ನಕ್ಷತ್ರ ಮತ್ತು ರಾಶಿಗಳ ಆಧಾರದ ಮೇಲೆ ಪ್ರತಿ ವ್ಯಕ್ತಿಯ ಸ್ವಭಾವ, ಗುಣ-ಲಕ್ಷಣ, ಜೀವನಶೈಲಿ ಮತ್ತು ಭವಿಷ್ಯದ ವಿಚಾರಗಳನ್ನು ಅರಿಯುವುದು ಸುಲಭವಾಗುತ್ತದೆ. ಮುಖ್ಯವಾಗಿ ಜನ್ಮ ನಕ್ಷತ್ರದ ಆಧಾರದ ಮೇಲೆ ವ್ಯಕ್ತಿಯ ಬಗೆಗಿನ ವಿಚಾರಗಳು ಎಲ್ಲವೂ ನಿರ್ಧರಿತವಾಗಿರುತ್ತದೆ. ಹಾಗಾಗಿ ವ್ಯಕ್ತಿಯ ಭವಿಷ್ಯದ ಬಗ್ಗೆ ತಿಳಿಯುವಾಗ, ಅವರು ಯಾವ ನಕ್ಷತ್ರದಲ್ಲಿ ಜನಿಸಿದ್ದಾರೆಂಬುದು ಅತ್ಯಂತ ಮುಖ್ಯವಾಗುತ್ತದೆ. ನಕ್ಷತ್ರದ ಸ್ವಭಾವ-ಗುಣಗಳು ವ್ಯಕ್ತಿಯ ಮೇಲೆ ನೇರ ಪ್ರಭಾವವನ್ನು ಬೀರುತ್ತವೆ. ಹಾಗಾದರೆ ಪೂರ್ವಭಾದ್ರ ನಕ್ಷತ್ರದಲ್ಲಿ ಜನಿಸಿದವರ ಬಗ್ಗೆ ತಿಳಿದುಕೊಳ್ಳೋಣ...
ವೈದಿಕ ಜ್ಯೋತಿಷ್ಯ ಶಾಸ್ತ್ರದಲ್ಲಿ ನಕ್ಷತ್ರಗಳ ಗುಣ ಸ್ವಭಾವಗಳ ಬಗ್ಗೆ ವರ್ಣಿಸಲಾಗಿದೆ. ಶಾಸ್ತ್ರದಲ್ಲಿ ತಿಳಿಸಿರುವ ನಕ್ಷತ್ರಗಳು ಅನೇಕ ವಿಶೇಷ ಮಹತ್ವಗಳನ್ನು ಹೊಂದಿದ್ದು, ಅವು ವ್ಯಕ್ತಿಯ ವೈಯಕ್ತಿಕ ಜೀವನದ ಮೇಲೆ ಅದೇ ಪ್ರಭಾವವನ್ನು ಬೀರುತ್ತವೆ.
ಜ್ಯೋತಿಷ್ಯ ಶಾಸ್ತ್ರದಲ್ಲಿ ನಕ್ಷತ್ರಗಳು 27, ಅದರಲ್ಲಿ ಪೂರ್ವಭಾದ್ರ ನಕ್ಷತ್ರವು 25ನೇ ನಕ್ಷತ್ರವಾಗಿದೆ. ಈ ನಕ್ಷತ್ರದಲ್ಲಿ ಜನಿಸಿದವರು ಜೀವನದಲ್ಲಿ ಪರಿಶ್ರಮಿಗಳು ಮತ್ತು ಹೆಚ್ಚಿನ ಸಫಲತೆಯನ್ನು ಕಾಣುತ್ತಾರೆ ಎಂದು ಹೇಳಲಾಗುತ್ತದೆ. ಹಾಗಾದರೆ ಈ ನಕ್ಷತ್ರದಲ್ಲಿ ಜನಿಸಿದವರ ಸ್ವಭಾವಗಳ ಬಗ್ಗೆ ಹೆಚ್ಚಿನ ವಿಷಯಗಳನ್ನು ತಿಳಿಯೋಣ...
