Parenting Challenge: ರಾಶಿಯ ಅನುಸಾರ, ತಾಯಿಯಾಗಿ ನೀವು ಹೇಗಿರಲಿದ್ದೀರಿ?

By Suvarna News  |  First Published Jan 30, 2022, 3:26 PM IST

ರಾಶಿ ಪ್ರಕಾರ, ನೀವು ತಾಯಿಯಾಗಿ ಮಗುವಿನೊಂದಿಗೆ ಹೇಗೆ ವರ್ತಿಸುತ್ತೀರಿ ಎಂಬುದನ್ನಿಲ್ಲಿ ಕೊಡಲಾಗಿದೆ. 


ಈ ರಾಶಿಚಕ್ರಗಳಂತೂ ವ್ಯಕ್ತಿಯ ಜೀವನದ ಬಹಳಷ್ಟು ವಿಷಯಗಳನ್ನು ಮೊದಲೇ ನಿರ್ಧರಿಸುತ್ತವೆ. ಅದರಲ್ಲಿ ಪೋಷಕರಾದ ಮೇಲೆ ಮಕ್ಕಳನ್ನು ಹೇಗೆ ನೋಡಿಕೊಳ್ಳುತ್ತಾರೆಂಬುದೂ ಸೇರಿದೆ. ಇಷ್ಟಕ್ಕೂ ಸ್ವಭಾವ ರಾಶಿಯ ಆಧಾರದ ಮೇಲೆ ಗೊತ್ತಿದ್ದಾಗ ಇವನ್ನೆಲ್ಲ ತಿಳಿಯೋದು ಕಷ್ಟವಲ್ಲ. ತಾಯಿಯಾದಾಕೆ ಮಗುವಿನ ವಿಷಯದಲ್ಲಿ ಹೇಗಿರುತ್ತಾಳೆ, ಆಕೆ ಎದುರಿಸುವ ಅತಿ ದೊಡ್ಡ ಸವಾಲು ಯಾವುದು ಎಂಬುದನ್ನು ರಾಶಿಯ ಆಧಾರದ ಮೇಲೆ ಇಲ್ಲಿ ಕೊಡಲಾಗಿದೆ. ಇದೆಲ್ಲ ಗೊತ್ತಿದ್ದಾಗ ಪರಿಸ್ಥಿತಿ ಎದುರಿಸಲು ನಾವು ಮಾನಸಿಕವಾಗಿ ಸನ್ನದ್ಧರಾಗಬಹುದು. 

ಮೇಷ(Aries): ಮೇಷ ರಾಶಿಯ ಅಮ್ಮಂದಿರು ಹುಟ್ಟಾ ನಾಯಕತ್ವ ಗುಣ ಹೊಂದಿರುವವರು, ಉತ್ಸಾಹಿಗಳು(Energetic), ಮುನ್ನುಗ್ಗುವ ಗುಣದವರು. ಮಕ್ಕಳನ್ನು ಶಿಸ್ತಿಗೆ ಒಳಪಡಿಸಲು ಹೆದರದವರು. ಅವರಲ್ಲಿ ಶಿಸ್ತು ತರಲು ನೀವು ಮಾಡುವ ಪ್ರಯತ್ನ ಬಹಳ ಒಳ್ಳೆಯದೇ. ಇದರಿಂದ ಮಕ್ಕಳು ಸರಿ ದಾರಿಯಲ್ಲಿ ನಡೆಯುತ್ತಾರೆ. ಆದರೆ, ಹೀಗೆ ಶಿಸ್ತು ತರುವ ನಿಮ್ಮ ಹಟದಲ್ಲಿ ತಾಳ್ಮೆ ಕಳೆದುಕೊಂಡು ಕೋಪಿಸಿಕೊಳ್ಳುತ್ತಲೇ ಇರುತ್ತೀರಿ. ಕೋಪ(temper)ವನ್ನು ಗೆಲ್ಲುವುದೇ ತಾಯಿಯಾಗಿ ನಿಮಗಿರುವ ಅತಿ ದೊಡ್ಡ ಸವಾಲು. 

