ಸಂತೋಷ, ಸಮೃದ್ಧಿಯನ್ನು ಪ್ರತಿಯೊಬ್ಬರೂ ಬಯಸ್ತಾರೆ. ಅದಕ್ಕೆ ನೆಚ್ಚಿನ ದೇವರ ಪೂಜೆ ಕೂಡ ಮಾಡ್ತಾರೆ. ಶ್ರಾವಣ ಮಾಸದಲ್ಲಿ ಶಿವನ ಆರಾಧನೆ ಮಾಡಿದ್ರೆ ಎಲ್ಲ ಆಸೆ ಈಡೇರುತ್ತದೆ. ಸುಂದರ ಹಾಗೂ ಸಭ್ಯ ಪತ್ನಿ ಪ್ರಾಪ್ತಿಗೂ ಶಿವನ ಆಶೀರ್ವಾದ ಬೇಕು.
ಇದರ ಹೊರತಾಗಿ ತುಂಬೆ ಹೂವು, ನೇರಳೆ ಆರ್ಕಿಡ್ ಅಥವಾ ಮಂದಾರ ಪುಷ್ಪವೂ ಶಿವನಿಗೆ ಇಷ್ಟವಾಗಿದ್ದು ಈ ಹೂವುಗಳನ್ನು ಶಿವಪೂಜೆಯಲ್ಲಿ ಹೆಚ್ಚಾಗಿ ಬಳಸಲಾಗುತ್ತದೆ. ಇದರ ಜೊತೆಗೇ ಸಂಪಿಗೆ ಮತ್ತು ಕಿರೀಟ ಹೂ ಸಹಾ ಶಿವನ ಅನುಗ್ರಹ ಪಡೆಯಲು ನೆರವಾಗುವ ಹೂವುಗಳಾಗಿವೆ. ಶ್ರಾವಣ ಮಾಸ ಇನ್ನೇನು ಶುರುವಾಗ್ತಿದೆ. ಜುಲೈ 29ರಿಂದ ಶ್ರಾವಣ ಮಾಸ ಆರಂಭವಾಗಲಿದೆ. ಶ್ರಾವಣ ಮಾಸದಲ್ಲಿ ಈಶ್ವರನ ಆರಾಧನೆ ಜೊತೆಗೆ ಅವನಿಗೆ ಇಷ್ಟವಾದ ಹೂಗಳನ್ನು ಅರ್ಪಿಸಿದ್ರೆ ಎಲ್ಲ ಕನಸುಗಳು ಪೂರ್ಣಗೊಳ್ಳುತ್ತವೆ ಎಂದು ನಂಬಲಾಗಿದೆ. ಗಾಂಜಾ, ಬೇಲ್ಪತ್ರೆ ಹೊರತಾಗಿ ಶಿವನಿಗೆ ಅತ್ಯಂತ ಪ್ರಿಯವಾದ ಕೆಲವು ಹೂವುಗಳಿವೆ. ಶಿವನ ಪೂಜೆಯಲ್ಲಿ ಈ ಹೂವುಗಳನ್ನು ಬಳಸುವುದ್ರಿಂದ ಈಶ್ವರ ಒಳ್ಳೆಯ ಫಲ ನೀಡ್ತಾನೆಂದು ನಂಬಲಾಗಿದೆ. ಶಿವಪುರಾಣದಲ್ಲಿ ಕೆಲ ಹೂವುಗಳ ಬಗ್ಗೆ ಹೇಳಲಾಗಿದೆ. ಸಭ್ಯ ಹೆಂಡತಿಯನ್ನು ಪಡೆಯುವ ಬಯಕೆ, ಆರ್ಥಿಕ ವೃದ್ಧಿ ಅಥವಾ ವೃತ್ತಿಯಲ್ಲಿ ಪ್ರಗತಿ ಸೇರಿದಂತೆ ಅನೇಕ ಲಾಭಗಳು ಬೇಕೆಂದ್ರೆ ಶ್ರಾವಣ ಮಾಸದಲ್ಲಿ ಶಿವನಿಗೆ ಪ್ರಿಯವಾದ ಹೂಗಳನ್ನು ಅರ್ಪಿಸಬೇಕು. ಶ್ರಾವಣ ಸೋಮವಾರದಂದು ನಾವು ಹೇಳುವ ಕೆಲ ಹೂವುಗಳಲ್ಲಿ ಯಾವುದಾದರೂ ಒಂದನ್ನು ಅರ್ಪಿಸುವ ಮೂಲಕ ನಿಮ್ಮ ಬಯಕೆಯನ್ನು ಈಡೇರಿಸಿಕೊಳ್ಳಬಹುದು. ಯಾವ ಹೂವನ್ನು ಅರ್ಪಿಸಿದರೆ ಯಾವ ಇಷ್ಟಾರ್ಥಗಳು ಈಡೇರುತ್ತವೆ ಎಂಬುದನ್ನು ನಾವಿಂದು ಹೇಳ್ತೇವೆ.