ಇದನ್ನು ಓದಿ: ಪ್ರೀತಿ ಮತ್ತು ಸ್ನೇಹದಲ್ಲಿ ಈ 4 ರಾಶಿಯವರಿಗೆ ಹೆಚ್ಚು ಮೋಸವಂತೆ...!
ಈ ನಕ್ಷತ್ರದಲ್ಲಿ ಜನಿಸಿದವರು ಭಾಗ್ಯಶಾಲಿಗಳು
ರಾಶಿಚಕ್ರವಾದ ಕುಂಭ ಅಥವಾ ಮೀನ ರಾಶಿಯಲ್ಲಿ ಹುಟ್ಟಿದವರ ಜನ್ಮ ನಕ್ಷತ್ರ ಪೂರ್ವಭಾದ್ರವಾಗಿರುತ್ತದೆ. ಪೂರ್ವಭಾದ್ರ ನಕ್ಷತ್ರದ ಪ್ರಥಮ ಮೂರು ಚರಣಗಳು ಕುಂಭ ರಾಶಿಗೆ ಬರುತ್ತದೆ ಮತ್ತು ಕೊನೆಯ ಒಂದು ಚರಣ ಅಂದರೆ ನಾಲ್ಕನೇ ಚರಣ ಮೀನ ರಾಶಿಯಾಗಿರುತ್ತದೆ. ನಕ್ಷತ್ರಗಳ ಪಟ್ಟಿಯಲ್ಲಿ ಪೂರ್ವಭಾದ್ರ ನಕ್ಷತ್ರದ್ದು 25ನೇ ಸ್ಥಾನವಾಗಿದೆ. ಈ ನಕ್ಷತ್ರದಲ್ಲಿ ಜನಿಸಿದವರು ಸಾಹಸ ಪ್ರವೃತ್ತಿಯನ್ನು ಹೊಂದಿದವರಾಗಿರುತ್ತಾರೆ. ಅಷ್ಟೇ ಅಲ್ಲದೆ ಅತ್ಯಂತ ಬುದ್ಧಿವಂತರಾಗಿರುತ್ತಾರೆ. ಎಂಥದ್ದೇ ಸಂಕಷ್ಟ ಪರಿಸ್ಥಿತಿ ಎದುರಾದರೂ ಸಹ ದೃತಿಗೆಡದೆ ಸಂದರ್ಭವನ್ನು ನಿಭಾಯಿಸುವ ಮನಸ್ಥಿತಿಯನ್ನು ಈ ನಕ್ಷತ್ರದವರು ಹೊಂದಿರುತ್ತಾರೆ. ಹೆಚ್ಚಿನ ಪರಿಶ್ರಮದಿಂದ ಯಾವುದೇ ರೀತಿಯ ಕೆಲಸವಾದರೂ ಸರಿ ಅದರಲ್ಲಿ ಯಶಸ್ಸನ್ನು ಕಾಣುತ್ತಾರೆ. ಪೂರ್ವಭಾದ್ರ ನಕ್ಷತ್ರದಲ್ಲಿ ಜನಿಸಿದವರು ಹುಟ್ಟಿನಿಂದಲೇ ಹೆಚ್ಚು ಅದೃಷ್ಟವಂತರಾಗಿರುತ್ತಾರೆ.
ಜೀವನದ ಪ್ರತಿ ಕ್ಷೇತ್ರದಲ್ಲಿ ಯಶಸ್ಸು
ಪೂರ್ವಭಾದ್ರ ನಕ್ಷತ್ರದಲ್ಲಿ ಜನಿಸಿದವರು ಜೀವನದ ಪ್ರತಿ ಹಂತದಲ್ಲೂ ಯಶಸ್ಸನ್ನು ಪಡೆಯುತ್ತಾರೆ. ಈ ನಕ್ಷತ್ರದಲ್ಲಿ ಜನಿಸಿದವರು ವಿನಯವಂತರಾಗಿರುತ್ತಾರೆ. ಅಷ್ಟೇ ಅಲ್ಲದೆ ಪರೋಪಕಾರಿ ಗುಣವನ್ನು ಹೆಚ್ಚು ಹೊಂದಿರುತ್ತಾರೆ. ಈ ವ್ಯಕ್ತಿಗಳು ಶಾಂತಿ ಪ್ರಿಯರಾಗಿರುತ್ತಾರೆ. ಆದರೆ, ಒಮ್ಮೆ ಸಿಟ್ಟು ಬಂತೆಂದರೆ ಅದನ್ನು ಶಾಂತಗೊಳಿಸುವುದ ಅತ್ಯಂತ ಕಷ್ಟಕರವಾಗಿರುತ್ತದೆ.
