ಕೆಲವರು ಕ್ರಶ್ ಎದುರು ಬಂದಾಗ ತಮ್ಮ ಭಾವನೆಗಳನ್ನು ಬಚ್ಚಿಟ್ಟು ಕೊಳ್ಳಬಯಸಿದರೆ, ಮತ್ತೆ ಕೆಲವರು ಅದನ್ನು ತೆರೆದಿಡಲು ಬಯಸುತ್ತಾರೆ. ಇನ್ನೂ ಕೆಲವರು ಬೇಡವೆಂದರೂ ಅವರ ವರ್ತನೆಯಲ್ಲೇ ಭಾವನೆಗಳನ್ನು ತಿಳಿಯಬಹುದು. ಯಾವ ರಾಶಿಯವರು ಕ್ರಶ್ ಎದುರು ಹೇಗೆ ನಡೆಯುತ್ತಾರೆ ನೋಡಿ..
ಯಾರ ಮೇಲಾದರೂ ಕ್ರಶ್(crush) ಆದಾಗ ಅವರು ಎದುರು ಬಂದರೆ ಸಾಕು ಕೈಗಳು ಬೆವರಲು(sweating) ಆರಂಭಿಸುತ್ತವೆ, ಬೆರಳುಗಳು ಬೆಸೆದುಕೊಂಡು ಅಲ್ಲೇ ಆಡಲು ಶುರು ಮಾಡುತ್ತವೆ. ಬಾಯಾರಾತೊಡಗುತ್ತದೆ. ಕಣ್ಣಿಗೆ ಕಣ್ಣು ಕೊಡುವುದು ಕಷ್ಟವಾಗುತ್ತದೆ, ಹೊಟ್ಟೆಯೊಳಗೆ ಚಿಟ್ಟೆ ಬಿಟ್ಟಂತಾಗುತ್ತದೆ.. ಇನ್ನೂ ಏನೇನೋ ಆಗುತ್ತದೆ. ಆದರೆ, ಕೆಲವರು ತಮ್ಮ ಈ ಎಲ್ಲ ಭಾವನೆಗಳನ್ನು ಅಡಗಿಸಿಟ್ಟು ನಾರ್ಮಲ್ ಆಗಿದ್ದಂತೆ ನಟಿಸುವಲ್ಲಿ ಸಫಲರಾಗುತ್ತಾರೆ. ಆದರೆ, ಮತ್ತೆ ಕೆಲವರಿಗೆ ಕ್ರಶ್ ಎದುರು ನಾರ್ಮಲ್ ಆಗಿರುವುದು ಸಾಧ್ಯವೇ ಇಲ್ಲ. ಅವರ ವರ್ತನೆಯಲ್ಲೇ ಅವರಿಗೆ ನಿಮ್ಮ ಮೇಲೆ ಕ್ರಶ್ ಆಗಿದೆ ಎಂಬುದನ್ನು ಗುರುತಿಸಿ ಬಿಡಬಹುದು. ಹೀಗೆ ತಮ್ಮ ಫೀಲಿಂಗ್ಸ್ ಮುಚ್ಚಿಟ್ಟುಕೊಳ್ಳಲು ಬಾರದ ಕೆಲ ರಾಶಿಗಳು ಇಲ್ಲಿವೆ. ಅವರು ಕ್ರಶ್ ಎದುರಿನಲ್ಲಿ ಹೇಗೆ ವರ್ತಿಸುತ್ತಾರೆ ಎಂಬುದನ್ನೂ ವಿವರಿಸಲಾಗಿದೆ.
