Mental Illness And Astrology: ಡಿಪ್ರೆಶನ್, ಆತ್ಮಹತ್ಯೆಗಳಿಗೆ ಈ ಗ್ರಹಗಳು ಕಾರಣ!

By Suvarna News  |  First Published Jan 31, 2022, 10:42 AM IST

ಈ ಮಾಡರ್ನ್ ಜಗತ್ತಿನಲ್ಲಿ ಅರ್ಜೆಂಟ್ ಆಗಿ ಎಲ್ಲವೂ ಬೇಕು. ಒತ್ತಡದ ಜೀವನದಲ್ಲಿಯೇ ಬದುಕುವುದು. ನೆಮ್ಮದಿ ಜೊತೆಗಿದ್ದರೂ ಇನ್ನೆಲ್ಲೋ ಹುಡುಕುವುದು. ಎಲ್ಲರೂ ಜೊತೆಗಿದ್ದರೂ ತಾನು ಒಂಟಿ ಎನ್ನುವ ಭಾವನೆ. ತನ್ನ ಜೊತೆಗೆ ಯಾರೂ ಇಲ್ಲವೆಂಬ ಭಯ, ಯಾರ ಜೊತೆಗೂ ಹೊಂದಿಕೊಳ್ಳಲಾಗದೇ ಚಡಪಡಿಕೆ, ಅಂತಿಮವಾಗಿ ಸಾವೇ ಎಲ್ಲದಕ್ಕೂ ಉತ್ತರ ಎಂಬ ವಾದಕ್ಕೆ ಬಂದುಬಿಡುತ್ತಾರೆ. ಆದರೆ, ಈ ಖಿನ್ನತೆಗೆ ಗ್ರಹಗತಿಗಳೂ ಕಾರಣವಿರುತ್ತವೆ ಎಂಬುದು ನಿಮಗೆ ಗೊತ್ತೇ?


ಇಂದಿನ ದಿನಗಳಲ್ಲಿ ನೆಮ್ಮದಿಯಿಂದ ಜೀವನ ನಡೆಸುತ್ತಿರುವವರ ಸಂಖ್ಯೆ ವಿರಳವಾಗಿದೆ. ಡಿಪ್ರೆಶನ್ (Depression) ಎನ್ನುವುದು ಕಾಮನ್ ಎನ್ನುವ ರೀತಿಯಾಗಿದೆ. ಹಣ (Money) ಇಲ್ಲದವರಿಗೆ ಜೀವನಕ್ಕೆ ಏನು ಮಾಡುವುದು ಎಂಬ ಚಿಂತೆ. ಹಣ ಇದ್ದವರಿಗೆ ಮತ್ತೊಂದು ಚಿಂತೆ. ಮತ್ತೊಬ್ಬರಿಗೆ ಮುಂದಿನ ವರ್ತಮಾನದ ಚಿಂತೆ, ಮಗದೊಬ್ಬರಿಗೆ ಭವಿಷ್ಯದ (Future) ಬಗ್ಗೆ ಚಿಂತೆ ಹೀಗೆ ನೆಮ್ಮದಿಯನ್ನು ಹಾಳು ಮಾಡಿಕೊಳ್ಳುತ್ತಿರುವವರೇ ಹೆಚ್ಚು. 

ಒಟ್ಟಾರೆ ಜೀವನದಲ್ಲಿ ಇದ್ದಿದ್ದರಲ್ಲಿ ನೆಮ್ಮದಿ ಕಾಣದೇ, ಇಲ್ಲದಿರುವುದರ ಬಗ್ಗೆ ಚಿಂತಿಸಿ ನೆಮ್ಮದಿಯನ್ನು ಹಾಳು ಮಾಡಿಕೊಳ್ಳುತ್ತಾರೆ. ಹಾಗಾಗಿ ಕೆಲವರು ಈ ಸಮಸ್ಯೆಗಳಿಂದ (Problem) ಹೊರಬರಲಾಗದೇ ಖಿನ್ನತೆಗೇ (Depression) ತುತ್ತಾಗುತ್ತಾರೆ. ಸೂಕ್ಷ್ಮ ಮನಸ್ಸಿನವರು, ಜೀವನದ ಬಗ್ಗೆ, ಸುಖ – ಐಷಾರಾಮಿ (Luxury) ವಸ್ತುಗಳ ಬಗ್ಗೆ ಹೆಚ್ಚಿನ ಮೋಹ ಹೊಂದಿರುವವರು, ತಮ್ಮ ಆಸೆ ಆಕಾಂಕ್ಷೆಗಳು ಅಂದುಕೊಂಡಂತೆ ಈಡೇರದಿದ್ದಾಗ ಡಿಪ್ರೆಶನ್‌ಗೆ ಹೋಗುತ್ತಾರೆ. ಈ ಖಿನ್ನತೆಯಿಂದ ಆತ್ಮಹತ್ಯೆಗಳಂತಹ (Suicide) ದುಸ್ಸಾಹಸಕ್ಕೆ ಕೈಹಾಕುತ್ತಾರೆ. ಎಂಥ ಸೆಲೆಬ್ರಿಟಿಗಳಾಗಿದ್ದವರನ್ನೂ ಈ ಡಿಪ್ರೆಶನ್ ಭೂತ ಬಿಡುತ್ತಿಲ್ಲ. 