ಶ್ರಾವಣ (Sawan) ಮಾಸದಲ್ಲಿ ಶಿವನಿಗೆ ಅರ್ಪಿಸಿ ಈ ಹೂ :
ಮಲ್ಲಿಗೆ ಹೂ (Jasmine Flower) : ವಾಹನ ಸುಖ ಬೇಕೆನ್ನುವವರು ಶ್ರಾವಣ ಮಾಸದ ಸೋಮವಾರದಂದು ಶಿವನಿಗೆ ಮಲ್ಲಿಗೆ ಹೂವನ್ನು ಅರ್ಪಿಸಬೇಕು.
ಅಗಸೆ ಹೂ (Flax Flower) : ಶಿವನಿಗೆ ಶ್ರಾವಣ ಮಾಸದಲ್ಲಿ ಅಗಸೆ ಹೂವನ್ನು ಅರ್ಪಿಸಿ ಪೂಜೆ ಮಾಡಿದ್ರೆ ಆತ ಭಗವಂತ ವಿಷ್ಣುವಿಗೆ ಹತ್ತಿರವಾಗ್ತಾನೆಂದು ನಂಬಲಾಗಿದೆ.
ಇದನ್ನೂ ಓದಿ: ಹಬ್ಬಗಳ ಮಾಸ ಶ್ರಾವಣ ಮಾಸಕ್ಕೆ ಯಾಕಿಷ್ಟು ಮಹತ್ವ..?
ಶಮಿ ಪತ್ರೆ (Shami Patre) : ಶಮಿ ಪತ್ರೆ ಕೂಡ ದೇವರಿಗೆ ಪ್ರಿಯವಾಗಿದೆ. ಶಮಿ ಪತ್ರೆಯನ್ನು ಈಶ್ವರನಿಗೆ ಅರ್ಪಣೆ ಮಾಡಿದ್ರೆ ಮೋಕ್ಷ ಪ್ರಾಪ್ತಿಯಾಗುತ್ತದೆ. ಶನಿಯ ಧೈಯ ಮತ್ತು ಸಾಡೇ ಸಾತಿಯಿಂದಲೂ ಮುಕ್ತಿ ಸಿಗಲಿದೆ. ಪ್ರತಿ ಸೋಮವಾರ ಶಮಿ ಪತ್ರೆಯನ್ನು ಹಾಕಿ ಪೂಜೆ ಮಾಡಿದ್ರೆ ಆರೋಗ್ಯ ಲಭ್ಯವಾಗುತ್ತದೆ.
ಬೇಲದ ಹೂ : ಸುಂದರ ಹಾಗೂ ಸೌಮ್ಯ ಪತ್ನಿ ಸಿಗಬೇಕೆಂದ್ರೆ ಶ್ರಾವಣ ಮಾಸದ ಸೋಮವಾರದಂದು ಬೇಲದ ಹೂವನ್ನು ಶಿವನಿಗೆ ಅರ್ಪಿಸಬೇಕು.
