Morning Habits: ಕೈ ನೋಡಿ ಲಕ್ಷ್ಮೀನ ನೆನೆಯಿರಿ, ಶುಭವಾಗುತ್ತೆ

By Suvarna News  |  First Published Jul 8, 2022, 9:45 AM IST

ಲಕ್ಷ್ಮೀ ದೇವಿಯ ಕೃಪೆ ಪಡೆಯಲು ಬೆಳಗ್ಗೆ ಎದ್ದ ತಕ್ಷಣ ಕೆಲವು ಕಾರ್ಯಗಳನ್ನು ಮಾಡಬೇಕೆಂದು ಜ್ಯೋತಿಷ್ಯ ಶಾಸ್ತ್ರ ಹೇಳುತ್ತದೆ. ಇದರಿಂದ ಲಕ್ಷ್ಮೀ ದೇವಿಯ ಕೃಪೆ ಸಿಗುವುದಲ್ಲದೇ, ಆರ್ಥಿಕ ಸಮಸ್ಯೆಗಳು ದೂರವಾಗುತ್ತದೆ. ಅಷ್ಟೇ ಅಲ್ಲದೆ ಮನೆಯಲ್ಲಿ ನೆಮ್ಮದಿ ನೆಲೆಸಿರುತ್ತದೆ. ಪ್ರತಿ ನಿತ್ಯ ಹೀಗೆ ಮಾಡುವುದರಿಂದ ಮಾನಸಿಕ ನೆಮ್ಮದಿ ಸಹ ಪ್ರಾಪ್ತವಾಗುತ್ತದೆ. ಹಾಗಾದರೆ ಬೆಳಗ್ಗೆ ಎದ್ದ ತಕ್ಷಣ ಮಾಡಬೇಕಾದ ಕಾರ್ಯಗಳು ಯಾವುವು ಎಂಬುದನ್ನು ತಿಳಿಯೋಣ...


ಜೀವನದಲ್ಲಿ ಯಶಸ್ಸು (Success) ಕಾಣಬೇಕು, ಹೆಚ್ಚು ಹಣ ಗಳಿಸಬೇಕು, ಉತ್ತಮ ಉದ್ಯೋಗ ಪಡೆಯಬೇಕು ಹೀಗೆ ಅನೇಕ ಆಶಯಗಳು ಇರುತ್ತವೆ. ಯಾವುದೇ ಕನಸು ಈಡೇರಬೇಕೆಂದರೂ ಹಣದ (Money) ಅವಶ್ಯಕತೆ ಇದ್ದೇ ಇರುತ್ತದೆ. ಲಕ್ಷ್ಮೀ ದೇವಿಯ ಕೃಪೆಯೊಂದಿದ್ದರೆ ಸಾಕು ಎಲ್ಲವೂ ಸಾಧ್ಯ. ಹಾಗಾಗಿ ಹೆಚ್ಚು ಶ್ರಮವಹಿಸಿ (Effort) ಕೆಲಸ ಮಾಡಿದರೂ ಕೈಯಲ್ಲಿ ದುಡ್ಡು ನಿಲ್ಲುವುದಿಲ್ಲ. ಹಾಗಾದಾಗ ನಿರಾಶೆ ಉಂಟಾಗುತ್ತದೆ. ಯಾವ ಕೆಲಸಕ್ಕೂ ಮನಸ್ಸಿಲ್ಲದಂತಾಗುತ್ತದೆ. ಶಾಸ್ತ್ರ ಹೇಳುವ ಪ್ರಕಾರ ಪರಿಶ್ರಮ ಜೊತೆ ಅದೃಷ್ಟವು ಇರುವುದು ಅವಶ್ಯಕವಾಗುತ್ತದೆ. ಅದಕ್ಕಾಗಿ ಲಕ್ಷ್ಮೀ (Goddess Lakshmi) ಕೃಪೆ ಪಡೆಯಲು ಸುಲಭ ಉಪಾಯ ಜ್ಯೋತಿಷ್ಯ ಶಾಸ್ತ್ರ (Astrology) ತಿಳಿಸುತ್ತದೆ. ಬೆಳಗ್ಗೆ ಎದ್ದಾಗ ಮಾಡುವ ಕೆಲಸಗಳು ಲಕ್ಷ್ಮೀ ಕೃಪೆ ಪಡೆಯಲು ಸಹಾಯಕವೆಂದು ಹೇಳಲಾಗುತ್ತದೆ. ಹಾಗಾದರೆ ಅವು ಯಾವುವು ಎಂಬುದನ್ನು ತಿಳಿಯೋಣ...

