ಬ್ರಹ್ಮಚಾರಿ ಹನುಮಂತನ ಪೂಜೆ ಸುಲಭವಲ್ಲ. ಅವರ ಆರಾಧನೆಯಲ್ಲಿ ಸಣ್ಣ ತಪ್ಪಾದ್ರೂ ಹನುಮಂತನ ಕೋಪಕ್ಕೆ ಗುರಿಯಾಗ್ಬೇಕಾಗುತ್ತದೆ. ಹಾಗಾಗಿ ಪೂಜೆ ವೇಳೆ ಅದ್ರಲ್ಲೂ ಮಹಿಳೆಯರು ವಿಶೇಷ ಎಚ್ಚರಿಕೆ ವಹಿಸಬೇಕಾಗುತ್ತದೆ.
ರಾಮನ ಬಂಟ ಹನುಮಂತನ ಆರಾಧನೆ ಮಾಡಿದ್ರೆ ಎಲ್ಲ ಕಷ್ಟಗಳು ಕಳೆದು ಹೋಗ್ತವೆ ಎಂದು ಭಕ್ತರು ನಂಬಿದ್ದಾರೆ. ಕಲಿಯುಗದಲ್ಲಿ ಭಕ್ತರ ಭಕ್ತಿಗೆ ಬೇಗ ಸಂತೋಷಗೊಳ್ಳುವ ದೇವರು ಹನುಮಂತ ಎಂದು ನಂಬಲಾಗಿದೆ. ಹಾಗಾಗಿಯೇ ಭಕ್ತರು, ಹನುಮಂತನನ್ನು ಒಲಿಸಿಕೊಳ್ಳಲು ಸಾಕಷ್ಟು ಪ್ರಯತ್ನ ನಡೆಸ್ತಾರೆ. ಮಂಗಳವಾರ ಹಾಗೂ ಶನಿವಾರದಂದು ಭಕ್ತರು ಹನುಮಂತನ ಪೂಜೆ, ಆರಾಧನೆಯನ್ನು ಭಕ್ತಿಯಿಂದ ಮಾಡ್ತಾರೆ. ಹನುಮಂತನ ಕೃಪೆ ತೋರಲಿ ಎಂದು ಆತನನ್ನು ಮನಸ್ಸಿಗೆ ಬಂದಂತೆ ಪೂಜೆ ಮಾಡಿದ್ರೆ ಆಗೋದಿಲ್ಲ. ಹನುಮಂತ ಆರಾಧನೆ ವೇಳೆ ಕೆಲವೊಂದು ವಿಷ್ಯಗಳನ್ನು ಗಮನದಲ್ಲಿಟ್ಟುಕೊಳ್ಳಬೇಕು. ಪೂಜೆ ವೇಳೆ ತಪ್ಪುಗಳನ್ನು ಮಾಡಿದ್ರೆ ಆತನ ಕೋಪಕ್ಕೆ ಗುರಿಯಾಗ್ಬೇಕಾಗುತ್ತದೆ. ಹನುಮಂತನ ಪೂಜೆ ವೇಳೆ ಏನೆಲ್ಲ ವಿಷ್ಯವನ್ನು ಗಮನದಲ್ಲಿಟ್ಟುಕೊಳ್ಳಬೇಕು ಎಂಬುದನ್ನು ನಾವಿಂದು ಹೇಳ್ತೇವೆ.