Tap to resize

Latest Videos

undefined

ವೃಷಭ(Taurus): ಮೇಷ ರಾಶಿಯ ತಾಯಂದಿರಂತೆ ನೀವೂ ಮಕ್ಕಳನ್ನು ಶಿಸ್ತಿಗೆ ತರಲು ಹಟವಾದಿಗಳಂತೆ ನಿಲ್ಲುತ್ತೀರಿ. ಶಿಸ್ತು ತರುವುದು ಉತ್ತಮವೇ. ಆದರೆ, ಮಕ್ಕಳೆಂದ ಮೇಲೆ ತರಲೆ ಮಾಡುತ್ತಲೇ ಇರುತ್ತಾರೆ. ಅದನ್ನು ಅರ್ಥ ಮಾಡಿಕೊಂಡು ಅವರಿಗೆ ಹೊಡೆಯದೆ ಪ್ರೀತಿಯಿಂದಲೇ ಸನ್ನಿವೇಶ ನಿಭಾಯಿಸಲು ಕಲಿಯಿರಿ. 

ಮಿಥುನ(Gemini): ನಿಮಗೆ ಮಾತಾಡುವುದು ಇಷ್ಟವೇ. ಅದರಲ್ಲೂ ನಿಮ್ಮದೇ ಮಕ್ಕಳೊಂದಿಗೆ ಮಾತಾಡುವ ವಿಷಯ ಖುಷಿ, ಮಜಾ ಎಲ್ಲವನ್ನೂ ಕೊಡುತ್ತದೆ. ನಿಮ್ಮ ಈ ಗುಣ ಉತ್ತಮವೇ. ಇದರಿಂದ ನಿಮ್ಮ ಮಕ್ಕಳು ಚಾಟರ್‌ಬಾಕ್ಸ್ ಆಗಬಹುದು ಎಚ್ಚರವಿರಲಿ. ನಿಮ್ಮ ಈ ಫನ್ ಲವಿಂಗ್ ಗುಣದಿಂದಾಗಿ ಮಕ್ಕಳನ್ನು ಹೆಚ್ಚು ಸದರ ಬಿಡುವಿರಿ. ಇದು ಅವರು ಶಿಸ್ತು ತಪ್ಪದಂತಾಗುವಂತೆ ಎಚ್ಚರ ವಹಿಸಿ. 

ಕಟಕ(Cancer): ನಿಮಗೆ ಕುಟುಂಬ(Family)ವೇ ಮೊದಲು. ಮಕ್ಕಳು ಪಾಪು ಇದ್ದಾಗಿಂದಲೂ ಅವರಿಗೆ ಪ್ರೀತಿ, ಬೆಂಬಲವನ್ನು ಸಾಕಷ್ಟು ಕೊಡುತ್ತೀರಿ. ಆದರೆ, ಮಕ್ಕಳನ್ನು ಬಿಟ್ಟು ಮತ್ತೆ ಉದ್ಯೋಗ ಆರಂಭಿಸುವುದು ನಿಮಗೆ ಬಹಳ ಕಷ್ಟವೆನಿಸುತ್ತದೆ. ಅಷ್ಟೇ ಏಕೆ, ಅವರನ್ನು ಬಿಟ್ಟು ಅರ್ಧ ದಿನ ನಿಮಗಾಗಿ ಹೊರ ಹೋಗಲೂ ಹಿಂದೆ ಮುಂದೆ ಯೋಚಿಸುವಿರಿ. ಇದರಿಂದ ಮಕ್ಕಳೂ ಅತಿಯಾಗಿ ಅವಲಂಬಿತರಾಗುವರು. ಅವರಿಗೂ ಕೊಂಚ ಸಮಯ ಕೊಟ್ಟು, ನೀವೂ ಸ್ವಲ್ಪ ನಿಮಗಾಗಿ ಸಮಯ ವ್ಯಯಿಸುವುದನ್ನು ಅಭ್ಯಾಸ ಮಾಡಿಕೊಳ್ಳಿ. 

