Jehangir Pandole Funeral ಹೆಣ ಸುಡೋದು ಇಲ್ಲ, ಹೂಳೋದು ಇಲ್ಲ ಏನಿದು ಪಾರ್ಸಿಯ ದಖ್ಮಾ ಸಂಪ್ರದಾಯ?

By Santosh NaikFirst Published Sep 6, 2022, 5:27 PM IST
Highlights

ಭಾನುವಾರ ರಸ್ತೆ ಅಪಘಾತದಲ್ಲಿ ಶಾಪೂರ್ಜಿ ಪಲ್ಲೋಂಜಿ ಗ್ರೂಪ್‌ನ ಅಧ್ಯಕ್ಷ ಸೈರಸ್‌ ಮಿಸ್ತ್ರಿಯೊಂದಿಗೆ ಉದ್ಯಮಿ ಜಹಾಂಗೀರ್ ದಿನಶಾ ಪಾಂಡೋಲೆ ಕೂಡ ಸಾವು ಕಂಡಿದ್ದರು. ಮಂಗಳವಾರ ಬೆಳಗ್ಗೆ ಹಿಂದು ಸಂಪ್ರದಾಯದಲ್ಲಿ ಸೈರಸ್‌ ಮಿಸ್ತ್ರಿ ಅಂತ್ಯಸಂಸ್ಕಾರ ನೆರವೇರಿದ್ದರೆ, ಸಂಜೆ 5 ಗಂಟೆಗೆ ಪಾರ್ಸಿ ಸಂಪ್ರದಾಯದಲ್ಲಿ ಜಹಾಂಗೀರ್‌ ಪಾಂಡೋಲೆ ಅಂತ್ಯಸಂಸ್ಕಾರ ನೆರವೇರಿದೆ. ಪಾರ್ಸಿ ಸಂಪ್ರದಾಯದಲ್ಲಿ ಹೆಣ ಸುಡುವ ಅಥವಾ ಹೆಣವನ್ನು ಹೂಳುವ ಸಂಪ್ರದಾಯವಿಲ್ಲ. ಅವರಲ್ಲಿ ದಖ್ಮಾ ಅಥವಾ ಟವರ್‌ ಆಫ್‌ ಸೈಲೆನ್ಸ್‌ನ ಸಂಪ್ರದಾಯವಿದೆ. ಹಾಗಿದ್ದರೆ ಈ ಸಂಪ್ರದಾಯವೇನು? ಇಲ್ಲಿದೆ ವಿವರ.

ಮುಂಬೈ (ಸೆ. 6): ಟಾಟಾ ಗ್ರೂಪ್‌ ಮಾಜಿ ಚೇರ್ಮನ್‌ ಸೈರಸ್‌ ಮಿಸ್ತ್ರಿ ಅವರೊಂದಿಗೆ ಭಾನುವಾರ ನಡೆದ ರಸ್ತೆ ಅಪಘಾತದಲ್ಲಿ ಜಹಾಂಗೀರ್ ದಿನಶಾ ಪಾಂಡೋಲೆ ಅವರು ಕೂಡ ಸಾವು ಕಂಡಿದ್ದರು. ಜಹಾಂಗೀರ್‌ ಅವರ ಸಹೋದರ ಡೇರಿಯಸ್‌ ಪಾಂಡೋಲೆ ಹಾಗೂ ಅವರ ಪತ್ನಿ ಅನಾಹತಾ ಪಾಂಡೋಲೆ ಅಪಘಾತದಲ್ಲಿ ಗಾಯಗೊಂಡಿದ್ದು, ಸದ್ಯ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಮಂಗಳವಾರ ಬೆಳಗ್ಗೆ ವೊರ್ಲಿಯ ಚಿತಾಗಾರದಲ್ಲಿ ಹಿಂದು ಸಂಪ್ರದಾಯದಲ್ಲಿ ಪಾರ್ಸಿಯಾಗಿರುವ ಸೈರಸ್‌ ಮಿಸ್ತ್ರಿ ಅವರ ಅಂತ್ಯಸಂಸ್ಕಾರ ನೆರವೇರಿದೆ. ಆದರೆ, ಜಹಾಂಗೀರ್‌ ಪಾಂಡೋಲೆ ಅವರ ಅಂತ್ಯಸಂಸ್ಕಾರ ಪಾರ್ಸಿ ಸಂಪ್ರದಾಯದಂತೆ ನಡೆಯಲಿದೆ. ಪಾರ್ಸಿಗಳನ್ನು ಝೋರಾಸ್ಟ್ರಿಯನ್ನರು ಎಂದೂ ಹೇಳಲಾಗುತ್ತದೆ. ಪಾರ್ಸಿಗಳ ಸಂಪ್ರದಾಯದಲ್ಲಿ ಅಂತ್ಯಸಂಸ್ಕಾರ  ಬಹಳ ಭಿನ್ನವಾಗಿ ನಡೆಯುತ್ತಿದೆ. ಹಿಂದು, ಕ್ರಿಶ್ಚಿಯನ್ಸ್‌ ಹಾಗೂ ಮುಸ್ಲಿಮರ ರೀತಿಯಲ್ಲಿ ಅವರ ಸಂಪ್ರದಾಯವಿಲ್ಲ. ಸಾಂಪ್ರದಾಯಿಕವಾಗಿ ಪಾರ್ಸಿಗಳು ತಮ್ಮ ಜನಾಂಗದ ವ್ಯಕ್ತಿ ಸತ್ತಾಗ ಹಿಂದುಗಳ ರೀತಿ ಸುಡುವುದಿಲ್ಲ, ಮುಸ್ಲಿಂ ಹಾಗೂ ಕಿಶ್ಚಿಯನ್ನರ್ ರೀತಿ ಹೂಳುವುದು ಇಲ್ಲ. ಪಾರ್ಸಿಗಳ ಅಂತ್ಯಸಂಸ್ಕಾರ ಮೂರು ಸಾವಿರ ವರ್ಷಗಳ ಇತಿಹಾಸ ಹೊಂದಿದೆ. ಪಾರ್ಸಿಗಳ ಚಿತಾಗಾರವನ್ನು ದಖ್ಮಾ ಅಥವಾ ಟವರ್‌ ಸೈಲೆನ್ಸ್‌ ಎನ್ನುವ ಹೆಸರಿನಿಂದ ಕರೆಯಲಾಗುತ್ತದೆ.