ಗಣಗಲೆ (Ganagale) ಹೂ : ಗಣಗಲೆ ಹೂವನ್ನು ಶಿವನಿಗೆ ಅರ್ಪಿಸಿ ಪೂಜೆ ಮಾಡಿದ್ರೆ ಹೊಟ್ಟೆ ಬಟ್ಟೆ ಸಿಗುತ್ತದೆ. ಮನೆಯಲ್ಲಿ ಎಂದೂ ಆಹಾರದ ಕೊರತೆ ಎದುರಾಗುವುದಿಲ್ಲ.
ಪಾರಿಜಾತ : ಶ್ರಾವಣ ಸೋಮವಾರದಂದು ಶಿವನಿಗೆ ಪಾರಿಜಾತದ ಹೂವನ್ನು ಅರ್ಪಿಸುವುದ್ರಿಂದ ಸುಖ, ಸಂಪತ್ತು ಪ್ರಾಪ್ತಿಯಾಗುತ್ತದೆ.
ದತುರಾ ಹೂ : ದತುರಾ ಹೂವಿನಿಂದ ಈಶ್ವರನ ಪೂಜೆ ಮಾಡಿದ್ರೆ ಪುತ್ರ ಪ್ರಾಪ್ತಿ ಲಭಿಸುತ್ತದೆ ಎನ್ನಲಾಗಿದೆ. ಈಶ್ವರನಿಂದ ಪ್ರಾಪ್ತಿಯಾದ ಮಗು ತಂದೆ – ತಾಯಿ ಹೆಸರನ್ನು ಬೆಳಗಿಸುತ್ತದೆ.
ದೂರ್ವೆ : ಶ್ರಾವಣ ಮಾಸದ ಪ್ರತಿ ದಿನ ಶಿವನಿಗೆ ದೂರ್ವೆ ಅರ್ಪಣೆ ಮಾಡ್ಬೇಕು. ಹೀಗೆ ಮಾಡಿದ್ರೆ ನಮ್ಮ ಆಯಸ್ಸು ವೃದ್ಧಿಯಾಗುತ್ತದೆ. ಅಲ್ಲದೆ ದೇಹವು ರೋಗದಿಂದ ದೂರವಿರುತ್ತದೆ.
ಇದನ್ನೂ ಓದಿ: ಶಿವನ ಕೃಪೆ ಇರಬೇಕಂದ್ರೆ ಶ್ರಾವಣ ಮಾಸದಲ್ಲಿ ಈ ಕೆಲಸ ಮಾಡಿ!
ಬಿಲ್ವಪತ್ರೆ : ಶಿವನಿಗೆ ಅತ್ಯಂತ ಪ್ರಿಯವಾದದ್ದು ಬಿಲ್ವಪತ್ರೆ. ಧರ್ಮಗ್ರಂಥದಲ್ಲೂ ಇದ್ರ ಬಗ್ಗೆ ಉಲ್ಲೇಖಿಸಲಾಗಿದೆ. ಬಿಲ್ವಪತ್ರೆಯನ್ನು ಶಿವನಿಗೆ ಅರ್ಪಿಸುತ್ತ ಬಂದ್ರೆ ಸಂತೋಷ ಪ್ರಾಪ್ತಿಯಾಗಲಿದೆ.
ಎಕ್ಕದ ಹೂ : ಕೆಂಪು ಮತ್ತು ಬಿಳಿ ಬಣ್ಣದ ಹೂವುಗಳಿಂದ ಶಿವನನ್ನು ಪೂಜಿಸಿದ್ರೆ ಆನಂದ ಪ್ರಾಪ್ತಿಯಾಗುತ್ತದೆ. ಶ್ರಾವಣ ಸೋಮವಾರದಂದು ಎಕ್ಕದ ಹೂವನ್ನು ಈಶ್ವರನಿಗೆ ಹಾಕಿ ಪೂಜೆ ಮಾಡಿದ್ರೆ ಮೋಕ್ಷ ಪ್ರಾಪ್ತಿಯಾಗುತ್ತದೆ ಎಂದು ನಂಬಲಾಗಿದೆ.