• ಸರಣಿ ಸಾವಿಗೆ ಕಂಗೆಟ್ಟ ಜನ ; ಎಲ್ಲೆಡೆ ಭಯವೋ ಭಯ..!
• ಸಾವು ತಡೆಯಲು ದುರ್ಗಾದೇವಿ, ಜಟ್ಟಿಂಗರಾಯ ದೇವರ ಮೊರೆ..!
• ವಿಜಯಪುರದ ಕಾಲೇಬಾಗದ ಜನರ ಚಿತ್ರವಿಚಿತ್ರ ಆಚರಣೆ.!
ಷಡಕ್ಷರಿ ಕಂಪೂನವರ್, ಏಷ್ಯಾನೆಟ್ ಸುವರ್ಣ ನ್ಯೂಸ್, ವಿಜಯಪುರ
ವಿಜಯಪುರ (ಜು.16): ಇದು ನಂಬಿಕೆಯೋ ಅಥವಾ ಮೂಢನಂಬಿಕೆಯೋ ಗೊತ್ತಿಲ್ಲ. ಆದ್ರೆ ವಿಜಯಪುರದಲ್ಲಿ ಸರಣಿ ಸಾವಿಗೆ ಹೆದರಿದ ಜನ ಚಿತ್ರವಿಚಿತ್ರ ಆಚರಣೆಯಲ್ಲಿ ತೊಡಗಿದ್ದಾರೆ. ಕಾಲಿಗೆ ಚಪ್ಪಲಿ ಧರಿಸೋಲ್ಲ. ಮನೆಯಲ್ಲಿ ರೊಟ್ಟಿ ಮಾಡೋದಿಲ್ಲ, ಅಷ್ಟೇ ಯಾಕೆ ಆ ಎರಡು ದಿನ ಜನರು ಏರಿಯಾ ಬಿಟ್ಟು ಕದಲೋ ಹಾಗು ಇಲ್ಲ. ಇಂಥ ವಿಚಿತ್ರ ಆಚರಣೆಯನ್ನ ಪಾಲಿಸುತ್ತಿದ್ದಾರೆ.
undefined
ಮಂಗಳವಾರ, ಶುಕ್ರವಾರ ಧರಿಸುವಂತಿಲ್ಲ ಚಪ್ಪಲಿ: ವಿಜಯಪುರ ನಗರದ ಕಾಲೇಬಾಗ ಏರಿಯಾದಲ್ಲಿ ವಿಚಿತ್ರ ಆಚರಣೆಯೊಂದು ನಡೆಯುತ್ತಿದೆ. ಪ್ರತಿ ಮಂಗಳವಾರ ಹಾಗೂ ಶುಕ್ರವಾರ ಇಲ್ಲಿರುವ ನಿವಾಸಿಗಳ್ಯಾರು ಚಪ್ಪಲಿ ಧರಿಸೋ ಹಾಗಿಲ್ಲ. ಏರಿಯಾದಲ್ಲಿ ದೊಡ್ಡವರೆ ಇರಲಿ, ಸಣ್ಣವರೇ ಇರಲಿ, ಶ್ರೀಮಂತರಾದ್ರು ಸರಿ-ರಾಜಕಾರಣಿಯಾದ್ರು ಸರಿ. ಇಲ್ಲಿ ಕಟ್ಟುನಿಟ್ಟಾಗಿ ನಿಯಮವನ್ನ ಪಾಲಿಸಲೇಬೇಕಂತೆ. ಹಾಗೇ ಒಂದು ಶುಕ್ರವಾರ, ಒಂದು ಮಂಗಳವಾರ ಇಲ್ಲಿ ಈ ನಿಯಮವನ್ನ ಕಟ್ಟುನಿಟ್ಟಾಗಿ ಪಾಲಿಸಲಾಗ್ತಿದೆ.
