ಕಾಗೆ ಮರಣದ ಸೂಚನೆ ನೀಡುತ್ತದಾ? ಅರ್ಥ ಮಾಡಿಕೊಳ್ಳುವುದು ಹೇಗೆ?

By Bhavani Bhat  |  First Published Oct 5, 2024, 9:37 PM IST

ಕಾಗೆಯನ್ನು ಅಪಶಕುನದ ಸಂಕೇತವೆಂದು ಪರಿಗಣಿಸಲಾಗಿದ್ದರೂ, ಅದು ಶುಭ ಮತ್ತು ಅಶುಭ ಸೂಚನೆಗಳೆರಡನ್ನೂ ನೀಡುತ್ತದೆ ಎಂದು ಶಾಸ್ತ್ರ ಹೇಳುತ್ತದೆ. ಕಾಗೆಯ ಕೂಗು, ನಡವಳಿಕೆಗಳು ನಿಮ್ಮ ಭವಿಷ್ಯದ ಬಗ್ಗೆ ಏನು ಹೇಳುತ್ತವೆ ಎಂಬುದನ್ನು ತಿಳಿಯಿರಿ.


ಕಾಗೆಯನ್ನು ನೋಡಿದರೆ ತುಂಬಾ ಮಂದಿಗೆ ಇಷ್ಟವಾಗುವುದಿಲ್ಲ. ಅದೊಂದು ಅಪಶಕುನದ ಪಕ್ಷಿ ಎಂಬುದು ಹಲವರ ಅಭಿಮತ. ಇದು ನಿಜವೇ? ಜ್ಯೋತಿಷ್ಯವಾದಿಗಳ ಪ್ರಕಾರ ಇದು ನಿಜ. ಕಾಗೆಯನ್ನು ಅದರ ಧ್ವನಿಯಿಂದಾಗಿ ಅಶುಭ ಪಕ್ಷಿ ಎಂದು ಪರಿಗಣಿಸುವವರು ಇದ್ದಾರೆ. ಶಾಸ್ತ್ರಗಳಲ್ಲಿ ಕಾಗೆಯನ್ನು ಯಮನ ದೂತ ಎಂದೂ ಕರೆಯುತ್ತಾರೆ. ಕಾಗೆಯು ಯಮನ ಬಳಿಗೆ ಹೋಗಿ ಯಮರಾಜನಿಗೆ ಭೂಮಿಯ ನಿವಾಸಿಗಳ ಬಗ್ಗೆ ತಿಳಿಸುತ್ತದೆ ಎಂದು ಹೇಳಲಾಗುತ್ತದೆ, ಆದರೆ ಧರ್ಮಗ್ರಂಥಗಳ ಪ್ರಕಾರ ಕಾಗೆಯನ್ನು ಮಾನವರ ಸಂದೇಶವಾಹಕ ಎಂದು ಹೇಳಲಾಗುತ್ತದೆ. ಯಮರಾಜನ ಜೊತೆಗೆ ಕಾಗೆಯು ಶುಭ ಮತ್ತು ಅಶುಭ ಸೂಚನೆಗಳ ಬಗ್ಗೆ ಮೊದಲು ಮಾನವರಿಗೆ ಮಾಹಿತಿ ನೀಡುತ್ತದೆ ಎಂದು ಹೇಳಲಾಗುತ್ತದೆ. ಹಾಗಾದರೆ ಕಾಗೆ ಮರಣದ ಸೂಚನೆಯನ್ನೂ ನೀಡುತ್ತದೆಯೇ? ಅದು ಯಾವಾಗ ಮತ್ತು ಹೇಗೆ ಒಳ್ಳೆಯ ಮತ್ತು ಕೆಟ್ಟ ಮಾಹಿತಿ ನೀಡುತ್ತದೆ ಎಂದು ತಿಳಿಯೋಣ.
 