ಸಿಂಹ(Leo): ಮಕ್ಕಳ ಕುರಿತು ಸಿಕ್ಕಾಪಟ್ಟೆ ಹೆಮ್ಮೆ ನಿಮಗೆ. ಅವರನ್ನು ಹೆಚ್ಚು ರಕ್ಷಿಸಿ, ಪ್ರೀತಿ ತೋರುವಿರಿ. ನೀವು ಖುಷಿಯಿಂದ ಅವರೊಂದಿಗಿರುವ ಕಾರಣ ಮಕ್ಕಳು ನಿಮ್ಮೊಂದಿಗೆ ಹೆಚ್ಚು ಹೆಚ್ಚು ಸಮಯ ಕಳೆಯಲು ಬಯಸುತ್ತಾರೆ. ಆದರೆ, ನಿಮ್ಮ ನೆಗೆಟಿವ್  ಸೈಡ್ ಎಂದರೆ, ಕಡ್ಡಿಯನ್ನು ಗುಡ್ಡ ಮಾಡುವ ನಿಮ್ಮ ಗುಣ. ಇದು ಆಗಾಗ ನಿಮ್ಮನ್ನು ಹೆಚ್ಚು ನಾಟಕೀಯವಾಗಿಸುತ್ತದೆ. ಈ ವಿಷಯದಲ್ಲಿ ನಿಯಂತ್ರಣ ಸಾಧಿಸುವ ಅಗತ್ಯವಿದೆ. 

Vastu Tips: ಮನೆಯಲ್ಲಿ ಯಾವ ಚಿತ್ರವಿದ್ದರೆ ಏನು ಪ್ರಯೋಜನ?

ಕನ್ಯಾ(Virgo): ಅತಿಯಾದ ಪರ್ಫೆಕ್ಷನ್ ಚಟ ನಿಮಗೆ. ಜೊತೆಗೆ ಮಲ್ಟಿಟಾಸ್ಕಿಂಗ್‌ನಲ್ಲೂ ಎಕ್ಸ್‌ಪರ್ಟ್ ನೀವು. ಹೀಗಾಗಿ ಮಕ್ಕಳನ್ನು ನಿಭಾಯಿಸುವುದು ಸುಲಭ ನಿಮಗೆ. ಮಕ್ಕಳು ಏನೇ ಸಮಸ್ಯೆ ಬಂದರೂ ಸಹಾಯಕ್ಕಾಗಿ ನಿಮ್ಮ ಕಡೆ ನೋಡುತ್ತಾರೆ. ಆದರೆ, ನಿಮ್ಮ ಪರ್ಫೆಕ್ಷನ್ ಚಟ ಅವರಿಗೆ ಒತ್ತಡವಾಗಿ ಪರಿಣಮಿಸಬಹುದು. ಆ ಬಗ್ಗೆ ಎಚ್ಚರ ವಹಿಸಿ. ನಿಮ್ಮಂತೆಯೇ ಅವರಿರಬೇಕು ಎಂದುಕೊಳ್ಳಬೇಡಿ. ಅವರ ಸಾಮರ್ಥ್ಯ ಭಿನ್ನವಿರಬಹುದು ಎಂಬುದನ್ನು ಅರ್ಥ ಮಾಡಿಕೊಳ್ಳಿ. 