ವಾಯು ವಿಹಾರ ಮಾಡ್ತಾ ಜಲಾಶಯ ವೀಕ್ಷಿಸಿದ ಸಿದ್ದರಾಮಯ್ಯ
ಮನೆಯಲ್ಲಿ ರೊಟ್ಟಿ ಮಾಡೋಹಾಗಿಲ್ಲ, ಒಗ್ಗರಣೆ ಸದ್ದು ಕೇಳೋಹಾಗಿಲ್ಲ: ಕಾಲೇಭಾಗ ಏರಿಯಾದಲ್ಲಿ 100ಕ್ಕು ಅಧಿಕ ಮನೆಗಳಿವೆ. ಇಲ್ಲಿ ಎಲ್ಲರು ಹಾಕಿಕೊಂಡಿರುವ ನಿಯಮದಂತೆ ಹೇಗೆ ಚಪ್ಪಲಿ ಧರಿಸುವಂತಿಲ್ಲವೋ ಹಾಗೇ ಹೆಣ್ಣುಮಕ್ಕಳು ಮನೆಯಲ್ಲಿ ಕೆಲವೊಂದು ನಿಯಮಗಳನ್ನ ಪಾಲಿಸಬೇಕಿದೆ. ವಿಜಯಪುರ ಭಾಗದಲ್ಲಿ ಜೋಳದ ರೊಟ್ಟಿ ನಿತ್ಯದ ಊಟದ ಭಾಗ, ಆದ್ರೆ ಇಲ್ಲಿ ನಿಯಮ ಮಾಡಿರುವಂತೆ ಶುಕ್ರವಾರ ಹಾಗೂ ಮಂಗಳವಾರ ಯಾವುದೇ ಕಾರಣಕ್ಕು ರೊಟ್ಟಿ ಮಾಡುವ ಹಾಗೇ ಇಲ್ಲ. ರೊಟ್ಟಿ ಮಾಡುವ ಸದ್ದು ಕೂಡ ಅಡುಗೆ ಮನೆಯಿಂದ ಕೇಳುವ ಹಾಗಿಲ್ಲವಂತೆ. ಅಷ್ಟೇ ಯಾಕೆ ಒಲೆ ಹೊತ್ತಿಸಿ ಒಗ್ಗರಣೆ ಹಾಕೋ ಹಾಗಿಲ್ಲವಂತೆ.
ಕೆಲಸಗಳಿಗು ಹೋಗುವ ಹಾಗೀಲ್ಲ: ವೃತಾಚರಣೆಯಲ್ಲಿರೋ ಕಾಲೇಬಾಗ ನಿವಾಸಿಗಳು ಮಂಗಳವಾರ ಹಾಗೂ ಶುಕ್ರವಾರ ಯಾವುದೇ ಕೆಲಸ ಕಾರ್ಯಗಳ ಮೇಲೆ ಏರಿಯಾ ಬಿಟ್ಟು ಕದಲೋ ಹಾಗಿಲ್ಲ. ನೌಕರಿ, ಕೆಲಸಗಳ ಮೇಲೆ ಹೋಗುವವರು ಆ ದಿನ ಕೆಲಸಗಳಿಗೆ ಹೋಗುವ ಹಾಗಿಲ್ಲ. ಹೀಗಾಗಿ ಏರಿಯಾದ ಜನರು ಎರಡು ದಿನ ಮಾತ್ರ ಯಾವುದೇ ಕೆಲಸ ಕಾರ್ಯಗಳ ಮೇಲೆ ಹೋಗುತ್ತಿಲ್ಲ ಅನ್ನೋದು ಅಚ್ಚರಿಯ ವಿಚಾರ.