ಕಾಗೆಯ ಅಪೂರ್ವ ಸಾಮರ್ಥ್ಯ: ಬರುವ ಸಮಯವನ್ನು ಮುಂಚಿತವಾಗಿ ತಿಳಿಯುವ ಅದ್ಭುತ ಸಾಮರ್ಥ್ಯವನ್ನು ಕಾಗೆಯು ಹೊಂದಿದೆ. ನಮ್ಮ ಪೂರ್ವಜರು ಕಾಗೆಗಳ ಮೂಲಕ ನಮ್ಮನ್ನು ಸಂಪರ್ಕಿಸುತ್ತಿದ್ದರು ಮತ್ತು ಮುಂಬರುವ ಘಟನೆಗಳ ಬಗ್ಗೆ ನಮಗೆ ತಿಳಿಸುತ್ತಿದ್ದರು.

​ಜಗಳದಿಂದ ವಿಪತ್ತು: ಕಾಗೆಗಳ ಹಿಂಡು ನಿಮ್ಮ ಮನೆಗೆ ಬಂದು ಕುಳಿತು ಪರಸ್ಪರ ಜಗಳವಾಡಲು ಪ್ರಾರಂಭಿಸಿದರೆ, ಮನೆಯ ಮಾಲೀಕರಿಗೆ ವಿಪತ್ತು ಬರಲಿದೆ ಎಂದು ಅರ್ಥಮಾಡಿಕೊಳ್ಳಬೇಕು ಎಂದು ಹೇಳಲಾಗುತ್ತದೆ.

Tap to resize

Latest Videos

undefined

ಕಾಗೆಯ ಧ್ವನಿಯ ದಿಕ್ಕು: ಮಧ್ಯಾಹ್ನದ ಮೊದಲು, ಮರದ ಮೇಲೆ ಕುಳಿತಿರುವ ಕಾಗೆಯ ಧ್ವನಿಯು ಪೂರ್ವ ಅಥವಾ ಉತ್ತರ ದಿಕ್ಕಿನಲ್ಲಿ ಕೇಳಿದರೆ, ನಿಮ್ಮ ದಿನವು ಉತ್ತಮವಾಗಿರುತ್ತದೆ. ಇದನ್ನು ಪತ್ನಿಯು ನೀಡುವ ಸಂತೋಷದ ಸಂಕೇತವೆಂದು ಪರಿಗಣಿಸಲಾಗುತ್ತದೆ.

​ಕಾಗೆಯೊಂದು ನಿಮ್ಮ ಮನೆಯ ಮಾಳಿಗೆಯ ಮೇಲೆ ಬಂದು ದಕ್ಷಿಣ ದಿಕ್ಕಿಗೆ ಮುಖಮಾಡಿ ಕುಳಿತು ಕೂಗುತ್ತಿದ್ದರೆ ಅದು ಶುಭ ಸೂಚನೆಯಲ್ಲ. ನಿಮ್ಮ ಮನೆಯಲ್ಲಿ ಯಾರಾದರೂ ಸಾಯುತ್ತಾರೆ ಎಂದು ಈ ಸೂಚನೆಯಿಂದ ಅರ್ಥಮಾಡಿಕೊಳ್ಳಿ.

ನೀರು ಕುಡಿಯುತ್ತಿರುವ ಕಾಗೆ: ನೀವು ಎಲ್ಲೋ ಹೋಗುತ್ತಿರುವಾಗ ಕಾಗೆಯೊಂದು ಪಾತ್ರೆಯಲ್ಲಿ ನೀರು ಕುಡಿಯುತ್ತಿರುವುದನ್ನು ನೀವು ನೋಡಿದರೆ, ನೀವು ಹಣವನ್ನು ಗಳಿಸುತ್ತೀರಿ ಎಂದು ಅರ್ಥಮಾಡಿಕೊಳ್ಳಿ. ನೀವು ಯಾವುದೋ ಕೆಲಸಕ್ಕಾಗಿ ಹೋಗುತ್ತಿದ್ದರೆ ಆ ಕೆಲಸದಲ್ಲಿ ನಿಮಗೆ ಯಶಸ್ಸು ದೊರೆಯುತ್ತದೆ ಎಂದು ಆರ್ಥಮಾಡಿಕೊಳ್ಳಿ.