ಮೇಷ(Aries)
ಇವರಿಗೆ ತಮ್ಮ ಪ್ರೀತಿ ಎಕ್ಸ್‌ಪ್ರೆಸ್ ಮಾಡದೇ ಸುಮ್ಮನಿರಲು ಬರುವುದೇ ಇಲ್ಲ. ಕ್ರಶ್ ವಿಷಯದಲ್ಲಿ ಪ್ರೇಮಜ್ವರ ಬಂದಂತೆ ಒದ್ದಾಡಿ ಹೋಗುತ್ತಾರೆ. ಕ್ರಶ್ ಮೆಸೇಜ್ ಬಂದ ತಕ್ಷಣದಲ್ಲೇ ಅದಕ್ಕೆ ಪ್ರತಿಕ್ರಿಯಿಸುತ್ತಾರೆ. ಕ್ರಶ್ ಯಾವ ಸಮಸ್ಯೆಯಲ್ಲಿದ್ದರೂ ಸಹಾಯಕ್ಕೆ ಓಡುತ್ತಾರೆ. ಬೇರೆ ಸ್ನೇಹಿತರ ವಿಷಯದಲ್ಲಿ ನಿರಾಸಕ್ತಿ ತೋರುವ ಇವರು ಕ್ರಶ್ ವಿಷಯಕ್ಕೆ ತೋರುವ ಅತಿಯಾದ ಉತ್ಸಾಹ, ಆಸಕ್ತಿಯಲ್ಲೇ ಯಾರಿಗಾದರೂ ಇವರ ಕ್ರಶ್ ಬಗ್ಗೆ ತಿಳಿದು ಹೋಗುವುದು.
ಮಿಥುನ(Gemini)
ಫ್ಲರ್ಟ್ ಮಾಡೋ ಕಲೆ ಇವರನ್ನು ನೋಡಿ ಕಲೀಬೇಕು. ಆಗಾಗ ಫ್ಲರ್ಟಿಂಗ್‌ನಲ್ಲಿ ಕಾಲ ಕಳೆಯುತ್ತಿರುತ್ತಾರೆ. ಆದರೆ, ತಮ್ಮ ಕ್ರಶ್ ಎದುರಿಗೆ ಕಂಡಾಗ ಮಾತ್ರ ಇವರ ಫ್ಲರ್ಟಿಂಗ್ ಮಟ್ಟ ಪೂರ್ತಿ ಮೇಲೇರುತ್ತದೆ. ಅವರನ್ನು ಇಂಪ್ರೆಸ್ ಮಾಡಲು ಸಾಧ್ಯವಿರುವ ಎಲ್ಲ ಅವಕಾಶ(opportunity)ಗಳನ್ನೂ ಬಳಸಿಕೊಳ್ಳುತ್ತಾರೆ. ಕೆಲವೊಮ್ಮೆ ಇದು ಮಿತಿ ಮೀರಿ ಅತಿ ಎನಿಸುವುದೂ ಇದೆ. ಆರಂಭದಲ್ಲೇ ಈ ಮಟ್ಟಿಗಿನ ಪ್ರಯತ್ನ ಅಷ್ಟೊಂದು ಒಳ್ಳೆಯದಲ್ಲ ಎನಿಸುತ್ತದೆ.
Parenting Challenge: ರಾಶಿಯ ಅನುಸಾರ, ತಾಯಿಯಾಗಿ ನೀವು ಹೇಗಿರಲಿದ್ದೀರಿ?
ವೃಶ್ಚಿಕ(Scorpio)
ವೃಶ್ಚಿಕ ರಾಶಿಯವರು ತಮ್ಮ ಕ್ರಶ್ ಎದುರು ಫೀಲಿಂಗ್ಸ್ ಹೇಳಿಕೊಳ್ಳಲು ಅವಕಾಶಕ್ಕಾಗಿ ಕಾಯುತ್ತಾರೆ. ಎಲ್ಲರೆದುರು ತಮ್ಮ ಭಾವನೆಗಳನ್ನು ವ್ಯಕ್ತ ಪಡಿಸುವುದು ಇವರಿಗೆ ಕಷ್ಟವೆನಿಸುತ್ತದೆ. ಹಾಗಾಗಿ ಕ್ರಶ್ ಮತ್ತು ಬೇರೆಲ್ಲ ಗೆಳೆಯರಿದ್ದಾಗ ಇವರು ನಾರ್ಮಲ್ ಎನ್ನುವಂತಿರುತ್ತಾರೆ. ಅವರು ಒಬ್ಬರೇ ಸಿಕ್ಕಾಗ ತಮ್ಮ ಸಂಪೂರ್ಣ ಪ್ರಯತ್ನ ಹಾಕಿ ಭಾವನೆಗಳನ್ನು ವ್ಯಕ್ತಪಡಿಸುತ್ತಾರೆ.