ಅಷ್ಟಕ್ಕು ಯಾಕೀ ವಿಚಿತ್ರ ನಿಯಮ?: ಕಾಲೇಬಾಗ ಏರಿಯಾದಲ್ಲಿ ಜನರು ಹೀಗ್ಯಾಕೆ ವಿಚಿತ್ರ ವೃತಾಚರಣೆಯಲ್ಲಿ ತೊಡಗಿದ್ದಾರೆ ಅನ್ನೋ ಪ್ರಶ್ನೆಗೆ ಇಲ್ಲಿ ಸಿಗುವ ಉತ್ತರ ಸಾವು.. ಸಾವು.. ಸಾವು.. ಸಾವಿಗೆ ಹೆದರಿರುವ ಈ ಕಾಲೇಭಾಗ ನಿವಾಸಿಗಳು ವಿಚಿತ್ರ ಆಚರಣೆಯಲ್ಲಿ ತೊಡಗಿದ್ದಾರಂತೆ. ಯಾವುದೆ ಅನಾಹುತಗಳು ನಡೆಯದಿರಲಿ ಎಂದು ಕಾಲೇಭಾಗ ನಿವಾಸಿಗಳು ವಿಚಿತ್ರಾಚರಣೆಯಲ್ಲಿ ತೊಡಗಿದ್ದಾರೆ.
ಸರಣಿ ಸಾವಿಗೆ ಕಂಗೆಟ್ಟ ಜನ-ಎಲ್ಲೆಡೆ ಭಯವೋ ಭಯ: ಕಟ್ಟುನಿಟ್ಟಾಗಿ ವಾರದ ಎರಡು ದಿನಗಳ ಕಾಲ ಕಠಿಣ ವೃತಾಚರಣೆಗೆ ಸರಣಿ ಸಾವುಗಳು ಕಾರಣ ಎನ್ನಲಾಗಿದೆ. ಕಾಲೇಭಾಗ ಏರಿಯಾದಲ್ಲಿ 6 ರಿಂದ 8 ಸಾವುಗಳು ಸರಣಿ ರೂಪದಲ್ಲಿ ನಡೆದಿವೆಯಂತೆ. ಏರಿಯಾದಲ್ಲಿ ಸರಣಿ ಸಾವುಗಳು ಸಂಭವಿಸಿದ್ದರಿಂದ ಜನರು ಗಾಬರಿಗೊಳಗಾಗಿದ್ದಾರಂತೆ. ಅಪಘಾತ, ಹೃದಯಾಘಾತ, ಅಕಾಲಿಕ ಸಾವುಗಳಿಂದ ಕಾಲೇಭಾಗ ನಿವಾಸಿಗಳು ಬೆದರಿ ಈ ವೃತಾಚರಣೆ ಕೈಗೊಂಡಿದ್ದಾರೆ.
ಪಿಎಸ್‌ಐ ಅಕ್ರಮ ನೇಮಕಾತಿಯಲ್ಲಿ ತಪ್ಪಿತಸ್ಥರನ್ನು ಬಿಟ್ಟಿಲ್ಲ: ಸಚಿವ ಹಾಲಪ್ಪ
ದುರ್ಗಾದೇವಿ, ಜಟ್ಟಿಂಗರಾಯ ದೇವರ ಮೊರೆ: ಗ್ರಾಮದಲ್ಲಿ ಉಂಟಾಗ್ತಿರೋ ಸರಣಿ ಸಾವುಗಳಿಂದ ಕಂಗೆಟ್ಟಿರುವ ಕಾಲೇಭಾಗ ನಿವಾಸಿಗಳು ಗ್ರಾಮದೇವತೆ ದುರ್ಗಾದೇವಿ ಹಾಗೂ ಜಟ್ಟಿಂಗರಾಯರ ಮೊರೆ ಹೋಗಿದ್ದಾರೆ. ಶಕ್ತಿ ದೇವಿಯಾದ ದುರ್ಗಾದೇವಿ ಹಾಗೂ ಶಿವಸ್ವರೂಪಿ ಜಟ್ಟಿಂಗರಾಯನಲ್ಲಿ ವೃತಾಚರಣೆ ಮೂಲಕ ಭಕ್ತಿಭಾವಗಳಿಂದ ಸಾವುಗಳನ್ನ ನಿಲ್ಲಿಸುವಂತೆ ಕಾಲೇಭಾಗ ನಿವಾಸಿಗಳು ದೈವ ಶಕ್ತಿಯ ಮೊರೆ ಹೋಗಿದ್ದಾರೆ.