ತುಲಾ(Libra): ಸಮತೋಲನ ನಿಮ್ಮ ಬಲ. ಇದರಿಂದ ನಿಮ್ಮ ಮಕ್ಕಳು ಶಾಂತಿಯಿಂದ ಇರಲು ಸಾಧ್ಯವಾಗುತ್ತದೆ. ನಿಯಮಗಳೇನಿದ್ದರೂ ಮೂರ್ಖರಿಗೆ ಎಂದು ನಂಬುವವರು ನೀವು. ಅವರಿಗೆ ಹೆಚ್ಚು ನಿಯಮ ಹೇರದೆ ಫ್ರೀಯಾಗಿ ಬಿಡುತ್ತೀರಿ. ಇದರಿಂದ ಬಹಳ ಚಿಕ್ಕವರಿರುವಾಗಲೇ ಅವರು ಪ್ರಬುದ್ಧರಂತೆ ವರ್ತಿಸುತ್ತಾರೆ. ನಿಮ್ಮ ಮಕ್ಕಳು ಅತ್ಯುತ್ತಮವಾಗಿ ಬೆಳೆದು ಜೀವನ ಆಸ್ವಾದಿಸುತ್ತಾರೆ. ಆದರೆ ಕೆಲವೊಮ್ಮೆ ಎಲ್ಲಿ ಗೆರೆ ಎಳೆಯಬೇಕೆಂದು ನೀವು ಗೊಂದಲದಲ್ಲಿ ಬೀಳಬಹುದು. 

Personality Traits: ಶುಕ್ರವಾರ ಜನಿಸಿದವರ ವ್ಯಕ್ತಿತ್ವವೇ ಆಕರ್ಷಕ

ವೃಶ್ಚಿಕ(Scorpio): ನಿಮ್ಮ ಆರನೇ ಇಂದ್ರಿಯ ಚೆನ್ನಾಗಿ ಕೆಲಸ ಮಾಡುತ್ತದೆ. ಇದರಿಂದ ನಿಮ್ಮ ಮಕ್ಕಳ ಸಮಸ್ಯೆಗಳನ್ನು ಹೆಚ್ಚು ಚೆನ್ನಾಗಿ ಅರ್ಥ ಮಾಡಿಕೊಂಡು ಪರಿಹರಿಸುತ್ತೀರಿ. ಪ್ರಾಮಾಣಿಕತೆ ಹಾಗೂ ರಕ್ಷಣೆ ಎರಡನ್ನೂ ಮಕ್ಕಳಿಗೆ ಕೊಡುತ್ತೀರಿ. ಆದರೆ, ಬಹಳಷ್ಟು ಬಾರಿ ಮಕ್ಕಳ ಸಮಸ್ಯೆಯನ್ನು ಪೂರ್ತಿ ನಿಮ್ಮ ಮೇಲೆ ಹೇರಿಕೊಂಡು ಪರಿಹರಿಸುತ್ತೀರಿ. ಇದರಿಂದ ಅವರು ಸಮಸ್ಯೆಗಳ ವಿರುದ್ಧ ನಿಂತು ಸೆಣೆಸಾಡುವುದನ್ನು ಕಲಿಯುವುದಿಲ್ಲ. 

ಧನುಸ್ಸು(Sagittarius): ಬಾಲ್ಯ ಬೇಗ ಮುಗಿಯುತ್ತದೆ ಎಂದು ನಿಮಗೆ ಗೊತ್ತು. ಹಾಗಾಗಿ, ಮಕ್ಕಳಿಗೆ ಅದನ್ನು ಎಂಜಾಯ್ ಮಾಡಲು ಸಾಕಷ್ಟು ಅವಕಾಶ ಕಲ್ಪಿಸುತ್ತೀರಿ. ಸ್ವಾತಂತ್ರ್ಯ ನೀಡುತ್ತೀರಿ. ಆದರೆ, ನಿಮ್ಮಲ್ಲಿ ತಾಳ್ಮೆ ಕಡಿಮೆ ಇರುವುದು ಮಕ್ಕಳನ್ನು ಬೆಳೆಸುವಾಗ ಸವಾಲೆನಿಸಬಹುದು. ಜೊತೆಗೆ, ಮಕ್ಕಳನ್ನು ಬೇಕಾಬಿಟ್ಟಿ ಬಿಟ್ಟು ಊಟ, ಸ್ನಾನ ಯಾವೊಂದಕ್ಕೂ ಸಮಯ ನಿಗದಿ ಮಾಡದೆ ಅವು ಶಿಸ್ತು ತಪ್ಪಿ ಹೋಗಲು ಕಾರಣವಾಗುತ್ತೀರಿ. 