ಹನುಮಂತನ (Hanuman) ದ ಪೂಜೆ (Worship) ವೇಳೆ ಇರಲಿ ಎಚ್ಚರಿಕೆ :
ಸ್ವಚ್ಛತೆ (Clean)ಗೆ ನೀಡಿ ಗಮನ : ಹನುಮಂತನ ಪೂಜೆ ವೇಳೆ ಸ್ವಚ್ಛತೆಗೆ ನೀವು ಆದ್ಯತೆ ನೀಡ್ಬೇಕಾಗುತ್ತದೆ. ಎಲ್ಲಿ ಹನುಮಂತನ ಪೂಜೆ ಮಾಡುತ್ತೀರೋ ಆ ಸ್ಥಳ ಶುದ್ಧವಾಗಿರುವಂತೆ ನೋಡಿಕೊಳ್ಳುವುದು ಮುಖ್ಯ. ಕೊಳಕಾದ ಹಾಗೂ ಅಶುದ್ಧವಾಗಿರುವ ಪ್ರದೇಶದಲ್ಲಿ ಎಂದೂ ಹನುಮನ ಆರಾಧನೆ ಮಾಡ್ಬೇಡಿ. ಹನುಮಂತನ ಜೊತೆ ತಾಯಿ ಅಂಜನಿ ಹಾಗೂ ಶ್ರೀರಾಮನ ಪೂಜೆ ಮಾಡಿದ್ರೆ ಹನುಮಂತ ಬೇಗ ಒಲಿಯುತ್ತಾನೆಂಬ ನಂಬಿಕೆಯಿದೆ .
ಪೂಜೆಯಲ್ಲಿರಲಿ ಕೆಂಪು (Red )ಬಣ್ಣ : ಹನುಮಂತನಿಗೆ ಕೆಂಪು ಬಣ್ಣ ಪ್ರಿಯವಾದ ಬಣ್ಣ. ಹಾಗಾಗಿ ನೀವು ಪೂಜೆಯಲ್ಲಿ ಕೆಂಪು ಬಣ್ಣಕ್ಕೆ ಆದ್ಯತೆ ನೀಡಬೇಕು. ಪೂಜೆ ಮಾಡುವಾಗ ಕೆಂಪು ಬಟ್ಟೆಯನ್ನು ಧರಿಸಿ ನೀವು ಪೂಜೆ ಮಾಡಬೇಕು. ಹಾಗೆಯೇ ಕೆಂಪು ಹೂವನ್ನು ಹನುಮಂತನಿಗೆ ಅರ್ಪಣೆ ಮಾಡ್ಬೇಕು. ಇದ್ರ ಜೊತೆಗೆ ನೀವು ಪಂಚಾಮೃತವನ್ನು ಹನುಮಂತನಿಗೆ ಅರ್ಪಿಸಬಹುದು.
ಬ್ರಹ್ಮಚರ್ಯ ಪಾಲನೆ : ಮಂಗಳವಾರ ಅಥವಾ ಯಾವುದೇ ದಿನ ಹನುಮಂತನ ಪೂಜೆ ಮಾಡುವವರಿದ್ದರೆ ಅದರ ಹಿಂದಿನ ದಿನದಿಂದಲೇ ನೀವು ಬ್ರಹ್ಮಚರ್ಯವನ್ನು ಪಾಲನೆ ಮಾಡ್ಬೇಕು. ಹಾಗೆಯೇ ಯಾರ ಮೇಲೂ ದ್ವೇಷದ ಭಾವನೆ ಹೊಂದಿರಬಾರದು. ಶುದ್ಧವಾದ ಮನಸ್ಸಿನಿಂದ ಹನುಮಂತನನ್ನು ಪ್ರಾರ್ಥಿಸಬೇಕು. ಹಿಂದಿನ ದಿನದಿಂದಲೇ ಮಾಂಸಹಾರ ಹಾಗೂ ಮದ್ಯಪಾನ ಮಾಡಬಾರದು. ಉಪ್ಪು, ಮೆಣಸು ಹಾಗೂ ಬೆಳ್ಳುಳ್ಳಿ ಸೇವನೆ ಕೂಡ ಮಾಡಬಾರದು. ಹಾಗೆಯೇ ಪೂಜೆ ವೇಳೆ ಯಾವುದೇ ತಪ್ಪಾಗದಂತೆ ನೋಡಿಕೊಳ್ಳಬೇಕು. ಮಧ್ಯದಲ್ಲಿ ಎದ್ದು ಹೋಗ್ಬಾರದು. ಹನುಮಂತನ ಪೂಜೆಯಲ್ಲಿ ತಾಂತ್ರಿಕ ವಸ್ತುಗಳನ್ನು ಎಂದೂ ಬಳಕೆ ಮಾಡಬಾರದು.