ಖಿನ್ನತೆ ಎಂಬುದು ಜಗತ್ತಿನ ಶೇಕಡಾ 50 ರಿಂದ 60ರಷ್ಟು ಮಂದಿಗೆ ಕಾಡುತ್ತಿರುವ ಸಾಮಾನ್ಯ ಕಾಯಿಲೆಯಾಗಿದೆ. ಇದು ವಾಸಿಯಾಗಬಲ್ಲ ಮನೋರೋಗವಾಗಿದ್ದರೂ, ಕೆಲವರು ನಿರ್ಲಕ್ಷ್ಯವಹಿಸಿಬಿಡುತ್ತಾರೆ (Neglect). ಕೆಲವರು ನೋಡಲು ಸಹಜವಾಗಿಯೇ ಕಾಣುತ್ತಾರೆ. ಆದರೆ, ಒಳಗೊಳಗೇ ಆತಂಕ,  ತಳಮಳವನ್ನು ಅನುಭವಿಸುತ್ತಿರುತ್ತಾರೆ. ಹಾಗಾದರೆ ಈ ಖಿನ್ನತೆಗೆ ಏನು ಕಾರಣ, ಎಂದು ನೋಡುವುದಾದರೆ ಗ್ರಹದೋಷಗಳು ಎಂದು ಜ್ಯೋತಿಷ್ಯ ಶಾಸ್ತ್ರ (Astrology) ಹೇಳುತ್ತದೆ. ಗ್ರಹಗಳ (Planets) ಸ್ಥಾನ ಹಾಗೂ ಸ್ಥಿತಿಯು ಖಿನ್ನತೆಗೆ ಪ್ರಚೋದನೆಯನ್ನು ನೀಡುತ್ತದೆ. 

ಖಿನ್ನತೆಗೆ ಈ ಗ್ರಹಗಳು ಕಾರಣ (Causing Planets) 
ಸೂರ್ಯ (Sun), ಚಂದ್ರ (Moon) ಮತ್ತು ಬುಧ (Mercury) ಗ್ರಹಗಳು ಖಿನ್ನತೆಗೆ ಮೂಲ ಕಾರಣವಾಗುತ್ತವೆ. ಮನಸ್ಸು, ಬುದ್ಧಿ ಮತ್ತು ಆತ್ಮವು ಗ್ರಹಗಳ ಅಧೀನಕ್ಕೊಳಪಡುತ್ತವೆ. ಒಂದು ವೇಳೆ ಈ ಗ್ರಹಗಳು ನೀಚ ಸ್ಥಿತಿಯಲ್ಲಿದ್ದರೆ,  ಅಂದರೆ ಆರು, ಎಂಟು ಮತ್ತು ಹನ್ನೆರಡನೇ ಮನೆಯಲ್ಲಿದ್ದಿದ್ದೇ ಆದಲ್ಲಿ ನೆಗೆಟಿವ್ ಎನರ್ಜಿ ಹೆಚ್ಚಾಗುತ್ತಾ ಹೋಗುತ್ತದೆ. ಹೆಚ್ಚೆಚ್ಚು ನಕಾರಾತ್ಮಕ ಚಿಂತನೆಯನ್ನು ಮಾಡಿದರೆ ಖಿನ್ನತೆ ಪ್ರಾರಂಭವಾಗುತ್ತದೆ. ಇನ್ನು ಶನಿ (Saturn), ಮಂಗಳ (Mars), ಸೂರ್ಯ, ರಾಹು (Rahu) ಮತ್ತು ಕೇತು (Ketu) ಗ್ರಹಗಳು ಚಂದ್ರನೊಂದಿಗೆ ಸಂಯೋಗವಿದ್ದಾಗ ಖಿನ್ನತೆ ಉಂಟಾಗುತ್ತದೆ. 