'ಟವರ್ ಆಫ್ ಸೈಲೆನ್ಸ್' (ಮೌನ ಗೋಪುರ) ಎನ್ನುವುದು ವೃತ್ತಾಕಾರದ ಟೊಳ್ಳಾದ ಕಟ್ಟಡದ ರೂಪದಲ್ಲಿರುತ್ತದೆ. ಇಂಥದ್ದೊಂದು ಪಾರ್ಸಿಗಳ ಚಿತಾಗಾರ ಮುಂಬೈನ ದೊಂಗರ್ವಾಡಿಯಲ ದಟ್ಟ ಕಾಡಿನಲ್ಲಿದ್ದು, ಇದೇ ಪ್ರದೇಶದಲ್ಲಿ ಮಾಜಿ ರಾಷ್ಟ್ರೀಯ ಸ್ಕ್ವಾಷ್‌ ಚಾಂಪಿಯನ್‌ ಕೂಡ ಆಗಿದ್ದ ಜಹಾಂಗೀರ್‌ ಪಾಂಡೋಲೆ ಅವರ ಅಂತ್ಯಸಂಸ್ಕಾರ ನೆರವೇರಲಿದೆ.

Latest Videos

ಪಾರ್ಸಿ ಸಮುದಾಯದಲ್ಲಿ ಯಾರಾದರೂ ಸತ್ತಾಗ ಅವರ ದೇಹವನ್ನು ಟವರ್‌ ಆಫ್‌ ಸೈಲೆನ್ಸ್‌ (Dakhma )  ಮೇಲೆ, ಮುಕ್ತವಾಗಿ ಸೂರ್ಯನ ಬೆಳಕಿನಲ್ಲಿ ಇಡಲಾಗುತ್ತದೆ. ಅಲ್ಲಿ ಮೃತ ದೇಹವನ್ನು ರಣಹದ್ದುಗಳು (vultures ) ಮತ್ತು ಇತರ ಪಕ್ಷಿಗಳು ತಿನ್ನುತ್ತವೆ. ಅನೇಕ ತಜ್ಞರ ಪ್ರಕಾರ, ಪಾರ್ಸಿ ಸಮುದಾಯದಲ್ಲಿ (Doongerwadi) ಮೃತ ದೇಹವನ್ನು ಸುಡುವುದು ಅಥವಾ ಹೂಳುವುದು ಕೆಟ್ಟದ್ದೆಂದು ಪರಿಗಣಿಸಲಾಗಿದೆ. ನೀರು ಹಾಗೂ ಬೆಂಕಿ ಪಾರ್ಸಿಗಳಲ್ಲಿ ಪರಮ ಪವಿತ್ರ. ಇವುಗಳ ಮಲಿನ ಮಾಡುವುದನ್ನು ಪಾರ್ಸಿಯಲ್ಲಿ ಪಾಪ ಎಂದು ಪರಿಗಣನೆ ಮಾಡಲಾಗುತ್ತದೆ. ಒಬ್ಬ ವ್ಯಕ್ತಿ ಸಾವು ಕಂಡ ಬಳಿಕ ಆತನ ದೇಹವನ್ನು ಮಲಿನ ಎಂದು ಪರಿಗಣಿಸಲಾಗುತ್ತದೆ. ಇಂಥ ದೇಹಗಳನ್ನು ಬೆಂಕಿಯಿಂದ ಸುಡುವುದು, ಅಥವಾ ಹೂಳುವುದು ಮಲಿನಕ್ಕೆ ಕಾರಣವಾಗುತ್ತದೆ ಎಂದು ನಂಬುತ್ತದೆ. ಸತ್ತ ದೇಹದ ಮಲಿನ ಅಂಶಗಳು ಭೂಮಿಗೆ ಸೇರುತ್ತವೆ ಎಂದುಕೊಳ್ಳುತ್ತದೆ. ಹಾಗಂತ ಶವಗಳನ್ನು ನದಿಗೂ ಎಸೆಯುವುದಿಲ್ಲ. ಹಾಗೆ ಮಾಡಿದಲ್ಲಿ ನೀರು ಕಲುಷಿತವಾಗುತ್ತದೆ ಎಂದು ನಂಬುತ್ತಾರೆ.

