋದ್ರಲ್ಲಿ ನಿಸ್ಸೀಮರು
ಹೊಸ ವರ್ಷದಲ್ಲಿ 3 ರಾಜಯೋಗ, 3 ರಾಶಿಗೆ ಬಹಳಷ್ಟು ಹಣ