ಕರ ದರ್ಶನ (Hand)
ಕರಾಗ್ರೇ ವಸತೇ ಲಕ್ಷ್ಮೀ ಕರಮಧ್ಯೆ ಸರಸ್ವತಿ|ಕರ ಮೂಲೇತು ಗೋವಿಂದಃ ಪ್ರಭಾತೇ ಕರದರ್ಶನಂ||
ಹಸ್ತವನ್ನು ನೋಡಿಕೊಳ್ಳುತ್ತಾ ಈ ಶ್ಲೋಕವನ್ನು ಹೇಳುವುದರಿಂದ (Chanting) ದಿನದ ಪ್ರಾರಂಭ ಉತ್ತಮವಾಗಿ ಆದಂತೆ ಆಗುತ್ತದೆ. ದಿನ ಚೆನ್ನಾಗಿರಲೆಂದು ಬೆಳಗ್ಗೆ (Morning) ಎದ್ದ ಕೂಡಲೇ ಇಷ್ಟ ದೇವರ ಸ್ಮರಣೆಯನ್ನು ಮಾಡಬೇಕಾಗುತ್ತದೆ. ಹಾಗೆಯೇ ಕರಗಳನ್ನು ನೋಡುತ್ತಾ ಲಕ್ಷ್ಮೀ ದೇವಿಯನ್ನು ಸ್ಮರಿಸಿಕೊಳ್ಳುವುದರಿಂದ ಶುಭವಾಗುತ್ತದೆ. ಶ್ಲೋಕವನ್ನು ಹೇಳಿದ ನಂತರ ಕೈಗಳಿಂದ ಮುಖವನ್ನು ಒತ್ತಿಕೊಳ್ಳಬೇಕು. ಹೀಗೆ ಮಾಡುವುದರಿಂದ ಲಕ್ಷ್ಮೀ, ಸರಸ್ವತಿಯರ ಕೃಪೆಯೂ ಪ್ರಾಪ್ತವಾಗುತ್ತದೆ.

ಇದನ್ನು ಓದಿ: ಪತಿ – ಪತ್ನಿಯ ನಡುವಲ್ಲಿದ್ದರೆ ಮನಸ್ತಾಪ ಧರಿಸಿ ಈ ರತ್ನ

ಭೂತಾಯಿಗೆ ನಮಸ್ಕಾರ (Earth)
ಬೆಳಗ್ಗೆ ಎದ್ದ ತಕ್ಷಣ ಕರದರ್ಶನ ಮಾಡಿದ ಬಳಿಕ ಭೂಮಿ ತಾಯಿಯನ್ನು ಸ್ಪರ್ಶಿಸಿ ನಮಸ್ಕರಿಸುತ್ತಾ ಈ ಶ್ಲೋಕವನ್ನು ಹೇಳಬೇಕು. 
ಸಮುದ್ರವಸನೇ ದೇವಿಪರ್ವತಸ್ತನ ಮಂಡಲೇ| ವಿಷ್ಣುಪತ್ನಿ ನಮಸ್ತುಭ್ಯಂ ಪಾದಸ್ಪರ್ಶ ಕ್ಷಮಸ್ವಮೇ|| ನಮ್ಮ ಭಾರವನ್ನು ಹೊತ್ತಿರುವ ಭೂತಾಯಿಯನ್ನು ಸ್ಮರಿಸುವುದರಿಂದ ಎಲ್ಲವೂ ಒಳಿತಾಗುತ್ತದೆ.

