ಚಾತುರ್ಮಾಸದಲ್ಲಿ ಧಾರ್ಮಿಕ ಕಾರ್ಯಗಳನ್ನು ಮಾಡುವುದರಿಂದ ಪುಣ್ಯಫಲ ಪ್ರಾಪ್ತವಾಗುತ್ತದೆ. ಹಾಗಾಗಿ ಚಾತುರ್ಮಾಸದ ನಾಲ್ಕು ತಿಂಗಳುಗಳಲ್ಲಿ ದೇವರ ಕಾರ್ಯಗಳನ್ನು, ಅನುಷ್ಟಾನಗಳನ್ನು ಮಾಡುವುದರಿಂದ ಉತ್ತಮ ಫಲ ಸಿಗುತ್ತದೆ. ದೇವಾನುದೇವತೆಗಳು ಯೋಗನಿದ್ರೆಯಲ್ಲಿದ್ದರೂ ಕೆಲವು ರಾಶಿಗಳ ಮೇಲೆ ವಿಶೇಷ ಕೃಪೆ ಇರುತ್ತದೆ ಎಂದು ಹೇಳಲಾಗುತ್ತದೆ. ಆ ರಾಶಿಗಳು ಯಾವುವು ಎಂಬುದನ್ನು ತಿಳಿಯೋಣ...
ಹಿಂದೂ ಪಂಚಾಂಗದ ಪ್ರಕಾರ ಈಗ ಆಷಾಡ ಮಾಸ ಆರಂಭವಾಗಿದ್ದು. ಇದೇ ಸಮಯದಲ್ಲೇ ಚಾತುರ್ಮಾಸವು ಸಹ ಆರಂಭವಾಗಲಿದೆ. ಸನಾತನ ಧರ್ಮದಲ್ಲಿ ವ್ರತ, ಆಚರಣೆಗಳಿಗೆ (Rituals) ಮತ್ತು ಹಬ್ಬ (Festival) ಹರಿದಿನಗಳಿಗೆ ವಿಶೇಷ ಮಹತ್ವವಿದೆ. ಹಾಗೆಯೇ ವಿಷ್ಣುವು (Vishnu) ಸೇರಿದಂತೆ ಎಲ್ಲ ದೇವತೆಗಳು ಈ ನಾಲ್ಕು ಮಾಸಗಳಲ್ಲಿ ಯೋಗನಿದ್ರೆಯಲ್ಲಿರುತ್ತಾರೆ. ಹಾಗಾಗಿ ಈ ಸಮಯದಲ್ಲಿ ಯಾವುದೇ ಶುಭಕಾರ್ಯಗಳನ್ನು ನಡೆಸುವುದಿಲ್ಲ. ಬದಲಾಗಿ ಹೆಚ್ಚೆಚ್ಚು ಧಾರ್ಮಿಕ ಕಾರ್ಯಕ್ರಮಗಳನ್ನು ನಡೆಸಲಾಗುತ್ತದೆ.
ಈ ಬಾರಿ ಚಾತುರ್ಮಾಸವು (Chaturmasa) ಇದೇ ಜುಲೈ 10ರಿಂದ ಆರಂಭವಾಗಲಿದ್ದು, ನವೆಂಬರ್ ನಾಲ್ಕಕ್ಕೆ ಮುಕ್ತಾಯವಾಗಲಿದೆ. ಈ ಯೋಗ ನಿದ್ರೆಗೆ ಸಜ್ಜಾಗುತ್ತಿರುವ ಶ್ರೀಮನ್ನಾರಾಯಣನು ಈ ಅವಧಿಯಲ್ಲಿ ಕೆಲವು ರಾಶಿಗಳ (Zodiac sign) ಮೇಲೆ ವಿಶೇಷ ಕೃಪೆಯನ್ನು ಬೀರಲಿದ್ದಾನೆ. ಯೋಗನಿದ್ರೆಯಲ್ಲಿದ್ದರೂ ಭಕ್ತರ (Devotees) ಮೇಲೆ ವಿಶೇಷ ಕೃಪೆಯನ್ನು ಹೊಂದಿರುತ್ತಾನೆ. ಭಕ್ತರ ಪೂಜೆ, ಅನುಷ್ಟಾನ ಮತ್ತು ಎಲ್ಲ ಧಾರ್ಮಿಕ ಕಾರ್ಯಗಳಿಗೆ ವಿಷ್ಣುವು ಪ್ರಸನ್ನನಾಗುವುದು ಖಚಿತವಾಗಿದೆ. ಅಷ್ಟೇ ಅಲ್ಲದೆ ಕೆಲವು ರಾಶಿಗಳ ಮೇಲೆ ವಿಷ್ಣುವಿನ ವಿಶೇಷ ಕೃಪೆ (Blessings) ಪ್ರಾಪ್ತವಾಗಿರುತ್ತದೆ. ಆ ರಾಶಿಗಳು ಯಾವುವು ಎಂಬುದನ್ನು ತಿಳಿಯೋಣ...
