ನವರಾತ್ರಿಯ ಸಂದರ್ಭದಲ್ಲಿ ದುರ್ಗೆಯನ್ನು ಹೇಗೆ ಅಲಂಕರಿಸುತ್ತಾರೆ ಎಂಬುದನ್ನು ತೋರಿಸುವ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.
ನವರಾತ್ರಿ ಸಂಭ್ರಮ ದೇಶದೆಲ್ಲೆಡೆ ಬಹಳ ಜೋರಾಗಿ ನಡೆಯುತ್ತದೆ. ಭಕ್ತರು ಒಂಭತ್ತು ದಿನಗಳ ಕಾಲ ಉಪವಾಸ ವೃತ ಮಾಡುವ ಮೂಲಕ ನವದುರ್ಗೆಯರ ಆರಾಧನೆ ಮಾಡುತ್ತಾರೆ. ಕೆಲವರು ಮನೆಗಳಲ್ಲಿ ದುರ್ಗೆಯನ್ನು ಕೂರಿಸಿದರೆ ಅನೇಕರು ಸಂಘ ಸಂಸ್ಥೆಗಳ ಮೂಲಕ ಸಾರ್ವಜನಿಕವಾಗಿ ಘಟಸ್ಥಾಪನೆ ಮಾಡಿ ನವದುರ್ಗೆಯರ ಕೂರಿಸಿ ಒಂಭತ್ತು ದಿನಗಳ ಕಾಲ ಭಕ್ತಿ ಭಾವದಿಂದ ತಾಯಿಗೆ ಪೂಜೆ ಮಾಡಿ ಸಕಲ ಸನ್ಮಂಗಳ ಹಾಗೂ ಶ್ರೇಯೋಭಿವೃದ್ಧಿಗಾಗಿ ಪ್ರಾರ್ಥನೆ ಮಾಡ್ತಾರೆ. ಸಾಮಾನ್ಯವಾಗಿ ನಾವು ನೀವು ಪ್ರತಿಷ್ಠಾಪಿಸಲಾದ ಸಂಪೂರ್ಣ ಅಲಂಕಾರ ಭೂಷಿತ ದೇವಿಯನ್ನು ಹೊರಗಿನಿಂದ ನೋಡಿ ಭಕ್ತ ಭಾವದಿಂದ ಕೈ ಮುಗಿದು ಪ್ರಾರ್ಥನೆ ಮಾಡುತ್ತೇವೆ. ಶ್ರೇಯೋಭಿವೃದ್ಧಿ ಮಾಡು ಎಂದು ಬೇಡುತ್ತೇವೆ. ಆದರೆ ಪ್ರತಿಷ್ಠಾಪನೆಗೂ ಮೊದಲು ನವದುರ್ಗೆಯನ್ನು ಹೇಗೆ ಶೃಂಗಾರ ಮಾಡಲಾಗುತ್ತದೆ ಎಂಬ ದೃಶ್ಯವನ್ನು ಎಲ್ಲರೂ ನೋಡಿರಲು ಸಾಧ್ಯವಿಲ್ಲ, ಕೇವಲ ಕೆಲವೇ ಕೆಲವು ಮಂದಿ ದುರ್ಗಾಮಾತೆಗೆ ಹೇಗೆ ಶೃಂಗಾರ ಮಾಡುತ್ತಾರೆ ಎಂಬುದನ್ನು ಮುಖತಃ ನೋಡಿರುತ್ತಾರೆ.
ಹೀಗಿರುವಾಗ ಸಾರ್ವಜನಿಕವಾಗಿ ಕೂರಿಸುವ ದುರ್ಗಾಮಾತೆಯನ್ನು ಹೇಗೆ ಶೃಂಗಾರ ಮಾಡ್ತಾರೆ. ತಾಯಿಗೆ ಹೇಗೆ ಸೀರೆಯನ್ನು ಉಡಿಸುತ್ತಾರೆ. ಷೋಡಷಾಲಂಕಾರ ಹೇಗೆ ಮಾಡ್ತಾರೆ ಎಂಬ ಕುತೂಹಲ ಜನ ಸಾಮಾನ್ಯರು ಸೇರಿದಂತೆ ಭಕ್ತರನೇಕರಿಗೆ ಇರುತ್ತದೆ. ಹೀಗಿರುವಾಗ ದುರ್ಗಾಮಾತೆಯನ್ನು ನವವಧುವಿನಂತೆ ಹಬ್ಬಕ್ಕೆ ಶೃಂಗಾರ ಮಾಡಿ ಸಜ್ಜುಗೊಳಿಸಿರುವ ಸುಂದರವಾದ ಅತಿ ಅದ್ಭುತವಾದ ಅಪರೂಪವಾದ ವೀಡಿಯೋವೊಂದು ಈಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದ್ದು, ವಿಡಿಯೋ ನೋಡಿದ ಅನೇಕರು ದೇವಿಯನ್ನು ಈ ರೀತಿ ಅದ್ಭುತವಾಗಿ ಶೃಂಗರಿಸಿದ ಮೇಕಪ್ ಆರ್ಟಿಸ್ಟ್‌ಗೆ ಧನ್ಯವಾದ ಹೇಳಿದ್ದಾರೆ.