ಸೂರ್ಯದೇವನಿಗೆ ಅರ್ಘ್ಯ (Sun)
ಸ್ನಾನಾದಿಗಳನ್ನು ಮುಗಿಸಿ ಶೂಚಿರ್ಭೂತರಾದ ನಂತರ ಸೂರ್ಯದೇವನಿಗೆ ನಮಸ್ಕರಿಸುತ್ತಾ, “ಓಂ ಸೂರ್ಯಾಯ ನಮಃ” ಎಂಬ ಮಂತ್ರವನ್ನು (Mantra) ಪಠಿಸುತ್ತಾ ಅರ್ಘ್ಯವನ್ನು ನೀಡಬೇಕು. ಸೂರ್ಯನಿಗೆ ಜಲವನ್ನು ಅರ್ಪಿಸುವುದರಿಂದ ಸೂರ್ಯನ ಕೃಪೆ ಪ್ರಾಪ್ತವಾಗುವುದಲ್ಲದೆ, ಸೂರ್ಯ ಗ್ರಹಕ್ಕೆ (Planet) ಸಂಬಂಧಿಸಿ ದೋಷಗಳಿದ್ದರೆ ನಿವಾರಣೆಯಾಗುತ್ತದೆ. ಜಾತಕದಲ್ಲಿ (Horoscope) ಸೂರ್ಯ ಗ್ರಹ ಬಲವಾದರೆ ಅಂದುಕೊಂಡ ಉದ್ಯೋಗ ಸಿಗುತ್ತದೆ. ಆರ್ಥಿಕ ಸ್ಥಿತಿ ಬಲವಾಗುತ್ತದೆ.

ತುಳಸಿಗೆ ಜಲ (Tulsi plant)
ಸೂರ್ಯದೇವನಿಗೆ ಅರ್ಘ್ಯ ನೀಡಿದ ನಂತರ, ತುಳಸಿಗೆ ಜಲ ಅರ್ಪಿಸಬೇಕು. ತುಳಸಿಗೆ ಜಲವನ್ನು ಅರ್ಪಿಸುವಾಗ, “ಓಂ ನಮೋ ಭಗವತೇ ವಾಸುದೇವಾಯ” ಅಥವಾ, “ನಮಸ್ತುಳಸಿ ಕಲ್ಯಾಣಿ ನಮೋ ಮೋಕ್ಷಪ್ರದೇ ಶುಭೇ/ ನಮೋ ವಿಷ್ಣುಪ್ರಿಯೇ ರಮ್ಯೇ ನಮಃ ಸಂಪತ್ಪ್ರಾದಿಯಿನಿ” ಎಂಬ ಮಂತ್ರವನ್ನು ಪಠಿಸಬೇಕು. ಹೀಗೆ ಪ್ರತಿನಿತ್ಯ ಮಾಡುವುದರಿಂದ ಲಕ್ಷ್ಮೀ ದೇವಿಯ ಕೃಪೆಯ ಜೊತೆ ಜೊತೆಗೆ ವಿಷ್ಣುವಿನ (Lord Vishnu) ಕೃಪೆ ಸಹ ಪ್ರಾಪ್ತವಾಗುತ್ತದೆ.

ಇದನ್ನು ಓದಿ: ನಿಮ್ಮಿಷ್ಟದ ಉದ್ಯೋಗ ಪಡೆಯೋಕೆ ಆಂಜನೇಯನನ್ನು ಹೀಗೆ ಮೆಚ್ಚಿಸಿ..

ಉಪ್ಪು ನೀರಿನಿಂದ ನೆಲ ಸ್ವಚ್ಛ ಮಾಡುವುದು (water with salt)
ವಾಸ್ತು ಶಾಸ್ತ್ರದ ಪ್ರಕಾರ ಸೂರ್ಯೋದಯಕ್ಕೂ ಮೊದಲು ನೀರಿಗೆ ಉಪ್ಪನ್ನು ಸೇರಿಸಿಕೊಂಡು ಮನೆಯನ್ನು ಒರೆಸುವುದರಿಂದ ಮನೆಯಲ್ಲಿರುವ ನಕಾರಾತ್ಮಕ ಶಕ್ತಿ ನಾಶವಾಗುತ್ತದೆ. ಅಷ್ಟೇ ಅಲ್ಲದೆ ಸಕಾರಾತ್ಮಕ ಶಕ್ತಿಯ (Positive energy) ಹರಿವು ಹೆಚ್ಚುತ್ತದೆ. ಜೊತೆಗೆ ಮನೆಯಲ್ಲಿ  ಸುಖ –ಶಾಂತಿ ನೆಲೆಸುತ್ತದೆ. ಬೆಳಗ್ಗೆ ಎದ್ದ ತಕ್ಷಣ ಈ ಐದು ಕಾರ್ಯಗಳನ್ನು ಮಾಡಿದರೆ, ದೇವರ ಕೃಪೆ ಸಿಗುವುದಲ್ಲದೇ ಅದೃಷ್ಟವು ಸಾಥ್ ನೀಡುತ್ತದೆ. 

 

Tap to resize

Latest Videos

 

click me!