ಇದನ್ನು ಓದಿ: Morning Habits: ಕೈ ನೋಡಿ ಲಕ್ಷ್ಮೀನ ನೆನೆಯಿರಿ, ಶುಭವಾಗುತ್ತೆ
ಮೇಷ ರಾಶಿ (Aries)
ಚಾತುರ್ಸಮಾಸದ ಅವಧಿಯಲ್ಲಿ ಈ ರಾಶಿಯವರ ವೃತ್ತಿ ಕ್ಷೇತ್ರದಲ್ಲಿ (Career) ವಿಶೇಷ ಬದಲಾವಣೆಯಾಗುವುದಲ್ಲದೇ, ಇದು ಸಕಾರಾತ್ಮಕವಾಗಿರುತ್ತದೆ. ವಿಷ್ಣುವಿನ ಕೃಪೆಯಿಂದ ಉದ್ಯೋಗದಲ್ಲಿ ಯಶಸ್ಸು ದೊರಕುತ್ತದೆ. ಅಷ್ಟೇ ಅಲ್ಲದೆ ಈ ರಾಶಿಯ ವ್ಯಕ್ತಿಗಳ ಮೇಲೆ ವಿಷ್ಣುವಿನ ವಿಶೇಷ ಕೃಪೆ ಇರುವುದರಿಂದ ಎಲ್ಲ ಕಾರ್ಯಗಳಲ್ಲೂ ಸಫಲತೆ (Success) ಪ್ರಾಪ್ತವಾಗುತ್ತದೆ. ಈ ರಾಶಿಯ ವ್ಯಕ್ತಿಗಳು ಪ್ರತಿನಿತ್ಯ ಬೆಳಗ್ಗೆ ಸ್ನಾನವಾದ ನಂತರ ವಿಷ್ಣುವಿನ ಆರಾಧನೆ ಮಾಡುವುದು ಉತ್ತಮ. ಅಷ್ಟೇ ಅಲ್ಲದೆ ಗುರುವಾರ ಸಂಧ್ಯಾಕಾಲದಲ್ಲಿ ಎಣ್ಣೆ ದೀಪವನ್ನು ಬೆಳಗಿಸುವುದರಿಂದ ಜೀವನದಲ್ಲಿ ಮತ್ತಷ್ಟು ಉತ್ತಮ ಬೆಳವಣಿಗೆಗಳು ಕಾಣಲು ಸಿಗುತ್ತವೆ. ಈ ರಾಶಿಯ ವ್ಯಕ್ತಿಗಳು ವಾಹನ ಖರೀದಿ, ಮನೆ (Home) ಖರೀದಿಗಳಂಥ ವಿಷಯಗಳ ಬಗ್ಗೆ ಯೋಚಿಸುತ್ತಿದ್ದರೆ ಅದನ್ನು ಚಾತುರ್ಮಾಸ ಮುಕ್ತಾಯವಾದ ಬಳಿಕ ಕೊಳ್ಳುವುದು ಉತ್ತಮ.