ಉದ್ಯೋಗ ಮತ್ತು ವ್ಯಾಪಾರ ಎರಡರಲ್ಲೂ ಉತ್ತಮ
ಪೂರ್ವಭಾದ್ರ ನಕ್ಷತ್ರದಲ್ಲಿ ಜನಿಸಿದವರು ಉದ್ಯೋಗ ಮಾಡಿದರೆ ಅದರಲ್ಲಿ ಯಶಸ್ಸು ಕಾಣುತ್ತಾರೆ. ಇಲ್ಲವೇ ವ್ಯಾಪಾರ ಕ್ಷೇತ್ರದಲ್ಲಿ ಮುಂದವರಿದರೆ ಅದರಲ್ಲಿ ಸಫಲತೆಯನ್ನು ಕಾಣುತ್ತಾರೆ. ಉದ್ಯೋಗ ಅಥವಾ ವ್ಯಾಪಾರ ಯಾವ ಕ್ಷೇತ್ರಕ್ಕೆ ಕಾಲಿಟ್ಟರೂ ಅದೃಷ್ಟ ಈ ನಕ್ಷತ್ರದವರ ಕೈಹಿಡಿಯುತ್ತದೆ. ಸರಳ ಜೀವನವನ್ನು ಇವರು ಇಷ್ಟಪಡುತ್ತಾರೆ.
ಇದನ್ನು ಓದಿ: ಶನಿ ಜಯಂತಿಯಂದು ಹೀಗೆ ಮಾಡಿ ಶನಿ ದೋಷದಿಂದ ಮುಕ್ತಿ ಹೊಂದಿ
ದೇವರ ಮೇಲೆ ಭಕ್ತಿ ಜಾಸ್ತಿ
ದೇವರ ಮೇಲೆ ಪೂರ್ಣ ವಿಶ್ವಾಸವಿಡುವ ಇವರು, ಹೆಚ್ಚು ಭಕ್ತಿಯುಳ್ಳವರಾಗಿರುತ್ತಾರೆ. ಧಾರ್ಮಿಕ ವಿಚಾರಗಳ ಬಗ್ಗೆ ಹೆಚ್ಚಿನ ಆಸಕ್ತಿಯನ್ನು ಪೂರ್ವಭಾದ್ರ ನಕ್ಷತ್ರದಲ್ಲಿ ಜನಿಸಿದವರು ಹೊಂದಿರುತ್ತಾರೆ. ಇತರರಿಗೆ ಸಹಾಯ ಮಾಡುವುದಕ್ಕೆ ಸದಾ ಸಿದ್ಧರಾಗಿರುತ್ತಾರೆ.
ಸತ್ಯ ಹೇಳುವುದು ಇವರ ಸ್ವಭಾವ
ಈ ನಕ್ಷತ್ರದಲ್ಲಿ ಜನಿಸಿದವರು ಸತ್ಯವನ್ನು ಹೇಳುವ ಗುಣವನ್ನು ಹೊಂದಿರುತ್ತಾರೆ. ವಿಚಾರಗಳು ಸಹ ನಿಷ್ಪಕ್ಷಪಾತವಾಗಿರುತ್ತವೆ. ಕರ್ತವ್ಯಗಳ ಬಗ್ಗೆ ಹೆಚ್ಚಿನ ಅರಿವು ಇವರಿಗಿರುತ್ತದೆ. ಹಾಗಾಗಿ ಕರ್ತವ್ಯಗಳನ್ನು ನಿರ್ವಹಿಸಲು ಸದಾ ಸನ್ನದ್ಧರಾಗಿರುವುದಲ್ಲದೆ, ಜವಾಬ್ದಾರಿಗಳನ್ನು ಪರಿಪೂರ್ಣವಾಗಿ ನಿರ್ವಹಿಸುವ ಚತುರತೆಯನ್ನು ಇವರು ಹೊಂದಿರುತ್ತಾರೆ.