ಹಳದಿ ಸೀರೆಯುಟ್ಟು ಪತಿ ಜೊತೆ ಫೋಸ್ ಕೊಟ್ಟ ಹೆಂಗೆಳೆಯರ ಹೆಮ್ಮೆಯ ಶಾಲಿನಿ ಮೇಡಂ
ಮೇಕಪ್ ಆರ್ಟಿಸ್ಟ್ ಹೇರ್ ಸ್ಟೈಲಿಸ್ಟ್ ವೀರಜ್ ಪಾಟೀಲ್ ಎಂಬುವವರು ಈ ವೀಡಿಯೋವನ್ನು ಇನ್ಸ್ಟಾಗ್ರಾಮ್‌ನಲ್ಲಿ ಪೋಸ್ಟ್ ಮಾಡಿದ್ದಾರೆ. ಈ ವೀಡಿಯೋವನ್ನು ಒಂದು ಲಕ್ಷಕ್ಕೂ ಅಧಿಕ ಮಂದಿ ವೀಕ್ಷಿಸಿದ್ದು, ಅನೇಕರು ಶೇರ್ ಮಾಡಿಕೊಂಡಿದ್ದಾರೆ. ಇದು ನವರಾತ್ರಿಯ 2ನೇ ದಿನ ಆರಾಧನೆ ಮಾಡುವ ಬ್ರಹ್ಮಚಾರಿಣಿ ದೇವಿಗೆ ಮಾಡಿದ ಮೇಕಪ್ ಆಗಿದೆ. ವೈರಲ್ ಆದ ವೀಡಿಯೋದಲ್ಲಿ ದೇವಿಗೆ ಸೀರೆಯುಡಿಸಿ, ತಲೆ ಕೂದಲನ್ನು ಸುಂದರವಾಗಿ ಬಾಚಿ ತಲೆಗೆ ಹೂವನ್ನು ಮುಡಿಸಿ ಬಿಂದಿ ಹಾಕಿ ಕಣ್ಣಿನ ರೆಪ್ಪೆಗಳನ್ನು ಅಲಂಕರಿಸಿ ಹೂವಿನ ಮಾಲೆಯನ್ನು ಹಾಕಿ ಕಿವಿಗೆ ಓಲೆಯನ್ನು ಹಾಕಿ, ಎಲ್ಲಾ ಕೈಗಳಿಗೆ ಆಯುಧವನ್ನು ಇರಿಸಿ ಸುಂದರವಾಗಿ ಅಲಂಕರಿಸಲಾಗುತ್ತದೆ. ನಂತರ ಪೂಜೆ ಮಾಡಲಾಗುತ್ತದೆ. ಆದರೆ ಈ ಎಲ್ಲವನ್ನು ಇಬ್ಬರು ಯುವಕರು ಸೇರಿ ಮಾಡಿದ್ದು ವಿಶೇಷವೆನಿಸಿದೆ.
Navaratri 2024: ಶ್ರೀ ಶಾರದಾ ಮಾತೆಯಾಗಿ ಡಾ. ನಿರುಪಮಾ ರೈ, ಸುಂದರ ಫೋಟೊಗಳು ಇಲ್ಲಿವೆ
ಅನೇಕರು ವೀಡಿಯೋ ನೋಡಿ ಮೆಚ್ಚುಗೆ ವ್ಯಕ್ತಪಡಿಸಿದ್ದು ಶ್ಲಾಘನೆಯ ಸುರಿಮಳೆಗೈದಿದ್ದಾರೆ. ತಲೆ ಕೂದಲಿಗೆ ಸ್ಪ್ರೇ ಹೊಡೆಯುವುದರಿಂದ ಹಿಡಿದು ಪ್ರತಿಯೊಂದು ಅಲಂಕಾರವನ್ನು ತುಂಬಾ ಸೊಗಸಾಗಿ ಮಾಡಿದ್ದು, ಮೇಕಪ್‌ನ ಕಲಾವಂತಿಕೆ ದೇವಿಯ ಸೌಂದರ್ಯದಲ್ಲಿ ಎದ್ದು ಕಾಣುತ್ತಿದೆ. ಈ ವೀಡಿಯೋವನ್ನು ಬಹಳ ಕಾಲದಿಂದ ವೈಟ್ ಮಾಡುತ್ತಿದ್ದಿದ್ದಾಗಿ ಒಬ್ಬರು ಕಾಮೆಂಟ್ ಮಾಡಿದ್ದಾರೆ. ಮತ್ತೆ ಅನೇಕರು ಜೈ ಮಾತಾದಿ ಎಂದು ಕಾಮೆಂಟ್ ಮಾಡಿದ್ದಾರೆ. ಅಯ್ಯೋ ಎಷ್ಟು ಸೊಗಸಾಗಿದ್ದಾಳೆ ದೇವಿ ದೇವಿಗೆ ದೃಷ್ಟಿ ತಾಕದಿರಲಿ ಎಂದು ಒಬ್ಬರು ಕಾಮೆಂಟ್ ಮಾಡಿದ್ದಾರೆ. ನೀವು ನಮ್ಮ ನಿರೀಕ್ಷೆಯನ್ನು ಇನ್ನು ಒಂದು ಹಂತ ಮೇಲಕ್ಕೆ ತೆಗೆದುಕೊಂಡು ಹೋಗಿದ್ದೀರಿ ಎಂದು ಮೇಕಪ್ ಅರ್ಟಿಸ್ಟನ್ನು ಹೊಗಳಿದ್ದಾರೆ ಮತ್ತೆ ಕೆಲವರು. ಒಟ್ಟಿನಲ್ಲಿ ಈ ವೀಡಿಯೋ ತುಂಬಾ ಸೊಗಸಾಗಿದ್ದು, ಸಖತ್ ವೈರಲ್ ಆಗಿದೆ.
ಆ ವಿಡಿಯೋ ಇಲ್ಲಿದೆ ನೋಡಿ