ಈ ನಾಲ್ಕು ರಾಶಿಗಳಿಂದ Break up ನೋವನ್ನು ಸಹಿಸೋದು ಸಾಧ್ಯವೇ ಇಲ್ಲ..

ಮಕರ(Capricorn): ಜೀವನ ಹಾಕುವ ಎಲ್ಲ ಸವಾಲುಗಳನ್ನೂ ಸಮರ್ಥವಾಗಿ ಎದುರಿಸುವ ಸಾಮರ್ಥ್ಯ ನಿಮ್ಮದು. ತಾಯಿಯಾಗಿ ಅದನ್ನು ಜವಾಬ್ದಾರಿಯಂತೆ ನಿಭಾಯಿಸುವಿರಿ. ಹೀಗಾಗಿ, ತಾಯ್ತನವನ್ನು ಬಹಳ ಗಂಭೀರವಾಗಿ ತೆಗೆದುಕೊಳ್ಳುವಿರಿ. ಆದರೆ, ಮಕ್ಕಳ ವಿಷಯದಲ್ಲಿ ತೀರಾ ಗಾಂಭೀರ್ಯತೆ ಬೇಕಾಗಿಲ್ಲ. ನಿಮ್ಮ ಗಂಭೀರತೆ ಮಕ್ಕಳಿಗೆ ಚಿಂತೆ ತರಬಹುದು. 

ಕುಂಭ(Aquarius): ನಿಮ್ಮ ನಿಸ್ವಾರ್ಥ ಸ್ವಭಾವದಿಂದ ನೀವು ಅತ್ಯುತ್ತಮ ಕಾಳಜಿ ವಹಿಸುವ ತಾಯಿಯಾಗುತ್ತೀರಿ. ನಿಮ್ಮ ಮಗುವಿನ ಎಲ್ಲ ಅವಶ್ಯಕತೆಗಳು, ಅವರ ಜೀವನದಲ್ಲೇನಾಗುತ್ತಿದೆ ಎಂಬುದು ನಿಮಗೆ ಹೇಳದೆಯೇ ತಿಳಿಯುತ್ತದೆ. ಎಲ್ಲ ಒಳ್ಳೆಯದೇ. ಆದರೆ, ನಿಮಗಾಗಿಯೂ ಕೊಂಚ ಸಮಯ ಮಾಡಿಕೊಳ್ಳಲು ಮರೆಯುವುದು ಮಾತ್ರ ತಪ್ಪು. 

ಮೀನ(Pisces): ಕನಸುಗಣ್ಣಿನವರಾದ, ಕಲಾತ್ಮಕತೆ ಹಾಗೂ ಸೂಕ್ಷ್ಮತೆಯ ಸ್ವಭಾವದವರಾದ ನೀವು ಮಕ್ಕಳಿಗೆ ಏನು ಬೇಕೋ ಅವನ್ನು ಕಲಿಸುತ್ತೀರಿ. ಆದರೆ, ಕೆಲವೊಮ್ಮೆ ನೀವು ರಿಯಾಲಿಟಿಯಲ್ಲಿರುವುದೇ ಮರೆಯುತ್ತೀರಿ. ಇದರಿಂದ ಮಕ್ಕಳ ನೈಜತೆಗೆ ದೂರವಿರುವ ಕನಸನ್ನು ಅವರಿಗೆ ನಿಜವೆಂದೇ ಭಾವಿಸುವಂತೆ ಮಾಡುತ್ತೀರಿ. ಅದನ್ನು ಸಾಧಿಸಲು ಸಾಧ್ಯವಾಗದೆ ಹೋದಾಗ ಮಕ್ಕಳು ಒತ್ತಡ ಎದುರಿಸಬಹುದು. 
 

click me!