​ಬಾಯಿಯಲ್ಲಿ ರೊಟ್ಟಿಯ ತುಂಡು: ಕಾಗೆಯು ತನ್ನ ಬಾಯಿಯಲ್ಲಿ ರೊಟ್ಟಿಯ ತುಂಡು ಅಥವಾ ಮಾಂಸದ ತುಂಡನ್ನು ಕಚ್ಚಿಕೊಂಡು ಹಾರುತ್ತಿರುವುದನ್ನು ಕಂಡರೆ, ನಿಮ್ಮ ಯಾವುದೋ ದೊಡ್ಡ ಆಸೆ ಶೀಘ್ರದಲ್ಲೇ ಈಡೇರುತ್ತದೆ ಎಂಬುದನ್ನು ಅರ್ಥಮಾಡಿಕೊಳ್ಳಿ.

Chanakya Niti: ಚಾಣಕ್ಯ ಹೇಳ್ತಾನೆ, ಮಗಳ ಮುಂದೆ ಗಂಡ- ಹೆಂಡತಿ ಹೀಗೆಲ್ಲ ಮಾಡಬೇಡಿ!
 

ಕಾಗೆಯ ಸ್ಪರ್ಶ: ಕಾಗೆ ಬಂದು ಒಬ್ಬ ವ್ಯಕ್ತಿಯನ್ನು ಹೊಡೆದರೆ ಅದು ಅಶುಭವೆಂದು ಪರಿಗಣಿಸಲಾಗುತ್ತದೆ. ಮತ್ತೊಂದೆಡೆ, ಕಾಗೆಯು ವ್ಯಕ್ತಿಯ ತಲೆಯ ಮೇಲೆ ಬಂದು ಕುಳಿತರೆ, ಆ ವ್ಯಕ್ತಿಗೆ ಕೆಟ್ಟ ದಿನಗಳು ಬರುತ್ತವೆ ಮತ್ತು ಆ ವ್ಯಕ್ತಿಯು ಸಾಯುತ್ತಾನೆ ಎಂಬ ನಂಬಿಕೆಯೂ ಇದೆ.

ನೀವು ಬೆಳಿಗ್ಗೆ ಎಲ್ಲೋ ಹೋಗುತ್ತಿದ್ದರೆ ಮತ್ತು ನಿಮ್ಮ ಹತ್ತಿರ ಹಾರುತ್ತಿರುವ ಕಾಗೆಯು ನಿಮ್ಮ ಪಾದಗಳನ್ನು ಮುಟ್ಟಿದರೆ, ಅದು ತುಂಬಾ ಮಂಗಳಕರ ಶಕುನವೆಂದು ಪರಿಗಣಿಸಲಾಗುತ್ತದೆ. ಇದು ಜೀವನದಲ್ಲಿ ಪ್ರಗತಿಯನ್ನು ತರುತ್ತದೆ.

ಕಾಗೆಯು ಮುಂಜಾನೆ ಬಂದು ಕೆಂಪು ಬಣ್ಣದ ವಸ್ತುವನ್ನು ವ್ಯಕ್ತಿಯ ಮುಂದೆ ಇಟ್ಟರೆ, ನೀವು ಜೈಲಿಗೆ ಹೋಗುತ್ತೀರಿ ಎಂಬುದನ್ನು ಅರ್ಥಮಾಡಿಕೊಳ್ಳಿ. ಇದರರ್ಥ ನಿಮಗೆ ಏನಾದರೂ ಕೆಟ್ಟದು ಸಂಭವಿಸಲಿದೆ.

ಇಲ್ಲಿ ನೀಡಿರುವ ಮಾಹಿತಿಗಳನ್ನು ರೂಢಿಯಲ್ಲಿ  ಹಲವರು ನಂಬುತ್ತಾರೆ. ಆದರೆ ಇವುಗಳನ್ನು ಪೂರ್ತಿಯಾಗಿ ಕುರುಡಾಗಿ ಯಾರೂ ನಂಬಬೇಕಿಲ್ಲ. ಇವುಗಳ ಬಗ್ಗೆ ಜ್ಯೋತಿಷ್ಯಶಾಸ್ತ್ರದಲ್ಲಿ ಹಾಗೂ ವೈಜ್ಞಾನಿಕವಾಗಿ ಪರಿಣತರ ಸಲಹೆಯನ್ನು ಪಡೆಯಬೇಕು.  

ಗಂಡ ಹೆಂಡತಿ ಈ ಕೆಲಸ ಜೊತೆಯಾಗಿ ಮಾಡಲೇ ಬಾರದಂತೆ


 

click me!