ನೆರೆ ದೇಶಗಳ ಮುಸ್ಲಿಮೇತರ ವ್ಯಕ್ತಿಗಳಿಂದ ಪೌರತ್ವಕ್ಕೆ ಅರ್ಜಿ ಆಹ್ವಾನಿಸಿದ ಕೇಂದ್ರ ಸರ್ಕಾರ!

ಏನಿದು ಟವರ್‌ ಆಫ್‌ ಸೈಲೆನ್ಸ್‌:  ಪಾರ್ಸಿ ಸಮುದಾಯದಲ್ಲಿ ಸತ್ತ ದೇಹಗಳನ್ನು ಇರಿಸುವ ಸ್ಥಳ ಟವರ್‌ ಆಫ್‌ ಸೈಲೆನ್ಸ್‌ (Tower Of Silence ) ಅಥವಾ ಮೌನ ಗೋಪುರ. ಪಾರ್ಸಿ ಭಾಷೆಯಲ್ಲಿ ಅಥವಾ ಸ್ಥಳೀಯ ಭಾಷೆಯಲ್ಲಿ ಅದನ್ನು ದಖ್ಮಾ ಎಂದೂ ಹೇಳಲಾಗುತ್ತದೆ. ವೃತ್ತಾಕಾರದಲ್ಲಿರುವ ಈ ಗೋಪುರದಲ್ಲಿ ಶವನ್ನು ಸೂರ್ಯ ಬೆಳಕಿನಲ್ಲಿ ಇಡಲಾಗುತ್ತದೆ. ರಣಹದ್ದುಗಳು ದೇಹದ ಮಾಂಸಗಳನ್ನು ಕಿತ್ತು ತಿನ್ನುತ್ತವೆ. ಆದರೆ, ಪ್ರಸ್ತತ ರಣಹದ್ದುಗಳ ಸಂಖ್ಯೆಯಲ್ಲಿ ಗಣನೀಯವಾಗಿ ಇಳಿಕೆಯಾಗಿರುವುದರಿಂದ ಪಾರ್ಸಿಗಳ ಅಂತ್ಯಸಂಸ್ಕಾರಕ್ಕೂ ಸಮಸ್ಯೆ ಆಗುತ್ತಿದೆ.

ತ್ರಿವಳಿ ತಲಾಖ್ ಬಳಿಕ ಪಾರ್ಸಿ ವಿಚ್ಛೇದನದತ್ತ ಸುಪ್ರೀಂ ಚಿತ್ತ

ಮಾಧ್ಯಮದ ವರದಿಯ ಪ್ರಕಾರ, ರಣಹದ್ದುಗಳ ಸಂಖ್ಯೆ ಕಡಿಮೆಯಾಗುತ್ತಿರುವ ಬಗ್ಗೆ ಪಾರ್ಸಿ ಸಮುದಾಯವು ಆತಂಕಕ್ಕೊಳಗಾಗಿದೆ. ರಣಹದ್ದುಗಳು ಶವವನ್ನು ವೇಗವಾಗಿ ಅತಿವೇಗವಾಗಿ ತಿನ್ನುತ್ತವೆ. ಆದರೆ ರಣಹದ್ದುಗಳ ಕೊರತೆಯಿಂದಾಗಿ, ಶವವು ದೀರ್ಘಕಾಲದವರೆಗೆ ಹಾಳಾಗುತ್ತದೆ. ಇಂತಹ ಪರಿಸ್ಥಿತಿಯಲ್ಲಿ ಈಗ ಪಾರ್ಸಿ ಸಮುದಾಯದ ಕೆಲವರು ಹಿಂದೂ ವಿಧಿವಿಧಾನಗಳ ಪ್ರಕಾರ ಅಂತಿಮ ಸಂಸ್ಕಾರ ಮಾಡಲು ಆರಂಭಿಸಿದ್ದಾರೆ. ಅದೇ ಕಾರಣಕ್ಕಾಗು ಸೈರಸ್‌ ಮಿಸ್ತ್ರಿ ಅಂತ್ಯ ಸಂಸ್ಕಾರ ಹಿಂದು ವಿಧಿವಿಧಾನದಂತೆ ನಡೆದಿದೆ.

click me!