ಧನು(Sagittarius)
ಇವರು ಎಲ್ಲ ವಿಷಯವನ್ನು ಹಗುರವಾಗಿ ತೆಗೆದುಕೊಳ್ಳಲು ಬಯಸುವವರು. ಕ್ರಶ್ ವಿಷಯದಲ್ಲೂ ಅಷ್ಟೇ, ಅವರಿಗೆ ತಮ್ಮ ಭಾವನೆ ಗೊತ್ತಾದರೆ ಎಂದು ಭಯ ಪಡುವವರಲ್ಲ.. ಗೊತ್ತಾದರೇನಂತೆ ಎಂದುಕೊಳ್ಳುವವರು. ಜೊತೆಗೆ ಕಾಲಹರಣ ಮಾಡುವುದು ಇವರಿಗಿಷ್ಟವಿಲ್ಲ. ಬೇಗ ವಿಷಯ ತಿಳಿಸಿ ಮುಂದುವರಿಯಬೇಕು ಎನ್ನುವವರು. ಹಾಗಾಗಿ, ತಮಗೆ ಅವರನ್ನು ಕಂಡರೆ ಇಷ್ಟ ಎಂಬುದು ಕ್ರಶ್‌ಗೆ ಗೊತ್ತಾಗುವಂತೆಯೇ ನಡೆದುಕೊಳ್ಳುತ್ತಾರೆ. ಒಂದು ವೇಳೆ ಕ್ರಶ್ ತಮ್ಮನ್ನು ತಿರಸ್ಕರಿಸಿದರೆ ಆಗಲೂ ಅದನ್ನು ಸಾಧ್ಯವಾದಷ್ಟು ಆರಾಮಾಗಿಯೇ ತೆಗೆದುಕೊಳ್ಳುತ್ತಾರೆ. ಅದನ್ನೊಂದು ಸಮಸ್ಯೆ ಮಾಡಿಕೊಂಡು ಕುಳಿತುಕೊಳ್ಳುವುದು ಇವರಿಗಿಷ್ಟವಿಲ್ಲ. ಬದಲಿಗೆ ರಿಯಾಲಿಟಿ ಒಪ್ಪಿಕೊಂಡು ಮುನ್ನಡೆಯಬೇಕು ಎಂದು ನಂಬಿದ್ದಾರೆ.
Marriage Horoscope: ಈ ಐದು ರಾಶಿಯವರಿಗೆ ಹತ್ತಿರದಲ್ಲಿದೆ ವಿವಾಹ ಯೋಗ
ಕುಂಭ(Aquarius)
ಇವರು ಸ್ವಭಾವತಃ ಅಂತರ್ಮುಖಿ(introvert)ಗಳಾದರೂ, ತಮ್ಮ ಕ್ರಶ್‌ಗೆ ಮಾತ್ರ ತಮ್ಮ ಫೀಲಿಂಗ್ಸ್ ಗೊತ್ತಾಗಲಿ ಎಂದುಕೊಳ್ಳುವವರು. ಈ ವಿಷಯದಲ್ಲಿ ಹೆಚ್ಚು ಸಮಯ ಹಾಳು ಮಾಡಲು ಇವರು ಬಯಸುವುದಿಲ್ಲ. ಹಾಗಾಗಿ, ಬೇಗ ತಿಳಿಸಬೇಕು ಎಂದುಕೊಳ್ಳುತ್ತಾರೆ. ಜೊತೆಗೆ, ಕ್ರಶ್ ಮನಸ್ಸಲ್ಲೇನಿದೆ, ಅವರಿಗೇನಿಷ್ಟ ಎಂಬುದನ್ನು ಚೆನ್ನಾಗಿ ಲೆಕ್ಕ ಹಾಕಬಲ್ಲರು. ಇದರಿಂದ ಅವರನ್ನು ಇಂಪ್ರೆಸ್ ಮಾಡಲು ಏನು ಮಾಡಬೇಕೆಂಬುದು ಇವರಿಗೆ ಚೆನ್ನಾಗಿ ತಿಳಿಯುತ್ತದೆ.