ಪ್ರಾಮಾಣಿಕರು
ಸಾಮಾನ್ಯವಾಗಿ ಈ ನಕ್ಷತ್ರದಲ್ಲಿ ಜನಿಸಿದವರು ಮಧ್ಯಮ ಎತ್ತರವನ್ನು ಹೊಂದಿರುತ್ತಾರೆ. ವಿಜ್ಞಾನ, ಜ್ಯೋತಿಷ್ಯ, ತಂತ್ರಜ್ಞಾನ ಮತ್ತು ಶಿಕ್ಷಣ ಕ್ಷೇತ್ರದಲ್ಲಿ ಇವರಿಗೆ ಹೆಚ್ಚಿನ ಆಸಕ್ತಿ ಇರುತ್ತದೆ. ಪೂರ್ವಭಾದ್ರ ನಕ್ಷತ್ರದಲ್ಲಿ ಜನಿಸಿದವರು ಪ್ರಾಮಾಣಿಕರಾಗಿರುತ್ತಾರೆ. ಅಷ್ಟೇ ಅಲ್ಲದೆ ಇತರರು ಸಹ ಪ್ರಾಮಾಣಿಕರಾಗಿರಬೇಕೆಂದು ಇವರು ಬಯಸುತ್ತಾರೆ. ಸತತ ಪರಿಶ್ರಮದಿಂದ ಯಶಸ್ಸನ್ನು ಗಳಿಸುತ್ತಾರೆ.
ಇದನ್ನು ಓದಿ: ಮನೆಯ ಸದಸ್ಯರೊಂದಿಗೆ ಭಿನ್ನಾಭಿಪ್ರಾಯವೇ? ಹಾಗಿದ್ದರೆ ಈ ಮೂರು ಅಭ್ಯಾಸಗಳ ಬಿಡಿ
ಖರ್ಚು ಕಡಿಮೆ – ಉಳಿಸುವುದು ಹೆಚ್ಚು
ಈ ನಕ್ಷತ್ರದಲ್ಲಿ ಜನಿಸಿದವರು ಹೆಚ್ಚು ಹಣವನ್ನು ಖರ್ಚು ಮಾಡುವುದಿಲ್ಲ. ಅಲ್ಲದೆ, ಇವರು ಹಣವನ್ನು ಉಳಿಸುವ ಉತ್ತಮ ಗುಣವನ್ನು ಹೊಂದಿರುತ್ತಾರೆ. ಈ ವ್ಯಕ್ತಿಗಳು ಕಳೆದ ಸಮಯದಲ್ಲಿ ಕಲಿತ ಹಲವು ವಿಷಯಗಳಿಂದ ಭವಿಷ್ಯದ ದಿನಗಳನ್ನು ಇನ್ನೂ ಉತ್ತಮವಾಗಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಈ ನಕ್ಷತ್ರದಲ್ಲಿ ಜನಿಸಿದವರು ಗುರುವಿಗೆ ಹೆಚ್ಚು ಗೌರವವನ್ನು ಕೊಡುವ ಸ್ವಭಾವವನ್ನು ಹೊಂದಿರುತ್ತಾರೆ.
ಈ ನಕ್ಷತ್ರದಲ್ಲಿ ಜನಿಸಿದವರು ನಕಾರಾತ್ಮಕ ವಿಚಾರಗಳ ಬಗ್ಗೆ ಹೆಚ್ಚು ಗಮನಹರಿಸುವುದಿಲ್ಲ. ಇವರು ತಮ್ಮ ಆತ್ಮಸ್ಥೈರ್ಯ ಮತ್ತು ಸಾಹಸ ಪ್ರವೃತ್ತಿಯಿಂದ ಜಯವನ್ನು ಗಳಿಸುತ್ತಾರೆ.