ಇದನ್ನು ಓದಿ : Personality Traits: ಶುಕ್ರವಾರ ಜನಿಸಿದವರ ವ್ಯಕ್ತಿತ್ವವೇ ಆಕರ್ಷಕ

ಚಂದ್ರನೇ ಮುಖ್ಯ ಕಾರಣ
ಚಂದ್ರಮಾ ಮನಸೋ ಜಾತಃ ಎಂದು ವೇದದಲ್ಲಿ ಹೇಳಲಾಗಿದೆ. ಅಂದರೆ, ಚಂದ್ರನು ಮನಸ್ಸಿಗೆ ಕಾರಕನಾಗಿದ್ದಾನೆ. ನಮ್ಮ ಭಾವನೆ, ಯೋಚನೆ, ಚಿಂತೆ ಹೀಗೆ ಎಲ್ಲವಕ್ಕೂ ಚಂದ್ರ ಕಾರಣನಾಗುತ್ತಾನೆ. ಅಶುಭ ಗ್ರಹ ಎಂದು ಕರೆಯಲ್ಪಡುವ ಶನಿ, ಮಂಗಳ ಅಥವಾ ರಾಹುಕೇತುವಿನ ಪ್ರಭಾವದಲ್ಲಿದ್ದಾಗ ಚಂದ್ರನು ಅಶುಭವೇ ಉಂಟಾಗುತ್ತದೆ. ಹೀಗೆ ಅಶುಭ ಮನೋಸ್ಥಿತಿ ಇದ್ದಾಗ, ಜೀವನದಲ್ಲಿ ಖುಷಿ ಇದ್ದರೂ ಖುಷಿ ಪಡುವ ಮನಃಸ್ಥಿತಿ ಇರುವುದಿಲ್ಲ. ಇದರ ಜೊತೆಗೆ ಆತ್ಮವಿಶ್ವಾಸದ (Confidence) ಕೊರತೆ ಬಹಳವಾಗಿ ಕಾಡುತ್ತದೆ. ನೀಚ ಸ್ಥಿತಿಯಲ್ಲಿ ಚಂದ್ರನಿದ್ದರೆ ಮಾನಸಿಕ, ಭಾವನಾತ್ಮಕ ಸಮಸ್ಯೆಗಳಿಗೆ ನಾಂದಿ ಹಾಡುತ್ತದೆ. 

ಖಿನ್ನತೆಗೆ ಜಾತಕದ ಯಾವ ಮನೆ ಕಾರಣ?

  • ಜಾತಕದ (Horoscope) ಮೊದಲನೆ ಮನೆ ಆರೋಹಣವಾಗಿದೆ. ಇದು ಮೆದುಳು ಮತ್ತು ಮನಸ್ಸಿನ ಆಲೋಚನಾ ಲಹರಿ ಹಾಗೂ ಕಾರ್ಯ ನಿರ್ವಹಿಸುವ ರೀತಿಯನ್ನು ಹೇಳುತ್ತದೆ.
  • ಜಾತಕದ 4ನೇ ಮನೆಯು ಮಾನಸಿಕ ನೆಮ್ಮದಿ, ಸಂತೋಷ ಮತ್ತು ಸಮಾಧಾನವನ್ನು ಪ್ರತಿನಿಧಿಸುತ್ತದೆ.
  • ಐದನೇ ಮನೆಯು ಬುದ್ಧಿವಂತಿಕೆಯನ್ನು (Brilliant) ಹೇಳುವುದಾದರೂ ಇದರಲ್ಲಿ ತೊಂದರೆ ಇದ್ದರೆ ಖಿನ್ನತೆಯುಂಟಾಗುತ್ತದೆ. 

 
ಇದನ್ನು ಓದಿ : Numerology: ಪಾದಾಂಕ 7, ಸಹಜ ನಿಮಗೆ ಏಳು ಬೀಳು

ಪಾರಾಗಲು ಜ್ಯೋತಿಷ್ಯ ಸಲಹೆಗಳು (Astrology tips)

  • ಚಂದ್ರನು ನೀಚ ಸ್ಥಿತಿಯಲ್ಲಿ ಇಲ್ಲವೇ ನೀಚ ಸ್ಥಾನದಲ್ಲಿ ಸ್ಥಿತನಾಗಿದ್ದರೆ ಅಥವಾ ನಾಲ್ಕನೇ ಮನೆ ನೀಚ ಸ್ಥಿತಿಯಲ್ಲಿದ್ದಾಗ ಚಂದ್ರನಿಗೆ ಸಂಬಂಧಪಟ್ಟ ಮಂತ್ರಗಳನ್ನು ಹೆಚ್ಚು ಕಾಲ ಪಠಿಸಬೇಕು. ಗ್ರಹಕ್ಕೆ ಸಂಬಂಧಿಸಿದ ವಸ್ತುಗಳನ್ನು ದಾನ ಮಾಡಬೇಕು. ಹೀಗೆ ಮಾಡಿದರೆ ಆ ಮನೆಯ ಉಚ್ಛ ಸ್ಥಿತಿಯನ್ನು ತಲುಪುತ್ತದೆ.
  • ಹವಳ ಅಥವ ಚಂದ್ರನಿಗೆ ಸಂಬಂಧಿಸಿದ ಕಲ್ಲನ್ನು ಧರಿಸಬೇಕು.
  • ಬುಧ ಗ್ರಹವು ನೀಚ ಸ್ಥಿತಿಯಲ್ಲಿದ್ದು, ಉಚ್ಛ ಸ್ಥಾನದ ಅಧಿಪತಿಯಾಗಿದ್ದರೆ ರತ್ನ ಧರಿಸಬೇಕು.
  • ಪ್ರತಿದಿನ ಧ್ಯಾನ ಮತ್ತು ಪ್ರಾಣಾಯಾಮಗಳನ್ನು ಮಾಡಿ ಮನೋನಿಗ್ರಹ ಮಾಡಕೊಳ್ಳಬೇಕು.

Tap to resize

Latest Videos

click me!