ಶನಿ, ಮಂಗಳ ದೋಷ ನಿವಾರಿಸಲು ಜೇನುತುಪ್ಪವನ್ನು ಹೀಗೆ ಬಳಸಿ
ಹನುಮಂತನ ವಿಗ್ರಹ ಇವರು ಸ್ಪರ್ಶಿಸ್ಬೇಡಿ : ಹನುಮಂತನ ವಿಗ್ರಹವನ್ನು ಮಹಿಳೆಯರು ಸ್ಪರ್ಶಿಸುವಂತಿಲ್ಲ. ಹನುಮಂತ ಬ್ರಹ್ಮಚಾರಿ. ಹಾಗಾಗಿಯೇ ಮಹಿಳೆಯರು ಅವನ ಮೂರ್ತಿಯನ್ನು ಸ್ಪರ್ಶಿಸಬಾರದು ಎನ್ನಲಾಗುತ್ತದೆ. ಹಾಗೆಯೇ ಮಹಿಳೆಯರು ಎಂದಿಗೂ ಹನುಮಂತನ ಪಾದ ಸ್ಪರ್ಶಿಸಿ ನಮಸ್ಕಾರ ಮಾಡಬಾರದು. ಹನುಮಂತನಿಗೆ ಮಹಿಳೆಯರು ಸಿಂಧೂರ ಅರ್ಪಣೆ ಮಾಡಬಾರದು ಎಂದು ಶಾಸ್ತ್ರದಲ್ಲಿ ಹೇಳಲಾಗಿದೆ. ಹನುಮಂತನ ಪೂಜೆಯನ್ನು ದೂರದಿಂದ ಮಾಡುವ ಜೊತೆಗೆ ಚೋಳವನ್ನು ಅರ್ಪಿಸದೆ ಆರಾಧನೆ ಮಾಡಬೇಕಾಗುತ್ತದೆ.
ಚೋಳ ಅರ್ಪಣೆ : ಹನುಮಂತನಿಗೆ ಪ್ರಿಯವಾದ ಹೊದಿಕೆ ಚೋಳ. ಇದನ್ನು ಹನುಮಂತನ ಪುರುಷ ಭಕ್ತರು, ಹನುಮಂತನಿಗೆ ಅರ್ಪಿಸಬೇಕು.
ಪೂಜೆಗೆ ಸಮಯ : ಹನುಮಂತನ ಪೂಜೆಗೆ ಸಮಯವನ್ನು ನೋಡ್ಬೇಕು. ಸೂಕ್ತ ಸಮಯದಲ್ಲಿ ಮಾತ್ರ ಹನುಮಂತನ ಪೂಜೆ ಮಾಡ್ಬೇಕು. ಬೆಳಿಗ್ಗೆ ಮತ್ತು ಸಂಜೆ ಕೂಡ ಹನುಮಂತನ ಪೂಜೆಗೆ ಒಳ್ಳೆಯ ಸಮಯವಾಗಿದೆ.
ಹಲ್ಲಿ ಶಕುನ: ಬೆಳ್‌ಬೆಳ್ಗೆ ಹಲ್ಲಿ ಹೀಗೆ ಚಲಿಸೋದು ನೋಡಿದ್ರೆ, ಅದು ಹಣ ಬರೋದ್ರ ಸೂಚನೆ!
ಮೊದಲು ದೀಪ ಬೆಳಗಿ ನಂತ್ರ ಪೂಜೆ : ಹನುಮಂತನ ಪೂಜೆ ವೇಳೆ ಮೊದಲು ದೀಪವನ್ನು ಹಚ್ಚಬೇಕು. ದೀಪವಿಲ್ಲದೆ ಹನುಮಂತನ ಪೂಜೆ ಆರಂಭಿಸಬಾರದು. ಹಾಗೆಯೇ ಹನುಮಂತನಿಗೆ ದೀಪ ಬೆಳಗುವ ವೇಳೆ ಮಲ್ಲಿಗೆ ಎಣ್ಣೆ ಅಥವಾ ತುಪ್ಪವನ್ನು ಮಾತ್ರ ಬಳಕೆ ಮಾಡಬೇಕಾಗುತ್ತದೆ.