ವೃಶ್ಚಿಕ ರಾಶಿ (Scorpio)
ಚಾತುರ್ಮಾಸದ ಅವಧಿಯಲ್ಲಿ ಈ ರಾಶಿಯ ವ್ಯಕ್ತಿಗಳ ಮೇಲೂ ಸಹ ವಿಷ್ಣುವಿನ ವಿಶೇಷ ಕೃಪೆ ಇರುತ್ತದೆ. ವೃಶ್ಚಿಕ ರಾಶಿಯ ವ್ಯಕ್ತಿಗಳು ಸ್ವಂತ ವ್ಯಾಪಾರ (Business) ವ್ಯಾವಹಾರದಲ್ಲಿ ತೊಡಗಿಕೊಂಡಿದ್ದರೆ ಉತ್ತಮ ಲಾಭ (Profit) ಬರುವ ಯೋಗವಿದೆ ಮತ್ತು ಹೆಚ್ಚಿನ ಯಶಸ್ಸು ಸಹ ದೊರೆಯಲಿದೆ. ಈ ಅವಧಿಯಲ್ಲಿ ಕೇವಲ ಧನಲಾಭವಾಗುವುದು ಅಷ್ಟೇ ಅಲ್ಲದೆ ಎಲ್ಲ ಕ್ಷೇತ್ರಗಳಲ್ಲೂ ಸಫಲತೆ ಪ್ರಾಪ್ತವಾಗುತ್ತದೆ. ಈ ರಾಶಿಯ ವ್ಯಕ್ತಿಗಳು ವಿಷ್ಣುವಿನ (Lord Vishnu) ಆರಾಧನೆಯ ಜೊತೆ ಜೊತೆಗೆ, ಸೂರ್ಯದೇವನನ್ನು ಆರಾಧಿಸುವುದು ಉತ್ತಮ. ಹಾಗಾಗಿ ಪ್ರತಿನಿತ್ಯ ಬೆಳಗ್ಗೆ ಎದ್ದು ಶೂಚಿರ್ಭೂತರಾದ ನಂತರ ಸೂರ್ಯದೇವನಿಗೆ ಅರ್ಘ್ಯ ನೀಡುವುದರಿಂದ ಜೀವನದಲ್ಲಿ ಒಳ್ಳೆಯದಾಗುತ್ತದೆ.
ಇದನ್ನು ಓದಿ: ಪತಿ – ಪತ್ನಿಯ ನಡುವಲ್ಲಿದ್ದರೆ ಮನಸ್ತಾಪ ಧರಿಸಿ ಈ ರತ್ನ
ಕರ್ಕಾಟಕ ರಾಶಿ (Cancer)
ಈ ರಾಶಿಯ ವ್ಯಕ್ತಿಗಳಿಗೆ ಚಾತುರ್ಮಾಸದಲ್ಲಿ ವಿಷ್ಣುವಿನ ವಿಶೇಷ ಕೃಪೆ ಪ್ರಾಪ್ತವಾಗುತ್ತದೆ. ಆದರೆ ಕೆಲವು ವಾದ ವಿವಾದಗಳು ಎದುರಾಗುವ ಸಾಧ್ಯತೆ ಹೆಚ್ಚಿರುತ್ತದೆ. ಕರ್ಕಾಟಕ ರಾಶಿಯ ವ್ಯಕ್ತಿಗಳಿಗೆ ಈ ಅವಧಿಯಲ್ಲಿ ಸ್ನೇಹಿತರ (Friends) ಜೊತೆ ಜಗಳವಾಗುವ ಸಂಭವ ಹೆಚ್ಚಿರುತ್ತದೆಯ ಹಾಗಾಗಿ ಆದಷ್ಟು ವಿವಾದಗಳಿಂದ ದೂರವಿರುವುದು ಉತ್ತಮ. ವ್ಯಾಪಾರದಲ್ಲಿ ಲಾಭಗಳಿಸುವ ಸಾಧ್ಯತೆಯೂ ಇರುತ್ತದೆ. ಕೆಲವು ವಿಷಯಗಳಲ್ಲಿ ನಷ್ಟ (Loss) ಸಂಭವಿಸುವ ಸಂಭವವು ಇರುತ್ತದೆ ಜಾಗ್ರತೆಯಿಂದ (Careful) ಇರುವುದು ಉತ್ತಮ. ಹಾಗಾಗಿ ಹಣ (Money) ಖರ್ಚು ಮಾಡುವ ಮುನ್ನ ಸರಿಯಾಗಿ ಯೋಚಿಸುವುದು ಉತ್ತಮ.